Connect with us

MANGALORE

ಹಿಜಾಬ್‌ ವಿವಾದ: ದ.ಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷನಿಗೆ ಬೆದರಿಕೆ-ದೂರು

Published

on

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದದ ಕುರಿತು ಮಾಧ್ಯಮ ಹೇಳಿಕೆ ನೀಡಿದ ದ.ಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್‌ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಇಂದು ದೂರು ನೀಡಲಾಯಿತು.

ಇತ್ತೀಚೆಗೆ ಹಿಜಾಬ್‌ ವಿಚಾರವಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದು, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ನಾಯಕರಾದ ಫೈಝಲ್ ರೆಹಮಾನ್, ಜಿಲ್ಲಾ ನಾಯಕರುಗಳಾದ ಸತ್ತಾರ್ ಬಂದರ್, ಮೊಹಮ್ಮದ್ ಫೈಝಲ್, ಶ್ರೀನಾಥ್, ಯಶು, ಸಿನಾನ್ ಉಪಸ್ಥಿತರಿದ್ದರು.

LATEST NEWS

ಮಂಗಳೂರು: ಜೋಡಿಕೊಲೆ ಪ್ರಕರಣದ ಆಪರಾಧಿಗೆ ಶಿಕ್ಷೆ

Published

on

ಮಂಗಳೂರು: ಮುಲ್ಕಿ ತಾಲೂಕಿನ ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಎಂಬಲ್ಲಿ ನಡೆದ ಜೋಡಿಕೊಲೆ ಪ್ರಕರಣದ ಆರೋಪಿ ಅಲ್ಫೋನ್ಸ್ ಸಲ್ದಾನ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.


ಅಲ್ಫೋನ್ಸ್ ಸಲ್ಡಾನಾ ಎಂಬಾತ 2020ರ ಎಪ್ರಿಲ್ 29ರಂದು ಆರೋಪಿಯು ಮನೆ ಸಮೀಪದ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜ ಮತ್ತವರ ಪತ್ನಿ ಹೆಲೆನ್ ಡಿಸೋಜ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನು ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ.

ಇದನ್ನೂ ಓದಿ: ಖಾಸಗಿ ಹೊಟೇಲ್‌ನಲ್ಲಿ ಆರ್‌ಎಫ್‌ಓ ಶವ ಪತ್ತೆ; ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಕಾಂತರಾಜ್‌

ಅಂದಿನ ಮುಲ್ಕಿ ಠಾಣೆಯ ನಿರೀಕ್ಷಕ ಜಯರಾಮ ಡಿ.ಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಆರಂಭದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ವಿಚಾರಣೆ ನಡೆಸಿದ್ದರು. ಆರೋಪಿಯು ಜೀವಾವಧಿ ಶಿಕ್ಷೆಯೊಂದಿಗೆ 2 ಲಕ್ಷ ರೂಪಾಯಿ ದಂಡ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.

Continue Reading

DAKSHINA KANNADA

ರೋಸ್ ಕಾರ್ಯಕ್ರಮದಲ್ಲಿ ಮಹಿಳೆಗೆ ಬಿಯರ್ ಬಾಟಲಿಯಿಂದ ಹಲ್ಲೆ, ಆರೋಪಿಯನ್ನು ಬಂಧಿಸದ ಪೊಲೀಸರು..!?

Published

on

ಮಂಗಳೂರು: ರೋಸ್ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಮೇಲೆ ವ್ಯಕ್ತಿಯೋರ್ವ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಕೊಣಾಜೆಯ ಪಜೀರು ಚರ್ಚ್ ಹಾಲ್ ನಲ್ಲಿ ನಡೆದಿದೆ. ಪಜೀರು ಗ್ರಾಪಂ ಮಾಜಿ ಸದಸ್ಯೆ ಸುನಿತಾ ಲೋಬೊ ಹಲ್ಲೆಗೊಳಗಾದ ಮಹಿಳೆ. ವಲೇರಿಯನ್ ಡಿಸೋಜ ಹಲ್ಲೆಗೈದ ಆರೋಪಿ.

ಇಬ್ಬರೂ ಪಜೀರು ಗ್ರಾಮದವರಾಗಿದ್ದು, ಎರಡು ಕುಟುಂಬದ ಮಧ್ಯೆ ಹಳೆ ದ್ವೇಷ ಇತ್ತು ಎನ್ನಲಾಗಿದೆ.  ಜ.6ರಂದು ಸಂಬಂಧಿಕರ ರೋಸ್ ಕಾರ್ಯಕ್ರಮದಲ್ಲಿ ಸುನಿತಾ ಕುಟುಂಬ ಪಾಲ್ಗೊಂಡಿದ್ದು ಈ ವೇಳೆ ಮೈಗೆ ತಾಗಿದ ನೆಪದಲ್ಲಿ ಮಾತಿಗೆ ಮಾತು ಬೆಳೆದು ವಲೇರಿಯನ್ ಡಿಸೋಜ ಬೀಯರ್ ಬಾಟಲಿಯನ್ನು ತಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ವಲೇರಿಯನ್ ತನ್ನ ಎರಡೂ ಕೈಯಲ್ಲಿ ಬಾಟಲಿ ಹಿಡ್ಕೊಂಡು ಬಂದು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಆನಂತರ, ಮಹಿಳೆ ಜೊತೆಗಿದ್ದ ಪತಿ ಮತ್ತು ಮಗ ವಲೇರಿಯನ್ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆಯೂ ವಲೇರಿಯನ್ ಪ್ರತಿ ದೂರು ನೀಡಿದ್ದು ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣೆಗೆ ಬಿದ್ದ ಏಟಿನಿಂದಾಗಿ ಮಹಿಳೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆನಂತರ ಒಂದು ವಾರ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದೇ ವೇಳೆ, ವಲೇರಿಯನ್ ಡಿಸೋಜ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಕಳೆದ ಹತ್ತು ದಿನಗಳಿಂದಲೂ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾಗುತ್ತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದರೂ, ಕೊಲೆಯತ್ನ ಪ್ರಕರಣ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಸುನಿತಾ ಲೋಬೊ ಆರೋಪಿಸಿದ್ದಾರೆ.

ಸುನೀತಾ ಲೋಬೋ 2015ರಲ್ಲಿ ಪಜೀರು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಗೆದ್ದಿದ್ದರು. ವಲೇರಿಯನ್ ಡಿಸೋಜ ತನ್ನ ಪತ್ನಿಗೆ ಕಾಂಗ್ರೆಸಿನಿಂದ ಟಿಕೆಟ್ ಪಡೆಯಲು ಪ್ರಯತ್ನ ಪಟ್ಟಿದ್ದ. ಆನಂತರ, ತನ್ನ ಪತ್ನಿಯನ್ನು ಪಕ್ಷೇತರ ನಿಲ್ಲಿಸಿ ಸುನಿತಾರನ್ನು ಸೋಲಿಸಲು ಪ್ರಯತ್ನಿಸಿದ್ದ. ಆದರೆ ಸುನಿತಾ ಲೋಬೊ ಅವರೇ ಚುನಾವಣೆಯಲ್ಲಿ ಗೆದ್ದಿದ್ದರು. ಅದೇ ಸಿಟ್ಟಿನಲ್ಲಿ ಪ್ರತಿ ಬಾರಿಯೂ ನಮ್ಮ ಮನೆಯವರೊಂದಿಗೆ ಸಣ್ಣ ಸಣ್ಣ ವಿಷಯಕ್ಕೂ ಜಗಳಕ್ಕೆ ಬಂದು ಹಗೆ ತೀರಿಸಲು ನೋಡುತ್ತಿದ್ದಾನೆಂದು ಸುನಿತಾ ಹೇಳಿದ್ದಾರೆ. ಹಲ್ಲೆ ಘಟನೆಯನ್ನು ಉಳ್ಳಾಲ ಮಹಿಳಾ ಕಾಂಗ್ರೆಸ್ ಖಂಡಿಸಿದ್ದು, ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ವಲೇರಿಯನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಘಟನೆ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ.

 

 

 

Continue Reading

DAKSHINA KANNADA

ಮಂಗಳೂರು: ಜ.22ರಂದು ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರ

Published

on

ಮಂಗಳೂರು: ಮೂಳೆ ಸವಕಳಿಯನ್ನು ತಡೆಗಟ್ಟಿದರೆ ದೀರ್ಘಕಾಲದ ಮಂಡಿನೋವು, ಬೆನ್ನುನೋವು ಸೇರಿದಂತೆ ಹಲವು ರೀತಿಯ ಮೂಳೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ರಥಬೀದಿ ಫ್ಲವರ್ ಮಾರುಕಟ್ಟೆ ರಸ್ತೆಯಲ್ಲಿರುವ ಲಕ್ಷ್ಮೀ ಕ್ಲಿನಿಕ್‌ನ ತಜ್ಞ ಆಯುರ್ವೇದ ವೈದ್ಯೆ ಜ್ಯೋತಿ ಕೆ ಇವರು ತಪಾಸಣೆ ಹಾಗೂ ಆಪ್ತ ಸಮಾಲೋಚನೆಯನ್ನು ಜನವರಿ 22ರಂದು ಗುರುವಾರ ನಡೆಸಲಿರುವರು.


ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ ಜ್ಯೋತಿ ಕೆ ಅವರು, ಸಾಮಾನ್ಯವಾಗಿ 30 ವರ್ಷ ಮೇಲ್ಪಟ್ಟಾಗ ಮೂಳೆ ನೋವು ಆರಂಭವಾಗುತ್ತದೆ. ಮೂಳೆ ಸವಕಳಿ ಪತ್ತೆ ಹಚ್ಚಿ ದೀರ್ಘ ಕಾಲದ ಅಸ್ವಸ್ಥತೆ ಗುಣ ಪಡಿಸಲಾಗುತ್ತದೆ. ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ಇದನ್ನೂ ಓದಿ: ಎಂಸಿಎಫ್‌ ಕಾರ್ಖಾನೆ ಹೆಸರು ಬದಲಾವಣೆ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ: ಎಂಎಲ್‌ಸಿ ಐವನ್ ಡಿ ಸೋಜಾ

ರೋಟರಿ ಕ್ಲಬ್ ಆಫ್‌ ಮಂಗಳೂರು ಸೆಂಟ್ರಲ್‌ ಈ ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಾಸಣೆಗೆ ಸಹಭಾಗಿತ್ವವನ್ನು ನೀಡಲಿದೆ ಎಂದು ಅಧ್ಯಕ್ಷ ಭಾಸ್ಕರ್ ಕಟ್ಟ ತಿಳಿಸಿದರು. ರೊಟೇರಿಯನ್ ಸಂತೋಷ್, ರಾಜೇಶ್‌ ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page