Connect with us

DAKSHINA KANNADA

ಲಷ್ಕರ್, ತಾಲಿಬಾನ್ ಪರ ಗೋಡೆ ಬರಹ, ಬಿಜೆಪಿ‌ಯ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ : ಡಿವೈಎಫ್ಐ

Published

on

ಲಷ್ಕರ್, ತಾಲಿಬಾನ್ ಪರ ಗೋಡೆ ಬರಹ, ಬಿಜೆಪಿ‌ಯ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ : ಡಿವೈಎಫ್ಐ

ಲಷ್ಕರ್, ತಾಲಿಬಾನ್ ಪರ ಗೋಡೆ ಬರಹದ ಆರೋಪಿಗಳನ್ನು ತಕ್ಷಣ ಬಂಧಿಸಲು ಮನವಿ:

ಮಂಗಳೂರು :  ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯ ಸಮೀಪದ ಗೋಡೆಯೊಂದರಲ್ಲಿ ಲಷ್ಕರ್ ತೋಯ್ಬಾ, ತಾಲಿಬಾನ್ ಪರ ಘೋಷಣೆಗಳು ಪ್ರತ್ಯಕ್ಷಗೊಂಡಿರುವುದು ಆತಂಕಕಾರಿ ವಿದ್ಯಮಾನ, ಇದು ನಗರದ ನಾಗರಿಕರಲ್ಲಿ ಆತಂಕ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ.

ಸಮಾಜದ ನೆಮ್ಮದಿಗೆ ಕಂಟಕವಾಗಿರುವ ಈ ಕೃತ್ಯ ಬಿಜೆಪಿ ಆಡಳಿತದ ವೈಫಲ್ಯವನ್ನು ಎತ್ತಿತೋರಿಸುತ್ತದೆ‌.

ಇಂತಹ ಹೀನ ಕೃತ್ಯ ಎಸಗಿರುವ ಸಮಾಜಘಾತುಕ ಶಕ್ತಿಗಳನ್ನು ತಕ್ಷಣವೇ ಬಂಧಿಸಿ ಕೃತ್ಯದ ಹಿಂದಿನ ಹುನ್ನಾರಗಳನ್ನು ಬಯಲಿಗೆಳೆಯಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿ, ಪೊಲೀಸ್ ಠಾಣೆಯ ಕಣ್ಣಳತೆಯ ದೂರದಲ್ಲಿ ಇಂತಹ ಗೋಡೆ ಬರಹ ಪ್ರತ್ಯಕ್ಷಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ, ಪೊಲೀಸ್ ವೈಫಲ್ಯವನ್ನೂ ಎತ್ತಿ ತೋರಿಸುತ್ತದೆ. ಕೋಮು ಸೂಕ್ಷ್ಮ ಮಂಗಳೂರಿನಲ್ಲಿ ಇದು ಶಾಂತಿ ಕದಡುವ ಉದ್ದೇಶವನ್ನು ಹೊಂದಿದೆ.

ಉದ್ಯೋಗ, ಆರೋಗ್ಯ, ಶಿಕ್ಷಣ ಹೀಗೆ ತಮ್ಮ ದೈನಂದಿನ ಬದುಕಿನ ಹಲವು ಸಮಸ್ಯೆಗಳಿಂದ ಜನತೆ ಕಂಗೆಟ್ಟಿರುವ ಪ್ರಸಕ್ತ ಸಂದರ್ಭದಲ್ಲಿ ಈ ರೀತಿಯ ಪ್ರಚೋದನಾಕಾರಿ ಕೃತ್ಯ ಜನರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದಲೂ ನಡೆದಿರಬಹುದು.

ಒಟ್ಟಾರೆಯಾಗಿ ಈ ಬರಹ ಭಿನ್ನ ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಡಳಿತ ಹಳಿ ತಪ್ಪಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕ್ರಿಮಿನಲ್ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ. ಲಷ್ಕರ್ ಪರ ಗೋಡೆಬರಹವೂ ಬಿಜೆಪಿ ಆಡಳಿತ ವೈಫಲ್ಯದ ನೇರ ಪರಿಣಾಮವಾಗಿದೆ.

ಪೊಲೀಸ್ ಇಲಾಖೆ ತಕ್ಷಣವೆ ತಾಲಿಬಾನ್, ಲಷ್ಕರ್ ಪರ ಗೋಡೆ ಬರಹದ ಆರೋಪಿಗಳನ್ನು ಬಂಧಿಸಬೇಕು.

ಕೃತ್ಯದ ಹಿಂದಿನ ಹುನ್ನಾರಗಳನ್ನು ಬಯಲಿಗೆ ತರಬೇಕು. ಇಲ್ಲದಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

ಲಷ್ಕರ್, ತಾಲಿಬಾನ್ ಪರ ಗೋಡೆ ಬರಹದ ಆರೋಪಿಗಳನ್ನು ತಕ್ಷಣ ಬಂಧಿಸಲು ಮನವಿ:

 ಮನವಿಯ ಸಾರಂಶ..

ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯ ಸಮೀಪದ ಕಂಪೌಂಡ್ ಗೋಡೆಯೊಂದರಲ್ಲಿ‌ ಲಷ್ಕರ್ ತೋಯ್ಬಾ, ತಾಲಿಬಾನ್ ಪರ ಘೋಷಣೆಗಳನ್ನು ಬರೆದಿರುವ ಘಟನೆ ಮಂಗಳೂರಿನ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿವಿಧ ರೀತಿಯ ವದಂತಿಗಳು ಜನರ ನಡುವೆ ಹರಿದಾಡುತ್ತಿದೆ. ಇಂತಹ ಹೀನ ಕೃತ್ಯವನ್ನು ಎಸಗಿರುವ ತಪ್ಪಿಸತ್ಥರನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ.

ದಕ್ಷಿಣ ಕ‌ನ್ನಡ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಘಟನೆಗಳು, ವದಂತಿಗಳು ದೊಡ್ಡ ರೀತಿಯ ಗಲಭೆ, ಹಿಂಸಾಚಾರಗಳಿಗೆ ಕಾರಣವಾಗಿರುವ ವಿದ್ಯಾಮಾನಗಳು ಈ ಹಿಂದೆ ಹಲವು ನಡೆದಿದೆ. ಕೋಮು ಸೂಕ್ಷ್ಮ ನಗರದಲ್ಲಿ ಇಂತಹ ಕೃತ್ಯಗಳು ಯಾವುದೇ ರೀತಿಯ ಅವಘಡಗಳಿಗೆ ಹೇತು ಆಗಬಹುದು. ಈ ಗೋಡೆ ಬರಹದ ಹಿಂದೆಯೂ ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಹೆಚ್ಚಿಸುವ, ಪರಸ್ಪರರನ್ನು ಎತ್ತಿಕಟ್ಟುವ ಉದ್ದೇಶ ಇದ್ದಂತಿದೆ. ನಗರದ ಮಧ್ಯ ಭಾಗದಲ್ಲಿ, ಪೊಲೀಸ್ ಠಾಣೆಯ ಸಮೀಪ ಇಂತಹ ಘಟನೆ ನಡೆದಿರುವುದು ಆತಂಕವನ್ನು ಸಹಜವಾಗಿ ಹೆಚ್ಚಿಸಿದೆ. ನಗರದಲ್ಲಿ‌ ಕೊಲೆ, ಸುಲಿಗೆಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಲಷ್ಕರ್ ಪರ ಗೋಡೆಬರಹ ಪೊಲೀಸ್ ಠಾಣೆಯ ಸಮೀಪವೇ ಪ್ರತ್ಯಕ್ಷಗೊಂಡಿರುವುದು ಸಹಜವಾಗಿ ಕಾನೂನು ಆಡಳಿತದ ಕುರಿತು ಜನರಲ್ಲಿ ಅತೃಪ್ತಿ ಮೂಡಿಸಿದೆ. ಪೊಲೀಸ್ ಇಲಾಖೆ ತಕ್ಷಣವೇ ಈ ಕೃತ್ಯ ಎಸಗಿರುವ ತಪ್ಪಿತಸ್ಥರನ್ನು ಬಂಧಿಸಬೇಕು, ಘಟನೆಯ ಹಿಂದಿರುವ ಹುನ್ನಾರಗಳನ್ನು ಬಯಲಿಗೆಳೆಯಬೇಕು, ಜನರ ಆತಂಕವನ್ನು ದೂರ ಮಾಡಬೇಕು ಎಂದು ಡಿವೈಎಫ್ಐ ದ ಕ ಜಿಲ್ಲಾ ಸಮಿತಿ ತಮ್ಮಲ್ಲಿ ಮನವಿ ಮಾಡುತ್ತದೆ.

 

BELTHANGADY

ಪ್ರಜ್ವಲ್ ರೇವಣ್ಣನನ್ನು ಮೀರಿಸಿದ ವಾಲಿಬಾಲ್ ಪ್ಲೇಯರ್ ..! ಏನಿದು ಘಟನೆ ..?

Published

on

ಮಂಗಳೂರು : ಆತ ಸಾಮಾನ್ಯನಲ್ಲ, ರಸಿಕರ ರಾಜ. ಕೆಲ ತಿಂಗಳುಗಳ ಹಿಂದೆ ಪೋಕ್ಸೋ ಕೇಸ್‌ನಡಿ ಸಿಕ್ಕಿಬಿದ್ದಿದ್ದ ಪ್ರಜ್ವಲ್‌ ರೇವಣ್ಣನಿಗಿಂತಲೂ ಒಂದು ಕೈ ಮೇಲೆ ಇದ್ದಾನೆ. ಇದೀಗ,  ಆತನ ಕಾಮಕಾಂಡ ಬಯಲಾಗಿದೆ. ಯಾರು ಆತ ? ಏನದು ಘಟನೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವಾಲಿಬಾಲ್ ಆಟಗಾರನಾಗಿದ್ದ ಮೂಲತಃ ಕಾರ್ಕಳ ನಿವಾಸಿ ಸೈಯ್ಯದ್ ಎಂಬಾತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ವಿಷಯ ಬಯಲಾಗಿದೆ. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ.

ಇನ್ನು ಈ ಘಟನೆ ವೇಳೆ ಸೈಯದ್​​ ಮೊಬೈಲ್ ಕಿತ್ತುಕೊಂಡು ನೋಡಿದಾಗ ಹಿಂದೂ ಸಂಘಟನೆ ಕಾರ್ಯಕರ್ತರು ಒಂದು ಕ್ಷಣ ಶಾಕ್​ ಆಗಿದ್ದಾರೆ. ಆತನ ಮೊಬೈಲ್​ ತುಂಬಾ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳೇ ತುಂಬಿದೆ. ಮೂಲತಃ ಕಾರ್ಕಳ ನಿವಾಸಿಯಾಗಿರುವ ಸೈಯದ್ ವಾಲಿಬಾಲ್ ಆಟಗಾರ ಕೂಡ ಹೌದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಏ.26 ರಂದು ಆರೋಪಿಯನ್ನು ಬಂಧಿಸಿರುವ ಪೊಲೀಸರು ಮಂಗಳೂರು ಫೋಕೋ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿ ಸೈಯ್ಯದ್ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಜಿರೆಯ ಪ್ರಜ್ವಲ್ ಹಾಗೂ ಇತರರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಜಿರೆಯ ಹಿಂದೂ ಸಂಘಟನೆ ಕಾರ್ಯಕರ್ತರು ಸೈಯ್ಯದ್ ನನ್ನು ಹಿಗ್ಗಾಮುಗ್ಗ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಹಲ್ಲೆಗೆ ಒಳಗಾಗಿರುವ ಸೈಯ್ಯದ್ ನೀಡಿದ ದೂರಿನಂತೆ ಪೊಲೀಸರು ಉಜಿರೆಯ ಪ್ರಜ್ವಲ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ

Continue Reading

DAKSHINA KANNADA

ಯುವಕನ ಬರ್ಬರ ಹತ್ಯೆ ಬಗ್ಗೆ ಅಪಪ್ರಚಾರ ಸಲ್ಲದು : ಅನುಪಮ್ ಅಗರ್ವಾಲ್

Published

on

ಮಂಗಳೂರು : ಅಪರಿಚಿತ ಯುವಕನ ಮೃತದೇಹ ಪತ್ತೆಯಾದ ಘಟನೆಯು ಮಂಗಳೂರು ಹೊರವಲಯದ ಕುಡುಪು ಸಮೀಪ ನಿನ್ನೆ (ಏ.27) ಸಂಜೆ ನಡೆದಿದೆ. ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಯಾವುದೇ ರೀತಿಯಿಂದನೂ ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಸುಮಾರು 35 ರಿಂದ 40 ವರ್ಷ ಪ್ರಾಯದ ಹೊರ ರಾಜ್ಯದ ಈ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ.

ಕುಡುಪು ಕಟ್ಟೆ ಸಮೀಪದ ಗದ್ದೆಯಲ್ಲಿ ಯುವಕರ ಗುಂಪೊಂದು 6 ತಂಡಗಳ ಕ್ರಿಕೆಟ್ ಮ್ಯಾಚ್ ಆಯೋಜಿಸಿತ್ತು. ಸಂಜೆ ವೇಳೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಗದ್ದೆಗೆ ಅಪರಿಚಿತ ಯುವಕನೊಬ್ಬ ತೆರಳಿದ್ದು, ಯಾವುದೋ ಕಾರಣಕ್ಕೆ ಈ ಯುವಕ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಆಕ್ರೋಶಗೊಂಡ ಯುವಕರ ತಂಡವು ಈ ಯುವಕನಿಗೆ ಹಲ್ಲೆಗೈದಿದ್ದು, ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತಪಟ್ಟ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಆತನ ಗುರುತು ಪತ್ತೆಗಾಗಿ ಪ್ರಯತ್ನ ಸಾಗಿಸಿದ್ದಾರೆ. ಪ್ರಾಥಮಿಕ ವರದಿಯ ಬಳಿಕ ಸಾವಿಗೆ ಕಾರಣ ಏನು ಎಂದು ತಿಳಿಯಬಹುದಾಗಿದೆ. ಈ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಿರಿ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಉಪ ಆಯುಕ್ತ ಸಿದ್ದಾರ್ಥ್ ಗೋಯಲ್, ನಗರ ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್, ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈತ ಕೂಲಿ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಕುಂಭದ್ರೋಣ ಮಳೆಗೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

Published

on

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿ ಆರಂಭಗೊಂಡು ಹಲವು ವರ್ಷವಾದ್ರೂ ಇನ್ನೂ ಕೂಡಾ ಪೂರ್ಣಗೊಂಡಿಲ್ಲ. ಕೆಲವಡೆ ಸಂಚಾರಕ್ಕೆ ಯೋಗ್ಯವಾದ ರಸ್ತೆ ಏನೋ ನಿರ್ಮಾಣ ಮಾಡಲಾಗಿದೆಯಾದರೂ ಮಳೆಗಾಲದಲ್ಲಿ ನೀರು ಹರಿದು ಹೋಗುವ ವ್ಯವಸ್ಥೆಯೇ ಮಾಡಿಲ್ಲ.

 

ಕಳೆದ ವರ್ಷ ಇದೇ ಸಮಸ್ಯೆಯಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಇದೀಗ ಮಳೆಗಾಲ ಸಮೀಪಿಸ್ತಾ ಇದ್ದು , ಅಕಾಲಿಕ ಮಳೆ ಕೂಡಾ ಆರಂಭವಾಗಿದೆ. ಭಾನುವಾರ ಬಂಟ್ವಾಳ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಮತ್ತೆ ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದ್ದಾರೆ.

ಬಂಟ್ವಾಳ ತಾಲೂಕಿ ಕಲ್ಲಡ್ಕ ಸಮೀಪದ ಸೂರಿಕುಮೇರು ಎಂಬಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಇಡೀ ರಸ್ತೆಯೇ ನದಿಯಂತಾಗಿ ಹೋಗಿದೆ. ಇದರ ನಡುವೆ ಸಣ್ಣಪುಟ್ಟ ವಾಹನಗಳು ಸಂಚರಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಹೆದ್ದಾರಿ ಕಾಮಗಾರಿಗೆ ಹಿಡಿ ಶಾಪ ಹಾಕಿದ್ದಾರೆ.

ಇದನ್ನೂ ಓದಿ: ಉಡುಪಿ : ಹುಲಿ ವೇಷದಾರಿ ಹೃದಯಾಘಾತಕ್ಕೆ ಬಲಿ

ಹೆದ್ದಾರಿಯ ಇಕ್ಕೆಲೆಯಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದ್ದು, ತಕ್ಷಣವೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page