Connect with us

LATEST NEWS

ನವಜಾತ ಶಿಶು ಕದ್ದು ರೂ.15 ಲಕ್ಷಕ್ಕೆ ಮಾರಾಟ ಮಾಡಿದ ವೈದ್ಯೆ ಬಂಧನ..!

Published

on

ಬೆಂಗಳೂರು: ನವಜಾತ ಶಿಶುವನ್ನು ಕದ್ದು ಮಾರಾಟ ಮಾಡಿದ ಆರೋಪದಲ್ಲಿ ವೈದ್ಯೆಯೊಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಚಾಮಪರಾಜಪೇಟೆಯ ಬಿಬಿಎಂಪಿ ಆಸ್ಪತ್ರೆಯಲ್ಲಿ ನಡೆದಿದ್ದ ಈ ನವಜಾತ ಶಿಶು ಅಪಹರಣ ಪ್ರಕರಣ ಭಾರಿ ಕುತೂಹಲ ಕೆರಳಿಸಿತ್ತು. ಇದೀಗ  ದಕ್ಷಿಣ ವಿಭಾಗದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ವೈದ್ಯೆಯೊಬ್ಬರನ್ನು ಬಂಧಿಸಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಮನೋವೈದ್ಯೆ ಡಾ.ರಶ್ಮಿ (34) ಬಂಧಿತ ವೈದ್ಯೆಯಾಗಿದ್ದಾರೆ.

ವಿಚಾರಣೆ ವೇಳೆ ನವಜಾತ ಶಿಶು ಅಪಹರಿಸಿದ್ದ ವೈದ್ಯೆ, ಮಗುವನ್ನು ರೂ.15 ಲಕ್ಷಕ್ಕೆ ಕೊಪ್ಪಳದ ದಂಪತಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ.

ಇದೀಗ ಆರೋಪಿ ವೈದ್ಯೆಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಮಾರಾಟ ಮಾಡಲಾಗಿದ್ದ ಮಗುವನ್ನು ರಕ್ಷಣೆ ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದಾರೆ.

ವೈದ್ಯೆಯ ಖತರ್ನಾಕ್ ಐಡಿಯಾ..!:

ಮಗುವನ್ನು ಖರೀದಿಸಿದ್ದ ಕೊಪ್ಪಳ ಮೂಲದ ದಂಪತಿಗೆ ಬುದ್ದಮಾಂದ್ಯ ಮಗುವಿತ್ತು. ಅದರ ಚಿಕಿತ್ಸೆಗೆ ಅವರು 2014ರಲ್ಲಿ ಹುಬ್ಬಳ್ಳಿಯ ಸುತ್ತೂರಿನಲ್ಲಿರುವ ಆಸ್ಪತ್ರೆಗೆ ತೆರಳಿದ್ದಾಗ, ಅಲ್ಲಿ ಅವರಿಗೆ ಡಾ.ರಶ್ಮಿ ಪರಿಚಯವಾಗಿತ್ತು.

ಹೀಗೆ ಒಡನಾಟ ಬೆಳೆಗ ಬಳಿಕ ರಶ್ಮಿ, ದಂಪತಿಗೆ ನೀವು ಭಯಪಡುವ ಅಗತ್ಯವಿಲ್ಲ. ಮತ್ತೊಂದು ಮಗು ನೀವು ಪಡೆಯಬಹುದು. ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡು ಬಾಡಿಗೆ ತಾಯಿ ಹೊಟ್ಟೆಯಲ್ಲಿ ನಿಮ್ಮದೇ ಮಗು ಬೆಳಸಬಹುದು. ಅದಕ್ಕಾಗಿ ರೂ.15 ಲಕ್ಷ ಖರ್ಚಾಗುತ್ತದೆ. ಮಗು ಜನಿಸಿದ ಬಳಿಕ ನಿಮಗೆ ತಂದುಕೊಡುತ್ತೇನೆಂದು ತಿಳಿಸಿದ್ದರು.

ಈಕೆಯ ಮಾತು ನಂಬಿದ್ದ ದಂಪತಿ,ಹಣ ಕೊಡಲು ಸಮ್ಮತಿಸಿದ್ದಾರೆ. ಬಳಿಕ ಬಾಡಿಗೆ ತಾಯಿ ಹೊಟ್ಟೆಯಲ್ಲಿ ಮಗು ಗರ್ಭದರಿಸಿದೆ ಎಂದು ಆ ಪೋಷಕರಿಗೆ ವೈದ್ಯೆ ಸುಳ್ಳು ಹೇಳಿದ್ದಳು. ಹೀಗಿರುವಾಗ ಹುಬ್ಬಳ್ಳಿಯ ಆಸ್ಪತ್ರೆ ಕೆಲಸಕ್ಕೆ ರಾಜೀನಾಮೆ ನೀಡಿದ್ದ ರಶ್ಮಿ, ಬೆಂಗಳೂರಿನ ಖಾಸಗಿ ಆಸ್ಪತ್ರೆ ಸೇರಿದ್ದರು.

ಆಗ ಅದೇ ಸಮಯದಲ್ಲಿಯೇ ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಹುಸ್ನಾ ಬಾನು ಎಂಬುವವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಗೆ ವೈದ್ಯೆಯಂತೆ ಬಂದಿದ್ದ ರಶ್ಮೀ ಮಗುವನ್ನು ಅಪಹರಿಸಿಕೊಂಡು ಹೋಗಿ ದಂಪತಿಗೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ರೂ.15 ಲಕ್ಷ ಪಡೆದಿದ್ದರು ಎನ್ನಲಾಗಿದೆ.

ಇತ್ತ ಮಗು ಕಳವಾದ ಹಿನ್ನೆಲೆಯಲ್ಲಿ ಮಗುವಿಗಾಗಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ತೀವ್ರವಾಗಿ ಹುಡುಕಾಡಿದ್ದಾರೆ. ಬಳಿಕ ಹತಾಶರಾಗಿ ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದಾರೆ.

ವರ್ಷವಾದರೂ ಮಗು ಪತ್ತೆಯಾಗದ ಹಿನ್ನೆಲೆಯಲ್ಲಿ ಬೇಸರಗೊಂಡು ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶೀಘ್ರವೇ ಮಗು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಿತ್ತು.

ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸತತ ಪರಿಶೀಲನೆ ಹಾಗೂ ಒಂದು ಸಾವಿರಕ್ಕೂ ಹೆಚ್ಚು ದೂರುವಾಣಿ ಕರೆಗಳ ವಿವರ ಕಲೆಹಾಕಿ, ಅನುಮಾನ ಬಂದವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಕಾರ್ಯಾಚರಣೆ ಅಂತಿಮವಾಗಿ ಫಲ ನೀಡಿ, ಅವರನ್ನು ವೈದ್ಯೆಯ ಬಳಿ ಕರೆದೊಯ್ದಿದೆ.

ವಿಚಾರಣೆ ವೇಳೆ ವೈದ್ಯೆ ತಪ್ಪೊಪ್ಪಿಕೊಂಡಿದ್ದು, ಸಾಲ ಮರುಪಾವತಿ ಮಾಡುವ ಸಲುವಾಗಿ ಅಪರಾಧ ಎಸಗಿರುವುದಾಗಿ ವೈದ್ಯೆ ಡಾ.ರಶ್ಮಿ ಹೇಳಿದ್ದಾರೆಂದು ತಿಳಿದುಬಂದಿದೆ.

LATEST NEWS

ವಿಮಾನ ನಿಲ್ದಾಣದಲ್ಲಿ ಗುಂಡಿಗೆ ಬಿದ್ದ ಮಗು ಸಾವು

Published

on

ಕೊಚ್ಚಿ: ತೆರೆದಿಟ್ಟ ತ್ಯಾಜ್ಯದ ಗುಂಡಿಗೆ 3 ವರ್ಷದ ಬಾಲಕ ಬಿದ್ದು ಸಾವನ್ನಪ್ಪಿದ ಘಟನೆ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ರಾಜಸ್ತಾನದ ರಿಧಾನ್ ಜಾಜು ಮೃತಪಟ್ಟ ಬಾಲಕ. ಪೋಷಕರ ಜೊತೆ ವಿಮಾನದಿಂದ ಇಳಿದಿದ್ದ ಕುಟುಂಬ ಮಗುವಿನೊಂದಿಗೆ ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್ ಹೊರಗಿನ ಕೆಫೆಗೆ ಹೊಗಿತ್ತು. ಈ ವೇಳೆ ಕೆಫೆಯ ಹೊರಗಡೆ ಆಟವಾಡುತ್ತಿದ್ದಾಗ ವಿಮಾನ ನಿಲ್ದಾಣದ ಕಸದ ಗುಂಡಿಗೆ ಬಿದ್ದಿದ್ದಾನೆ.

ವಿಮಾನನಿಲ್ದಾಣದ ಕೆಫೆಗೆ ಮಗುವಿನ ಪೋಷಕರು ಬಂದಿದ್ದಾಗ ಈ ಘಟನೆ ನಡೆದಿದೆ. ದೇಶೀಯ ಟರ್ಮಿನಲ್‌ನ ಹೊರಗಿರುವ ಅನ್ನ ಸಾರಾ ಕೆಫೆಯ ಹಿಂಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ. ತನ್ನ ಅಣ್ಣನೊಂದಿಗೆ ಹೊರಗೆ ಆಟವಾಡುತ್ತಿದ್ದ ಮಗು ಕಸ ತುಂಬಿದ ಗುಂಡಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

LATEST NEWS

ಎಚ್ಚರ ಎಚ್ಚರ..! ಯಾವುದೇ ಲಿಂಕ್ಗಳನ್ನು ತೆರೆಯದಿದ್ದರೂ ಹ್ಯಾಕ್ ಆಗುತ್ತೆ ವಾಟ್ಸ್ಆ್ಯಪ್ ಖಾತೆ

Published

on

ಮಂಗಳೂರು/ಕ್ಯಾಲಿಫೋರ್ನಿಯಾ: ಈ ಹಿಂದೆ ಅನಾಮಧೇಯ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಮಾತ್ರ ಮೊಬೈಲ್‌ಗಳು ಮತ್ತು ಆ್ಯಪ್‌ಗಳು ಹ್ಯಾಕ್ ಆಗುತ್ತಿದ್ದವು. ಆದರೆ ಈಗ ಸಂಶಯಾಸ್ಪದ ಲಿಂಕ್‌ಗಳು ವ್ಯಾಟ್ಸ್‌ಆ್ಯಪ್‌ಗೆ ಬಂದರೆ  ಖಾತೆ ಹ್ಯಾಕ್ ಆಗುತ್ತೆ ಎಂದು ವ್ಯಾಟ್ಸ್ ಆ್ಯಪ್ ಸ್ಪಷ್ಟಪಡಿಸಿದೆ.

ವಾಟ್ಸ್ಆ್ಯಪ್ ಖಾತೆ ಹ್ಯಾಕ್ ಆಗದಿರಲು ಅನಾಮಧೇಯ ಮತ್ತು ಸಂಶಯಾಸ್ಪದ ವೆಬ್ ಕೊಂಡಿ (ಲಿಂಕ್), ಫೈಲ್ ಮತ್ತು ಆ್ಯಪ್‌ಗಳನ್ನು ತೆರೆಯಬಾರದು ಎಂದು ಬಹುತೇಕ ಬಳಕೆದಾರರಿಗೆ ತಿಳಿದೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಲಿಂಕ್‌ಗಳನ್ನು ತೆರೆಯದಿದ್ದರೂ ವಾಟ್ಸ್ಆ್ಯಪ್ ಖಾತೆ ಹ್ಯಾಕ್ ಆಗಿವೆ ಎಂಬ ವಿಚಾರವನ್ನು ಸ್ವತಃ ವಾಟ್ಸ್ಆ್ಯಪ್ ಬಹಿರಂಗಪಡಿಸಿದೆ.

24 ದೇಶಗಳಿಗೆ ಸೇರಿದ ಸುಮಾರು 90 ಬಳಕೆದಾರರು ತಾವು ಸ್ವೀಕರಿಸಿದ ದೋಷಪೂರಿತ ಫೈಲ್‌ಗಳನ್ನು ತೆರೆಯದಿದ್ದರೂ ಅವರ ಖಾತೆಗಳು ಹ್ಯಾಕ್ ಆಗಿವೆ. ಇದರ ಹಿಂದೆ ಇಸ್ರೇಲ್‌ನ “ಪ್ಯಾರಾಗೋನ್ ಸೊಲ್ಯೂಷನ್ಸ್’ ಎಂಬ ಸಂಸ್ಥೆಯ ಕೈವಾಡವಿದೆ ಎನ್ನಲಾಗಿದೆ. ಸದ್ಯ ಬಳಕೆದಾರರ ಖಾತೆಗಳು ಹ್ಯಾಕ್ ಆಗದಂತೆ ಕ್ರಮ ವಹಿಸಲಾಗಿದೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

ಝಿರೋ-ಕ್ಲಿಕ್ ದಾಳಿ

ಪ್ಯಾರಾಗಾನ್ ಸೊಲ್ಯೂಷನ್ಸ್ ಕಚೇರಿ ಅಮೆರಿಕದ ವರ್ಜೀನಿಯಾದಲ್ಲಿದೆ. ಗ್ರ್ಯಾಫೈಟ್ ಸ್ಪೈವೇರ್ ಅತ್ಯಂತ ಅಪಾಯಕಾರಿ. ಇದನ್ನು ಬಳಕೆದಾರರಿಗೆ ತಿಳಿಯದಂತೆ ಸಾಧನದಲ್ಲಿ ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲ ಬಳಕೆದಾರರು ಯಾವುದೇ ಲಿಂಕ್ ಸೇರಿದಂತೆ ಇತ್ಯಾದಿಗಳನ್ನು ಕ್ಲಿಕ್ ಮಾಡುವ ಅಗತ್ಯವಿಲ್ಲ. ಈ ರೀತಿಯ ತಂತ್ರವನ್ನು ಝಿರೋ-ಕ್ಲಿಕ್ ದಾಳಿ ಎಂದು ಕರೆಯಲಾಗುತ್ತದೆ. ಒಮ್ಮೆ ನಿಮ್ಮ ಸಾಧನದಲ್ಲಿ ಈ ವೈರಸ್​ ಅಳವಡಿಕೆ ನಂತರ ಹ್ಯಾಕರ್‌ಗಳು ನಿಮ್ಮ ಸಾಧನವನ್ನು ಸುಲಭವಾಗಿಯೇ ಆಪರೇಟ್​ ಮಾಡುತ್ತಾರೆ. ನಂತರ ಹ್ಯಾಕರ್‌ಗಳು ತಮ್ಮ ಇಚ್ಛೆಯಂತೆ ಫೋನ್‌ನಿಂದ ಡೇಟಾ ಕದಿಯಬಹುದು.

ಪರಿಹಾರ ಏನು?

ವಾಟ್ಸ್ಆ್ಯಪ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಲೇ ಇರಬೇಕು. ನೀವು ಅಪರಿಚಿತ ಸಂಖ್ಯೆಯಿಂದ ಲಿಂಕ್ ಅಥವಾ ಫೈಲ್ ಬಂದರೆ ಅದಕ್ಕೆ ಪ್ರತಿಕ್ರಯಿಸಬಾರದು. ಆ ಸಂಖ್ಯೆಗಳನ್ನು ಬ್ಲಾಕ್ ಲಿಸ್ಟ್ ಹಾಕುವುದು ಸೂಕ್ತ. ಆಗಾಗ್ಗೆ ನಿಮ್ಮ ಫೋನ್‌ನ ಸೆಟ್ಟಿಂಗ್ಸ್ ಮತ್ತು ಅಪ್ಲಿಕೇಶನ್ ಅನುಮತಿಗಳನ್ನು ಪರಿಶೀಲಿಸುವುದು ಸೂಕ್ತವಾಗಿದೆ.

 

Continue Reading

LATEST NEWS

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ನಾಲ್ಕು ಜನ ಸಾ*ವು

Published

on

ನವದೆಹಲಿ:  ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ನಾಲ್ಕು ಜನ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಸ್ಥಳದಿಂದ ಕನಿಷ್ಠ ನಾಲ್ಕು ಸುಟ್ಟ ಶವಗಳನ್ನ ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹಗಳು ಮತ್ತು ಗಾಯಗೊಂಡ ವ್ಯಕ್ತಿಯನ್ನು ಕಲ್ಯಾಣಿಯ ಜೆಎನ್ಎಂ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗ್ತಿದೆ.

ಈ ಸ್ಫೋಟದಿಂದ ಇಡೀ ಕಾರ್ಖಾನೆಗೆ ಹಾನಿಯಾಗಿದೆ. ಆರಂಭದಲ್ಲಿ, ನಾವು ನಾಲ್ಕು ಸುಟ್ಟ ಶವಗಳನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಜ್ವಾಲೆಗಳನ್ನ ನಂದಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲ್ಯಾಣಿಯ ರಥಾಲಾ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಬಲಿಯಾದವರು ಕಾರ್ಖಾನೆಯ ಉದ್ಯೋಗಿಗಳು ಎಂದು ನಿವಾಸಿಗಳು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page