Connect with us

LATEST NEWS

KSRTC ಗುತ್ತಿಗೆ ಬಸ್ ದರದಲ್ಲೂ ಏರಿಕೆ: ಪ್ರತಿ ಕಿ.ಮೀ.ಗೆ 7 ರೂ. ಹೆಚ್ಚಳ

Published

on

ಬೆಂಗಳೂರು: ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಿದ ಕೆಲವೇ ದಿನಗಳಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಗುತ್ತಿಗ ಆಧಾರದ ಮೇಲೆ ಪಡೆಯುವ ಬಸ್ ಗಳ ಪ್ರಯಾಣ ದರವನ್ನೂ ಹೆಚ್ಚಳ ಮಾಡಿದೆ.

ಪ್ರವಾಸ, ತೀರ್ಥ ಯಾತ್ರೆ, ರಾಜಕೀಯ ರ್ಯಾಲಿ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಕೆಎಸ್ಆರ್’ಟಿಸಿ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಈ ಬಸ್ ಗಳ ದರವನ್ನೂ ಇದೀಗ ಪರಿಷ್ಕರಿಸಲಾಗಿದೆ. ಇಷ್ಟು ದಿನ ಪ್ರತಿ ಕಿಮೀ.ಗೆ 47 ರೂ ದರದಲ್ಲಿ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಈ ದರನ್ನು 54 ರೂ.ಗೆ ಪರಿಷ್ಕರಿಸಲಾಗಿದ್ದು, ಇದರ ಪರಿಣಾಮ ಪ್ರತಿ ಕಿ.ಮೀ.ಗೆ 7 ರೂ. ಹೆಚ್ಚಳವಾಗಿದೆ. ಕರ್ನಾಟಕದ ಹೊರಗಿನ ಸೇವೆಗಳಿಗೆ, ಪ್ರತಿ ಕಿ.ಮೀ.ಗೆ 50 ರೂ.ನಿಂದ 57 ರೂ.ಗೆ ಹೆಚ್ಚಿಸಲಾಗಿದೆ.

ರಾಜ್ಯದೊಳಗೆ ಪ್ರತಿ ಕಿ.ಮೀ.ಗೆ 52 ರೂ.ನಂತೆ ಕಾರ್ಯನಿರ್ವಹಿಸುತ್ತಿದ್ದ ಅಶ್ವಮೇಧ ಸೇವೆಗಳನ್ನು ಪ್ರತಿ ಕಿ.ಮೀ.ಗೆ 58 ರೂ.ಗೆ ಹೆಚ್ಚಿಸಲಾಗಿದೆ, ಇದರಂತೆ ಪ್ರತಿ ಕಿ.ಮೀ.ಗೆ 6 ರೂ. ಹೆಚ್ಚಳವಾಗಿದೆ. ರಾಜಹಂಸ, ಐರಾವತ, ಪಲ್ಲಕ್ಕಿ, ಅಂಬಾರಿ, ಮಿಡಿ ಬಸ್, ಎಸಿ ಅಲ್ಲದ ಸ್ಲೀಪರ್, ಫ್ಲೈ ಬಸ್ ಮತ್ತು ಇತರ ಎಲ್ಲಾ ಬಸ್ ಸೇವೆಗಳ ದರವನ್ನೂ ಹೆಚ್ಚಳ ಮಾಡಲಾಗಿದೆ.

ಮುಂಗಡವಾಗಿ ಸೇವೆಗಳನ್ನು ಬುಕ್ ಮಾಡಿದವರಿಗೆ ಹಳೆಯ ದರಗಳ ಪ್ರಕಾರ ಶುಲ್ಕ ವಿಧಿಸಲಾಗುತ್ತದೆ. ಅಶ್ವಮೇಧದ ದರಗಳು ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 58 ರೂ. ಮತ್ತು ರಾಜ್ಯದ ಹೊರಗೆ 61 ರೂ. ಇರಲಿದೆ. ರಾಜಹಂಸ ಬಸ್ ಸೇವೆ ದರ ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 59 ರೂ. ಮತ್ತು ಹೊರಗೆ 63 ರೂ., ಪಲ್ಲಕ್ಕಿ ಬಸ್‌ಗಳ ದರ ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 80 ರೂ. ಮತ್ತು ರಾಜ್ಯದ ಹೊರಗೆ 85 ರೂ ಇರಲಿದೆ.

ಜನವರಿ 7 ರಂದು ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದ್ದು, ಡೀಸೆಲ್ ದರ ಹೆಚ್ಚಳ ಮತ್ತು ನೌಕರರ ವೇತನದಲ್ಲಿನ ಹೆಚ್ಚಳದಿಂದಾಗಿ ಕಾರ್ಯಾಚರಣೆಯ ವೆಚ್ಚದಲ್ಲಿ ಹೆಚ್ಚಳ ಮಾಡಲಾಗಿದೆ. ನಿಯಮಿತ ದೈನಂದಿನ ಕಾರ್ಯಾಚರಣೆಗಳಿಂದ ಬರುವ ಆದಾಯದ ಜೊತೆಗೆ, ಒಪ್ಪಂದದ ಸೇವೆಗಳು ಬಸ್ ನಿಗಮಕ್ಕೆ ಆದಾಯದ ಪ್ರಮುಖ ಮೂಲಗಳಾಗಿವೆ. ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

DAKSHINA KANNADA

ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಆರೋಪ; ಆರೋಪಿಯ ಬಂಧನ

Published

on

ಮಂಗಳೂರು : ವಿದ್ಯಾರ್ಥಿಗಳಿಗೆ ಮಾ*ದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಮಂಗಳೂರಿನ ಕದ್ರಿ ಠಾಣೆಯ ಪೊಲೀಸರು ಶನಿವಾರ(ಜ.17) ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಮುತೊಲಪುರಂ ನಿವಾಸಿ 20 ವರ್ಷದ ಜೂಡ್ ಮಾಥ್ಯೂ ಬಂಧಿತ ಆರೋಪಿ. ಆತನಿಂದ 5.20 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಕೃ*ತ್ಯಕ್ಕೆ ಬಳಸಿದ  ಬೈಕ್ ಸಮೇತ ಒಟ್ಟು 70 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

ಮಂಗಳೂರಿನ ಪದವು ಗ್ರಾಮದ ಕೈಲಾಸ ಕಾಲನಿ ಸಮೀಪ ಯುವಕನೋರ್ವ ಮಾ*ದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

 

Continue Reading

LATEST NEWS

ವಿದ್ಯುತ್ ಕಂಬಕ್ಕೆ ಕಾರು ಡಿ*ಕ್ಕಿ; ಇಬ್ಬರು ಸಾ*ವು

Published

on

ಮಂಗಳೂರು/ಭಟ್ಕಳ :  ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿ*ಕ್ಕಿಯಾದ  ಪರಿಣಾಮ ಇಬ್ಬರು ಸಾ*ವನ್ನಪ್ಪಿದ ಘಟನೆ ಭಟ್ಕಳದ ವೆಂಕಟಾಪುರದ ಬಳಿ ನಡೆದಿದೆ.

ಭಟ್ಕಳದ ಆಜಾದ್ ನಗರ ನಿವಾಸಿ 15 ವರ್ಷದ ಬಿಲಾಲ್  ಹಾಗೂ 20 ವರ್ಷದ ಆಯಾನ್ ಮೃ*ತ ದುರ್ದೈ*ವಿಗಳು.

ಬಿಲಾಲ್ ಸ್ಥಳದಲ್ಲೇ ಸಾ*ವನ್ನಪ್ಪಿದ್ದು, ಚಾಲನೆ ಮಾಡುತ್ತಿದ್ದ ಆಯಾನ್ ಗಾ*ಯಗೊಂಡಿದ್ದ. ಆತನನ್ನು ಉಡುಪಿಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.‌

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪ*ಘಾತ ನಡೆದಿದೆ. ಅಪ*ಘಾತ ಸಂಬಂಧ ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BIG BOSS

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

Published

on

BBk12 :  ಕನ್ನಡ ಬಿಗ್ ಬಾಸ್ ಸೀಸನ್ 12 ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಹೊರ ಬೀಳಲಿದೆ. ಬಿಗ್ ಬಾಸ್ ಫಿನಾಲೆ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸತತ 12 ಸೀಸನ್‌ಗಳನ್ನು ಕಿಚ್ಚ ಸುದೀಪ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸೀಸನ್ 12 ಮುಕ್ತಾಯಗೊಳ್ಳುವ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಸೋಸಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಸ್ಪರ್ಧಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಕಿಚ್ಚ ಪೋಸ್ಟ್ ಏನು?

ಕಿಚ್ಚ ತನ್ನಫೋಟೋವೊಂದನ್ನು ಹಂಚಿಕೊಂಡಿದ್ದಾರೆ.  ಇಂದು ಸೂರ್ಯ ಮುಳುಗುವ ವೇಳೆಗೆ ಬಿಗ್‌ಬಾಸ್ ಸೀಸನ್ – 12 ಮುಕ್ತಾಯಗೊಳ್ಳಲಿದೆ. ಈ ಸೀಸನ್‌ನ ಬೆಳವಣಿಗೆ ಮತ್ತು ಅದ್ಭುತ ಪ್ರಯಾಣ ಮುಂದಿನ ಪೀಳಿಗೆಗೆ ಸಾಕ್ಷಿಯಾಗಿದೆ. ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ವೀಕ್ಷಕರಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳು.

ಇದನ್ನೂ ಓದಿ :  ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

ಎಲ್ಲಾ ಸ್ಪರ್ಧಿಗಳಿಗೆ ಮತ್ತು ಸೀಸನ್‌ನ ವಿಜೇತರಿಗೆ ಹೃತ್ತೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ಬಿಗ್‌ಬಾಸ್ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಗ್‌ಬಾಸ್ ಕಾರ್ಯಕ್ರಮವಿಲ್ಲ. ಹೊಸ ಸೀಸನ್ – 13 ಪ್ರಾರಂಭವಾಗುವವರೆಗೆ ಬಿಗ್‌ ಬಾಸ್ ವಿಶ್ರಾಂತಿ ಪಡೆಯಲು ಗೌರವಯುತವಾಗಿ ಮುಖ್ಯದ್ವಾರವನ್ನು ಮುಚ್ಚುತ್ತೇವೆ ಎಂದು ಬರೆದುಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page