Connect with us

LATEST NEWS

ಕುಂದಾಪುರ : ಕಾರು ಡಿ*ಕ್ಕಿ; ಮಹಿಳೆಗೆ ಗಂಭೀ*ರ ಗಾ*ಯ

Published

on

ಕುಂದಾಪುರ : ಕಾರು ಡಿ*ಕ್ಕಿ ಹೊಡೆದು ಪಾದಚಾರಿ ಮಹಿಳೆಯೊಬ್ಬರು ಗಂಭೀ*ರ ಗಾ*ಯಗೊಂಡ ಘಟನೆ ಕುಂದಾಪುರ ತಾಲೂಕಿನ ತ್ರಾಸಿಯ ರಾಷ್ಟ್ರೀಯ ಹೆದ್ದಾರಿಯ  66 ರಲ್ಲಿ ಸಂಭವಿಸಿದೆ. ತ್ರಾಸಿ ನಿವಾಸಿ ಗೌರಿ ಶೆಟ್ಟಿಗಾರ್‌ (60)  ಗಾ*ಯಗೊಂಡ ಮಹಿಳೆ.

ಗೌರಿ ಶೆಟ್ಟಿಗಾರ್‌ ಅವರು ರಸ್ತೆ ದಾಟುತ್ತಿದ್ದಾಗ ಅವಘ*ಡ ಸಂಭವಿಸಿದೆ. ಕಾರು ಬೈಂದೂರು ಕಡೆಯಿಂದ ಕುಂದಾಪುರದತ್ತ ಸಂಚರಿಸುತ್ತಿತ್ತು. ಡಿ*ಕ್ಕಿ ಹೊಡೆದ ರಭಸಕ್ಕೆ ಮಹಿಳೆ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಇದನ್ನೂ ಓದಿ : ಆತ್ಮಹತ್ಯೆಗೆ ಯತ್ನಿಸಿದ ಕಳ್ಳ ಈಗ ಪೊಲೀಸರ ಅತಿಥಿ

ಕೂಡಲೇ ಗಂಗೊಳ್ಳಿಯ ಆ್ಯಂಬುಲೆನ್ಸ್‌ನ ಇಬ್ರಾಹಿಂ ಅವರು ಆಕೆಯನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾ*ತದ ದೃಶ್ಯಾವಳಿ ಮಳಿಗೆಯೊಂದರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LATEST NEWS

ಈಜಲು ಹೋಗಿ ನೀರುಪಾಲಾದ ಇಬ್ಬರು ವಿದ್ಯಾರ್ಥಿಗಳು

Published

on

ಆನೇಕಲ್​: ಈಜಲು ಹೋದ ಐವರ ಪೈಕಿ ಇಬ್ಬರು ವಿದ್ಯಾರ್ಥಿಗಳು ನೋಡನೋಡುತ್ತಿದಂತೆ ನೀರುಪಾಲಾಗಿರುವಂತಹ ಘಟನೆ ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ನಡೆದಿದೆ.

ಬೊಮ್ಮನಹಳ್ಳಿ ಗಾರ್ವೇಬಾವಿ ಪಾಳ್ಯದ ದೀಪು (20) ಮತ್ತು ಯೋಗಿಶ್ವರನ್ (20) ಮೃತರು. ಬೊಮ್ಮಸಂಸ್ರದ ಎಸ್​ಎಫ್​ಎಸ್ ಕಾಲೇಜಿನ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿಗೆ ತೆರಳಿದ್ದಾರೆ. ಬಳಿಕ ಕಲ್ಯಾಣಿಗೆ ಈಜಲು ಇಳಿದಿದ್ದಾರೆ. ಈ ಪೈಕಿ ದೀಪು, ಯೋಗೇಶ್ವರ್​ಗೆ ಈಜಲು ಆಗದೆ ಪರದಾಡಿದ್ದಾರೆ. ಕೆಲ ಕಾಲ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಇತ್ತ ರಕ್ಷಣೆ ಮಾಡಲು ಸಾಧ್ಯವಾಗದೆ ಉಳಿದ ಸ್ನೇಹಿತರು ಕಂಗಾಲಾಗಿದ್ದಾರೆ.

ಈಜಲು ಬಾರದೆ ಒಬ್ಬರಾದ ಮೇಲೆ ಒಬ್ಬರಂತೆ ಇಬ್ಬರು ಸ್ನೇಹಿತರು ಇನ್ನುಳಿದ ಸ್ನೇಹಿತರ ಕಣ್ಣೆದುರೇ ಮುಳುಗಿ ಪ್ರಾಣಬಿಟ್ಟಿದ್ದಾರೆ. ಘಟನೆಯ ಸಂಪೂರ್ಣ ವಿಡಿಯೋ ಅಲ್ಲಿದ್ದ ಯುವಕನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

Continue Reading

DAKSHINA KANNADA

ಪುತ್ತೂರು ನಗರಸಭೆಯಲ್ಲಿ ಹೊಸ ಕಾನೂನು ಜಾರಿ..! ಈ ಉದ್ಯಮಕ್ಕೆ ಎರಡು ಪರವಾನಿಗೆ..!?

Published

on

ಪುತ್ತೂರು: ನಗರ ಸಭಾ ವ್ಯಾಪ್ತಿಯ ವರ್ತಕರಿಗೆ ಶಾಕಿಂಗ್ ನೀಡುವಂತಹ ಆದೇಶವನ್ನು ನಗರಸಭೆ ಪೌರಾಯುಕ್ತರು ಹೊರಡಿಸಿದ್ದಾರೆ. ನಗರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಉದ್ದಿಮೆ ಪರವಾನಿಗೆ ಜೊತೆಗೆ ಇನ್ನೊಂದು ಪರವಾನಿಗೆಯನ್ನೂ ಪಡೆಯಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.

ನಗರಸಭೆಯ ಪೌರಾಯುಕ್ತರ ಫರ್ಮಾನಿನಂತೆ ಇನ್ನು ಮುಂದೆ ಉದ್ಯಮ ನವೀಕರಣ ಮಾಡುವವರು ಪ್ರತ್ಯೇಕವಾದ ಉದ್ಯಮ ಪರವಾನಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ತಾವು ಪಡೆದಿರುವ ಉದ್ದಿಮೆ ಪರವಾನಿಗೆಯ ಹೊರತಾಗಿ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದರೆ ಅದಕ್ಕೆ ಪ್ರತ್ಯೇಕವಾದ ಪರವಾನಿಗೆಯನ್ನು ಪಡೆಯಬೇಕಾಗುತ್ತದೆ.

ಹಾಗೊಂದು ವೇಳೆ ಪ್ರತ್ಯೇಕ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸಿದರೆ ಅಂತ ಅಂಗಡಿಗಳ ಪರವಾನಿಗೆ ರದ್ದು ಮಾಡಿ ದಂಡ ಸಹಿತ ಉದ್ಯಮ ಸ್ಥಗಿತಗೊಳಿಸಲಾಗುವದು ಎಂದು ಎಚ್ಚರಿಸಿದ್ದಾರೆ.

Continue Reading

FILM

ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ?

Published

on

ಮಂಗಳೂರು/ಬೆಂಗಳೂರು : ಪ್ರತಿ ವರ್ಷ ದರ್ಶನ್ ಅವರ ಜನ್ಮದಿನ ಅದ್ದೂರಿಯಾಗಿರುತ್ತದೆ. ಆದರೆ ಈ ವರ್ಷ ಬೆನ್ನು ನೋವಿನ ಕಾರಣದಿಂದ ಅವರು ಫ್ಯಾನ್ಸ್ ಜೊತೆ ಬರ್ತ್​ಡೇ ಸೆಲೆಬ್ರೇಟ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಶನಿವಾರ (ಫೆ.8) ಅವರು ವಿಡಿಯೋ ಮೂಲಕ ಮಾಹಿತಿ ನೀಡಿದ್ದರು.

ಇದರಿಂದ ದರ್ಶನ್ ಅಭಿಮಾನಿಗಳು ನಿರಾಶೆಗೊಂಡಿದ್ದರು. ಆದರೆ ಫ್ಯಾನ್ಸ್ ನಿರಾಶರಾಗುವ ಅವಶ್ಯಕತೆ ಇಲ್ಲ. ಯಾಕೆಂದರೆ, ಅವರ ಜನ್ಮದಿನದಂದೇ ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಈ ಬಗ್ಗೆ ದರ್ಶನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ದಿನವೇ (ಫೆ.16) ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ನ್ಯೂಸ್ ಕೇಳಿ ಅಭಿಮಾನಿಗಳಿಗೆ ಸಖತ್ ಖುಷಿ ಆಗಿದೆ. ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಟೀಸರ್ ನೋಡಲು ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ.

ದರ್ಶನ್ ಅವರು ‘ಡೆವಿಲ್’ ಸಿನಿಮಾದ ಕೆಲಸ ಶುರು ಮಾಡಿದ್ದರು. ‘ಮಿಲನ’ ಪ್ರಕಾಶ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2024ರಲ್ಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಆದರೆ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿ ಜೈಲು ಸೇರಿದ್ದರಿಂದ ಶೂಟಿಂಗ್ ನಿಂತಿತ್ತು.

ದರ್ಶನ್ ಅವರು ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗುವುದಕ್ಕೂ ಮುನ್ನ ‘ಡೆವಿಲ್’ ಸಿನಿಮಾದ ಶೂಟಿಂಗ್​​ನಲ್ಲಿ ಪಾಲ್ಗೊಂಡಿದ್ದರು. ಒಂದು ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ದರ್ಶನ್ ಜಾಮೀಮಿನ ಮೇಲೆ ಹೊರಗೆ ಬಂದ ಬಳಿಕ ಚಿತ್ರದ ಕೆಲಸಗಳಿಗೆ ಮತ್ತೆ ಚಾಲನೆ  ಸಿಕ್ಕಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ನಿರಾಸೆ…ಗೆಳತಿಯ ಆಸೆ ಈಡೇರಿಸುತ್ತೇನೆ ಎಂದ ಡಿಬಾಸ್

ಫೆಬ್ರವರಿ 22 ರ ನಂತರ ಚಿತ್ರೀಕರಣದಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ. ಡೆವಿಲ್ ಚಿತ್ರವನ್ನು ಮಿಲಿನ್ ಪ್ರಕಾಶ್ ನಿರ್ದೇಶಿಸುತ್ತಿದ್ದು, ರಚನಾ ರೈ ದರ್ಶನ್ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ದರ್ಶನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದರೆ, ಅರ್ಧಕ್ಕೆ ನಿಂತಿದ್ದ ಬ್ಲಾಕ್ ಬ್ಲಸ್ಟರ್ ಸಿನಿಮಾ ಮತ್ತೆ ವೇಗ ಪಡೆದು ಫೆಬ್ರವರಿ 16ರಂದು ಟೀಸರ್ ಬಿಡುಗಡೆ ಮಾಡುತ್ತಿರುವುದು ದರ್ಶನ್ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page