Connect with us

LATEST NEWS

ಕುಂದಾಪುರ: ಪ್ರವಾಸಕ್ಕೆ ಬಂದ ಮಕ್ಕಳಿಗೆ ಹೊಡೆಯುತ್ತಿದ್ದ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು

Published

on

ಕುಂದಾಪುರ: ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದ ಶಾಲಾ ಮಕ್ಕಳಿಗೆ ಚಿತ್ರದುರ್ಗ ಮೂಲದ ಶಿಕ್ಷಕನೊಬ್ಬ ಥಳಿಸುತ್ತಾ ದೌರ್ಜನ್ಯ ಎಸಗಿದ್ದಾರೆ.


ವಿದ್ಯಾರ್ಥಿಗಳಿಗೆ ಛಡಿಯೇಟು ನೀಡುತ್ತಿರುವುದನ್ನು ಕಂಡ ಇಲ್ಲಿನ ಸ್ಥಳೀಯರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಈ ಅಮಾನವೀಯ ಕೃತ್ಯವನ್ನು ಕಂಡು ಶಿಕ್ಷಕನನ್ನು ವಿಚಾರಿಸಲು ಬಂದ ಪ್ರವಾಸಿಗರಿಗೆ ತರಾಟೆಗೆ ತೆಗೆದುಕೊಳ್ಳುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಇನ್ನು ಕೆಲವರು ತಮ್ಮ ಮೊಬೈಲ್‌ ಮೂಲಕ ಚಿತ್ರವನ್ನು ಹಿಡಿದು ವೈರಲ್ ಮಾಡಿದ್ದಾರೆ.

FILM

ಒಂದೆಡೆ ಜಾಟ್2 ಚಿತ್ರ ಘೋಷಣೆ; ಮತ್ತೊಂದೆಡೆ ನಟ ಸನ್ನಿ ಡಿಯೋಲ್, ರಣದೀಪ್ ಹೂಡಾ ವಿರುದ್ಧ ಎಫ್‌ಐಆರ್!

Published

on

ಮಂಗಳೂರು/ಮುಂಬೈ : ಸನ್ನಿ ಡಿಯೋಲ್‌ರ ‘ಜಾಟ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಚಿತ್ರದಲ್ಲಿ ಆಯೇಶಾ ಖಾನ್, ಜರೀನಾ ವಹಾಬ್, ಬಾಂಧವಿ ಶ್ರೀಧರ್, ಪ್ರಣಿತಾ ಪಟ್ನಾಯಕ್, ದಯಾನಂದ ಶೆಟ್ಟಿ, ಜಗಪತಿ ಬಾಬು ನಟಿಸಿದ್ದಾರೆ.

ಚಿತ್ರ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಈ ನಡುವೆ ಈ ಚಿತ್ರದ ಮುಂದುವರಿದ ಭಾಗ ಬರಲಿದೆ ಎಂದು ನಟ ಸನ್ನಿ ಡಿಯೋಲ್ ಘೋಷಿಸಿದ್ದಾರೆ. ಜಾಟ್ 2 ಚಿತ್ರ ನಿರ್ಮಾಣವಾಗಲಿದೆ ಎಂದು ನಟ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೂ ಗೋಪಿಚಂದ್ ಮಲಿನೇನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬುದು ಪೋಸ್ಟರ್‌ನಿಂದ ಬಹಿರಂಗವಾಗಿದೆ.

ಮತ್ತೊಂದೆಡೆ ಎಫ್‌ಐಆರ್!

ಸಿನಿಮಾ ಯಶಸ್ವಿಯಾದ ಸಂಭ್ರಮದಲ್ಲಿ ಚಿತ್ರತಂಡವಿದ್ದು, ಇದೀಗ ಸಂಕಷ್ಟವೊಂದು ಎದುರಾಗಿದೆ. ಜಾಟ್ ಚಿತ್ರದ ಒಂದು ದೃಶ್ಯದಲ್ಲಿ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರಲಾಗಿದೆ. ಏಸುಕ್ರಿಸ್ತ ಮತ್ತು ಕ್ರೈಸ್ತ ಧಾರ್ಮಿಕ ಆಚರಣೆಗಳನ್ನು ಅಗೌರವಿಸುವ ದೃಶ್ಯಗಳು ಚಿತ್ರದಲ್ಲಿವೆ ಎಂದು ಕ್ರೈಸ್ತ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ಇದನ್ನೂ ಓದಿ : ಪ್ರಿಯಕರನೊಂದಿಗಿನ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ ಎರಡನೇ ಮಗಳು; ನಾನು ಮೊದಲೇ ಊಹಿಸಿದ್ದೆ ಎಂದ ಅಪ್ಪ!

ನಟರಾದ ಸನ್ನಿ ಡಿಯೋಲ್, ರಣದೀಪ್ ಹೂಡಾ, ವಿನೀತ್ ಕುಮಾರ್, ನಿರ್ದೇಶಕ ಗೋಪಿಚಂದ್, ನಿರ್ಮಾಪಕ ನವೀನ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

Continue Reading

LATEST NEWS

ಬೆಂಗಳೂರಿನಲ್ಲಿ ಓಲಾದಲ್ಲಿ ಹೋಗುವ ಮಹಿಳೆಯರೇ ಎಚ್ಚರ; ಕಹಿ ಅನುಭವವನ್ನು ಹಂಚಿಕೊಂಡ ಯುವತಿ

Published

on

ಸಾಮಾನ್ಯವಾಗಿ ಬಸ್ಸಿನಲ್ಲಿ ಅನುಚಿತವಾಗಿ ವರ್ತಿಸುವ ಮೂಲಕ ಮಹಿಳೆಯರಿಗೆ ಅಹಿತಕರ ಅನುಭವವಾಗಿರುತ್ತದೆ. ಆದರೆ ಇದೀಗ ಶ್ರಾವಿಕಾ ಜೈನ್ ಬೆಂಗಳೂರಿನಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ವೇಳೆಯಲ್ಲಿ ಕ್ಯಾಬ್ ಡ್ರೈವರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬಳಕೆದಾರರು ಈ ಪೋಸ್ಟ್ ಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೌದು ತಮ್ಮ ಈ ಪೋಸ್ಟ್ ನಲ್ಲಿ ‘ಈ ಬೆಂಗಳೂರು ಸುರಕ್ಷಿತ ಎಂದು ಜನರು ಹೇಳುತ್ತಾರೆ? ನಿನ್ನೆ ರಾತ್ರಿ ವಿಮಾನ ನಿಲ್ದಾಣದಿಂದ ಕ್ಯಾಬ್‌ನಲ್ಲಿ ಬಂದದ್ದು ನನ್ನ ಜೀವನದ ಅತ್ಯಂತ ಭಯಾನಕ ಅನುಭವಗಳಲ್ಲಿ ಒಂದು.

ಬೆಂಗಳೂರಿನ ವಿಮಾನ ನಿಲ್ದಾಣದಿಂದ ರಾತ್ರಿ 11 ಗಂಟೆಗೆ ಪುಯಾಣಿಸುತ್ತಿದ್ದ ವೇಳೆಯಲ್ಲಿ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ನಿನ್ನೆ ರಾತ್ರಿ ವಿಮಾನ ನಿಲ್ದಾಣದಿಂದ ಕ್ಯಾಬ್‌ನಲ್ಲಿ ಚಾಲಕ ನನ್ನನ್ನು ಕಟ್ಟ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದ್ದಾನ.

ಕ್ಯಾಬ್ ಡ್ರೈವರ್ ಯೂಟ್ಯೂಬ್‌ನಲ್ಲಿ ಜೋರಾಗಿ ಸಂಗೀತ ಹಾಕಿ ಜೋರಾಗಿ ಹಾಡುತ್ತಾ, ತನ್ನ ತೊಡೆಗಳನ್ನು ತಟ್ಟಲು ಪ್ರಾರಂಭಿಸಿದ್ದಾನೆ. ನಾನು ಹಾಡಿನ ಧ್ವನಿ ಕಡಿಮೆ ಮಾಡಲು ಪದೇ ಪದೇ ಹೇಳಿದರೂ ಕೂಡ ಈ ಚಾಲಕನು ಕೆಟ್ಟ ನೋಟದಿಂದ ಪ್ರತಿಕ್ರಿಯಿಸಿದ್ದಾನೆ. ಅಲ್ಲದೇ ಕಾರಿನಲ್ಲಿ ಸಿಗರೇಟ್ ಸೇದಿದ್ದಾನೆ. ಆ ಸಮಯದಲ್ಲಿ ನಾನು ಒಂಟಿಯಾಗಿದ್ದೆ. ರಾತ್ರಿ ಬೇರೆಯಾಗಿತ್ತು.ಈ ವೇಳೆಯಲ್ಲಿ ನನ್ನ ಮೂವರು ಸ್ನೇಹಿತರು ನನಗೆ ಕರೆ ಮಾಡಿ ನನ್ನ ಸ್ಥಳವನ್ನು ಟ್ರ್ಯಾಕ್ ಮಾಡುತ್ತಿದ್ದರು. ಅದಲ್ಲದೇ ಈ ಚಾಲಕನು ರಸ್ತೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ತಾನು ಟೀ ಕುಡಿಯಲು ಬಯಸುವುದಾಗಿ ಹೇಳಿದ.

ಆದರೆ ನಾನು, ನನ್ನನ್ನು ಮೊದಲು ಮನೆಗೆ ಕರದೊಯ್ಯುವಂತೆ ವಿನಂತಿಸಿದರೂ, ಚಾಲಕ ಹೊರಗೆ ಹೋಗಿದ್ದು ಹತ್ತು ನಿಮಿಷಗಳ ನಂತರ ಹಿಂತಿರುಗಿದ ಈ ಪ್ರಯಾಣದ ಉಳಿದ ಭಾಗದಲ್ಲಿ ಅವನು ತನ್ನನ್ನು ಅನುಚಿತವಾಗಿ ನೋಡುತ್ತಲೇ ಇದ್ದದ್ದು ನನಗೆ ಆ ಕ್ಷಣ ಭಯಾನಕವಾಗಿತ್ತು. ಆದರೆ ಯಾವುದೇ ಅಹಿತಕರ ಘಟನೆ ನಡೆಯದೇ ಮನೆಗೆ ತಲುಪಿದೆ ಎಂದು ಬರೆದುಕೊಂಡಿದ್ದಾರೆ.

Continue Reading

LATEST NEWS

ಪಾನಿಪುರಿ ತಿಂದು 31 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Published

on

ಮಂಗಳೂರು/ನಾಂದೇಡ್: ಪಾನಿಪುರಿ ತಿಂದು 31 ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್‌ ನಗರದಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪುರಿಯನ್ನು ತಿಂದ ಮಕ್ಕಳಿಗೆ ಕೆಲ ಹೊತ್ತಿನಲ್ಲೇ ವಾಂತಿಯಾಗಿದೆ. ಬಳಿಕ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರು.

ತಕ್ಷಣವೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಸ್ವಸ್ಥಗೊಂಡ 31 ವಿದ್ಯಾರ್ಥಿಗಳು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸೇರಿದವರು ಎನ್ನಲಾಗಿದೆ.

ಇದನ್ನೂ ಓದಿ: ಟ್ರೇಡ್‌ಮಾರ್ಕ್‌ ಅವಮಾನಿಸಿದ ಆರೋಪ; ಹೈಕೋರ್ಟ್‌ ಮೆಟ್ಟಿಲೇರಿದ ಆರ್‌ಸಿಬಿ

ಸದ್ಯ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page