Connect with us

LATEST NEWS

ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ

Published

on

ಉಡುಪಿ:ಬೆಳ್ಮಣ್‌ ನಿವಾಸಿಯಾಗಿರುವ ವಿದೇಶದಲ್ಲಿ ಉದ್ಯೋಗದಲ್ಲಿರುವ ಪ್ರಶಾಂತ್‌ ಎಂಬವರ ಖಾತೆಯಿಂದ ಆನ್ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೆನ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 1,56,000 ರೂ ಹಣವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ವಿದೇಶದಲ್ಲಿ ಉದ್ಯೋಗದಲ್ಲಿರುವ ಪ್ರಶಾಂತ್ ಶೆಟ್ಟಿ ಎಂಬವರು ಯೂನಿಯನ್ ಬ್ಯಾಂಕ್‌ನಲ್ಲಿಎರಡು ಖಾತೆಗಳನ್ನು ಹೊಂದಿದ್ದು, ಯಾರೋ ಅಪರಿಚಿತರು ಆನ್‌ಲೈನ್‌ ಪೇಟಿಎಮ್‌ ಮೂಲಕ ಎರಡೂ ಖಾತೆಯಿಂದ 1,56,000 ರೂಪಾಯಿ ಹಣವನ್ನು ಫೆ.10ರಿಂದ 20ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಇವರ ಗಮನಕ್ಕೇ ಬಾರದೆ ವರ್ಗಾಯಿಸಿಕೊಂಡಿದ್ದರು.

ಉಡುಪಿಯಲ್ಲಿ ಹಾಡುಹಗಲೇ ಸರಗಳ್ಳತನ; ಪ್ರಕರಣ ದಾಖಲು

ಈ ಕುರಿತು ಪ್ರಶಾಂತ್‌ ರವರ ತಂದೆ ಜಯ ಶೆಟ್ಟಿ ಬೆಳ್ಮಣ್ ರವರು ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಕೈಗೆತ್ತಕೊಂಡ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದ ಎಎಸ್‌ಐ ಉಮೇಶ್‌‌ ಜೋಗಿ ಮತ್ತು ಸಿಬ್ಬಂದಿ ನಿಲೇಶ್ ರವರ ತಂಡ ಒರಿಸ್ಸಾ ರಾಜ್ಯದ  ಬೈರಂಪುರಕ್ಕೆ ತೆರಳಿ ಅಲ್ಲಿ ಆರೋಪಿಯ ಬಗ್ಗೆ  ಮಾಹಿತಿ ಕಲೆ ಹಾಕಿ ಆರೋಪಿ ಒಡಿಶಾ ರಾಜ್ಯದ ಗುಂಜಮ್‌ ಜಿಲ್ಲೆಯ ವಿಶಾಲ್‌‌ ಕೋನಪಾಲ ನನ್ನು ಬಂಧಿಸಿದ್ದಾರೆ. ಬ್ಯಾಂಕ್‌ ಖಾತೆಗೆ  ಜಮೆಗೊಂಡಿರುವ ನಗದು ರೂ 1,56,100 ರೂ. ವನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ.

 

 

 

LATEST NEWS

ಅಯ್ಯೋ ದೇವಾ..! ಬೆಕ್ಕಿಗಾಗಿ ನಡೆಯಿತು ಎರಡು ಕುಟುಂಬಗಳ ನಡುವೆ ಜಗಳ

Published

on

ಮಂಗಳೂರು/ಹೈದರಾಬಾದ್ : ಹಾಸಿಗೆಯ ಮೇಲೆ ಬೆಕ್ಕೊಂದು ಮಲಗಿದ್ದ ಪ್ರಕರಣ ತೆಲಂಗಾಣದ ನೆಲ್ಗೊಂಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ‘ನಮ್ಮದು ಬೆಕ್ಕು, ನಮ್ಮದು ಬೆಕ್ಕು’ ಎಂದು ಹೇಳಿಕೊಂಡು ಎರಡು ಕುಟುಂಬಗಳು ರಸ್ತೆಯಲ್ಲಿ ಜಗಳವಾಡುತ್ತಿದ್ದಾರೆ.

ತೆಲಂಗಾಣದ ನೆಲ್ಗೊಂಡ ಪಟ್ಟಣದ ರಹಮತ್ ನಗರದ ನಿವಾಸಿ ಪುಷ್ಪಲತಾ ಅವರು ಬೆಕ್ಕನ್ನು ಸಾಕಿ ಅದಕ್ಕೆ ‘ಪಫಿ’ ಎಂದು ಹೆಸರಿಟ್ಟಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಬೆಕ್ಕು ಕಾಣೆಯಾದಾಗ, ಅವರು ಟೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೆಲ್ಲದರ ನಡುವೆ ಪುಷ್ಪಲತಾ ಅವರ ವಠಾರದಲ್ಲಿ ಅಶ್ರಫ್ ಎಂಬುವವರ ಮನೆಯಲ್ಲಿ ಕೂಡ ಪಫಿ ಹೋಲುವಂತಹ ಬೆಕ್ಕು ಕಂಡುಬಂದಿದೆ.

ಈ ಬಗ್ಗೆ ಪುಷ್ಪಲತಾ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನಲ್ಲಿ ಬೆಕ್ಕನ್ನು ಗುರುತಿಸದೆ ಬಣ್ಣ ಬಳಿಯಲಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಎಟಿಎಂ ದರೋಡೆ ಪ್ರಕರಣ ಬಯಲು ಮಾಡಿತು ಟೀ ಅಂಗಡಿ ಬಳಿ ನಡೆದ ಜಗಳ!

ಅಶ್ರಫ್ ಅವರ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಿಸಿದಾಗ, ಅವರು ಒಬ್ಬ ವ್ಯಕ್ತಿಯಿಂದ 3,500 ರೂ. ಗಳನ್ನು ಕೊಟ್ಟು ಖರೀದಿಸಿರುವುದಾಗಿ ಹೇಳಿದರು. ಮತ್ತೊಂದೆಡೆ ಎರಡು ಕುಟುಂಬಗಳು ಎಸ್‌ಪಿಯವರಿಗೆ ಕರೆಮಾಡಿ ಪಂಚಾಯಿತಿ ನಡೆಸುವಂತೆ ಕೇಳಿಕೊಂಡಿತ್ತು.

ಈ ಪ್ರಕರಣ ಪೊಲೀಸರ ತಲೆನೋವಿಗೆ ಕಾರಣವಾಗಿದ್ದು, ಬೆಕ್ಕಿನ ಕೂದಲಿನ ಮಾದರಿಗಳನ್ನು ಪರೀಕ್ಷೆ ಮಾಡುವಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಬೆಕ್ಕು ಯಾರಿಗೆ ಸೇರಿದ್ದು ಎಂದು ತಿಳಿಯಲಿದೆ. ಪ್ರಸ್ತುತ ಬೆಕ್ಕು ಅಶ್ರಫ್ ಅವರ ಮನೆಯಲ್ಲಿದೆ.

Continue Reading

FILM

‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ಗಾಗಿ ‘ಮೀರಾ’ ಚಿತ್ರ ಬಿಡುಗಡೆ ಮುಂದಕ್ಕೆ!

Published

on

ಮಂಗಳೂರು:  ಬಹುನಿರೀಕ್ಷಿತ ಮೀರಾ ತುಳು ಸಿನಿಮಾದ ಬಿಡುಗಡೆ ದಿನಾಂಕ ಈ ಹಿಂದೆ ಫೆಬ್ರವರಿ 21ಕ್ಕೆ ಘೋಷಿಸಲಾಗಿತ್ತು.  ಇದೀಗ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣದಿಂದ  ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಹಾಗಾಗಿ ಮೀರಾ ಚಿತ್ರ  ಮಾರ್ಚ್ 21ಕ್ಕೆ ಮೀರಾ ತೆರೆಗೆ ಬರಲಿದೆ.

ತುಳು ಸಿನೆಮಾಗಳಿಗೆ ಥಿಯೇಟರ್ ಕೂಡಾ ಕಡಿಮೆ ಇರುವ ಕಾರಣ ಪೈಪೋಟಿಯಿಂದ ಎಲ್ಲರಿಗೂ ನಷ್ಟ ಆಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ.

ಧನ್ಯವಾದ ತಿಳಿಸಿದ  ಚಿತ್ರತಂಡ :

ಸುದ್ದಿಗೋಷ್ಟಿ ನಡೆಸಿ ಎರಡು ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿತು.  ನಟ ವಿನೀತ್ ಕುಮಾರ್ ಮಾತನಾಡಿ,  ತುಳು ಸಿನಿಮಾಗಳಿಗೆ ಸೀಮಿತ ಮಾರುಕಟ್ಟೆ ಇದೆ. ಈ ಕಾರಣದಿಂದ ಸಿನಿಮಾಗಳ ಮಧ್ಯೆ ಸ್ಪರ್ಧೆ ಬೇಡ ಎಂಬ ಕಾರಣಕ್ಕೆ ಲಂಚುಲಾಲ್ ಮತ್ತವರ ತಂಡ ಈ ನಿರ್ಧಾರ ಮಾಡಿದೆ. ಇದಕ್ಕಾಗಿ ಮೀರಾ ಚಿತ್ರತಂಡಕ್ಕೆ ಅಭಿನಂದನೆಗಳು. ನಮ್ಮದು ಬಿಗ್ ಬಜೆಟ್ ಸಿನಿಮಾವಾಗಿರುವ ಕಾರಣಕ್ಕೆ ಬಹಳಷ್ಟು ಕಷ್ಟಪಟ್ಟು ಸಿನಿಮಾ ಬಿಡುಗಡೆ ಮಾಡಿದ್ದೇವೆ. ತುಳುವರು ಎಲ್ಲರೂ ಸಿನಿಮಾ ನೋಡಿ ಎರಡೂ ಸಿನಿಮಾಗಳಿಗೆ ನಿಮ್ಮ ಬೆಂಬಲ ಇರಲಿ ಎಂದರು.

ರಾಹುಲ್ ಅಮೀನ್ ಮಾತನಾಡಿ, ಈಗ ಕಲಾವಿದರ ಸಂಘ ಒಬ್ಬ ಒಳ್ಳೆಯ ಅಧ್ಯಕ್ಷರ ಕೈಯಲ್ಲಿದೆ ಅನ್ನುವುದು ನಮಗೆ ಹೆಮ್ಮೆ ಉಂಟುಮಾಡಿದೆ. ಈ ಹಿಂದೆ ಒಂದೇ ದಿನ ಎರಡು ಸಿನಿಮಾಗಳು ಬಿಡುಗಡೆಯಾದ ಉದಾಹರಣೆ ನಮ್ಮಲ್ಲಿತ್ತು. ಹೀಗಿರುವಾಗ ಸಿನಿಮಾ ಬಿಡುಗಡೆಗೆ ಮೂರು ವಾರ ಇದ್ದರೂ  ನಮ್ಮ ಸಿನಿಮಾಕ್ಕೆ ಬೇಕಾಗಿ ತಮ್ಮ ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿರುವುದು ಶ್ಲಾಘನೀಯ. ಇದಕ್ಕಾಗಿ ಲಂಚುಲಾಲ್ ಅವರಿಗೆ ಧನ್ಯವಾದಗಳು ಎಂದರು.

ಇದನ್ನೂ ಓದಿ : ಅಭಿಮಾನಿಗಳಿಗೆ ನಿರಾಸೆ…ಗೆಳತಿಯ ಆಸೆ ಈಡೇರಿಸುತ್ತೇನೆ ಎಂದ ಡಿಬಾಸ್

ಪತ್ರಿಕಾಗೋಷ್ಟಿಯಲ್ಲಿ ಲಂಚುಲಾಲ್, ಪ್ರಕಾಶ್ ಧರ್ಮನಗರ,  ಅಶ್ವಥ್, ಸುಹಾನ್ ಪ್ರಸಾದ್, ಯತೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Continue Reading

LATEST NEWS

ಮಾಲ್‌ನ ಶೌಚಾಲಯಗಳು ಈ ರೀತಿ ಯಾಕೆ ಇರುತ್ತದೆ ಗೊತ್ತಾ..?

Published

on

ಮಂಗಳೂರು: ಮನೆಯಲ್ಲಿ ಕುಳಿತು ತುಂಬಾ ಬೋರ್ ಆಗ್ತಾ ಇದ್ರೆ ಕೆಲವೊಮ್ಮೆ ಮಾಲ್‌ಗಳಿಗೆ ಹೋಗಿ ಎಂಜಾಯ್ ಮಾಡುವುದುಂಟು. ಮಾಲ್‌ಗಳನ್ನು ನೋಡುತ್ತಾ ನೋಡುತ್ತಾ ಪ್ರತಿಯೊಂದು ಳಿಗೆಗಳನ್ನು ಸುತ್ತುತ್ತಾ ಇದ್ದಾರೆ ದಿನ ಹೋಗುವುದೇ ಗೊತ್ತಾಗುವುದಿಲ್ಲ. ಮಾಲ್‌ಗಳಲ್ಲಿ ನೀವು ಶೌಚಾಲಯಕ್ಕೆ ಹೋಗಿರಬಹುದು. ಆ ಶೌಚಾಲಯಗಳ ಡಿಸೈನ್‌ ಅನ್ನು ನೀವು ನೋಡಿದ್ದೀರಾ..?

 

ಹೌದು.. ಹೆಚ್ಚಿನವರು ಮಾಲ್‌ಗಳಿಗೆ ಹೋದಾಗ ಅದರ ಡಿಸೈನ್‌ ಅನ್ನು ಗಮನಿಸಿರಬಹುದು. ನೋಡಲು ಸ್ವಲ್ಪ ವಿಭಿನ್ನವಾಗಿರುತ್ತದೆ. ಮನೆಯಲ್ಲಿ ಅಥವಾ ಬೇರೆ ಕಡೆ ಎಲ್ಲಿಯಾದರೆ ಶೌಚಾಲಯವು ಗೋಡೆಗೆ ಹಾಗೂ ನೆಲಕ್ಕೆ ಅಂಟಿಕೊಂಡಿರುತ್ತದೆ. ಆದರೆ ಮಾಲ್‌ಗಳ ಶೌಚಾಲಯವು ಗೋಡೆಗೆ ಮತ್ತು ನೆಲಕ್ಕೆ ಅಂಟಿಕೊಂಡಿರುವುದಿಲ್ಲ. ಇವೆರಡರ ನಡುವೆ ಗ್ಯಾಪ್ ಇರುತ್ತದೆ. ಈ ರೀತಿ ಯಾಕೆ ಮಾಡುತ್ತಾರೆ ಎಂಬುದನ್ನು ನೋಡೋಣ.

ಮಾಲ್‌ಗಳಲ್ಲಿ ದಿನವಿಡೀ ಜನರು ಈ ಶೌಚಾಲಯಗಳನ್ನು ಬಳಸುತ್ತಿರುತ್ತಾರೆ. ಇದನ್ನು ಕ್ಲೀನ್ ಮಾಡಲೆಂದೇ ತುಂಬಾ ಜನ ಕೆಲಸಗಾರರು ಅಲ್ಲಿ ಇರುತ್ತಾರೆ. ಜನರು ತುಂಬಾ ಬಾರೀ ಶೌಚಾಲಯವನ್ನು ಬಳಸುವುದರಿಂದ ಕೊಳಕಾಗುತ್ತದೆ. ಮಹಡಿ ಮತ್ತು ಬಾಗಿಲಿನ ಮಧ್ಯೆ ಗ್ಯಾಪ್ ಇದ್ರೆ ಕ್ಲೀನ್ ಮಾಡಲು ಸುಲಭವಾಗುತ್ತದೆ. ಮಾಪ್ ಬಳಸಿ ಸುಲಭವಾಗಿ ಕ್ಲೀನ್ ಮಾಡಬಹುದು.

ಅಲ್ಲದೇ ಒಂದು ವೇಳೆ ವ್ಯಕ್ತಿ ಟಾಯ್ಲೆಟ್ ಒಳಗೆ ಅನಾರೋಗ್ಯಕ್ಕೊಳಗಾದ್ರೆ, ಪುಜ್ಞೆ ತಪ್ಪಿದ್ರೆ, ಕುಸಿದು ಬಿದ್ರೆ ತಕ್ಷಣ ಹೊರಗಿರುವವರಿಗೆ ತಿಳಿಯುತ್ತದೆ. ಬಾಗಿಲು ಹಾಗೂ ಮಹಡಿ ಮಧ್ಯೆ ಜಾಗವಿಲ್ಲದೆ ಹೋದ್ರೆ ಒಳಗೆ ಏನಾಗುತ್ತಿದೆ ಎಂಬುದು ತಿಳಿಯುವುದಿಲ್ಲ.

ಕೆಲವೊಮ್ಮೆ ಮಕ್ಕಳು ಶೌಚಾಲಯದ ಬಾಗಿಲನ್ನು ಹಾಕಿಕೊಳ್ತಾರೆ. ನಂತರ ಅವರಿಗೆ ಬಾಗಿಲು ತೆಗೆಯಲು ಬರುವುದಿಲ್ಲ. ಹೊರಗೆ ಯಾರೂ ಇಲ್ಲವೆಂದಾದ್ರೆ ಬಾಗಿಲಿನಡಿಯಿಂದ ನುಸುಳಿ ಸುಲಭವಾಗಿ ಹೊರಗೆ ಬರಬಹುದಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page