Connect with us

LATEST NEWS

ತುಳುನಾಡಿನ ಕೃಷ್ಣ ಶಿಲೆಗೆ ಅಯೋಧ್ಯೆಯಲ್ಲಿ ರಾಮನಾಗುವ ಸುಯೋಗ..!  

Published

on

ಎಲ್ಲಿಯ ಅಯೋಧ್ಯೆ, ಎಲ್ಲಿಯ ಕಾರ್ಕಳದ ಈದು? ದೈವ ಸಂಕಲ್ಪಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ  ಬಹುಷ ಯಾರಿಗೂ ಬೇಡವಾಗಿರಕ್ಕಿಲ್ಲ..!

ಉಡುಪಿ : ಎಲ್ಲಿಯ ಅಯೋಧ್ಯೆ, ಎಲ್ಲಿಯ ಕಾರ್ಕಳದ ಈದು? ದೈವ ಸಂಕಲ್ಪಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ  ಬಹುಷ ಯಾರಿಗೂ ಬೇಡವಾಗಿರಕ್ಕಿಲ್ಲ..!

ನೇಪಾಳದ ಗಂಡಕೀ ನದಿಯಿಂದ ಬಂದ ಸಾಲಿಗ್ರಾಮ ಶಿಲೆಗೆ ರಾಮನಾಗಲು ಯೋಗವಿಲ್ಲ ಎಂದಾದಾಗ ಪ್ರಭು ಶ್ರೀ ರಾಮಚಂದ್ರನ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಚಂದ್ರನ ಮೂರ್ತಿಯಾಗುವ ಯೋಗ ಕೂಡಿ ಬಂದಿದ್ದು ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿ ಯವರ ಭೂಮಿಯಲ್ಲಿದ್ದ ಜಗತ್ತಿನ ಅತ್ಯಂತ ಶ್ರೇಷ್ಠ ಶಿಲೆಗೆ.

ಬಹುಶಃ ಯಾವುದೋ ಶಾಪಗ್ರಸ್ತ ದೇವತೆ ಶಿಲೆಯ ರೂಪದಲ್ಲಿ ಯುಗಗಳಿಂದ ರಾಮದರ್ಶನಕ್ಕಾಗಿ ತಪಸ್ಸು ಮಾಡುತ್ತಿತ್ತೋ ಏನೋ ಅನ್ನಿಸುತ್ತದೆ.

ಕಲ್ಕುಡನ ಪಾದ ಸ್ಪರ್ಶದಿಂದ ಪುನೀತವಾದ ಕಾರ್ಕಳದ ಪುಣ್ಯ ಮಣ್ಣಿನಲ್ಲಿ ಬ್ರಹ್ಮಬೈದರ್ಕಳ ಆರಾಧನೆ ಮಾಡುವ ಕುಟುಂಬವೊಂದರ ಭೂಮಿಯಲ್ಲಿದ್ದ ತುಳುನಾಡಿನ ಕೃಷ್ಣ ಶಿಲೆಗೆ ರಾಮನಾಗುವ ಯೋಗ ಒಲಿದು ಬಂತು’ ಎನ್ನುವುದು ಯೋಗಾಯೋಗವಲ್ಲದೆ ಮತ್ತೇನು.? ಎಂಬ ಪ್ರಶ್ನೆ ತುಳುನಾಡ ಆಸ್ತಿಕರದ್ದು.

LATEST NEWS

ಭ್ರಷ್ಟ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ?

Published

on

ಭ್ರಷ್ಟಾಚಾರ ಎಂಬುವುದು ಜಗತ್ತಿನಲ್ಲಿ ಪರಿಹರಿಸಲಾಗದೇ ಉಳಿದಿರುವ ಮಾರಾಕ ಖಾಯಿಲೆಯಾಗಿ ಮಾರ್ಪಟ್ಟಿದೆ. ಜನರಿಂದ ಹಣ ಪಡೆದು ಜನರಿಗೆ ಮೋಸ ಮಾಡುವ ಭ್ರಷ್ಟ ಪ್ರಕರಣಗಳು ವಿಶ್ವದಾದ್ಯಂತ ವ್ಯಾಪಿಸಿದೆ. ಜಗತ್ತಿನ ಯಾವ ದೇಶದಲ್ಲಿ ಭ್ರಷ್ಟಾಚಾರ ಜಾಸ್ತಿ ಇದೆ  ಮತ್ತು ಭಾರತದ ಸ್ಥಾನ ಎಷ್ಟು ಎಂದು ನೋಡೋಣ.

ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಬುಧವಾರ (ಫೆ.12) 2024ನೇ ಸಾಲಿನ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) ರ್ಯಾಂಕಿಗ್ ವರದಿಯನ್ನು ಬಿಡುಗಡೆಗೊಳಿಸಿದ್ದು, ಜಗತ್ತಿನ ಅತೀ ಕಡಿಮೆ ಭ್ರಷ್ಟಾಚಾರದಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನ ಪಡೆದಿದೆ.

ಜಾಗತಿಕವಾಗಿ ಸಾರ್ವಜನಿಕ (ಸರ್ಕಾರಿ ವಲಯ) ವಲಯಗಳಲ್ಲಿನ ಭ್ರಷ್ಟಾಚಾರ ಪ್ರಮಾಣ ಮಟ್ಟದ ಆಧಾರದ ಮೇಲೆ ಭ್ರಷ್ಟಾಚಾರದ ಸೂಚ್ಯಂಕ ಮತ್ತು ಶ್ರೇಣಿಯನ್ನು ನಿಗದಿಪಡಿಸಲಾಗುತ್ತದೆ ಎಂದು ವರದಿ ವಿವರಿಸಿದೆ.

ಸಿಪಿಐ ಪ್ರಕಾರ, 2024ರ ಭ್ರಷ್ಟಾಚಾರ ಸೂಚ್ಯಂಕದಲ್ಲಿ 180 ದೇಶಗಳಲ್ಲಿ ಭಾರತ 96ನೇ ಸ್ಥಾನ ಪಡೆದಿದೆ. ಇತ್ತೀಚಿನ ವರದಿಯ ಪ್ರಕಾರ, ಭಾರತದ ಅಂಕವು ಒಂದು ಪಾಯಿಂಟ್‌ನಿಂದ 38ಕ್ಕೆ ಇಳಿದಿದೆ. ಆದರೆ, 2023ರಲ್ಲಿ ಅದು 39 ಆಗಿತ್ತು ಎಂಬುದು ಗಮನಿಸಬೇಕಾದ ಅಂಶ. ತಜ್ಞರು ಮತ್ತು ಉದ್ಯಮಿಗಳ ಪ್ರಕಾರ, ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಆಧರಿಸಿ ಸಿಪಿಐ 180 ದೇಶಗಳನ್ನು ಶ್ರೇಣೀಕರಿಸಿದೆ.

ಇದನ್ನೂ ಓದಿ: ಸಾಲ ವಸೂಲಿಗೆ ಬಂದ ಬ್ಯಾಂಕ್ ಉದ್ಯೋಗಿಯನ್ನೇ ಮದುವೆಯಾದ ವಿವಾಹಿತ ಮಹಿಳೆ !

ಈ ಪಟ್ಟಿಯಲ್ಲಿ ಶ್ರೇಯಾಂಕಗಳನ್ನು ಶೂನ್ಯದಿಂದ 100 ಅಂಕಗಳವರೆಗೂ ಕೊಡಲಾಗಿದೆ. ಇದರಲ್ಲಿ ಶೂನ್ಯ ಅಧಿಕ ಭ್ರಷ್ಟ ಎಂದು ಸೂಚಿಸಿದರೆ, 100 ತುಂಬಾ ಸ್ವಚ್ಛ ಎಂದು ತಿಳಿಸಿದೆ. ಈ ಪಟ್ಟಿಯಲ್ಲಿ ಭಾರತದ ಒಟ್ಟಾರೆ ಅಂಕ 38, 2023ರಲ್ಲಿ 39 ಅಂಕ ಮತ್ತು 2022ರಲ್ಲಿ 40 ಅಂಕ ಹಾಗೂ 2023ರಲ್ಲಿ ಭಾರತ 93ನೇ ಸ್ಥಾನದಲ್ಲಿದ್ದು, 2024ರಲ್ಲಿ 96ನೇ ಸ್ಥಾನಕ್ಕೆ ಕುಸಿದಿದೆ.

ಅಭಿವೃದ್ದಿ ಹೊಂದಿದ ದೇಶಗಳ ಸ್ಥಾನ

ಜಗತ್ತಿನ ದೊಡ್ಡಣ್ಣ ಅಮೆರಿಕ 69ನೇ ಸ್ಥಾನದಿಂದ 65ಕ್ಕೆ ಕುಸಿದಿದೆ. ಫ್ರಾನ್ಸ್ 67ನೇ ಸ್ಥಾನ, ಜರ್ಮನಿ 75ನೇ ಸ್ಥಾನ, ಚೀನಾ 76ನೇ ಸ್ಥಾನದಲ್ಲಿದೆ.

ಕಡಿಮೆ ಭ್ರಷ್ಟಾಚಾರ ಇರುವ ದೇಶಗಳು

ಡೆನ್ಮಾರ್ಕ್ (90) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಕನಿಷ್ಠ ಭ್ರಷ್ಟ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದರ ನಂತರದಲ್ಲಿ ಫಿನ್‌ಲ್ಯಾಂಡ್ (88) ಮತ್ತು ಸಿಂಗಾಪುರ (84), ಇನ್ನು ಸ್ವಚ್ಛ ಸಾರ್ವಜನಿಕ ವಲಯವನ್ನು ಹೊಂದಿರುವ ಟಾಪ್ ಹತ್ತರ ಪಟ್ಟಿಯಲ್ಲಿ ಇತರ ದೇಶಗಳಾದ ನಾರ್ವೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ವೀಡನ್, ಲಕ್ಸೆಂಬರ್ಗ್ ಮತ್ತು ನೆದರ್‌ಲ್ಯಾಂಡ್ಸ್ ಸೇರಿವೆ.

ಹೆಚ್ಚು ಭ್ರಷ್ಟಾಚಾರ ಇರುವ ದೇಶಗಳು

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ವರದಿ ಪ್ರಕಾರ, ದಕ್ಷಿಣ ಸೂಡಾನ್ 8 ಅಂಕಗಳೊಂದಿಗೆ ಅತೀ ದೊಡ್ಡ ಭ್ರಷ್ಟಾಚಾರದ ದೇಶವಾಗಿದ್ದು, 180ನೇ ಸ್ಥಾನ ಪಡೆದಿದೆ. ಸೋಮಾಲಿಯಾ 179ನೇ ಸ್ಥಾನ, ವೆನಿಜುವೆಲಾ 178ನೇ ಸ್ಥಾನ ಪಡೆದಿದೆ. ಸಿರಿಯಾ 177ನೇ ಸ್ಥಾನ, ಯೆಮೆನ್, ಲಿಬಿಯಾ, ಏರಿಟ್ರಿಯಾ,  ನಿಕಾರಗುವಾ 172ನೇ ಸ್ಥಾನ, ಈಕ್ವಟೋರಿಯಲ್ 173ನೇ ಸ್ಥಾನಗಳಲ್ಲಿದೆ.

Continue Reading

FILM

ಮತ್ತೆ ಹೆಣ್ಣು ಮಗು ಹುಟ್ಟಬಹುದೆಂಬ ಭಯ…! ವಿವಾದಕ್ಕೆ ಕಾರಣವಾಯಿತು ನಟ ಚಿರಂಜೀವಿ ಹೇಳಿಕೆ

Published

on

ಮಂಗಳೂರು/ನವದೆಹಲಿ : ಬ್ರಹ್ಮ ಆನಂದಂ ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ನೀಡಿದ ಹೇಳಿಕೆಗಳು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಹೌದು, ಈ ಸಂದರ್ಭ ಅವರು ಮನೆಯ ತುಂಬ ಹೆಣ್ಣು ಮಕ್ಕಳೇ ತುಂಬಿದ್ದಾರೆ. ನಮ್ಮ ವಂಶವನ್ನು ಉದ್ಧಾರ ಮಾಡಲು ಮೊಮ್ಮಗ ಬೇಕಿತ್ತು ಎಂದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗ್ರಾಸವಾಗಿದೆ.

ಚಿರಂಜೀವಿ ಹೇಳಿದ್ದೇನು?

ಮಾತಿನ ಭರದಲ್ಲಿ ಚಿರಂಜೀವಿ ಗಂಡು ಮಗು ಅಂದ್ರೆ ತನಗೆ ಮೊಮ್ಮಗ ಬೇಕು ಎಂಬ ಇಂಗಿತ ಹೊರ ಹಾಕಿದ್ದಾರೆ.  ನನ್ನ ಮನೆಯಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದಾರೆ. ಹೀಗಾಗಿ ನನಗೆ ಮನೆಯಲ್ಲಿರುವಂತೆ ಭಾಸವಾಗುವುದಿಲ್ಲ. ಬದಲಿಗೆ ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವಂತೆ, ನಾನು ವಾರ್ಡನ್ ಆಗಿರುವಂತೆ ಭಾಸವಾಗುತ್ತದೆ. ನಮ್ಮ ಕುಟುಂಬದ ವಂಶವನ್ನು ಮುಂದುವರಿಸಲು ಮೊಮ್ಮಗ ಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಮನೆಯಲ್ಲಿ ಇರುವಾಗ ಮೊಮ್ಮಕ್ಕಳು ಸುತ್ತುವರೆದಿರುವಂತೆ ಭಾಸವಾಗುವುದಿಲ್ಲ. ನನ್ನ ಸುತ್ತಲೂ ಹೆಂಗಸರೇ ಸುತ್ತುವರೆದಿರುವುದರಿಂದ ನಾನು ಲೇಡೀಸ್ ಹಾಸ್ಟೆಲ್ ವಾರ್ಡನ್ ಎಂದು ಅನಿಸುತ್ತದೆ. ನಮ್ಮ ವಂಶವು ಮುಂದುವರಿಯಲು ಈ ಬಾರಿಯಾದರೂ ಚರಣ್‌ಗೆ ಗಂಡು ಮಗುವಾಗಲಿ ಎಂದು ನಾನು ಹಾರೈಸುತ್ತಲೇ ಇದ್ದೇನೆ. ಆದರೆ ಅವನಿಗೂ ಹೆಣ್ಣು ಮಗುವಾಯಿತು ಎಂದಿದ್ದಾರೆ.

ನನ್ನ ಮಗ ರಾಮ್ ಚರಣ್‌ಗೆ ಮತ್ತೊಂದು ಹೆಣ್ಣು ಮಗು ಹುಟ್ಟಬಹುದು ಎಂಬ ಭಯವಿದೆ. ಅವನಿಗೆ ಮತ್ತೆ ಹೆಣ್ಣು ಮಗುವಾದರೆ… ಎಂದು ನಾನು ಹೆದರುತ್ತೇನೆ ಎಂದು ಚಿರಂಜೀವಿ ಹೇಳಿದ್ದು ಇದು ವಿವಾದಕ್ಕೆಡೆ ಮಾಡಿಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಕೆಳಮಟ್ಟದ ಯೋಚನೆ, ರೀಲ್‌ನಲ್ಲಿ ಹೀರೋ ರಿಯಲ್‌ನಲ್ಲಿ ವಿಲನ್, ಇದೊಂದು ಕೆಟ್ಟ ಮೆಂಟಾಲಿಟಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ಗುಟ್ಟಾಗಿ ಎಂಗೇಜ್ಮೆಂಟ್…! ದರ್ಶನ್ ಬಗ್ಗೆ ಸ್ವಾಂಡಲ್‌ವುಡ್ ಕ್ವೀನ್ ಹೇಳಿದ್ದೇನು?

ಚಿರಂಜೀವಿ ಅವರಿಗೆ ಶ್ರೀಜಾ ಕೊನಿಡೇಲಾ, ಸುಶ್ಮಿತಾ ಕೊನಿಡೇಲಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಬ್ಬರಿಗೂ ಎರಡೆರಡು ಹೆಣ್ಣು ಮಕ್ಕಳಿವೆ. ಶ್ರೀಜಾಗೆ ನವೀಕ್ಷಾ,  ನಿವೃತ್ತಿ , ಸುಶ್ಮಿತಾಗೆ ಸಮರ,  ಸಂಹಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಮಗ ರಾಮ್ ಚರಣ್ ಪತ್ನಿ ಉಪಾಸನಾ 2023ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕ್ಲಿಂಕರಾ ಎಂದು ಹೆಸರಿಡಲಾಗಿದೆ.

 

Continue Reading

LATEST NEWS

ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುತ್ತಿರುವಾಗ ಹೃದಯಾಘಾತವಾಗಿ ವ್ಯಕ್ತಿ ಸಾವು

Published

on

ತುಮಕೂರು: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶದ ನಾನಾ ಕಡೆಯಿಂದ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಅದೇ ರೀತಿ ಪುಣ್ಯ ಸ್ನಾನ ಮಾಡುತ್ತಿರುವಾಗ ಹೃದಯಾಘಾತದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಿರಾ ತಾಲೂಕಿನ ಬರಗೂರು ಮೂಲದ ನಾಗರಾಜ್ (57) ಎಂದು ಗುರುತಿಸಲಾಗಿದೆ.

ಎಲ್‌ಎನ್‌ಪಿ ಬ್ರಿಕ್ಸ್ನ ಮಾಲೀಕರಾದ ನಾಗರಾಜು ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಮಂಗಳವಾರ ಸಾಯಂಕಾಲ ತ್ರಿವೇಣಿ ಸಂಗಮದಲ್ಲಿ ಸಂಧ್ಯಾ ವಂದನೆ ಮಾಡಿ ಪುಣ್ಯಸ್ನಾನ ಮಾಡುತ್ತಿರುವಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page