Connect with us

BANTWAL

ನಿರ್ಬಂಧದ ನಡೆವೆಯೂ ಅಡ್ಡೂರು ಸೇತುವೆ ಮೇಲೆ ಲಾರಿ ಸಂಚಾರ; ಸಾರ್ವಜನಿಕರ ಆಕ್ರೋಶ

Published

on

ಬಂಟ್ವಾಳ : ಪೊಳಲಿ ಸಮೀಪದ ಅಡ್ಡೂರು ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿಗೆ. ಈ ವೇಳೆ ರಾತ್ರಿ ಲಾರಿಯೊಂದು ಸೇತುವೆ ಮೇಲೆಯೇ ಹಾದು ಹೋಗಿದ್ದು ಸಾರ್ವಜನಿಕರು ಈ ವಿರುದ್ಧ ಕಿಡಿಕಾರಿದ್ದಾರೆ.

ಅಡ್ಡೂರು ಸೇತುವೆಯ ಎರಡೂ ಬದಿಗಳಲ್ಲಿ ಕಬ್ಬಿಣದ ತಡೆ ಅಳವಡಿಸುವ ಜತೆಗೆ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಬಳಿಕ ವಾಹನ ಡಿಕ್ಕಿಯಾಗಿಒಂದು ಬದಿಯ ಗಾರ್ಡ್‌ಗೆ ಹಾನಿಯಾಗಿದ್ದ ಕಾರಣ ಅದನ್ನು  ತೆರವು ಮಾಡಲಾಗಿದ್ದು, ಮತ್ತೊಂದು ಬದಿಯ ತಡೆಯೇ ಇಲ್ಲ. ‘ಚೆಕ್‌ಪೋಸ್ಟ್ ಬರೀ ನಾಮಕಾವಸ್ಥೆಗೆ ಮಾಡಲಾಗಿದ್ದು, ಅಲ್ಲಿ ಯಾರೂ ಕೂಡ ನಿಲ್ಲುತ್ತಿಲ್ಲ’ ಎಂದು ಸಾರ್ವಜನಿಕರು ಆಕ್ರೋಶಿಸುತ್ತಿದ್ದಾರೆ.

ಸೇತುವೆಯ ಸಾಮರ್ಥ್ಯ ಕುಸಿದಿದೆ ಎಂದು ಘನ ವಾಹನ ಸಂಚಾರ ನಿಷೇಧಿಸಿ ಸೇತುವೆ ಸಾಮರ್ಥ್ಯ ವೃದ್ಧಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟು ಶಾಲಾ ವಾಹನಗಳು, ಬಸ್‌ಗಳು ಸೇರಿದಂತೆ ಯಾವುದಕ್ಕೂ ಸಂಚಾರಕ್ಕೆ ಅವಕಾಶವಿಲ್ಲ. ಬಸ್ಸಿಗೆ ಸಂಚರಿಸಲು ಅವಕಾಶ ನೀಡಿ ಎಂದು ಸಾಕಷ್ಟು ಹೋರಾಟಗಳು ನಡೆದರೂ ದ.ಕ. ಜಿಲ್ಲಾಡಳಿತ ಖಡಾಖಂಡಿತವಾಗಿ ಲಘು ವಾಹನ ಹೊರತುಪಡಿಸಿ ಯಾವುದೇ  ವಾಹನಕ್ಕೂ ಅವಕಾಶ ನೀಡಿರಲಿಲ್ಲ.

ಈ ನಡುವೆ ರಾತ್ರಿ ಹೊತ್ತು ಸರಕು ತುಂಬಿದ ಲಾರಿಯೊಂದು ಯಾವುದೇ ಅಡೆ ತಡೆ ಇಲ್ಲದೆ ಸೇತುವೆಯನ್ನು ದಾಟುತ್ತಿದ್ದು, ಅದನ್ನು ಯಾರೋ ಹಿಂದಿನಿಂದ ಕಾರಿನಲ್ಲಿ ತೆರಳಿ ವೀಡಿಯೋ ಮಾಡಿದ್ದು, ಅದು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ . ಈ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ‘ಸೇತುವೆಯನ್ನು ಹಗಲು ಹೊತ್ತು ಬಂದ್ ಮಾಡಿ, ರಾತ್ರಿ ವ್ಯವಹಾರ ಕುದುರಿಸುವ ಅಧಿಕಾರಿಗಳಿಗೆ ಧಿಕ್ಕಾರವಿರಲಿ’ , ‘ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದು, ಜಿಲ್ಲಾಧಿಕಾರಿಗಳೇ ಇದಕ್ಕೆ ನೀವೇ ಹೊಣೆ’ , ‘ನಾಟಕ ನಿಲ್ಲಿಸಿ, ಶಾಲಾ ವಾಹನಗಳು, ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಹಗಲು ಹೊತ್ತು ಕೂಡ ಸೇತುವೆಯನ್ನು ತೆರವುಗೊಳಿಸಿ’ ಎಂಬೆಲ್ಲಾ ಆಕ್ರೋಶದ ಮಾತುಗಳು ಹರಿದಾಡುತ್ತಿವೆ.

BANTWAL

ಬಸ್ ಡ್ರೈವರ್ ಹಾಗೂ ಕಂಡಕ್ಟರ್‌ಗೆ ಬೆದರಿಕೆ; ಪ್ರಕರಣ ದಾಖಲು

Published

on

ಬಂಟ್ವಾಳ : ಬಸ್‌ ತಿರುಗಿಸುವ ವಿಚಾರದಲ್ಲಿ ಖಾಸಗಿ ಬಸ್‌ನ್ನು ತಡೆದ ತಂಡವೊಂದು ಡ್ರೈವರ್ ಹಾಗೂ ಕಂಡಕ್ಟರ್‌ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ನಡೆದಿತ್ತು.

ಎ.21 ರಂದು ರಾತ್ರಿ 7.40 ರ ಸುಮಾರಿಗೆ ಬಸ್‌ ಪೊಳಲಿ-ಕೊಳತ್ತಮಜಲು ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಬಸ್‌ ತಿರುಗಿಸುವ ವಿಚಾರದಲ್ಲಿ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ, ಪ್ರಶಾಂತ್‌ ಹಾಗೂ ಇತರರು ತಕರಾರು ತೆಗೆದಿದ್ದಾರೆ.

ಗಲಾಟೆ ಮಾಡಿ ಬಳಿಕ ಆರೋಪಿಗಳು ಪಲಾಯನಗೈದಿದ್ದಾರೆ. ಬಳಿಕ ಬಸ್‌ ಕಂಡಕ್ಟರ್ ಅಭಿಜಿತ್‌ ಶೆಟ್ಟಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಬೀಗ ಮುರಿದು ಬಟ್ಟೆ ಮಳಿಗೆಯಲ್ಲಿ ಕಳ್ಳತನ ಪ್ರಕರಣ; ಒಬ್ಬ ಆರೋಪಿ ಅಂದರ್

Published

on

ಬಂಟ್ವಾಳ: ಬಟ್ಟೆ ಮಳಿಗೆಯೊಂದರ ಬೀಗ ಮುರಿದು ನಗದು ದೋಚಿದ ಘಟನೆ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದಿತ್ತು. ಇದೀಗ ಪ್ರಕರಣವನ್ನು ಬೇಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಡ್ಯಾರು ಗ್ರಾಮದ ಕಣ್ಣೂರು ನಿವಾಸಿ ನಝೀ‌ರ್ ಮಹಮ್ಮದ್ ಬಂಧಿತ ಆರೋಪಿಯಾಗಿದ್ದು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ನಝೀರ್‌ನಿಂದ 1,09,490 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಎ. 11ರ ತಡರಾತ್ರಿ ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ಸಂಕೀರ್ಣದಲ್ಲಿದ್ದ ವೈಟ್‌ಲೆ ‌ನ್ ಕಿಡ್ಸ್ ವರ್ಲ್ಡ್ ಬಟ್ಟೆ ಮಳಿಗೆಯ ಶಟರ್‌ನ ಬೀಗ ಮುರಿದು ಒಳಪ್ರವೇಶಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ ಸುಮಾರು 4 ಲಕ್ಷ ರೂ.ಗಳನ್ನು ಕಳವು ಮಾಡಿದ್ದಾನೆ ಎಂದು ಮಾಲಕ ಇರ್ಫಾನ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಬಂಧಿತ ಆರೋಪಿ ನಝೀರ್ ಮಹಮ್ಮದ್‌ನು ಕಳೆದ ವರ್ಷ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಟಿವಿಎಸ್ ಶೋರೂಮ್‌ನ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟ‌ರ್ ಶಿವಕುಮಾ‌ರ್ ಬಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

Continue Reading

BANTWAL

ಕ್ರೈಸ್ತ ಬಾಂಧವರಿಂದ ಈಸ್ಟರ್ ಸಂಭ್ರಮ ; ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತರು ಪಾಲು

Published

on

ಬಂಟ್ವಾಳ : ಕರಾವಳಿಯ ಕ್ರೈಸ್ತರು ನಿನ್ನೆ (ಏ.19) ಏಸುಕ್ರಿಸ್ತರು ಮರಣ ಗೆದ್ದು ಪುನರುತ್ಥಾನರಾದ ಹಬ್ಬವಾದ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಿದ್ದಾರೆ. ಹಾಗಾಗಿ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು ವಿವಿಧ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಿದರು.

ಪೆರುವಾಯಿ ಫಾತಿಮಾ ಮಾತೆಯ ಇಗರ್ಜಿಯಲ್ಲಿ ಫಾ. ಸೈಮನ್ ಡಿಸೋಜಾ ನೇತೃತ್ವದಲ್ಲಿ ಈಸ್ಟರ್ ಆಚರಿಸಲಾಯಿತು. ಚರ್ಚ್ ಆವರಣದಲ್ಲಿ ಆಶಿರ್ವಚನ ಹಾಗೂ ಮೊಂಬತ್ತಿ ಮೆರವಣಿಗೆ ನಡೆಯಿತು. ಬಳಿಕ ಚರ್ಚ್ ನಲ್ಲಿ ಸ್ತೋತ್ರ ಹಾಡಲಾಯಿತು. ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ದೇವರ ವಾಕ್ಯ ವಾಚನ, ಕೀರ್ತನೆ ಗಾಯನ ಹಾಗೂ ಧರ್ಮಗುರುಗಳಿಂದ ಪ್ರವಚನ ನಡೆಯಿತು.

ಪವಿತ್ರಸ್ನಾನದ ಪ್ರತಿಜ್ಞೆ ನವೀಕರಿಸಲಾಯಿತು. ಪವಿತ್ರ ಜಲ ಆಶೀರ್ವದಿಸಲಾಯಿತು. ಧಾರ್ಮಿಕ ವಿಧಿಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ ಇದ್ದರು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಬಲಿಪೂಜೆ ನೆರವೇರಿಸಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page