Connect with us

LATEST NEWS

ಗೀತಾ ಶಿವರಾಜ್‌ಕುಮಾರ್-ಮಧುಬಂಗಾರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದ ಕುಮಾರ್‌..! ಫೇಸ್‌ಬುಕ್‌ನಲ್ಲಿ ಬರೆದಿದ್ದೇನು ಗೊತ್ತಾ?

Published

on

ಶಿವಮೊಗ್ಗ:  ಶಿವಮೊಗ್ಗದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆ ಮಾಜಿ ಸಚಿವ ಕುಮಾರ್‌ ಬಂಗಾರಪ್ಪರವರು  ತನ್ನ ಸಹೋದರಿ ಕಾಂಗ್ರೆಸ್ ನ ಗೀತಾ ಶಿವರಾಜ್‌ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದರ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಗೀತಾ ಶಿವರಾಜ್‌ಕುಮಾರ್‌ ರವರು ಶಿವಮೊಗ್ಗದಿಂದ ಕಣಕ್ಕಿಳಿದಿದ್ದರು. ಆದರೆ ಬಿಜೆಪಿ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಈ ಹಿನ್ನೆಲೆ ನಿನ್ನೆ ಕುಮಾರ್‌ ಬಂಗಾರಪ್ಪರವರು ಫೇಸ್‌ಬುಕ್ ಪೇಜ್‌ನಲ್ಲಿ ಬರೆದು ಹಾಕಿದ್ದಾರೆ.

ಮುಂದೆ ಓದಿ..; ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಶಿವರಾಜ್‌ಕುಮಾರ್ ದಂಪತಿ

‘ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ಬಡವರ ಬಂಧು ಎಂದೇ ಸಾರ್ಥಕ ಬಿರುದು ಪಡೆದಿದ್ದ ಸಾರಕೊಪ್ಪೆ ಬಂಗಾರಪ್ಪನವರನ್ನು ನನ್ನ ತಂಗಿ ಹಾಗೂ ಸಹೋದರ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ. ಕೇವಲ ಅವರನ್ನು ಶಿವಮೊಗ್ಗ ಕ್ಷೇತ್ರಕ್ಕೆ ಮೀಸಲಿಟ್ಟಿರುವುದು ಇವರ ಸಂಕುಚಿತತೆ. ಬಂಗಾರಪ್ಪರವರನ್ನು ಕೇವಲ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಂಡಿದ್ದಾರೆ. ಆದ್ರೆ ಶಿವಮೊಗ್ಗದ ಜನ ಇವರಿಗೆ ತಕ್ಕ ಶಾಸ್ತಿಯನ್ನು ಮಾಡಿದ್ದಾರೆ. ಇವರು ಮಾಡಿರುವ ಅಪರಾಧಕ್ಕೆ ಶಿವಮೊಗ್ಗದ ಜನರಲ್ಲಿ ಕ್ಷಮಾಪಣೆ ಕೇಳಿ ಬರಲಿ.  ಇನ್ನು ನನ್ನ ತಮ್ಮ ಮಧು ಬಂಗಾರಪ್ಪ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಅವನನ್ನು ಸಂಪುಟದಿಂದ ವಜಾ ಮಾಡಬೇಕು. ಇನ್ನು ನನ್ನ ಭಾವ, ನನ್ನ ತಂಗಿಯ ಗಂಡ ಶಿವರಾಜ್‌ಕುಮಾರ್ ನಿರೋದ್ಯೋಗಿಯಾಗಬೇಕಿಲ್ಲ. ನಮ್ಮೂರು ಜಾತ್ರೆಯಲ್ಲಿ ಕುಣಿಯಲು ಈಗಲೇ ಅರ್ಜಿ ಸಲ್ಲಿಸಲಿ ಎಂದು ವ್ಯಂಗ್ಯವಾಗಿ ಬರೆದು ಆಕ್ರೋಶ ಹೊರಹಾಕಿದ್ದಾರೆ. ವರ ನಟ ಡಾ ರಾಜ್‌ಕುಮಾರ್‌ರವರ ಹೆಸರನ್ನು ಬಳಸಿಕೊಂಡು ಸ್ವಾರ್ಥ ಸಾಧಿಸಲು ಹೊರಟಿದ್ದರು. ಆದರೆ ಈಗ ಮಾಡಿದ್ದುನ್ನೊ ಮಹಾರಾಯ ಎಂಬಂತೆ ಆಗಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

DAKSHINA KANNADA

ಹಾವು ಕಡಿದು ಮಹಿಳೆ ಸಾ*ವು

Published

on

ಬೆಳ್ತಂಗಡಿ: ಹಾವು ಕಚ್ಚಿ ವೃದ್ಧ ಮಹಿಳೆ ಮೃ*ತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಾರ್ಯ ಗ್ರಾಮ ಎಂಬಲ್ಲಿ ನಡೆದಿದೆ.

ನಾರ್ಯ ನಿವಾಸಿ ಶಾಂತಾ (68) ಮೃ*ತಪಟ್ಟ ಮಹಿಳೆ. ಮನೆಯ ಹಿಂಬದಿಗೆ ಬಟ್ಟೆಯನ್ನು ಒಗೆಯಲು ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಇದ್ದ ಯಾವುದೋ ವಿಷದ ಹಾವು ಎಡಗೈ ಕಿರು ಬೆರಳಿಗೆ ಕಡಿದಿತ್ತು. ಮನೆ ಮದ್ದು ಮಾಡಿ ಬಳಿಕ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃ*ತಪಟ್ಟಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಂತಿ ಬಿದ್ದು ಸೂರಾಲು ಮೇಳದ ಯುವ ಯಕ್ಷಗಾನ ಕಲಾವಿದ ಜೀವಾಂತ್ಯ

ಪ್ರಸ್ತುತ ಬಿಸಿಲಿನ ಬೇಗೆಯನ್ನು ಸಹಿಸಲಾಗದೆ ತಂಪು ವಾತಾವರಣವನ್ನು ಹುಡುಕಿಕೊಂಡು ಹಾವುಗಳು ಮನೆಯೊಳಗೆ, ಹೂವಿನ ಕುಂಡಗಳಿಗೆ, ಕಿಟಿಕಿ, ಬಾಗಿಲುಗಳ ಸಂದು ಮತ್ತಿತರ ತಾಣಗಳಿಗೆ ಬರುತ್ತಿರುವುದು ಸಾಮಾನ್ಯ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

Continue Reading

LATEST NEWS

ಎಸ್‌. ಜೈಶಂಕರ್‌ಗೆ ಬುಲೆಟ್ ಪ್ರೂಫ್‌ ಕಾರು; ಹೇಗಿರಲಿದೆ ವಿದೇಶಾಂಗ ಸಚಿವರ ನೂತನ ಭದ್ರತಾ ವ್ಯವಸ್ಥೆ

Published

on

ಮಂಗಳೂರು/ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರೆದಿದ್ದು, ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹೌದು, ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರ ಭದ್ರತೆಯನ್ನು ಗೃಹ ಸಚಿವಾಲಯ ಹೆಚ್ಚಿಸಲಾಗಿದೆ. ಈಗಾಗಲೇ ಇರುವ ಝಡ್ ಭದ್ರತೆ ಜತೆಗೆ ಬುಲೆಟ್​ ಪ್ರೂಫ್​ ಕಾರು ಕೂಡ ಸರ್ಕಾರ ಒದಗಿಸಲಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ.

ಎಸ್ ಜೈಶಂಕರ್ ಅವರಿಗೆ ಈಗಾಗಲೇ ಗೃಹ ಸಚಿವಾಲಯವು Z- ವರ್ಗದ ಭದ್ರತೆಯನ್ನು ಹೊಂದಿದ್ದು, ಇದನ್ನು ಇದನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಮಾಂಡೋಗಳು ಒದಗಿಸುತ್ತಿದ್ದು, ರಕ್ಷಣೆಗಾಗಿ 33 ಕಮಾಂಡೋಗಳ ತಂಡವನ್ನು 24/7 ನಿಯೋಜಿಸಲಾಗಿದೆ.

ಪಹಲ್ಲಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂ‌ರ್ ನಂತರ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಮಿಲಿಟರಿ ಉದ್ವಿಗ್ನತೆಯ ನಡುವೆ ಭದ್ರತೆ ಬಿಗಿ ಗೊಳಿಸಲಾಗಿದೆ.

ಇದನ್ನೂ ಓದಿ: ‘ಆಪರೇಷನ್‌ ಸಿಂದೂರ್’ ನಂತರದ ಮುಂದಿನ ಕ್ರಮದ ಕುರಿತು ಇಂದು ಮಹತ್ವದ ಸಭೆ

ಹೇಗಿರಲಿದೆ ವಿದೇಶಾಂಗ ಸಚಿವರ ನೂತನ ಭದ್ರತಾ ವ್ಯವಸ್ಥೆ?
Z- ವರ್ಗದ ಭದ್ರತೆಯು ಭಾರತದಲ್ಲಿ ಮೂರನೇ ಅತ್ಯುನ್ನತ ಭದ್ರತೆಯಾಗಿದೆ. ಅದರಲ್ಲಿ 22 ಸೈನಿಕರಿರುತ್ತಾರೆ. ಇವರಲ್ಲಿ 4 ರಿಂದ 6 ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಸ್ಥಳೀಯ ಪೊಲೀಸರು ಸೇರಿದ್ದಾರೆ. ಇದು ಬುಲೆಟ್​ ಪ್ರೂಫ್​ ಕಾರನ್ನು ಸಹ ಹೊಂದಿದೆ. ಹೆಚ್ಚುವರಿಯಾಗಿ, ಬೆಂಗಾವಲು ಪಡೆಗಳನ್ನು ಸಹ ಒದಗಿಸಲಾಗುತ್ತದೆ. ಈ ಭದ್ರತೆಯನ್ನು ಹೆಚ್ಚಿನ ಭದ್ರತೆಯ ಅಗತ್ಯವಿರುವ ದೊಡ್ಡ ನಾಯಕರು ಮತ್ತು ಸೆಲೆಬ್ರಿಟಿಗಳಿಗೆ ನೀಡಲಾಗುತ್ತದೆ.

ವಿದೇಶಾಂಗ ಸಚಿವರಿಗೆ ಇರುವ ಬೆದರಿಕೆಯನ್ನು ಗುಪ್ತಚರ ಬ್ಯೂರೋ (ಐಬಿ) ನಿರ್ಣಯಿಸಿದ ನಂತರ ಅಕ್ಟೋಬರ್ 2023ರಲ್ಲಿ ಅವರ ಭದ್ರತೆಯನ್ನು Y- ವರ್ಗದಿಂದ Z- ವರ್ಗಕ್ಕೆ ಹೆಚ್ಚಿಸಲಾಗಿತ್ತು.

Continue Reading

LATEST NEWS

6 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್

Published

on

ನವದೆಹಲಿ: ಟೆಕ್ ದಿಗ್ಗಜ ಮೈಕ್ರೋಸಾಫ್ಟ್ 6,000 ಉದ್ಯೋಗಿಗಳನ್ನು ವಜಾಗೊಳಿಸಿದೆ.

ವಜಾಗೊಳಿಸುವಿಕೆಯು ಎಲ್ಲಾ ಹಂತಗಳು ಮತ್ತು ಭೌಗೋಳಿಕ ಪ್ರದೇಶಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಆದರೆ ನಿರ್ವಹಣಾ ಮಟ್ಟವನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಮಂಗಳವಾರ ಸೂಚನೆಗಳನ್ನು ಹೊರಡಿಸಲಾಗಿದೆ.

ಮೈಕ್ರೋಸಾಫ್ಟ್ ಎರಡು ವಾರಗಳ ಹಿಂದೆ ಜನವರಿಯಿಂದ ಮಾರ್ಚ್ ಅವಧಿಯ ದೃಢವಾದ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತು. ಇದು ತನ್ನ ಕೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ವ್ಯವಹಾರಗಳಲ್ಲಿ ಬಲವಾದ ಕಾರ್ಯಕ್ಷಮತೆಯಿಂದ ಪ್ರೇರಿತವಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page