Connect with us

LATEST NEWS

ಚಾಕುವಿನಿಂದ ಇರಿದು ಬೆಳಗಾವಿಯಲ್ಲಿ ಕುಂದಾಪುರ ಮೂಲದ ವ್ಯಕ್ತಿಯ ಕೊಲೆ

Published

on

ಬೆಳಗಾವಿ: ವ್ಯಕ್ತಿಯೊಬ್ಬರ ಪಾನ್‌ ಬೀಡ ಅಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ರೌಡಿ ಶೀಟರ್ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬೆಳಗಾವಿಯ ವಡಗಾವಿಯಲ್ಲಿ ನಡೆದಿದೆ.


ಕೊಲೆಯಾದ ವ್ಯಕ್ತಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಗೋಳಿಯಂಗಡಿ ಸಮೀಪದ ಹಿಲಿಯಾಣದ ಮೂಲದ ನಿವಾಸಿ ಬಾಲಕೃಷ್ಣ ಶೆಟ್ಟಿ (54) ಎಂದು ತಿಳಿದು ಬಂದಿದೆ.

ಅವರು ಬೆಳಗಾವಿಯ ವಡಗಾವಿಯಲ್ಲಿ ಪಾನ್ ಬೀಡ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ.
ಬಾಲಕೃಷ್ಣ ಶೆಟ್ಟಿ ಅವರನ್ನು ರೌಡಿಶೀಟರ್‌ ದತ್ತಾತ್ರೇಯ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಮಂಗಳವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾತ್ರೇಯ ಆಲಿಯಾಸ್‌ ದತ್ತ ಶಿವಾನಂದ ಜಾಂತಿಕಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ದತ್ತ ಮಂಗಳವಾರ ಮಧ್ಯಾಹ್ನ ಬೆಳಗಾವಿ ವಡಗಾವಿಯ ಬಾಲಕೃಷ್ಣ ಶೆಟ್ಟಿ ಅವರ ಬೀಡಾ ಅಂಗಡಿಗೆ ಬಂದು ಗುಟ್ಕಾ ಕೇಳಿದ್ದಾನೆ.

ಆಗ ಬಾಲಕೃಷ್ಣ ಶೆಟ್ಟಿ ಹಣ ಕೇಳಿದಾಗ ಇಬ್ಬರ ಮಧ್ಯೆ ಜಗಳವಾಗಿತ್ತು. ಆಗ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದ ಎಂದು ತಿಳಿಯಲಾಗಿದೆ.
ಇದರಿಂದ ಭಯಭೀತಗೊಂಡ ಬಾಲಕೃಷ್ಣ ಶೆಟ್ಟಿ ಪಾನ್‌ ಶಾಪ್‌ ಬಂದ್‌ ಮಾಡಿ ಬೇರೆಯವರ ಮನೆಯಲ್ಲಿ ಉಳಿದುಕೊಂಡಿದ್ದರು.

ರಾತ್ರಿ ಮನೆಗೆ ಹೋದಾಗ ದತ್ತ ಏಕಾಏಕಿ ನುಗ್ಗಿ ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಾಲಕೃಷ್ಣ ಶೆಟ್ಟಿಯವರು 35 ವರ್ಷಗಳಿಂದ ಲಕ್ಷ್ಮೀ ನಗರದಲ್ಲಿ ಪಾನ್‌ ಬೀಡ ಅಂಗಡಿ ನಡೆಸುತ್ತಿದ್ದರು. ಪತ್ನಿ, ಪುತ್ರ, ಪುತ್ರಿಯೊಂದಿಗೆ ಅಲ್ಲಿಯೇ ನೆಲೆಸಿದ್ದರು ಎನ್ನಲಾಗಿದೆ.
ಬಾಲಕೃಷ್ಣ ಅವರ ಮನೆ ಗೋಳಿಯಂಗಡಿ ಸಮೀಪದ ಹಿಲಿಯಾಣ. ಪತ್ನಿ ಮನೆ ಗುಜ್ಜಾಡಿ ಗ್ರಾಮದ ಮಂಕಿ. ಶೆಟ್ಟಿಯವರ ಪತ್ನಿ ಮತ್ತು ಮಕ್ಕಳು ಸೋಮವಾರ ರಾತ್ರಿ ಬೆಳಗಾವಿಯಿಂದ ಊರಿಗೆ ಆರೋಪಿ ಮಂಗಳವಾರ ಬೆಳಗ್ಗಿನ ಜಾವ ಊರಿಗೆ ಬಂದಿದ್ದರು ಎನ್ನಲಾಗಿದೆ.

ಬೆಳಗಾವಿ ಪೊಲೀಸರು ಕೊಲೆಗೈದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

LATEST NEWS

ಉಡುಪಿ: ಹಿಂದೂ ಜಾಗರಣ ವೇದಿಕೆ ಮುಖಂಡನ ಬಂಧನ

Published

on

ಉಡುಪಿ: ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಅಜೆಕಾರು ಮರ್ಣೆ ನಡಿಬೆಟ್ಟು ನಿವಾಸಿ ರತ್ನಾಕರ್ ಅಮೀನ್(49)ನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 15ರಂದು ಉಡುಪಿ ನಗರದ ಜಟ್ಕಾ ನಿಲ್ದಾಣದ ಬಳಿ ಹಿಂದೂ ಜಾಗರಣಾ ವೇದಿಕೆ ಉಡುಪಿ ವತಿಯಿಂದ ದೆಹಲಿ ಬಾಂಬ್ ಸ್ಪೋಟ ಕೃತ್ಯವನ್ನು ಖಂಡಿಸಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು.

ಪ್ರತಿಭಟನೆಯಲ್ಲಿ ರತ್ನಾಕರ ಅಮೀನ್, ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದು, ಈ ಬಗ್ಗೆ ರತ್ನಾಕರ ಅಮೀನ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಚಳಿ ಓಡಿಸಲು ಇದ್ದಿಲುಬೆಂಕಿ ಹಾಕಿಕೊಂಡು ಮಲಗಿದ್ದ ಯುವಕರು; ಮೂವರು ಸಾವು

ಈ ಬಗ್ಗೆ ತನಿಖೆ ನಡೆಸಿದ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ ನೇತೃತ್ವದ ವಿಶೇಷ ತಂಡವು ಖಚಿತ ಮಾಹಿತಿಯ ಆಧಾರದ ಮೇರೆಗೆ ನ.18ರಂದು ಬೆಳಗ್ಗೆ ಆರೋಪಿ ರತ್ನಾಕರ್ ಅಮೀನ್‌ನನ್ನು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ವಶಕ್ಕೆ ಪಡೆದು ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಿದೆ.

Continue Reading

LATEST NEWS

ಚಳಿ ಓಡಿಸಲು ಇದ್ದಿಲುಬೆಂಕಿ ಹಾಕಿಕೊಂಡು ಮಲಗಿದ್ದ ಯುವಕರು; ಮೂವರು ಸಾವು

Published

on

ಬೆಳಗಾವಿ: ರಾತ್ರಿ ಮಲಗುವ ವೇಳೆ ಚಳಿಯಿಂದ ಬೆಚ್ಚಗೆ ಇರಲು ರೂಮಿನಲ್ಲಿ ಹಾಕಿದ್ದ ಬೆಂಕಿಯ ಹೊಗೆಯಿಂದ ಮೂವರು ಯುವಕರು ಉಸಿರುಗಟ್ಟಿ ಸಾವನಪ್ಪಿದ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ. ಮಂಗಳವಾರ ಸಂಜೆ ಪಾಲಕರು ಇವರನ್ನು ಹುಡುಕುತ್ತ ಬಂದಾಗಲೇ ಘಟನೆ ಗೊತ್ತಾಗಿದೆ.


ಮೃತರನ್ನು ಅಮನ್‌ ನಗರದ ನಿವಾಸಿಗಳಾದ ರಿಹಾನ್ ಮತ್ತಿ (22), ಮೋಹಿನ್ ನಾಲಬಂದ (23) ಹಾಗೂ ಸರ್ಫರಾಜ್ ಹರಪ್ಪನಹಳ್ಳಿ (22)ಎಂದು ಗುರುತಿಸಲಾಗಿದೆ. ಇವರೊಂದಿಗೆ ಮಲಗಿದ್ದ ಶಾಹನವಾಜ್ (19) ಪ್ರಜ್ಞಾಹೀನವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ವರೂ ಸೇರಿ ಸೋಮವಾರ ಮಧ್ಯಾಹ್ನ ಯಾವುದೋ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ರಾತ್ರಿ ಚಳಿ ಹೆಚ್ಚಾಗಿದ್ದರಿಂದ ಮಲಗುವ ಕೋಣೆಯಲ್ಲಿ ಇದ್ದಿಲಿನ ಒಲೆಯಲ್ಲಿ ಬೆಂಕಿ ಹಾಕಿ ರೂಮಿನಲ್ಲಿ ಇಟ್ಟುಕೊಂಡಿದ್ದರು. ಅದೇ ಒಲೆಯಲ್ಲಿ ನಾಲ್ಕು ಸೊಳ್ಳೆ ನಿರೋಧಕ ಕಾಯಿಲ್‌ಗಳನ್ನು ಹಾಕಿದ್ದರು. ಮಲಗಿದ ರೂಮಿಗೆ ಕಿಟಕಿಗಳಿಲ್ಲ. ಬಾಗಿಲನ್ನು ಭದ್ರವಾಗಿ ಹಾಕಿಕೊಂಡಿದ್ದರು.

ಇದನ್ನೂ ಓದಿ: ವಿಷಕಾರಿ ಹಾವಿನ ಕಡಿತಕ್ಕೆ ಬಲಿಯಾದ ಮಹಿಳೆ

ನಿದ್ರೆಗೆ ಜಾರಿದ ಮೇಲೆ ಕೋಣೆಯ ಒಳಗೆ ಇದ್ದಿಲಿನ ಹೊಗೆ ದಟ್ಟವಾಗಿ ಆವರಿಸಿ, ಉಸಿರಾಟಕ್ಕೆ ಸಮಸ್ಯೆ ಆಗಿದೆ. ಆಕ್ಸಿಜನ್‌ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Continue Reading

LATEST NEWS

ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಬಿಡುಗಡೆಗೆ ಮುಹೂರ್ತ

Published

on

ಮಂಗಳೂರು: ಟೈಟಲ್ ನಿಂದಲೇ ಕುತೂಹಲ ಕೆರಳಿಸಿರುವ ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟರಾದ ಲಿಖಿತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಮೂರು ವರ್ಷಗಳ ಕಾಲ ಈ ಸಿನಿಮಾಕ್ಕೆ ದುಡಿದಿದ್ದು ಕಥೆ ತುಂಬಾ ಚೆನ್ನಾಗಿದೆ. ಒರಿಯರ್ದೊರಿ ಅಸಲ್, ಮದಿಮೆ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿ ಚಿತ್ರರಂಗದ ಜೀವನದಲ್ಲಿ ಇದೀಗ ನನ್ನ ಹೊಸ ಚಿತ್ರ ಹೊರಬರಲು ತಯಾರಾಗಿದೆ ಎಂದರು.

ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ”ಲಿಖಿತ್ ಶೆಟ್ಟಿ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ. ತುಳುನಾಡಿನಿಂದ ಕನ್ನಡ ಸಿನಿಮಾ ರಂಗದಲ್ಲಿ ಅನೇಕ ಮಂದಿ ಸಾಧನೆ ಮಾಡಿದ ಕಲಾವಿದರಿದ್ದಾರೆ. ಕನ್ನಡಿಗರು ಮತ್ತು ತುಳುವರು ಒಟ್ಟು ಸೇರಿ ಸಿರ್ಮಿಸಿರುವ ಸಿನಿಮಾ ಇದಾಗಿದ್ದು ಎಲ್ಲರೂ ಹೊಸಬರ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದರು.

ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ”ಫುಲ್ ಮೀಲ್ಸ್ ಸಿನಿಮಾ ಹೆಸರೇ ಹೇಳುವಂತೆ ಹಾಸ್ಯ, ಸುಮಧುರ ಪ್ರೇಮಕತೆ ಮತ್ತು ಮನೋರಂಜನೆಯ ಫುಲ್ ಮೀಲ್ಸ್ ಆಗಿದೆ. ಸಿನಿಮಾದ ಹಾಡುಗಳು ಮುದ ನೀಡುತ್ತಿದ್ದು ಸಿನಿಮಾವನ್ನು ಪ್ರೇಕ್ಷಕ ಇಷ್ಟಪಡಲು ಬೇಕಾದ ಎಲ್ಲ ಅಂಶಗಳು ಇದರಲ್ಲಿವೆ ಎಂದರು.

ಇದನ್ನೂ ಓದಿ: ಇನ್ಮುಂದೆ ಖುಷಿ ಶಿವು ಅಲ್ಲ….ಹೆಸರು ಬದಲಿಸಿಕೊಂಡ ‘ನೀನಾದೆ ನಾ’ ನಟಿ..!

ನಿರ್ದೇಶಕ ಎನ್.ವಿನಾಯಕ, ನಾಯಕಿ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮಾ ಸಿನಿಮಾ ಚಿತ್ರೀಕರಣದ ಕುರಿತು ತಮ್ಮ ಅನುಭವ ಹಂಚಿಕೊಂಡರು.

Continue Reading
Advertisement

Trending

Copyright © 2025 Namma Kudla News

You cannot copy content of this page