Connect with us

BIG BOSS

ಲಾಯರ್​ ಜಗದೀಶ್​ ಪುನಃ ಬಿಗ್​ಬಾಸ್​ಗೆ ವಾಪಸ್​ ಬರ್ತಾರಂತೆ..!?

Published

on

ಈ ಸಾರಿ ಬಿಗ್ ಬಾಸ್​ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು ಲಾಯರ್ ಜಗದೀಶ್. ಬಿಗ್​ಬಾಸ್​ಗೆ ಹೇಳಿ ಮಾಡಿಸಿದಂಥ ಕಿರುಚಾಟ, ಗಲಾಟೆ ಜೊತೆಗೆ ತಮಾಷೆ ಮಾಡುತ್ತ ಹಲವು ವೀಕ್ಷಕರಿಗೆ ಬೇಕಾಗಿದ್ದವರು ಜಗದೀಶ್​. ಈ ಸೀಸನ್​ನಲ್ಲಿ ಹೈಲೈಟ್ ಅಂತ ಇದ್ದಿದ್ದೇ ಜಗದೀಶ್. ಕಂಡಕಂಡವರ ಜೊತೆಗೆ ಕಾಲು ಕೆರೆದುಕೊಡು ಜಗಳ ಆಡ್ತಾ, ಲಾಯರ್ ಪಾಯಿಂಟ್​​ಗಳನ್ನ ಹಾಕ್ತಾ ಇದ್ದ ಜಗ್ಗಿ ಜನರಿಗೆ ಹೇರಳ ಮನರಂಜನೆ ಕೊಟ್ಟಿದ್ರು. ಬರೀ ಮನೆಮಂದಿಗೆ ಮಾತ್ರ ಅಲ್ಲ , ಸಾಕ್ಷಾತ್ ಬಿಗ್ ಬಾಸ್​​ಗೇನೇ ಚಾಲೆಂಜ್ ಹಾಕಿದ್ರು ಜಗದೀಶ್.

ಆದರೆ ಈಗ ದೊಡ್ಮನೆಯಿಂದ ಜಗದೀಶ್​ರನ್ನೇ ಹೊರಹಾಕಲಾಗಿದೆ. ಲಾಯರ್ ಜಗದೀಶ್​ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಜನ. ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್​​ನ ಆಚೆ ಹಾಕಲಾಗಿದೆ. ಮನೆಯ ಮೂಲಭೂತ ನಿಯಮ ಉಲ್ಲಂಘಿಸಿರೋದು, ಮತ್ತೊಂದು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ ಲಾಯರ್ ಜಗದೀಶ್​​ನ ಮನೆಯಿಂದ ಹೊರಹೋಗುವಂತೆ ಬಿಗ್ ಬಾಸ್ ಆದೇಶ ಬಂತು. ಆ ಆದೇಶಕ್ಕೆ ತಲೆಬಾಗಿದ ಜಗದೀಶ್ ದೊಡ್ಮನೆಯ ಮುಖ್ಯಬಾಗಿಲಿನಿಂದ ಹೊರಬಂದಿದ್ದಾರೆ.

ಇನ್ನೊಂದು ಕಡೆ ಲಾಯರ್ ಜಗದೀಶ್ ಬಂದರೆ ಮಾತ್ರ ಬಿಗ್‌ಬಾಸ್ ಚೆನ್ನಾಗಿರೋದು ಎಂದು ಜನ ಹೇಳುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಲಾಯರ್ ಜಗದೀಶ್ ಪುನಃ ಬಿಗ್‌ಬಾಸ್‌ಗೆ ಬರುವ ಸಾಧ್ಯತೆಗಳು ಇದೆ ಎಂದು ಜನರು ಹೇಳುತ್ತಿದ್ದಾರೆ.

BIG BOSS

BBK12: ಗಿಲ್ಲಿ ಜಿಗಣೆ ಥರ ಎಂದ ಧ್ರುವಂತ್; ಕಿಚ್ಚ ಏನಂದ್ರು?

Published

on

BBK12: ಬಿಗ್‌ ಬಾಸ್‌ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟನ ಹವಾ ಜೋರಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಹ ಸ್ಪರ್ಧಿಗಳ ಕಾಲೆಳೆಯುವ ಗಿಲ್ಲಿ, ಕಿಚ್ಚನ ಪಂಚಾಯ್ತಿಯಲ್ಲೂ ಇದನ್ನ ಮರೆಯೋದಿಲ್ಲ. ಅದರಲ್ಲೂ ಈ ವಾರ ಸುದೀಪ್ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ್ದಾರೆ ಗಿಲ್ಲಿ.


ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಕಿಚ್ಚ ಸುದೀಪ್ ಎದುರಲ್ಲೇ ತಮಾಷೆ ಮಾಡಿದ್ದಾರೆ.

ಸುದೀಪ್‌ ಅವರು ಗಿಲ್ಲಿಯವರೇ ನಿಮಗೆ ಪುಸ್ತಕ ಬರಿಯೋಕೆ ಕೊಟ್ಟರೆ ಯಾರ ಬಗ್ಗೆ ಬರೆಯುತ್ತೀರಾ ಅಂತಾ ಸುದೀಪ್‌ ಕೇಳ್ತಾರೆ.. ಅದಕ್ಕೆ ಮೊದಲಿಗೆ ಧ್ರುವಂತ್‌ ಬಗ್ಗೆ ನಾ ಕಂಡ ಧ್ರುವಂತ ಅಂತಾ ಬರೆಯುತ್ತೀನಿ. ಯಾಕಂದ್ರೆ ನಾಮಿನೇಶನ್‌ ಅಂತಾ ಬಂದ್ರೆ ಧ್ರುವಂತ್‌ ನಾಗವಲ್ಲಿಯಾಗಿ ಬದಲಾಗ್ತಾರೆ..ಅವರ ಎಕ್ಸ್‌ಪ್ರೆಶನ್‌ ಚೇಂಜ್‌ ಆಗ್ತದೆ ಅಂತಾ ಗಿಲ್ಲಿ ಹೇಳಿದರು..ಇನ್ನು, ಈ ಕಥೆಯ ನಾಯಕ ಸೂರಜ್‌ ಸರ್‌ ಅವರು ಮೊದಲಿಗೆ ಸ್ವಿಮ್ಮಿಂಗ್‌ ಪೂಲಿನಿಂದ ಎದ್ದು ಬಂದಿದ್ದಾರೆ. ಅದಾದ್ಮೇಲೆ ಒಂದು ಕಡೆ ಬಿದ್ದೋರು ಇನ್ನೂ ಎದ್ದೆ ಇಲ್ಲ ಅಂತಾರೆ. ಆವಾಗ ಸೂರಜ್‌ ಹಾಗೂ ರಾಶಿಕಾ ರಿಯಾಕ್ಷನ್‌ ಚೇಂಜ್‌ ಆಗುತ್ತೆ, ಆದ್ರೆ ಸುದೀಪ್‌ ಮಾತ್ರ ಸಖತ್‌ ಮಜಾ ಮಾಡುತ್ತಾರೆ.

ಕೊನೆಯದಾಗಿ, ರಘು ಇಂದ ಫೈಟ್‌, ಆಕ್ಷನ್‌, ಎಲ್ಲ ಎಕ್ಸ್‌ಪೆಕ್ಟ್‌ ಮಾಡಿದ್ದೆ. ಆದರೆ ಕಿಚನ್‌ ಅಲ್ಲಿ ಬೆಳ್ಳುಳ್ಳಿ ಬಿಡಿಸೋದು ಈರುಳ್ಳಿ ಕಟ್‌ ಮಾಡೋದು ನೋಡಿದೆ ಎಂದು ರಘು ಅವರ ಕಾಲೆಳೆದಿದ್ದಾರೆ.

ಇದನ್ನೂ ಓದಿ: BBK12: ಎಲಿಮಿನೇಟ್‌ ವೇಳೆ ಟ್ವಿಸ್ಟ್; ದೊಡ್ಮನೆಯ ನೆಚ್ಚಿನ ಸ್ಪರ್ಧಿಯೇ ಔಟ್!?

ಗಿಲ್ಲಿ ನಟ ತಿಗಣೆ ಥರ
ಧ್ರುವಂತ್‌ ಅವರು ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದು, “ಅವರು ತಿಗಣೆ ಥರ, ತಾನು ಬದುಕಬೇಕು ಎಂದಾಗ ಯಾರನ್ನಾದರೂ ಕಚ್ಚುತ್ತಾ ಇರಬೇಕು” ಎಂದು ಹೇಳಿದ್ದಾರೆ.

Continue Reading

BIG BOSS

BBK12: ಎಲಿಮಿನೇಟ್‌ ವೇಳೆ ಟ್ವಿಸ್ಟ್; ದೊಡ್ಮನೆಯ ನೆಚ್ಚಿನ ಸ್ಪರ್ಧಿಯೇ ಔಟ್!?

Published

on

BBK12: ಈ ವಾರ ದೊಡ್ಮನೆಯಲ್ಲಿ 8 ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಅದರಲ್ಲಿ ಧ್ರುವಂತ್‌ ನಿನ್ನೆ ಸೇವ್ ಆಗಿದ್ದಾರೆ. ಇನ್ನೂ 7 ಸ್ಪರ್ಧಿಗಳಲ್ಲಿ ಒಬ್ಬರು ಹೊರ ಬರಲಿದ್ದಾರೆ. ಅದು ಕೂಡ ಬಿಗ್‌ ಬಾಸ್ ಮನೆಯ ನೆಚ್ಚಿನ ಸ್ಪರ್ಧಿಯೇ ಔಟ್‌ ಆಗಲಿದ್ದಾರೆ ಎಂಬುದು ಶಾಕಿಂಗ್‌ ವಿಚಾರ.


ಹೌದು, ಬಿಗ್ ಬಾಸ್ ಕನ್ನಡ ಸೀಸನ್-12 ಶುರುವಾಗಿ 70 ದಿನಗಳು ಕಳೆದಿವೆ. ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಮನೆಯ ಪ್ರಬಲ ಸ್ಪರ್ಧಿಗಳೇ ಔಟ್ ಆಗುತ್ತಿದ್ದಾರೆ.

ಈ ವಾರ ಗಿಲ್ಲಿ, ಕಾವ್ಯಾ ಶೈವ, ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಸೂರಜ್ ಸಿಂಗ್, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಧ್ರುವಂತ್ ಸೇವ್ ಆಗಿದ್ದಾರೆ. ಇನ್ನು ಈ ವಾರ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎನ್ನುವ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ನಡೆಯುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಈ ವಾರ ಬಿಗ್ ಮನೆಯಿಂದ ಅಭಿಷೇಕ್ ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಅಭಿ ಅವರು ದೊಡ್ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಆದರೆ ಮನೆಯಲ್ಲಿ ಅಷ್ಟು ಪ್ರಭಾವ ಬೀರಿಲ್ಲ.

ಇದನ್ನೂ ಓದಿ: BBK12: ಕಿಚ್ಚನ ಎದುರಲ್ಲೇ ಏಕವಚನದಲ್ಲಿ ಬೈದಾಡಿಕೊಂಡ ರಜತ್-ಧ್ರುವಂತ್!

ಆರಂಭಿಕ ವಾರದಲ್ಲಿ ಅಶ್ವಿನಿ ಅವರ ಜೊತೆ ಆಪ್ತವಾಗಿದ್ದರು. ಬಳಿಕ ಧನುಷ್ ಅವರ ಜೊತೆ ಕಾಣಿಸಿಕೊಂಡಿದ್ದರು. ಇದೀಗ ದೊಡ್ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಆದರೆ ಎಲಿಮಿನೇಟ್ ವೇಳೆ ಒಂದು ಟ್ವಿಸ್ಟ್ ಕಾದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇಂದಿನ ಸಂಚಿಕೆ ವೀಕ್ಷಕರ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

 

Continue Reading

BIG BOSS

ಟಿಆರ್‌ಪಿಯಲ್ಲಿ ಬಿಗ್ ಬಾಸ್ ಹೊಸ ರೆಕಾರ್ಡ್; ಈ ವಾರ ಜನ ಮೆಚ್ಚಿದ  ಧಾರಾವಾಹಿ ಯಾವುದು?

Published

on

ಮಂಗಳೂರು/ಬೆಂಗಳೂರು : ಧಾರಾವಾಹಿಗಳೆಂದರೆ ಬಹಳಷ್ಟು ಮಂದಿಗೆ ಅಚ್ಚು ಮೆಚ್ಚು. ದಿನ ನಿತ್ಯ ತಪ್ಪದೇ ಧಾರಾವಾಹಿಗಳನ್ನು  ನೋಡುವವರಿದ್ದಾರೆ.  ರಿಯಾಲಿಟಿ ಶೋಗಳು ಕೂಡ ಜನಮನ ಗೆಲ್ಲುತ್ತಿವೆ. ಇದೀಗ ಈ ವಾರ ಯಾವ ಧಾರಾವಾಹಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡಿದೆ ಎಂಬುದು ಬಹಿರಂಗವಾಗಿದೆ. ಅಲ್ಲದೇ, ಬಿಗ್‌ ಬಾಸ್‌ಗೆ ಟಿಆರ್‌ಪಿ ಹೇಗಿದೆ ಅನ್ನೋ ಮಾಹಿತಿಯೂ ಹೊರ ಬಿದ್ದಿದೆ.

ಕುತೂಹಲ ಕೆರಳಿಸುತ್ತಾ ಸಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. 9.3 ರೇಟಿಂಗ್ ಗಿಟ್ಟಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಕರ್ಣ 9.1, ಮೂರನೇ ಸ್ಥಾನದಲ್ಲಿ ಅಮೃತಧಾರೆ 8.9 ರೇಟಿಂಗ್ ಪಡೆದಿದ್ದು,  ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.3 ಇದೆ.

ಐದನೇ ಸ್ಥಾನದಲ್ಲಿ ಮುದ್ದು ಸೊಸೆ 6.9, ಆರನೇ ಸ್ಥಾನದಲ್ಲಿ  ನಂದಗೋಕುಲ 6.3, ಏಳನೇ ಸ್ಥಾನವನ್ನು ಭಾರ್ಗವಿ LLB  ಹಾಗೂ ಪುಟ್ಟಕ್ಕನ ಮಕ್ಕಳು 6.2 ಪಡೆದಿವೆ.

ಎಂಟನೇ ಸ್ಥಾನದಲ್ಲಿ ಪ್ರೇಮಕಾವ್ಯ 5.8, ಒಂಬತ್ತನೇ ಸ್ಥಾನವನ್ನು ಶ್ರೀರಾಘವೇಂದ್ರ ಮಹಾತ್ಮೆ ಹಾಗೂ ನಾ ನಿನ್ನ ಬಿಡಲಾರೆ 5.5, ಹತ್ತನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ 5.2 ಟಿಆರ್​ಪಿ ಪಡೆದುಕೊಂಡಿದೆ. ಅಣ್ಣಯ್ಯ ಹಾಗೂ ಕರ್ಣ ಮಹಾಸಂಗಮ 11.4 ಟಿಆರ್​ಪಿ ಪಡೆದುಕೊಂಡಿದೆ.

ಇದನ್ನೂ ಓದಿ : BBK12: ಕಿಚ್ಚನ ಎದುರಲ್ಲೇ ಏಕವಚನದಲ್ಲಿ ಬೈದಾಡಿಕೊಂಡ ರಜತ್-ಧ್ರುವಂತ್!

ಬಿಗ್ ಬಾಸ್ ಹೊಸ ಇತಿಹಾಸ:

ರಿಯಾಲಿಟಿ ಶೋಗಳು ಕೂಡ ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿವೆ. ಇತ್ತೀಚೆಗೆ ಆರಂಭವಾದ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ 11.2 ಟಿಆರ್​ಪಿ ಪಡೆದುಕೊಂಡಿದೆ. ಬಿಗ್​ ಬಾಸ್​ ಪ್ರತಿದಿನದ ಸಂಚಿಕೆ 10.2 ಹಾಗೂ ವಾರಾಂತ್ಯ 14.2 ಟಿಆರ್​ಪಿ ಪಡೆದುಕೊಂಡಿದೆ.  12 ವರ್ಷಗಳ ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವಾರದ ಮತ್ತು ವೀಕೆಂಡ್‌ ಸಂಚಿಕೆಗಳಿಗೆ ಇಷ್ಟೊಂದು ಟಿಆರ್‌ಪಿ ಸಿಕ್ಕಿರೋದು ಇದೇ ಮೊದಲು.

Continue Reading
Advertisement

Trending

Copyright © 2025 Namma Kudla News

You cannot copy content of this page