ನಿರೂಪಣೆ ಎಂದರೆ ಮಲ್ಲಿಗೆ ಹೂವಿನ ದಾರದಂತೆ, ಹಡಗಿನ ಲಂಗರಿನಂತೆ, ದಾರಿಯ ಸೇತುವೆಯಂತೆ ಎನ್ನುವ ಮಾತಿದೆ. ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನ ನಿರೂಪಕರು ತಮ್ಮ ತಲೆಯ ಮೇಲೆ ಹೊತ್ತಿರುತ್ತಾರೆ. ನಾವು ಕನ್ನಡ ಚಾನೆಲ್‌ಗಳಲ್ಲಿ ಹಲವಾರು ನಿರೂಪಕರನ್ನು ನೋಡಿರುತ್ತೇವೆ. ಅದರಲ್ಲೂ ಕೆಲವು ನಿರೂಪಕರು ಜನರ ಮನಸ್ಸಿನಲ್ಲಿ ಅಚ್ಚೆಯಾಗಿ ಉಳಿದಿದ್ದಾರೆ. ತಮ್ಮ ಬಣ್ಣ ಬಣ್ಣದ ಮಾತಿನಿಂದಲೇ ಜನರನ್ನು ಮೋಡಿ ಮಾಡಿ ಇದೀಗ ಕರ್ನಾಟಕದೆಲ್ಲೆಡೆ ಮನೆಮಾತಾಗಿದ್ದಾರೆ. ಅದರಲ್ಲೂ ಒಂದು ಎಪಿಸೋಡ್‌ಗೇ ಲಕ್ಷ ಲಕ್ಷ ಸಂಭಾವನೆ ಪಡೆಯುವ ನಿರೂಪಕರು ಇದ್ದಾರೆ. ಆ ನಿರೂಪಕರು ಯಾರು ? ಅವರ ಸಂಬಳ ಎಷ್ಟಿದೆ ಎಂಬ ಡಿಟೇಲ್ಸ್ ಇಲ್ಲಿದೆ.

ನಿರಂಜನ್ ದೇಶಪಾಂಡೆ

ನಿರಂಜನ್ ದೇಶಪಾಂಡೆ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ತನ್ನ ನಟನೆ ಮೂಲಕವೇ ಹೆಸರುವಾಸಿಯಾದ ಇವರು ಕನ್ನಡ ಬಿಗ್‌ಬಾಸ್ ನಲ್ಲೂ ಭಾಗವಹಿಸಿದ್ದರು. ಇವರು ಕಿರುತೆರೆಯ ಖ್ಯಾತ ನಿರೂಪಕರು ಆಗಿದ್ದಾರೆ. ನಿರೂಪಕರಾಗಿ ಪ್ರತಿ ಎಪಿಸೋಡ್‌ಗೆ 75 ಸಾವಿರ ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ.
ಶ್ವೇತಾ ಚೆಂಗಪ್ಪ

ಕಳೆದ ಇಪ್ಪತ್ತು ವರ್ಷಗಳಿಂದ ಶ್ವೇತಾ ಚೆಂಗಪ್ಪ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳ ನಟಿಯಾಗಿ, ನಿರೂಪಕಿಯಾಗಿ ಮನೆಮಾತಾಗಿದ್ದಾರೆ. ಕುಣಿಯೋಣ ಬಾರಾ, ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್, ಮಜಾಟಾಕೀಸ್, ಕನ್ನಡದ ಬಿಗ್ ಬಾಸ್ ಸೀಸನ್ 2, ನಮ್ಮಮ್ಮ ಸೂಪರ್ ಸ್ಟಾರ್, ಛೋಟಾ ಚಾಂಪಿಯನ್ ಮೊದಲಾದ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ಸ್ಪರ್ಧಿಯಾಗಿ ಮಿಂಚಿದ್ದು, ಇಂದಿಗೂ ಕಿರುತೆರೆಯಲ್ಲಿ ಬಹು ಬೇಡಿಕೆಯ ನಿರೂಪಕಿಯಾಗಿದ್ದಾರೆ. ಇವರು ಎಪಿಸೋಡ್‌ವೊಂದಕ್ಕೆ 75 ಸಾವಿರ ರೂ. ಜಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
ಅನುಪಮಾ ಗೌಡ

ಅನುಪಮಾ ಗೌಡ ಕನ್ನಡ ಕಿರುತೆರೆಯಾ ಜನಪ್ರಿಯ ನಟಿ ಹಾಗೂ ನಿರೂಪಕಿ. ಹಲವು ಧಾರಾವಾಹಿಗಳ ಮೂಲಕ ಕಿರುತೆರೆಗೆ ಪರಿಚಯವಾದರು. ನಂತರ ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ವೀಕ್ಷಕರ ಗಮನ ಸೆಳೆದಿದ್ದಾರೆ. ಇವರು ಪ್ರತಿ ಎಪಿಸೋಡ್‌ಗೆ 1 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಮಾಸ್ಟರ್ ಆನಂದ್

ಬಾಲ ನಟರಾಗಿದ್ದಾಗಿನಿಂದಲೂ ಮಾಸ್ಟರ್ ಆನಂದ್ ಬಹಳ ಫೇಮಸ್. ಇನ್ನು ಇವರ ಬಗ್ಗೆ ಹೇಳುವುದಾದರೆ ಹೇಳುವುದಾದರೆ, ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಬೆಳೆದವರು. ನಿರೂಪಣೆಯಲ್ಲಿ ವೀಕ್ಷಕರನ್ನು ರಂಜಿಸುವುದರಲ್ಲಿ ಎಕ್ಸ್‌ಪರ್ಟ್ ಆದ ಮಾಸ್ಟರ್ ಆನಂದ್ ಅವರು ಪ್ರತಿ ಎಪಿಸೋಡ್‌ಗೆ 1.5 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎಂದು ಮೂಲಗಳು ಹೇಳುತ್ತವೆ.
ಸೃಜನ್ ಲೋಕೇಶ್

ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ನಟ, ನಿರೂಪಕ ಹಾಗೂ ನಿರ್ಮಾಪಕ. ಮಜಾ ಟಾಕೀಸ್, ಛೋಟಾ ಚಾಂಪಿಯನ್, ಮಜಾ ವಿತ್ ಸೃಜಾ, ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್ ಹೀಗೆ ಹಲವು ಶೋಗಳ ನಿರೂಪಣೆ ಮಾಡಿ ಆ ಮೂಲಕ ಸಿಕ್ಕಾಪಟ್ಟೆ ಯಶಸ್ಸು ಕಂಡರು. ಇವರು ಕಾರ್ಯಕ್ರಮದ ಎಪಿಸೋಡ್‌ವೊಂದಕ್ಕೆ 2 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
ಅಕುಲ್ ಬಾಲಾಜಿ

ಕನ್ನಡ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಎಂತಹ ಮಾತಿನ ಮಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಂತಹದ್ದೇ ಕಾರ್ಯಕ್ರಮಗಳನ್ನು ಕೊಟ್ಟರೂ ಅದನ್ನು ಯಶಸ್ವಿಯಾಗಿ ಮುಗಿಸಿಕೊಡುವ ಚತುರತೆ ಅಕುಲ್ ಬಾಲಾಜಿಗೆ ಇದೆ. ಒಂದು ಸಮಯದಲ್ಲಿ ರಿಯಾಲಿಟಿ ಶೋ ಎಂದಾಕ್ಷಣ ಥಟ್ ಅಂತಾ ನೆನಪಿಗೆ ಬರುತ್ತಿದ್ದ ಹೆಸರೇ ಅಕುಲ್ ಬಾಲಾಜಿ. ಅಷ್ಟರ ಮಟ್ಟಿಗೆ ಕಿರುತೆರೆ ಲೋಕದಲ್ಲಿ ಅಕುಲ್ ಮಿಂಚಿದ್ದರು. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್, ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಮೂಲಕ ಯಶಸ್ಸು ಕಂಡಿದ್ದ ಅಕುಲ್, ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ. ಇವರು ಪ್ರತಿ ಪ್ರತಿ ಎಪಿಸೋಡ್‌ಗೆ 3 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
ಅನುಶ್ರೀ

ಕನ್ನಡ ಕಿರುತೆರೆಯ ಈ ಮಾತಿನ ಮಲ್ಲಿಯನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ನಿರೂಪಣೆ ಅಂತ ಬಂದರೆ ಮೊದಲು ನೆನಪಾಗುವುದೇ ಅನುಶ್ರೀ. ಇನ್ನು ಕೆಲವು ವರ್ಷಗಳಿಂದ ಜೀ ಕನ್ನಡದಲ್ಲಿ ಕೆಲವು ಶೋಗಳನ್ನು ಅನುಶ್ರೀಯೇ ನಡೆಸಿಕೊಡುತ್ತಾರೆ. ಈಕೆ ಯಾವುದೇ ಕಾರ್ಯಕ್ರಮಕ್ಕೆ ಬಂದರೂ ಸಾಕು ಅಲ್ಲಿ ಮಜಾ ಇದ್ದೇ ಇರುತ್ತದೆ. ಇವರು ಎಪಿಸೋಡ್‌ವೊಂದಕ್ಕೆ 2.5 ರಿಂದ 3 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಕಿಚ್ಚ ಸುದೀಪ್

ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋಗೆ ಒಂದು ಗತ್ತು ಗಮ್ಮತ್ತು ತಂದುಕೊಟ್ಟವರು ಕಿಚ್ಚ ಸುದೀಪ್. ಬಿಗ್‌ಬಾಸ್ ಸೀಸನ್ 11 ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಕಿಚ್ಚ ಸುದೀಪ್, ಈ ಬಾರಿ ಬಿಗ್‌ಬಾಸ್ ಶೋ ನಿರೂಪಣೆಗೆ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.