Connect with us

LATEST NEWS

ನಾಮಕರಣ ಹೆಸರಿನಲ್ಲಿ ಮತ್ತೆ ಮಂಗಳೂರಿನಲ್ಲಿ ಹಗ್ಗ-ಜಗ್ಗಾಟ

Published

on

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನಾಮಕರಣದ ವಿಚಾರದಲ್ಲಿ ಚರ್ಚೆ ಆರಂಭಗೊಂಡಿದೆ. ಈ ಬಾರಿಯ ನಾಮಕರಣದ ವಿಷಯ ಲೇಡಿಹಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ವೃತ್ತಕ್ಕೆ ಯಾರ ಹೆಸರು ಇಡುವುದು ಎನ್ನುವುದಾಗಿದೆ. ಲೇಡಿಹಿಲ್ ನಲ್ಲಿ ಕ್ರಿಶ್ಚಿಯನ್ ಮಿಷನರಿಗೆ ಸೇರಿದ ಚರ್ಚ್, ವಿದ್ಯಾಸಂಸ್ಥೆಗಳು ಇರುವ ಕಾರಣ ಈ ವೃತ್ತಕ್ಕೆ ಲೇಡಿಹಿಲ್ ವೃತ್ತ ಎಂದೇ ಹೆಸರಿಡಬೇಕು ಎಂದು ಕ್ರಿಶ್ಚಿಯನ್ ಸಮುದಾಯ ಇದೀಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ಮಂಗಳೂರು ಮಹಾನಗರ ಪಾಲಿಕೆ ತನ್ನ ಸಾಮಾನ್ಯ ಸಭೆಯಲ್ಲಿ ಲೇಡಿಹಿಲ್ ನಿಂದ ನ್ಯೂಚಿತ್ರಾ ಸಿನಿಮಾ ಥಿಯೇಟರ್ ವರೆಗಿನ ರಸ್ತೆಗೆ ಶ್ರೀ ಗೋಕರ್ಣನಾಥ ಕ್ಷೇತ್ರ ರಸ್ತೆ ಎಂದು ನಾಮಕರಣ ಮಾಡಲು ನಿರ್ಣಯ ತೆಗೆದುಕೊಂಡಿದೆ. ಆದರೆ ಮಹಾನಗರ ಪಾಲಿಕೆಯ ಈ ನಿರ್ಣಯಕ್ಕೆ ಇದೀಗ ಕ್ರಿಶ್ಚಿಯನ್ ಸಮುದಾಯ ವಿರೋಧ ವ್ಯಕ್ತಪಡಿಸಲು ಆರಂಭಿಸಿದೆ. ಲೇಡಿಹಿಲ್ ಜಂಕ್ಷನ್ ಗೆ ಚಾರಿತ್ರಿಕೆ ಮಹತ್ವವಿದ್ದು, ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಮದರ್ ನಜರಲ್ ಮಾರಿ ದೇಸ್ ಆಂಜ್ 1885 ರಲ್ಲಿ ಮಂಗಳೂರಿಗೆ ಬಂದಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯರು ಹೆಣ್ಣು ಮಕ್ಕಳಿಗಾಗಿ ಒಂದು ಶಾಲೆ ತೆರೆಯುವಂತೆ ಅವರಲ್ಲಿ ವಿನಂತಿಸಿದ್ದರು. ಈ ಕಾರಣಕ್ಕಾಗಿ ಲೇಡಿಹಿಲ್ ನಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರೆಯಲಾಗಿತ್ತು. ಅಲ್ಲದೆ ಇದೊಂದು ಗುಡ್ಡ ಪ್ರದೇಶವೂ ಆಗಿರುವುದರಿಂದ ಅಂದಿನ ಜನ ಹೆಣ್ಣು ಮಕ್ಕಳಿಗೆ ಗೌರವಕ್ಕಾಗಿ ಆ ಪ್ರದೇಶಕ್ಕೆ ಲೇಡಿಹಿಲ್ ಎಂದು ಹೆಸರಿಟ್ಟಿದ್ದರು. ಈ ಕಾರಣಕ್ಕಾಗಿ ಲೇಡಿಹಿಲ್ ನಲ್ಲಿ ನಿರ್ಮಾಣಗೊಳ್ಳಲಿರುವ ವೃತ್ತಕ್ಕೆ ಲೇಡಿಹಿಲ್ ವೃತ್ತ ಎಂದೇ ಹೆಸರಿಡಬೇಕು ಎಂದು ಕ್ರಿಶ್ಚಿಯನ್ ಸಮುದಾಯ ಇದೀಗ ಪಟ್ಟು ಹಿಡಿಯಲಾರಂಭಿಸಿದೆ.

ಈ ನಡುವೆ ಲೇಡಿಹಿಲ್ ಮೂಲಕವೇ ಗೋಕರ್ಣನಾಥ್ ಕ್ಷೇತ್ರಕ್ಕೆ ದಾರಿಯಿರುವ ಕಾರಣ ಈ ರಸ್ತೆಗೆ ಗೋಕರ್ಣನಾಥೇಶ್ವರ ರಸ್ತೆ ಎಂದು ಹೆಸರಿಡುವ ನಿರ್ಣಯಕ್ಕೆ ಬಿಲ್ಲವ ಸಮುದಾಯ ಬೆಂಬಲ ವ್ಯಕ್ತಪಡಿಸಿದೆ. ಮಂಗಳೂರು ದಸರಾ ಎಂದೇ ಖ್ಯಾತವೆತ್ತಿರುವ ಗೋಕರ್ಣನಾಥ ಕ್ಷೇತ್ರ ಅತ್ಯಂತ ಪ್ರಸಿದ್ಧ ಪ್ರವಾಸಿ ಕ್ಷೇತ್ರವೆಂದೂ ಗುರುತಿಸಿಕೊಂಡಿದೆ.

ಈ ಕಾರಣಕ್ಕಾಗಿ ನೂತನ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಬೇಕೆಂದು ಬಿಲ್ಲವ ಸಮುದಾಯವೂ ಇದೀಗ ಒತ್ತಾಯಿಸಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಎರಡೂ ಕಡೆಯಿಂದ ವೃತ್ತದ ನಾಮಕರಣಕ್ಕಾಗಿ ಹಗ್ಗಜಗ್ಗಾಟ ಆರಂಭಗೊಂಡಿದೆ.

LATEST NEWS

ಶಕ್ತಿ ಯೋಜನೆ ದುರ್ಬಳಕೆಗೆ ಬ್ರೇಕ್: ಜಾರಿಗೆ ಬರಲಿದೆ ‘ಸ್ಮಾರ್ಟ್’ ರೂಲ್ಸ್!

Published

on

ಕರ್ನಾಟಕ ಸರ್ಕಾರವು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯದಲ್ಲಿ ಆಗುತ್ತಿರುವ ದುರ್ಬಳಕೆ ತಡೆಗಟ್ಟಲು ಮತ್ತು ಪಾರದರ್ಶಕತೆ ತರಲು ‘ಸ್ಮಾರ್ಟ್ ಕಾರ್ಡ್’ ವಿತರಿಸುವ ನಿರ್ಧಾರಕ್ಕೆ ಫೆಬ್ರವರಿ 12, 2026 ರಂದು ಸಚಿವ ಸಂಪುಟ ಅನುಮೋದನೆ ನೀಡಿದೆ.


ಇನ್ನು ಮುಂದೆ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸುವ ಬದಲು, ಸರ್ಕಾರ ನೀಡುವ ಅಧಿಕೃತ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಇರುವುದು ಕಡ್ಡಾಯವಾಗಲಿದೆ. ಹೊರರಾಜ್ಯದವರು ನಕಲಿ ಆಧಾರ್ ಕಾರ್ಡ್ ಬಳಸಿ ಉಚಿತ ಪ್ರಯಾಣ ಮಾಡುತ್ತಿರುವುದನ್ನು ತಡೆಯಲು ಈ ಸ್ಮಾರ್ಟ್ ಕಾರ್ಡ್ ಸಹಕಾರಿಯಾಗಲಿದೆ. ಕಂಡಕ್ಟರ್‌ಗಳ ಬಳಿ ಇರುವ ಇಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳಲ್ಲಿ ಈ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡುವುದರಿಂದ, ಎಷ್ಟು ಪ್ರಯಾಣಿಕರು ಪ್ರಯಾಣಿಸಿದ್ದಾರೆಂಬ ನಿಖರ ಮಾಹಿತಿ ಸರ್ಕಾರಕ್ಕೆ ಸಿಗಲಿದೆ.

ಈ ಸ್ಮಾರ್ಟ್ ಕಾರ್ಡ್‌ಗಳು ನೋಡಲು ‘ಆಯುಷ್ಮಾನ್‌ ಕಾರ್ಡ್‌’ ಮಾದರಿಯಲ್ಲಿ ಇರಲಿವೆ ಎಂದು ಹೇಳಲಾಗಿದೆ. ಕಾರ್ಡ್‌ನಲ್ಲಿ ಫಲಾನುಭವಿಯ ಹೆಸರು, ಫೋಟೋ, ಗುರುತಿನ ಚೀಟಿ ಸಂಖ್ಯೆ ಮತ್ತು ಒಂದು ವಿಶೇಷವಾದ ‘ದೃಢೀಕರಣ ಸಂಖ್ಯೆ’ ಇರುತ್ತದೆ. ಕಾರ್ಡ್‌ಗಳಲ್ಲಿ ಮೈಕ್ರೋ ಚಿಪ್ ಅಳವಡಿಸುವ ಚಿಂತನೆಯೂ ನಡೆದಿದೆ.

ಇದನ್ನೂ ಓದಿ: ಲಕ್ಷ್ಮಣ ಮರಕಡರಿಗೆ ಯಕ್ಷ ಸವ್ಯಸಾಚಿ ಬಿರುದು ಪ್ರದಾನ

ಈ ಸ್ಮಾರ್ಟ್ ಕಾರ್ಡ್‌ಗಳನ್ನು ಅರ್ಹ ಫಲಾನುಭವಿಗಳಿಗೆ ಸರ್ಕಾರವೇ ಉಚಿತವಾಗಿ ನೀಡಲಿದೆ. ಸರ್ಕಾರವು ಕಾರ್ಡ್‌ಗಳ ಉತ್ಪಾದನೆ ಮತ್ತು ವಿತರಣೆಗೆ ಸಿದ್ಧತೆ ನಡೆಸುತ್ತಿದ್ದು, ಜೂನ್ 2026 ರ ವೇಳೆಗೆ ಈ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.

Continue Reading

DAKSHINA KANNADA

ಪುತ್ತೂರು : 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

Published

on

ಪುತ್ತೂರು : ಷರತ್ತು ಬದ್ದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಪುತ್ತೂರು ಕಸಬಾ ಗ್ರಾಮದ ಅಬ್ಬಾಸ್ ಆಲಿ ಅಲ್ತಾಫ್‌(55) ಬಂಧಿತ ಆರೋಪಿ.  ಮಂಗಳೂರು ಕುಲಶೇಖರ ಬಿಕರ್ನಕಟ್ಟೆ ಬಳಿ ಪುತ್ತೂರು ನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : NSUI ನಾಯಕನ ಮೇಲೆ ತಲವಾರು ದಾ*ಳಿ ಪ್ರಕರಣ; ಐವರು ಅರೆಸ್ಟ್

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 27ರ ವರೆಗೆ  ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

DAKSHINA KANNADA

ಲಕ್ಷ್ಮಣ ಮರಕಡರಿಗೆ ಯಕ್ಷ ಸವ್ಯಸಾಚಿ ಬಿರುದು ಪ್ರದಾನ

Published

on

ಮಂಗಳೂರು : ಶ್ರೀಕಟೀಲು ಮೇಳದ ಕಲಾವಿದ, ಯಕ್ಷ ಗುರು ಲಕ್ಷ್ಮಣ ಕುಮಾರ್ ಮರಕಡರಿಗೆ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀಭಗವದ್ಗೀತಾಮೃತ ಪುರಸ್ಕಾರದೊಂದಿಗೆ “ಯಕ್ಷ ಸವ್ಯ ಸಾಚಿ” ಬಿರುದು ನೀಡಿ ಗೌರವಿಸಲಾಯಿತು.

ಶ್ರೀ ಮದ್ ಭಗವದ್ಗೀತೆಯ  ಪ್ರಚಾರಕ, ಆಧ್ಯಾತ್ಮಿಕ ಗುರು ಸುಬ್ರಾಯ  ನಂದ್ಯೋಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಲಕ್ಷ್ಮಣ ಅವರು ಗಣೇಶ ಪುರ, ಸುರತ್ಕಲ್ ಸದಾಶಿವ ಮಹಾಗಣಪತಿ, ತಲಕಳ, ಬಪ್ಪನಾಡು, ಉಳ್ಳಾಲ ಚೀರುಂಭ ಭಗವತೀ , ಸಸಿಹಿತ್ಲು ಭಗವತಿ, ಎಡನೀರು ಮೇಳಗಳಲ್ಲಿ ತಿರುಗಾಟ ಮಾಡಿ ಕಟೀಲು  ಮೇಳದಲ್ಲಿ ಈಗ 7ನೇ ವರ್ಷದ  ತಿರುಗಾಟ ಮಾಡುತ್ತಿರುವ ನಿಷ್ಠಾವಂತ ಕಲಾಸಾಧಕ.

ಕಾಸರಗೋಡು ಮತ್ತು ಮಂಗಳೂರು ಪರಿಸರದಲ್ಲಿ ಯಕ್ಷಗಾನ ಶಿಕ್ಷಕನಾಗಿ ತರಗತಿ ನಡೆಸಿ ಸಮೃದ್ಧ ಶಿಷ್ಯ ಗಡಣ ಹೊಂದಿರುವ ಯಕ್ಷ ಗುರು.ಆಮೇರಿಕಾ, ಮಸ್ಕತ್, ಆಸ್ಟ್ರೇಲಿಯಾ, ದುಬೈ ದೇಶಗಳಲ್ಲಿ ಪುಂಡು, ಸ್ತ್ರೀ,ರಾಜವೇಷ,ಹಾಸ್ಯ, ಎದುರು ವೇಷಗಳೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ  ಅಪೂರ್ವ ಯಕ್ಷ ಕಲಾ ಸಾಧಕ ಎಂದು ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.

ಇದನ್ನೂ ಓದಿ : ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

ಕಾರ್ಯಕ್ರಮದಲ್ಲಿ  ಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ, ಡಾ.ಶಶಾಂಕ್ ಮತ್ತಿತ್ತರರು ಉಪಸ್ಥಿತರಿದ್ದರು. ಮೇಳದ ಎಲ್ಲಾ ಕಲಾವಿದರಿಗೆ ಸೇವಾಕರ್ತರಾದ ಗೀತಾ ಪ್ರಚಾರಕಿ ಸವಿತಾ ಕೊರಗಪ್ಪ ಅವರು ಅರ್ಥ ಸಹಿತ ಭಗವದ್ಗೀತೆಯನ್ನು ವಿತರಿಸಿದರು. ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಸೇವೆ ಬಯಲಾಟ ಜರುಗಿತು.

 

Continue Reading
Advertisement

Trending

Copyright © 2025 Namma Kudla News

You cannot copy content of this page