Connect with us

LATEST NEWS

ಮಂಗಳೂರು: ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನೇಣಿಗೆ ಶರಣು

Published

on

ಮಂಗಳೂರು: ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾವೂರು ಬಳಿಯ ಆಕಾಶಭವನದಲ್ಲಿ ನಡೆದಿದೆ.


ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿ ಶಿಫಾಲಿ (22) ಮೃತ ಯುವತಿ. ಆಕಾಶಭವನದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ನಿನ್ನೆ ಸಂಜೆ ಎಂದಿನಂತೆ ಮನೆಗೆ ಆಗಮಿಸಿದ್ದಳು. ಮನೆಯಲ್ಲಿ ಕೋಣೆಗೆ ತೆರಳಿ, ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIG BOSS

BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

Published

on

BBK12: ಟಾಪ್‌-06ನಲ್ಲಿ ಕಾವ್ಯಾ ಅವರು ಇರೋದಕ್ಕೆ ಅರ್ಹರಲ್ಲ ಎಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಹೇಳಿದ್ದಾರೆ.


ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ಆಗಿ ರಕ್ಷಿತಾ ಶೆಟ್ಟಿ ಹೊರ ಹೊಮ್ಮಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾಗ ಕಾವ್ಯಾ ಶೈವ ಅವರ ಜೊತೆ ರಕ್ಷಿತಾ ಶೆಟ್ಟಿ ಅವರಿಗೆ ಅಷ್ಟೊಂದು ಒಡನಾಟವಿರಲಿಲ್ಲ.

ನಾಮಿನೇಶನ್‌ ವಿಚಾರದಲ್ಲೂ ಕಾವ್ಯಾ ಮತ್ತು ರಕ್ಷಿತಾ ಅವರಿಗೆ ಆಗ್ಗಾಗೇ ಜಗಳವಾಗುತ್ತಿತ್ತು. ಅಲ್ಲದೆ ಗಿಲ್ಲಿ ಕಾವ್ಯಾ ಫ್ರೆಂಡ್‌ಶಿಪ್ ಕುರಿತು ರಕ್ಷಿತಾ ಅವರಿಗೆ ಅಸಮಾಧಾನವಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. ಕಾವ್ಯಾ ಅವರ ಜೊತೆ ಇರುವ ಮುನಿಸು ರಕ್ಷಿತಾ ಅವರಿಗೆ ಕಡಿಮೆಯಾಗಿಲ್ಲ ಎನ್ನಬಹುದು.

ಇದನ್ನೂ ಓದಿ: ರಕ್ಷಿತಾ ಕ್ಷಮಾಪಣೆ ಪತ್ರದ ಬಗ್ಗೆ ಧ್ರುವಂತ್ ಪೋಸ್ಟ್: ನಮ್ಮಿಬ್ಬರದ್ದು ಒಂದೇ ರಾಶಿ-ನಕ್ಷತ್ರ!

ಇದೀಗ ಸಂದರ್ಶನವೊಂದರಲ್ಲಿ ಕಾವ್ಯಾ ಅವರು ಟಾಪ್‌ 6ನಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ, ಅವರ ಬದಲಿಗೆ ಜಾನ್ವಿ ಅವರು ಇರಬೇಕಿತ್ತು. ಮಾಲು ಅಣ್ಣ ಇರಬಹುದಿತ್ತು. ಮಾಲು ಅವರು ಮಾತನಾಡುವುದು ಕಡಿಮೆ. ಆದರೆ ಅವರದ್ದು ಒಳ್ಳೆಯ ವ್ಯಕ್ತಿತ್ವ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

Continue Reading

DAKSHINA KANNADA

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ 

Published

on

ಮಂಗಳೂರು : ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026’ ಅಂತಾರಾಜ್ಯ ಪ್ರಶಸ್ತಿಯನ್ನು  ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆರಿಗೆ ಪ್ರದಾನ ಮಾಡಲಾಯಿತು.

ಕಾಸರಗೋಡು ನುಳ್ಳಿಪಾಡಿಯಲ್ಲಿ ನಡೆದ ಕನ್ನಡ ಭವನ ರಜತ ಸಂಭ್ರಮ – ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನುಅವರು  ಸ್ವೀಕರಿಸಿದರು.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ  ಅಂಕಣಕಾರರಾಗಿ ಹಾಗೂ ಕ್ರೀಡಾ  ವಿಮರ್ಶಾತ್ಮಕ ಲೇಖನಗಳ  ಮೂಲಕ ಎಸ್. ಜಗದೀಶ್ಚಂದ್ರ ಅಂಚನ್ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

ಕಾರ್ಯಕ್ರಮದಲ್ಲಿ ಕನ್ನಡ ಭವನ ಸ್ಥಾಪಕಾಧ್ಯಕ್ಷ ಡಾ.ಕೆ.ವಾಮನ್ ರಾವ್, ನಿರ್ದೇಶಕ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ , ಕರ್ನಾಟಕ ಬ್ಯಾರಿ‌ ಅಕಾಡೆಮಿಯ ಮಾಜಿ ಅಧ್ಯಕ್ಷೆ ಆಯಿಷಾ ಪೆರ್ಲ , ಶಿಕ್ಷಣ ತಜ್ಞ ವಿ.ಬಿ.ಕುಳವರ್ಮ , ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟ್ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಸಾಹಿತಿ ಜಯಾನಂದ ಪೆರಾಜೆ, ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು  ಮೊದಲಾದವರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

Published

on

 

ಸಾಂದರ್ಭಿಕ ಚಿತ್ರ

ಮಂಗಳೂರು : ವಿವಿಧ ಡಾಕ್ಯುಮೆಂಟ್ಸ್‌ ಗಳಿದ್ದ ಪರ್ಸೊಂದು ಕಳೆದುಹೋಗಿದೆ. ಚೇತನ್ ಎಂಬವರು ಬಂಟ್ವಾಳದಿಂದ ಕುಂಟಲ್ ಪಲ್ಕೆಯವರೆಗೆ ಆಟೋದಲ್ಲಿ ಪ್ರಯಾಣಿಸಿದ್ದು, ಈ ವೇಳೆ ಅವರ ಪರ್ಸ್  ಜೇಬಿನಿಂದ ಕೆಳಗೆ ಬಿದ್ದಿದೆ. ಅದರಲ್ಲಿ ಆಧಾರ್ ಕಾರ್ಡ್, ಹಣ ಹಾಗೂ ಇತರೆ ಡಾಕ್ಯುಮೆಂಟ್ಸ್‌ ಗಳಿದ್ದವು. ಯಾರಿಗಾದರೂ ಪರ್ಸ್ ಸಿಕ್ಕಿದ್ದಲ್ಲಿ 9036015784 ನಂಬರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page