Connect with us

BIG BOSS

ಕಲರ್ಸ್​ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್​ಗೆ ಗುಡ್ ನ್ಯೂಸ್

Published

on

ಲಾಯರ್ ಜಗದೀಶ್ ಅವರು ಮಹಿಳೆಯರ ವಿರುದ್ಧ ನಿಂದನೀಯ ಶಬ್ದಗಳ ಬಳಕೆ ಮಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ಕಾರಣದಿಂದಲೇ ಅವರನ್ನು ಬಿಗ್ ಬಾಸ್​ನಿಂದ ಎಲಿಮಿನೇಟ್ ಕೂಡ ಮಾಡಲಾಯಿತು. ಅವರನ್ನು ಮರಳಿ ಕರೆಸಬೇಕು ಎನ್ನುವ ಆಗ್ರಹ ಬಿಗ್ ಬಾಸ್​ನಲ್ಲಿ ಜೋರಾಗಿದೆ. ಹೀಗಿರುವಾಗಲೇ ಜಗದೀಶ್ ಅವರು ಕಲರ್ಸ್​ ಕನ್ನಡದ ಶೋಗೆ ಅತಿಥಿಯಾಗಿ ಬಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಜಗದೀಶ್ ಬಿಗ್ ಬಾಸ್​ನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದರು. ಈ ಕಾರಣದಿಂದಲೇ 1 Vs 15 ಎಂಬ ವಾತಾವರಣ ಬಿಗ್ ಬಾಸ್ ಮನೆಯಲ್ಲಿ ಸೃಷ್ಟಿ ಆಗಿತ್ತು. ಅವರನ್ನು ಹೊರಕ್ಕೆ ಹಾಕಬೇಕು ಎಂದು ಅನೇಕರು ಪ್ರಯತ್ನಪಟ್ಟರು. ಅವರು ನಿಂದನೀಯ ಶಬ್ದಗಳ ಬಳಕೆ ಮಾಡಿ ಎಲಿಮಿನೇಟ್ ಆಗಿದ್ದಾರೆ. ಇದು ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಈಗ ಅವರನ್ನು ಕರೆಸಬೇಕು ಎಂಬ ಕೂಗು ಜೋರಾಗಿದೆ. ಹೀಗಿರುವಾಗಲೇ ಅವರು ಕಲರ್ಸ್​ನ ‘ಸಚಿರುಚಿ ಸೀಸನ್ 3’ ಶೋಗೆ ಶೆಫ್ ಆಗಿ ಬಂದಿದ್ದಾರೆ.

ಜಗದೀಶ್ ಅವರು ಅಡುಗೆ ಮಾಡುವುದನ್ನು ತೋರಿಸಲಾಗಿದೆ. ಆ್ಯಂಕರ್ ಜಾಹ್ನವಿ ಅವರು ಜಗದೀಶ್​ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಲ್ಲಿ ಹೈಲೈಟ್ ಆಗಿದ್ದು ‘ಹಂಸ ಮೇಲೆ ನಿಮಗೆ ಕ್ರಶ್’ ಆಗಿತ್ತಾ ಎಂಬುದು. ಇದಕ್ಕೆ ಜಗದೀಶ್ ಅವರು ನಕ್ಕಿದ್ದಾರೆ. ಜಗದೀಶ್ ಅವರು ನಗುವಿನಲ್ಲೇ ಜನರಿಗೆ ಉತ್ತರ ಸಿಕ್ಕಿದೆ.

ಬಿಗ್ ಬಾಸ್ ಮನೆಯಲ್ಲಿರುವ ಹಂಸ ಹಾಗೂ ಜಗದೀಶ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಪದೇ ಪದೇ ಹಂಸ ಅವರನ್ನು ಜಗದೀಶ್ ಕಾಡಿದ್ದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕವೂ ಜಗದೀಶ್​ಗೆ ಈ ಕುರಿತು ಪ್ರಶ್ನೆಗಳು ಎದುರಾಗುತ್ತಿವೆ. ‘ಬಿಗ್ ಬಾಸ್ ಪಾಲಿಗೆ ಜಗದೀಶ್ ಮುಗಿದ ಅಧ್ಯಾಯ. ಹಾಗೆ ಕರೆಸೋದಾದರೆ ಹುಚ್ಚ ವೆಂಕಟ್ ಅವರನ್ನೂ ಕರೆಸಬೇಕಾಗುತ್ತದೆ’ ಎಂದು ಸುದೀಪ್ ಹೇಳಿದ್ದರು. ಈ ಮೂಲಕ ಜಗದೀಶ್ ಅವರನ್ನು ಮರಳಿ ಶೋಗೆ ಕರೆಸೋದೇ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.

BIG BOSS

ನಿಯಮ ವಿರುದ್ಧ ನಡೆದುಕೊಂಡ ಗಿಲ್ಲಿ; ವೀಕೆಂಡ್‌ನಲ್ಲಿ ಕಿಚ್ಚನ ಕ್ಲಾಸ್‌ ಗ್ಯಾರಂಟಿ!

Published

on

BBK12: ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿನಟ ಕಳೆದ ಎರಡು ತಿಂಗಳಿನಿಂದ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಉತ್ತಮವಾಗಿ ಆಡುತ್ತಿದ್ದಾರೆ. ಅನೇಕ ಬಾರಿ ಅವರ ಆಟ ಹಳಿ ತಪ್ಪಿದ್ದು ಇದೆ. ವೀಕೆಂಡ್‌ನಲ್ಲಿ ಸುದೀಪ್‌ ಬುದ್ಧಿ ಹೇಳಿದಾಗ ತಿದ್ದಿಕೊಂಡು ಮುಂದುವರೆಯುತ್ತಿದ್ದಾರೆ. ಈಗ ಅವರು ಕ್ಯಾಪ್ಟನ್ಸಿ ಅರ್ಹತೆ ಪಡೆಯದಿದ್ದರೂ ಕ್ಯಾಪ್ಟನ್‌ ರೂಂ ಬಳಸುವ ಹಂಬಲದಲ್ಲಿ ಇದ್ದಾರೆ. ವೀಕೆಂಡ್‌ನಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ.


ಗಿಲ್ಲಿಗೆ ಈ ವಾರ ಕ್ಯಾಪ್ಟನ್‌ ಆಗುವ ಅವಕಾಶ ತಪ್ಪಿದೆ. ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಕ್ಯಾಪ್ಟನ್‌ ಆಗಿದ್ದು, ಸ್ಪಂದನಾ ಹಾಗೂ ಅಭಿಷೇಕ್‌ ಕ್ಯಾಪ್ಟನ್‌ ಪಟ್ಟ ಪಡೆದರು. ಈ ಬಗ್ಗೆ ಘೋಷಣೆ ಆಗುತ್ತಿದ್ದಂತೆ ಸ್ಪಂದನಾ ಅವರು ಸಾಕಷ್ಟು ಖುಷಿಪಟ್ಟರು. ಅವರನ್ನು ಸ್ವಾಗತಿಸಲು ಗಿಲ್ಲಿ ರೆಡಿಯಾಗಿ ನಿಂತಿದ್ದರು.

ಕ್ಯಾಪ್ಟನ್‌ ರೂಂಗೆ ಕ್ಯಾಪ್ಟನ್‌ ಬಿಟ್ಟು ಇನ್ಯಾರಿಗೂ ಹೋಗಲು ಹಾಗೂ ಅದನ್ನು ಬಳಸಲು ಅವಕಾಶ ಇಲ್ಲ. ಆದರೆ ಗಿಲ್ಲಿ ವೈಸ್‌ ಕ್ಯಾಪ್ಟನ್‌ ಎಂದು ರೂಂ ಒಳಗೆ ಹೋದರು. ಅಷ್ಟೇ ಅಲ್ಲ, ಅಲ್ಲಿರೋ ಬೆಡ್ ಮೇಲೆ ಮಲಗಿ ಕೆಲ ಹೊತ್ತು ವಿಶ್ರಾಂತಿ ಪಡೆದು ನಿಯಮ ವಿರುದ್ಧ ನಡೆದುಕೊಂಡಿದ್ದಾರೆ.

ಇದನ್ನೂ ಓದಿ: BBK12: ರಕ್ಷಿತಾ ಯೋಗ್ಯತೆ ಅಳೆದ ಇತರೆ ಸ್ಪರ್ಧಿಗಳು!

ಈ ಮೊದಲು ಮಲ್ಲಮ್ಮನನ್ನು ಕ್ಯಾಪ್ಟನ್‌ ರೂಂ ಒಳಗೆ ಕೂರಿಸಿದ್ದಕ್ಕೆ ರಘುಗೆ ಸುದೀಪ್ ಕಿವಿ ಮಾತು ಹೇಳಿದ್ದರು. ಅದನ್ನು ಅರ್ಹತೆ ಪಡೆದು ಬಳಸಬೇಕು ಎಂಬರ್ಥದಲ್ಲಿ ಮಾತನಾಡಿದ್ದರು. ಈಗ ಗಿಲ್ಲಿ ಅವರಿಗೂ ಕಿಚ್ಚ ಸುದೀಪ್‌ ಅವರು ಕ್ಲಾಸ್‌ ತೆಗೆದುಕೊಳ್ಳುವ ಮುನ್ಸೂಚನೆ ಇದೆ.

Continue Reading

BIG BOSS

BBK12: ರಕ್ಷಿತಾ ಯೋಗ್ಯತೆ ಅಳೆದ ಇತರೆ ಸ್ಪರ್ಧಿಗಳು!

Published

on

BBK12: ಇತ್ತೀಚೆಗೆ ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ತನಗೆ ಆತ್ಮೀಯರಂತೆ ಇರುವ ಕೆಲವು ಸಹಸ್ಪರ್ಧಿಗಳ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. ರಕ್ಷಿತಾ ಮೇಲೆ ಈ ವಾರ ಉತ್ತಮ ಕಾರಣ ನೀಡಿ ನಾಮಿನೇಷನ್‌ ಮಾಡಿಲ್ಲ ಎಂಬ ಆರೋಪ ಇದೆ.


ಹೌದು, ಈ ವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಕ್ಷಿತಾ ಅವರು ಗಿಲ್ಲಿ ಮತ್ತು ಕಾವ್ಯಾ ಅವರನ್ನ ನಾಮಿನೇಟ್‌ ಮಾಡಲು ಸೂಕ್ತವಾದ ಕಾರಣ ತೆಗೆದುಕೊಂಡಿಲ್ಲ. ರಕ್ಷಿತಾ ಅತಿರೇಕದ ವರ್ತನೆ ತೋರಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯವೂ ಆಗಿತ್ತು.

ಇದೀಗ ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ನಲ್ಲಿ ಬಹುತೇಕ ಸದಸ್ಯರು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ರಕ್ಷಿತಾ ಯೋಗ್ಯರಲ್ಲ ಎಂದಿದ್ದಾರೆ. ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ಸದಸ್ಯರನ್ನು ಘೋಷಿಸಬೇಕು ಎಂದು ಬಿಗ್‌ ಬಾಸ್‌ ಟಾಸ್ಕ್‌ ನೀಡಿದ್ದರು. ಬಹುತೇಕ ಎಲ್ಲ ಸದಸ್ಯರು ರಕ್ಷಿತಾ ಹೆಸರನ್ನೇ ಹೇಳಿದ್ದಾರೆ.

ಇದನ್ನೂ ಓದಿ: BBK12: ಗಿಲ್ಲಿ ಕಾಮಿಡಿಗೆ ನಕ್ಕುನಕ್ಕು ಸುಸ್ತಾದ ರಜತ್‌

ರಕ್ಷಿತಾ ಸರಿಯಾಗಿ ಅಲೋಚಿಸದೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಬರೋದಿಲ್ಲ ಎಂದು ಮನೆಯ ಅನೇಕ ಸ್ಪರ್ಧಿಗಳು ಹೇಳಿದರು.

Continue Reading

BIG BOSS

BBK12: ಗಿಲ್ಲಿ ಕಾಮಿಡಿಗೆ ನಕ್ಕುನಕ್ಕು ಸುಸ್ತಾದ ರಜತ್‌

Published

on

BBK12: . ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಬಂದಂತಹ ರಜತ್‌ ಇದೀಗ ಬಿಗ್‌ಬಾಸ್‌ ಮನೆಗೆ ಎರಡನೇ ಬಾರಿ ಕಾಲಿಟ್ಟಿದ್ದಾರೆ. ನಟ ರಜತ್ ರಫ್‌ ಆ್ಯಂಡ್‌ ಟಫ್‌ ವ್ಯಕ್ತಿತ್ವದವರು. ಮನೆಗೆ ಅತಿಥಿಯಾಗಿ ಬಂದ ಮೊದಲ ವಾರವೇ ಗಿಲ್ಲಿ ಮೇಲೆ ಸಿಡಿದೆದ್ದಿದ್ದರು. ಆದರೆ ಈಗ ರಜತ್‌ ಗಿಲ್ಲಿ ಸೂಪರ್‌ ಕಾಂಬಿನೇಷನ್‌ ಆಗಿದ್ದಾರೆ.


ಗಿಲ್ಲಿ ಮಾಡುವ ಎಲ್ಲ ಕಾಮಿಡಿಯನ್ನು ರಜತ್‌ ಅವರು ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಇದರಿಂದ ಬಿಗ್‌ಬಾಸ್‌ ಮನೆಯೊಳಗೆ ರಜತ್‌ ತುಂಬಾನೇ ಕೂಲ್‌ ಆಗಿದ್ದಾರೆ. ಈ ಮೊದಲು ರಘು ಜತೆ ಸೇರಿ ಕಾಮಿಡಿ ಮಾಡುತ್ತಿದ್ದ ಗಿಲ್ಲಿ ಈಗ ರಜತ್‌ ಜತೆ ಸೇರಿಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಯಾವಾಗಲೂ ಜಗಳ, ಗಲಾಟೆ ನಡೆಯುತ್ತಲೇ ಇರುತ್ತದೆ. ಮಾತಿನ ಚಕಮಕಿ ನಡುವೆ ಮನರಂಜನೆಯೇ ಕಳೆದು ಹೋಗಿರುತ್ತದೆ. ಆಗ ವೀಕ್ಷಕರಿಗೆ ಮತ್ತು ಸದಸ್ಯರಿಗೆ ರಿಲೀಫ್‌ ನೀಡುವುದೇ ಗಿಲ್ಲಿ ಕಾಮಿಡಿ. ಗಿಲ್ಲಿ ಅವರು ಬಿಗ್‌ಬಾಸ್‌ ಆಟದಲ್ಲಿನ ಅನೇಕ ಘಟನೆಯನ್ನು ತನ್ನದೇ ಶೈಲಿಯಲ್ಲಿ ಅರ್ಥೈಸುತ್ತಾರೆ. ಅದನ್ನು ಕೇಳಿ ಎಲ್ಲರಿಗೂ ನಗು ಬರುತ್ತದೆ.

ಮಂಡ್ಯ ಭಾಷೆಯಲ್ಲಿ ಮಾತಾಡುತ್ತಾ ಎಲ್ಲರ ಮನಸ್ಸು ಸೆಳೆಯುತ್ತಾರೆ. ನಗಿಸುವ ಕಲೆ ಗಿಲ್ಲಿಗೆ ಸೂಕ್ತವಾಗಿದೆ. ಜನಪ್ರಿಯ ಸಿನಿಮಾಗಳ ಸಂಭಾಷಣೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಸಖತ್‌ ಮನರಂಜನೆ ನೀಡುತ್ತಾರೆ. ವೀಕ್ಷಕರು ಮಾತ್ರವಲ್ಲದೇ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಜತ್‌ ಕೂಡ ಫುಲ್‌ ಎಂಜಾಯ್‌ ಮಾಡುತ್ತಿದ್ದಾರೆ.

ಕಳೆದ ವಾರದಿಂದ ಸೈಲೆಂಟ್‌ ಆಗಿರುವ ಧ್ರುವಂತ್‌ ಮನೆಯಿಂದ ಹೊರಹೋಗಲು ನಿರ್ಧಾರ ತೆಗೆದುಕೊಂಡಿದ್ದಾರೆ. ಆ ವಿಚಾರವನ್ನು ಇಟ್ಟುಕೊಂಡು ಗಿಲ್ಲಿ ನಟ, ಡಿಸೆಂಬರ್‌ 4ರ ಸಂಚಿಕೆಯಲ್ಲಿ ಉಪೇಂದ್ರ ಸಿನಿಮಾದ ಡೈಲಾಗ್‌ ಅನುಕರಣೆ ಮಾಡಿ ಧ್ರುವಂತ್‌ ಅವರ ಕಾಲೆಳೆದು ಮಾತನಾಡಿದ್ದರು. ಗಿಲ್ಲಿ ಕಾಮಿಡಿಗೆ ಮನಸಾರೆ ನಕ್ಕ ರಜತ್‌ ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ನೀಡುವ ಮುನ್ನವೇ ಗಿಲ್ಲಿಗೆ ಫಿದಾ ಆಗಿದ್ದರಂತೆ.

ಇದನ್ನೂ ಓದಿ: ನಿನ್ನ ಜತೆ ಸೇರಲೇಬಾರದಿತ್ತು ಎಂದ ಗಿಲ್ಲಿ; ಕಾವ್ಯಾಗೆ ಶಾಕ್!

ರಜತ್‌ ಬಿಗ್‌ಬಾಸ್‌ ಮನೆಯೊಳಗೆ ಬಂದು ಒಂದು ವಾರ ಅತಿಥಿಯಾಗಿ ಇದ್ದಾಗ, ಇವನೇ ನನಗೆ ಸಖತ್‌ ಇಷ್ಟ ಎಂದು ಹೇಳಿದ್ದರು. ಆದರೆ ಮೊದಲು ಸಾಕಷ್ಟು ಮನಸ್ತಾಪಗಳು ಇದ್ದಿದ್ದರೂ, ಈಗ ವಾತಾವರಣ ಬದಲಾಗಿದೆ. ಗಿಲ್ಲಿಯ ಪ್ರತಿಯೊಂದು ಕಾಮಿಡಿಯನ್ನು ಕೂಡ ಎಂಜಾಯ್ ಮಾಡುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page