Connect with us

LATEST NEWS

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸುತ್ತ ಮುತ್ತ ಪರಿಸರ ಸೂಕ್ಷ್ಮ ವಲಯವಾಗಿ ಘೋಷಣೆ

Published

on

ಉಡುಪಿ : ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಪರಿಸರ ಸೂಕ್ಷ್ಮ ವಲಯದ ಗಡಿ ಎಂದು ಗುರುತಿಸಿ ಆದೇಶಿಸಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವು ಪಶ್ಚಿಮಘಟ್ಟಗಳ ಹೃದಯಭಾಗದಲ್ಲಿರುವ ‘ಯುನೆಸ್ಕೋ’ ಮಾನ್ಯತೆ ಪಡೆದ ವಿಶ್ವದ ನೈಸರ್ಗಿಕ ಪರಂಪರೆಯ ತಾಣವಾಗಿದ್ದು, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಅವಾಸ ತಾಣವಾಗಿದೆ.

ಸಿಂಹ ಬಾಲದ ಕೋತಿ, ಮಲಬಾರ್ ಡ್ಯಾನ್ಸಿಂಗ್ ಕಪ್ಪೆ, ಸ್ಥಳೀಯ ಆರ್ಕಿಡ್‌ ಸಸ್ಯವರ್ಗ ಒಳಗೊಂಡ ಅಪರೂಪದ ಪ್ರಬೇಧಗಳಿಗೆ ನೆಲೆಯಾಗಿದೆ. ತುಂಗಾ, ಭದ್ರಾ, ನೇತ್ರಾವತಿಯಂತಹ ನದಿಗಳ ಮೂಲವಾಗಿದ್ದು, ಶೋಲಾ ಹುಲ್ಲುಗಾವಲು ಹೊಂದಿದೆ .ಸಂರಕ್ಷಿತ ಪ್ರದೇಶಗಳಲ್ಲಿ ತೊಂದರೆ ತಪ್ಪಿಸಲು ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯಗಳ ಸುತ್ತಲಿನ ಪರಿಸರವನ್ನು ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ.

ಇದರಿಂದ ಕಾಡಿಗೆ ರಕ್ಷಣೆ ಹೆಚ್ಚಾಗಲಿದ್ದು, ಮನುಷ್ಯ-ಪ್ರಾಣಿ ಸಂಘರ್ಷ ತಗ್ಗಲಿದೆ. ವಿವೇಚನೆ ಇಲ್ಲದ ಕೈಗಾರೀಕರಣ ತಪ್ಪಲಿದೆ. ಮುಖ್ಯವಾಗಿ ಸ್ಥಳೀಯ ಸಮುದಾಯದ ಚಟುವಟಿಕೆಗಳಿಗೆ ಯಾವ ತೊಂದರೆಯಾಗುವುದಿಲ್ಲ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಸಾಮಿಲ್‌, ಮಾಲಿನ್ಯಕಾರಕ ಕೈಗಾರಿಕೆ ಸ್ಥಾಪನೆ, ಪ್ರಮುಖ ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಯಂತಹ ದೊಡ್ಡ ಕೈಗಾರಿಕಾ ಚಟುವಟಿಕೆಗಳು ನಿಷೇಧಿತ ಪಟ್ಟಿಯಲ್ಲಿವೆ.

LATEST NEWS

ಒಂದೇ ದಿನ 3 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಬಂಧನ

Published

on

ರಾಮನಗರ: ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಎಸಗಿದ್ದ ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಪ್ರಭು(39), ವಸಂತಿ(37) ಮತ್ತು ಜ್ಯೋತಿ(32) ಬಂಧಿತ ಆರೋಪಿಗಳು.


ಮಾ.3ರಂದು ಕುದೂರು ಸಮೀಪದ ಕಳ್ಳಿಪಾಳ್ಯದಲ್ಲಿ ಮೂವರು ಕಾರಿನಲ್ಲಿ ಬಂದು ವಿಳಾಸ ಕೇಳುತ್ತಾ ಚೈನ್ ಕದ್ದು ಎಸ್ಕೇಪ್ ಆಗಿದ್ದರು. ಮುನೇಶ್ವರ ಸ್ವಾಮಿ ರಥೋತ್ಸವಕ್ಕೆ ಹೋಗ್ತಿದ್ದ ಭಕ್ತರ ಬಳಿ, ದೇವಸ್ಥಾನಕ್ಕೆ ಹೋಗುವ ದಾರಿ ಕೇಳಿ ಅವರ ಸರಗಳನ್ನೇ ಕದ್ದು ಪರಾರಿಯಾಗಿದ್ದರು.

ಈ ಕುರಿತು ಸಾರ್ವಜನಿಕರು ನೀಡಿದ ದೂರಿನ ಅನ್ವಯ ಕಾರ್ಯಚರಣೆ ನಡೆಸಿದ ಪೊಲೀಸರು ಕೇವಲ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ಹರಿಯಿತು ರಕ್ತದೋಕುಳಿ: ಅವಳಿ ಸಹೋದರಿಯ ಮೇಲೆ 40ಕ್ಕೂ ಹೆಚ್ಚು ಬಾರಿ ಇರಿದ ಕಿರಾತಕ ಸಹೋದರ!

ಬಂಧಿತರಿಂದ 112 ಗ್ರಾಂ ತೂಕದ ಮೂರು ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಒಂದು ವ್ಯಾಗನಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ. ಈ ಗ್ಯಾಂಗ್‌ ಒಟ್ಟು 7 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Continue Reading

LATEST NEWS

ಮನೆಯಲ್ಲೇ ಹರಿಯಿತು ರಕ್ತದೋಕುಳಿ: ಅವಳಿ ಸಹೋದರಿಯ ಮೇಲೆ 40ಕ್ಕೂ ಹೆಚ್ಚು ಬಾರಿ ಇರಿದ ಕಿರಾತಕ ಸಹೋದರ!

Published

on

ಮೊರಾದಾಬಾದ್: ಬ್ರೇಕಪ್ ಬಳಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಅವಳಿ ಸಹೋದರಿಯರಿಗೆ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ.


ಮೊರಾದಾಬಾದ್‌ನ ಮಜೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ಧಿ ವಿಹಾರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಹಾರ್ದಿಕ್, ತನ್ನ ಅವಳಿ ಸಹೋದರಿ ಹಿಮಶಿಖಾಳನ್ನು 40ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ ಮಾಡಿದ್ದಾನೆ ಇಬ್ಬರೂ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದು, ಹೋಳಿ ಆಚರಿಸಲು ಮನೆಗೆ ಬಂದಿದ್ದರು.

ಇತ್ತೀಚೆಗೆ ಹಾರ್ದಿಕ್ ತನ್ನ ಗೆಳತಿಯೊಂದಿಗೆ ಬ್ರೇಕ್ಅಪ್ ಮಾಡಿಕೊಂಡಿದ್ದನು. ತನ್ನ ಪ್ರೀತಿ ವಿಫಲವಾಗಲು ತನ್ನ ತಾಯಿ ಮತ್ತು ಸಹೋದರಿಯೇ ಕಾರಣ ಎಂದು ಆತ ನಂಬಿದ್ದನು. ಈ ದ್ವೇಷ ಹಾಗೂ ಬ್ರೇಕ್ಅಪ್‌ನಿಂದ ಉಂಟಾದ ಖಿನ್ನತೆಯಿಂದಾಗಿ ಆತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಮನೆಯ ಬೆಡ್‌ರೂಮ್‌ನಿಂದ ಅಡುಗೆ ಮನೆಯವರೆಗೆ ರಕ್ತದ ಕಲೆಗಳು ಹರಡಿಕೊಂಡಿದ್ದವು. ಹಾರ್ದಿಕ್ ತನ್ನ ತಾಯಿಯ ಮೇಲೆಯೂ ಮಾರಣಾಂತಿಕ ದಾಳಿ ಮಾಡಿದ್ದು, ತಾಯಿಯ ಕಿರುಚಾಟ ಕೇಳಿ ಪಕ್ಕದ ಮನೆಯವರು ಒಳಗೆ ಓಡಿ ಬಂದು ದೃಶ್ಯ ನೋಡಿ ದಿಗ್ಭ್ರಮೆಗೊಂಡರು.

ಇದನ್ನೂ ಓದಿ: ಕಲ್ಲಿನಿಂದ ಜಜ್ಜಿ ಮಹಿಳೆ ಕೊಲೆ ಕೇಸ್: ಲಿಂಗಸೂಗೂರು ನ್ಯಾಯಾಲಯದಿಂದ ಆರೋಪಿಗೆ ಜೀವಾವಧಿ ಶಿಕ್ಷೆ

ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಹಿಮ್ಶಿಖಾ ದಾರಿ ಮಧ್ಯೆಯೇ ಮೃತಪಟ್ಟಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರದಂದು(ಮಾ.7) ಬಂಧಿಸಿದ್ದಾರೆ.

Continue Reading

LATEST NEWS

ಗುರ್ಮೆ VS ಸೊರಕೆ : ದೇವರ ಅಂಗಳ ತಲುಪಿದ ರಾಜಕೀಯ

Published

on

ಉಡುಪಿ : ಕಾಪು ಕ್ಷೇತ್ರದಲ್ಲಿ ರಾಜಕೀಯ ದೇವರ ಅಂಗಳ ತಲುಪಿದೆ. ತನ್ನ ಮೇಲೆ ನಡೆಯುತ್ತಿರುವ ವೈಯಕ್ತಿಕ ದಾಳಿಯಿಂದ ಬೇಸರಗೊಂಡು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ದೈವದ ಮೊರೆ ಹೋಗಿದ್ದಾರೆ. ವೈಯಕ್ತಿಕ ನಿಂದನೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ ವಿರುದ್ಧ ಬೇಸರ  ವ್ಯಕ್ತಪಡಿಸಿದ್ದಾರೆ.

ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರಕ್ಕೆ ಭೇಟಿ ನೀಡಿ ಶಾಸಕರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಳ್ಳು ಸಾಯಬೇಕು ಸತ್ಯ ಗೆಲ್ಲಬೇಕು. ಪ್ರತಿ ಬಾರಿ ತನ್ನ ಕುಟುಂಬದ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಾರೆ. ನಾನು ಯಾವುದೇ ಅನ್ಯಾಯ ಮಾಡಿಲ್ಲ. ಮಗನ ಆರ್ಥಿಕ ವ್ಯವಹಾರದ ಬಗ್ಗೆ ಸೊರಕೆ ಆರೋಪದಿಂದ ಮನನೊಂದು ದೇವರಿಗೆ ಶರಣಾಗಿದ್ದೇನೆ. ನನ್ನ ಕುಟುಂಬ ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ. ರಾಜಕೀಯ ನನಗೆ ಅನಿವಾರ್ಯ ಅಲ್ಲ. ಜನರಿಗೆ ನಾನು ಸತ್ಯ ದರ್ಶನ ಮಾಡಬೇಕಾಗಿತ್ತು. ತಪ್ಪು ಸಂದೇಶ ಹೋಗಬಾರದು ಎಂದು ದೇವರಿಗೆ ಮೊರೆ ಹೋಗಿದ್ದೇನೆ. ನಾನು ಮಾಡಿರುವುದು ಪ್ರಾರ್ಥನೆ ಹೊರತು ಆಣೆ ಪ್ರಮಾಣ ಅಲ್ಲ ಎಂದಿದ್ದಾರೆ.

ರಾಜಕೀಯ ನನಗೆ ಗಂಜಿ ಕೇಂದ್ರ ಅಲ್ಲ :

ನನಗೆ ಬದುಕಿಗೆ ಬೇಕಾದಷ್ಟು ಸಂಪತ್ತು ಭಗವಂತ ಕೊಟ್ಟಿದ್ದಾನೆ. ನಾನು 40 ವರ್ಷದಿಂದ ಉದ್ಯಮ ನಡೆಸುತ್ತಿದ್ದೇನೆ. ರಾಜಕೀಯ ನನಗೆ ಗಂಜಿ ಕೇಂದ್ರ ಅಲ್ಲ. ಮಾರಿಯಮ್ಮನ ಮುಂದೆ ಸತ್ಯ ಸಮರ್ಪಿಸಿದ್ದೇನೆ. ಸೊರಕೆಗೆ ತಾಯಿ ಬುದ್ಧಿ ಕೊಡಲಿ ಎಂದು ಹೇಳಿದರು.

ಇದನ್ನೂ ಓದು : ಕಾಪು ಕಾಂಗ್ರೆಸ್ ಮುಖಂಡರ ನಿವಾಸದಲ್ಲಿ ಕಳವು ಪ್ರಕರಣ; ಇಬ್ಬರ ಬಂಧನ

ಪೇಟೆ ಬಿಟ್ಟು ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಕೂಡ ಅವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಕಾರ್ಯಕರ್ತರು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page