Connect with us

LATEST NEWS

ಹೈರಿಸ್ಕ್‌ ದೇಶದಿಂದ 48 ಮಂದಿ ಮಂಗಳೂರಿಗೆ ಬಂದಿದ್ದು, ಎಲ್ಲರ ವರದಿ ನೆಗೆಟಿವ್‌

Published

on

ಮಂಗಳೂರು: ಕಳೆದ 10 ದಿನಗಳಲ್ಲಿ ಹೈರಿಸ್ಕ್ ದೇಶಗಳಿಂದ ಮಂಗಳೂರಿಗೆ ಒಟ್ಟು 48 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ.

ಅವರ ಆರ್‌ಟಿಪಿಸಿಆರ್‌ ವರದಿ ನೆಗೆಟಿವ್‌ ಬಂದಿದ್ದು, ಇದೀಗ ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಮಂಗಳೂರು ವಿಮಾನ ನಿಲ್ದಾಣಕ್ಕೆ 48 ಪ್ರಯಾಣಿಕರು ಕನೆಕ್ಟಿಂಗ್‌ ವಿಮಾನದ ಮೂಲಕ ಬಂದಿರುವವರು ಯಾರೂ ನೇರವಾಗಿ ಹೈ ರಿಸ್ಕ್‌ ದೇಶದಿಂದ ಬಂದಿಲ್ಲ ಎಂದಿದ್ದಾರೆ.

ಮಂಗಳೂರಿಗೆ ಬಂದಿಳಿಯುವ ಪ್ರಯಾಣಿಕರ ಪ್ರಯಾಣ ಹಿಸ್ಟರಿ ಪಡೆಯುವ ಜಿಲ್ಲಾಡಳಿತ, ಈಗಾಗಲೇ ಆಗಮಿಸಿರುವ 48 ಮಂದಿಯ ಪೂರ್ಣ ವಿವರ ಕಲೆ ಹಾಕಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಎಲ್ಲ 48 ಮಂದಿಯ ಆರ್.ಟಿ.-ಪಿಸಿಆರ್ ಟೆಸ್ಟ್ ನಡೆಸಿದ್ದಾರೆ. ಬಳಿಕ ಅವರನ್ನು 7 ದಿನ ಕಡ್ಡಾಯ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ.

11 ಹೈರಿಸ್ಕ್ ದೇಶಗಳಿಂದ ಬರುವವರ ಮೇಲೆ ವಿಮಾನ ನಿಲ್ದಾಣದಲ್ಲಿ ಎಮಿಗ್ರೇಷನ್ ವಿಭಾಗದ ಅಧಿಕಾರಿಗಳು ವಿಶೇಷ ನಿಗಾ ಇರಿಸುತ್ತಿದ್ದಾರೆ.

8ನೇ ದಿನ ಮತ್ತೇ ಹೈರಿಸ್ಕ್ ದೇಶಗಳಿಂದ ಬಂದವರ ಆರ್.ಟಿ.-ಪಿಸಿಆರ್ ಪರೀಕ್ಷೆ ಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಲಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್ –19 ಮಾರ್ಗಸೂಚಿ ಅನ್ವಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕೆ ಎಲ್ಲ ರೀತಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಹೊಸ ತಳಿಯ ಓಮೈಕ್ರಾನ್ ವೈರಾಣು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹದ ನಾಲ್ಕು ಬೂತ್‌ಗಳು, 30 ನಿಮಿಷಗಳಲ್ಲಿ ಫಲಿತಾಂಶ ನೀಡುವ 70 ರ್‍ಯಾಪಿಡ್ ಪಿಸಿಆರ್ ಯಂತ್ರಗಳು, ನಾಲ್ಕು ನೋಂದಣಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.
ಸುಮಾರು 123 ಪ್ರಯಾಣಿಕರಿಗೆ ಕಾದು ಕುಳಿತುಕೊಳ್ಳಲು ಪ್ರತ್ಯೇಕ ಜಾಗ, ಅದಕ್ಕೆ ಹೊಂದಿಕೊಂಡು ಶೌಚಾಲಯ, ಆಹಾರ, ವೈಫೈ ಮತ್ತು ವಿದೇಶಿ ವಿನಿಮಯ ಸೇವೆಯನ್ನು ಒದಗಿಸಲಾಗಿದೆ.

ಪ್ರಯಾಣಿಕರಿಗೆ ಸಹಕರಿಸಲು ಅಲ್ಲಿ ಸಿಬ್ಬಂದಿ ಕೂಡ ಲಭ್ಯ ಇರುತ್ತಾರೆ. ಪ್ರಯಾಣಿಕರು ಕ್ಯೂಆರ್‌ ಕೋಡ್ ಬಳಸಿ ಕೂಡ ತಪಾಸಣೆಯ ನೋಂದಣಿ ಮಾಡಿಕೊಳ್ಳಬಹುದು.

ಸದ್ಯದಲ್ಲಿಯೇ ವಿಮಾನ ನಿಲ್ದಾಣ ಪ್ರಾಧಿಕಾರವು ಆರ್‌ಟಿಪಿಸಿಆರ್ ಪರೀಕ್ಷೆಗೆ ಆನ್‌ಲೈನ್‌ ಬುಕಿಂಗ್ ಕೂಡ ಆರಂಭಿಸಲಿದೆ.
ಪ್ರಯಾಣಿಕರು ಕುಳಿತುಕೊಳ್ಳುವ ಪ್ರದೇಶಗಳಲ್ಲಿ ಸ್ಯಾನಿಟೈಸೇಷನ್, ಸ್ವಚ್ಛತೆಗೆ ಒತ್ತು ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ

Advertisement
Click to comment

Leave a Reply

Your email address will not be published. Required fields are marked *

LATEST NEWS

ಕೇರಳ: ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ; ವ್ಲೋಗರ್ ಶಿಂಜಿತಾ ಮುಸ್ತಫಾ ಬಂಧನ

Published

on

ಕೋಝಿಕೋಡ್‌: ಗೋವಿಂದಪುರದ ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಬುಧವಾರ ವ್ಲೋಗರ್ ಶಿಂಜಿತಾ ಮುಸ್ತಫಾ ಅವರನ್ನು ಬಂಧಿಸಿದ್ದಾರೆ. ಶಿಂಜಿತಾ ಬಸ್ಸಿನೊಳಗೆ ಅವಮಾನಿಸಿದ ನಂತರ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿ ಮಹಿಳೆಯನ್ನು ವಡಕಾರದಲ್ಲಿ ಬಂಧಿಸಲಾಗಿದೆ. ಕೊಯಿಲಾಂಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ, ಶಿಂಜಿತಾ ಮುಸ್ತಫಾಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆಕೆಯ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಹಲವಾರು ಅಪರಾಧಗಳ ಆರೋಪವನ್ನ ಹೊರಿಸಲಾಗಿದೆ.

ದೀಪಕ್‌ಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸಾರ್ವಜನಿಕ ಪ್ರತಿಭಟನೆ ನಡೆದ ನಂತರ ಬಂಧನವಾಗಿದೆ. ಖಾಸಗಿ ಬಸ್ಸಿನಲ್ಲಿ ದೀಪಕ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಿಂಜಿತಾ ಮುಸ್ತಫಾ ಆರೋಪಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ದೀಪಕ್‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಹಾಸನ: ಶಾಲಾ ಬಾಲಕಿಯನ್ನು ಬೆನ್ನಟ್ಟಿದ ಪ್ರಕರಣ; ಕಿಡಿಗೇಡಿಯನ್ನು ಬಂಧಿಸಿದ ಪೊಲೀಸರು

ದೀಪಕ್‌ ಆತ್ಮಹತ್ಯೆ ಮಾಡಿದ ನಂತರ ಈ ಪ್ರಕರಣ ತಿರುವು ಪಡೆದುಕೊಂಡಿತ್ತು. ದೀಪಕ್‌ ಅವರದ್ದು ಯಾವುದೇ ತಪ್ಪಿಲ್ಲದೇ ಇದ್ದರೂ ಅವರ ಬಳಿಯೇ ಹೋಗಿ ಆಕೆ ವಿಡಿಯೋ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಪ್ರಚಾರಕ್ಕಾಗಿ ವಿಡಿಯೋ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಕ್ಕೆ ಶಿಂಜಿತಾಳನ್ನು ಬಂಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.

ತೀವ್ರ ಪ್ರತಿಭಟನೆಯ ನಂತರ ಎಚ್ಚೆತ್ತ ಪೊಲೀಸ್‌ ಇಲಾಖೆ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ವ್ಲೋಗರ್ ಶಿಂಜಿತಾ ಮುಸ್ತಫಾಳನ್ನ ಬಂಧಿಸಿದೆ. ಅಷ್ಟೆ ಅಲ್ಲದೆ, ಈ ಪ್ರಕರಣಕ್ಕೆ ಇದೀಗ ಕೇರಳ ಮಾನವ ಹಕ್ಕುಗಳ ಆಯೋಗ ಕೂಡ ಎಂಟ್ರಿ ಕೊಟ್ಟಿದ್ದು, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿ ವರದಿ ನೀಡುವಂತೆ ಡಿಐಜಿಗೆ ಆದೇಶಿಸಿದೆ.

Continue Reading

LATEST NEWS

ಹಾಸನ: ಶಾಲಾ ಬಾಲಕಿಯನ್ನು ಬೆನ್ನಟ್ಟಿದ ಪ್ರಕರಣ; ಕಿಡಿಗೇಡಿಯನ್ನು ಬಂಧಿಸಿದ ಪೊಲೀಸರು

Published

on

ಹಾಸನ: ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ ಆತಂಕ ಸೃಷ್ಟಿಸಿದ್ದ ಅಪರಿಚಿತನನ್ನು ಪೊಲೀಸರು ಬಂಧಿಸಲಾಗಿದೆ.


ಕೋಲಾರ ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಬಂಧಿತ ಆರೋಪಿ.

ಜನವರಿ 17 ರಂದು ಹಾಸನದಲ್ಲಿ ಈ ಘಟನೆ ನಡೆದಿತ್ತು. ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ. ಇದನ್ನು ಗಮನಿಸಿ ಬಾಲಕಿ ಭಯಭೀತಳಾಗಿ ಓಡೋಡಿ ಬಂದು ಮನೆ ಸೇರಿಕೊಂಡಿದ್ದಳು.

ಇದನ್ನೂ ಓದಿ: ಬಾರೊಂದರಲ್ಲಿ ನಡೆದ ಗಲಾಟೆ; ತೀವ್ರ ಹಲ್ಲೆಗೊಳಗಾಗಿ ವ್ಯಕ್ತಿ ಸಾವು!

ಮನೆ ಬಳಿ ಬಂದ ಆರೋಪಿ ಗೇಟ್ ಹೊರಗೆ ನಿಂತು ಒಳಗೆ ಇಣುಕಿ ನೋಡಿ ವಾಪಾಸು ಹೋಗಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು, ವೈರಲ್ ಆಗಿತ್ತು.
ಈ ಬಗ್ಗೆ ಪೆನ್‌ ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಬಾರೊಂದರಲ್ಲಿ ನಡೆದ ಗಲಾಟೆ; ತೀವ್ರ ಹಲ್ಲೆಗೊಳಗಾಗಿ ವ್ಯಕ್ತಿ ಸಾವು!

Published

on

ಚಿಕ್ಕಮಗಳೂರು: ಬಾರ್ ಒಂದರಲ್ಲಿ ಬಿಹಾರಿ ಕಾರ್ಮಿಕರು ಹಾಗೂ ವ್ಯಕ್ತಿಯೊಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ತೇಜು (40)  ಸಾವನ್ನಪ್ಪಿದ ವ್ಯಕ್ತಿ. ಬಾರ್‌ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತೇಜು ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ತೀವ್ರ ಅಸ್ವಸ್ಥಗೊಂಡ ಅವರನ್ನು ಒಂದು ಕಿಮೀ ದೂರದ ಪಟಾಕಿ ಮೈದಾನಕ್ಕೆ ಒಯ್ದು ಎಸೆದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಆಂಧ್ರಪ್ರದೇಶ: ಖಾಸಗಿ ಸ್ಲೀಪರ್ ಬಸ್ ನಲ್ಲಿ ಅಗ್ನಿ ಅವಘಡ; ಮೂವರು ಸಜೀವ ದಹನ

ಆಟೋ ಚಾಲಕರೊಬ್ಬರು ತೇಜುವನ್ನು ನೋಡಿ ಉಸಿರಾಡುತ್ತಿರುವುದನ್ನು ಗಮನಿಸಿ ಆಸ್ಪತ್ರೆಗೆ ಸೇರಿಸಿದ್ದರು. ತೀವ್ರ ಹಲ್ಲೆಯಾಗಿದ್ದರಿಂದ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ತೇಜು ಕೊನೆಯುಸಿರೆಳೆದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page