Connect with us

LATEST NEWS

‘ಡೀಸೆಲ್ ಬೆಲೆ 10 ರೂಪಾಯಿ ಕಡಿತಗೊಳಿಸಿ, ಇಲ್ಲದಿದ್ದರೆ ನ.15ರಿಂದ ಲಾರಿ ಮುಷ್ಕರ’

Published

on

ಬೆಂಗಳೂರು: ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 10 ರೂಪಾಯಿ ಕಡಿಮೆ ಮಾಡಬೇಕು, ಇದಕ್ಕೆ ನವೆಂಬರ್ 5ರ ಗಡುವು ನೀಡಲಾಗಿದೆ.

ಇಲ್ಲದಿದ್ದರೆ ನ.15ಕ್ಕೆ ಲಾರಿ ಮುಷ್ಕರಕ್ಕೆ ಕರೆ ನೀಡಲಾಗುವುದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು.


ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಣ್ಮುಗಪ್ಪ, ಬೆಲೆ ಏರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಅವರು, ಲಾರಿ ಮಾಲೀಕರ ಸಂಕಷ್ಟ ಪರಿಸ್ಥಿತಿಯನ್ನು ತೆರೆದಿಟ್ಟರು.
ಪರ್ಮಿಟ್​ ಅವಧಿಯನ್ನು ಜನವರಿ ಅಂತ್ಯದವರೆಗೂ ವಿಸ್ತರಿಸಬೇಕು.

ಲೋಡಿಂಗ್ ಮತ್ತು ಅನ್​ಲೋಡಿಂಗ್​ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಲೋಡಿಂಗ್​ ಮತ್ತು ಅನ್​ಲೋಡಿಂಗ್​ ಹಂತದಲ್ಲಿ ಹಲವು ಸಮಸ್ಯೆಗಳಿವೆ. ಆರ್​ಟಿಒ ಹಾಗೂ ಪೊಲೀಸ್ ಕಿರುಕುಳ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಓವರ್​ಲೋಡ್ ತಪ್ಪಿಸಬೇಕು ಎಂದು ಲಾರಿ ಮಾಲೀಕರ ಸಂಘವೂ ಒತ್ತಾಯಿಸುತ್ತಿದೆ. ಆದರೆ ಆರ್​ಟಿಒ ಅಧಿಕಾರಿಗಳು ಲಂಚ ತೆಗೆದುಕೊಂಡು ಓವರ್​ಲೋಡ್ ಲಾರಿಗಳನ್ನು ಬಿಟ್ಟು ಕಳಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

DAKSHINA KANNADA

ಪುತ್ತೂರು : 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

Published

on

ಪುತ್ತೂರು : ಷರತ್ತು ಬದ್ದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಪುತ್ತೂರು ಕಸಬಾ ಗ್ರಾಮದ ಅಬ್ಬಾಸ್ ಆಲಿ ಅಲ್ತಾಫ್‌(55) ಬಂಧಿತ ಆರೋಪಿ.  ಮಂಗಳೂರು ಕುಲಶೇಖರ ಬಿಕರ್ನಕಟ್ಟೆ ಬಳಿ ಪುತ್ತೂರು ನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : NSUI ನಾಯಕನ ಮೇಲೆ ತಲವಾರು ದಾ*ಳಿ ಪ್ರಕರಣ; ಐವರು ಅರೆಸ್ಟ್

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 27ರ ವರೆಗೆ  ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

DAKSHINA KANNADA

ಲಕ್ಷ್ಮಣ ಮರಕಡರಿಗೆ ಯಕ್ಷ ಸವ್ಯಸಾಚಿ ಬಿರುದು ಪ್ರದಾನ

Published

on

ಮಂಗಳೂರು : ಶ್ರೀಕಟೀಲು ಮೇಳದ ಕಲಾವಿದ, ಯಕ್ಷ ಗುರು ಲಕ್ಷ್ಮಣ ಕುಮಾರ್ ಮರಕಡರಿಗೆ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀಭಗವದ್ಗೀತಾಮೃತ ಪುರಸ್ಕಾರದೊಂದಿಗೆ “ಯಕ್ಷ ಸವ್ಯ ಸಾಚಿ” ಬಿರುದು ನೀಡಿ ಗೌರವಿಸಲಾಯಿತು.

ಶ್ರೀ ಮದ್ ಭಗವದ್ಗೀತೆಯ  ಪ್ರಚಾರಕ, ಆಧ್ಯಾತ್ಮಿಕ ಗುರು ಸುಬ್ರಾಯ  ನಂದ್ಯೋಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಲಕ್ಷ್ಮಣ ಅವರು ಗಣೇಶ ಪುರ, ಸುರತ್ಕಲ್ ಸದಾಶಿವ ಮಹಾಗಣಪತಿ, ತಲಕಳ, ಬಪ್ಪನಾಡು, ಉಳ್ಳಾಲ ಚೀರುಂಭ ಭಗವತೀ , ಸಸಿಹಿತ್ಲು ಭಗವತಿ, ಎಡನೀರು ಮೇಳಗಳಲ್ಲಿ ತಿರುಗಾಟ ಮಾಡಿ ಕಟೀಲು  ಮೇಳದಲ್ಲಿ ಈಗ 7ನೇ ವರ್ಷದ  ತಿರುಗಾಟ ಮಾಡುತ್ತಿರುವ ನಿಷ್ಠಾವಂತ ಕಲಾಸಾಧಕ.

ಕಾಸರಗೋಡು ಮತ್ತು ಮಂಗಳೂರು ಪರಿಸರದಲ್ಲಿ ಯಕ್ಷಗಾನ ಶಿಕ್ಷಕನಾಗಿ ತರಗತಿ ನಡೆಸಿ ಸಮೃದ್ಧ ಶಿಷ್ಯ ಗಡಣ ಹೊಂದಿರುವ ಯಕ್ಷ ಗುರು.ಆಮೇರಿಕಾ, ಮಸ್ಕತ್, ಆಸ್ಟ್ರೇಲಿಯಾ, ದುಬೈ ದೇಶಗಳಲ್ಲಿ ಪುಂಡು, ಸ್ತ್ರೀ,ರಾಜವೇಷ,ಹಾಸ್ಯ, ಎದುರು ವೇಷಗಳೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ  ಅಪೂರ್ವ ಯಕ್ಷ ಕಲಾ ಸಾಧಕ ಎಂದು ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.

ಇದನ್ನೂ ಓದಿ : ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

ಕಾರ್ಯಕ್ರಮದಲ್ಲಿ  ಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ, ಡಾ.ಶಶಾಂಕ್ ಮತ್ತಿತ್ತರರು ಉಪಸ್ಥಿತರಿದ್ದರು. ಮೇಳದ ಎಲ್ಲಾ ಕಲಾವಿದರಿಗೆ ಸೇವಾಕರ್ತರಾದ ಗೀತಾ ಪ್ರಚಾರಕಿ ಸವಿತಾ ಕೊರಗಪ್ಪ ಅವರು ಅರ್ಥ ಸಹಿತ ಭಗವದ್ಗೀತೆಯನ್ನು ವಿತರಿಸಿದರು. ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಸೇವೆ ಬಯಲಾಟ ಜರುಗಿತು.

 

Continue Reading

LATEST NEWS

NSUI ನಾಯಕನ ಮೇಲೆ ತಲವಾರು ದಾ*ಳಿ ಪ್ರಕರಣ; ಐವರು ಅರೆಸ್ಟ್

Published

on

ಉಡುಪಿ : ಕ್ಷುಲ್ಲಕ ಕಾರಣಕ್ಕೆ ಎನ್.ಎಸ್.ಯು.ಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ನಡೆದ ಹ*ಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಅಲೆವೂರು ನಿವಾಸಿ ಶಂಶಾಂಕ್ ನಾಯಕ್ (25) ಬಂಧಿತ ಆರೋಪಿಗಳು.

ಜನವರಿ 30 ರಂದು ರಾತ್ರಿ 9 ಗಂಟೆ ಸುಮಾರಿಗೆ ಚಿಟ್ಟಾಡಿ ಬೈಲೂರು ಬಡಗುಬೆಟ್ಟು ನಿವಾಸಿ ಶರತ್ ಕುಂದರ್ (25) ಅವರು ತಮ್ಮ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹೋಟೆಲೊಂದಕ್ಕೆ ಊಟಕ್ಕೆಂದು ತೆರಳಿದ್ದರು. ಅಲ್ಲಿ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ಜನರಲ್ ಸ್ಟೋರೊಂದರ ಮಾಲಕರ ಮಗನೊಂದಿಗೆ ಸಣ್ಣ ವಿಚಾರಕ್ಕೆ ಸಂಬಂಧಿಸಿ ಬಾಯಿ ಮಾತಿನ ಗಲಾಟೆ ನಡೆದಿದೆ.

ನಂತರ ಶರತ್ ಕುಂದ‌ರ್ ಮನೆಗೆ ವಾಪಸ್ಸಾಗುತ್ತಿದ್ದಾಗ ಕಲ್ಸಂಕ ಬಳಿ ತಲುಪುವ ಸಂದರ್ಭದಲ್ಲಿ ಅಕ್ಷತ್ ಪೈ ಕರೆ ಮಾಡಿ, ಹೋಟೆಲ್‌ನ ಗಲಾಟೆ ವಿಚಾರವಾಗಿ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿದ್ದಾನೆ. ರಾತ್ರಿ ಸುಮಾರು 11.30ರ ವೇಳೆಗೆ ಪಿಪಿಸಿ ಕ್ರಾಸ್ ಸಮೀಪ ಕೋಸ್ಟಲ್ ಚಿಕನ್ ಅಂಗಡಿಯ ಎದುರು ರಸ್ತೆಯ ಬದಿಯಲ್ಲಿ ಶರತ್ ಕುಂದರ್ ತಮ್ಮ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್ ಹಾಗೂ ರೋಹಿತ್ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ಟಾಟಾ ಸಫಾರಿ ಮತ್ತು ಮಹೀಂದ್ರ ಥಾರ್ ವಾಹನಗಳು ಏಕಾಏಕಿ ಬಂದು ನಿಂತಿವೆ.

ವಾಹನಗಳಿಂದ ಇಳಿದ ಅಕ್ಷತ್ ಪೈ, ಶಶಾಂಕ್ ಸೇರಿದಂತೆ ಆರೇಳು ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಹಿಡಿದು ಶರತ್ ಕುಂದ‌ರ್ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆ ಬಳಿಕ  ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದರು. ಗಾಯಾಳುವನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ : ಬ್ಯಾಂಕ್‌ನಲ್ಲಿಟ್ಟಿದ್ದ 4 ಕೋಟಿ  ಮೌಲ್ಯದ ಚಿನ್ನಾಭರಣಕ್ಕೆ ಕನ್ನ; ತನಿಖೆ ವೇಳೆ ಬಯಲಾಯ್ತು ಶಾಕಿಂಗ್ ವಿಚಾರ!

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ಹುಂಡೈ ಅವೆನ್ಯೂ ಕಾರು (ಅಂದಾಜು ಮೌಲ್ಯ 8 ಲಕ್ಷ) ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page