Connect with us

LATEST NEWS

ಶ್ರೀಮಂತಿಕೆ ಆಸೆ ತೋರಿಸಿ ಬಾಲಕನಿಗೆ ಬೆತ್ತಲೆ ಪೂಜೆ-ಮೂವರು ಅರೆಸ್ಟ್

Published

on

ಕೊಪ್ಪಳ: ಸಾಲಗಾರ ತಂದೆಯ ಸಂಕಷ್ಟ ನಿವಾರಣೆ ಹಾಗೂ ಭಾರಿ ಸಂಪತ್ತಿನ ಗಳಿಕೆ ಆಮಿಷವೊಡ್ಡಿದ ಕಿಡಿಗೇಡಿಗಳು, 15 ವರ್ಷದ ಬಾಲಕನನ್ನು ನಂಬಿಸಿ ಬೆತ್ತಲೆ ಪೂಜೆ ಮಾಡಿರುವ ಅಮಾನವೀಯ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.


ತಾಲ್ಲೂಕಿನ ಗ್ರಾಮವೊಂದರ 15ವರ್ಷದ ಬಾಲಕನಿಗೆ ಕಿರುಕುಳ ನೀಡಿದ ಆರೋಪ ಆಧರಿಸಿ ಅದೇ ಗ್ರಾಮದ ಶರಣಪ್ಪ ಮೆತ್ತಗಲ್ ಅವರ ವಿರುದ್ಧ ಕೊಪ್ಪಳದ ಗ್ರಾಮೀಣ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಿಮ್ಮಸಾಗರ ಗ್ರಾಮದ ವಾಲ್ಮೀಕಿ ಭವನದಲ್ಲಿ ಜೂ. 16ರಂದು ಇಂಥ ಪೂಜೆ ಜರುಗಿದೆ.

ಇದು ವೈರಲ್ ಆದ ಬಳಿಕ ಖುದ್ದು ಪೊಲೀಸರೇ ಗ್ರಾಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆ ಆರೋಪಿಗಳು ಈ ಬಾಲಕನನ್ನು ಜಲಜೀವನ್ ಮಿಷನ್ ಕಾಮಗಾರಿಯಡಿ ಕೂಲಿ ಕೆಲಸ ನಿರ್ವಹಿಸಲು ಕುಟುಂಬದವರ ವಿರೋಧದ ನಡುವೆಯೂ ಹುಬ್ಬಳ್ಳಿಗೆ ಕರೆದೊಯ್ದಿದ್ದರು.

ಬಡತನದ ಬೇಗೆಯಲ್ಲಿದ್ದ ಕುಟುಂಬ ಒತ್ತಾಯಕ್ಕೆ ಮಣಿದು ಮಗನನ್ನು ಹುಬ್ಬಳ್ಳಿಗೆ ಕಳಿಸಿಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಇದ್ದಾಗ ‘ನಿಮ್ಮ ತಂದೆ ಮನೆ ಕಟ್ಟಲು ಸಾಲ ಮಾಡಿದ್ದಾರೆ. ಊರಲ್ಲಿಯೂ ಸಾಕಷ್ಟು ಸಾಲ ಮಾಡಿದ್ದಾರೆ.

ನಿನಗೆ ಬೆತ್ತಲೆ ಪೂಜೆ ಮಾಡಿದರೆ ನಿಮ್ಮ ಅಪ್ಪನಿಗೆ ಕೊಟ್ಟ ಸಾಲವನ್ನು ಸಾಲಗಾರರು ಮರಳಿ ಕೇಳುವುದಿಲ್ಲ. ನೀವು ಏಕಕಾಲಕ್ಕೆ ಶ್ರೀಮಂತರಾಗುತ್ತೀರಿ ಎಂದು ಪುಸಲಾಯಿಸಿ ಬೆತ್ತಲೆ ಪೂಜೆ ಮಾಡಿಸಿದ್ದಾರೆ.

ಬೆತ್ತಲೆಯ ಬಾಲಕನ ಮೈಗೆ ವಿಭೂತಿ, ಕುಂಕುಮ, ಕೊರಳಲ್ಲಿ ಹೂವಿನ ಹಾರ ಹಾಕಿ ದೇವಸ್ಥಾನಕ್ಕೆ ಕಳಿಸಿದ್ದಾರೆ. ಕೃತ್ಯ ಎಸಗಿದವರಲ್ಲಿ ಇಬ್ಬರು ಬಾಲಕನ ಸಮುದಾಯದವರೇ ಆಗಿದ್ದು ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದೆ.

DAKSHINA KANNADA

ಬೆಳ್ತಂಗಡಿ : ಟಿಸಿ ಬಳಿಯಲ್ಲಿ ಮೆಸ್ಕಾಂ ಸಿಬ್ಬಂದಿಯ ಮೃ*ತದೇಹ ಪತ್ತೆ

Published

on

ಬೆಳ್ತಂಗಡಿ : ಮೆಸ್ಕಾಂ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಲೈನ್ ಮ್ಯಾನ್ ಆಗಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರ ಮೃ*ತದೇಹ ಟ್ರಾನ್ಸ್ ಫಾರ್ಮರ್ ಒಂದರ ಬಳಿ ಪತ್ತೆಯಾಗಿದೆ.  ಬುಧವಾರ(ಮಾ.26) ಸಂಜೆ ವೇಳೆಯಲ್ಲಿ ಮೃ*ತದೇಹ ಪತ್ತೆಯಾಗಿದ್ದು, ಸಾ*ವು ಆಕಸ್ಮಿಕವೋ ಅಥವಾ ದು*ರ್ಘಟನೆಯೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಬೆಳ್ತಂಗಡಿ ತಾಲೂಕಿನ ನಾರವಿಯ ಅಡಿಂಜೆ ಎಂಬಲ್ಲಿ ಈ ಘಟನೆ ನಡೆದಿದ್ದು, ಮೃ*ತ ವ್ಯಕ್ತಿ ಕಿಟ್ಟಿ ಎಂದೇ ಫೇಮಸ್ ಆಗಿದ್ದ  ಸುಧಾಕರ್(50) ಎಂಬವರದ್ದಾಗಿದೆ. ನಾರಾವಿಯ ತುಂಬೆ ಗುಡ್ಡೆ ಎಂಬಲ್ಲಿಯ ನಿವಾಸಿಯಾಗಿದ್ದ ಸುಧಾಕರ್ ಕಳೆದ 27 ವರ್ಷಗಳಿಂದ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬುಧವಾರ ಸಂಜೆ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದ ಇವರು ಅಲ್ಲೇ ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ : ಕೋಟ : ಅಜ್ಜಿಯ ಚಿನ್ನದ ಸರ ಕದ್ದಿದ್ದ ಆರೋಪಿ ಅರೆಸ್ಟ್

ಕೈನಲ್ಲಿ ಸಣ್ಣದೊಂದು ಗಾ*ಯ ಹೊರತು ಪಡಿಸಿದರೆ ಬೇರೆ ಯಾವುದೇ ಅನುಮಾನಾಸ್ಪದವಾದ ಕುರುಹು ಇಲ್ಲವಾಗಿದೆ. ಹಾಗಂತ ನಿನ್ನೆ ಸಂಜೆಯ ವೇಳೆ ಪರಿಸರದಲ್ಲಿ ಗುಡುಗು ಹಾಗು ಸಿಡಿಲು ಕೂಡ ಇತ್ತು. ಹಾಗಾಗಿ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದಾಗ ಸಿಡಿಲು ಬಡಿಯಿತಾ ಅಥವಾ ವಿದ್ಯುತ್ ಪ್ರವಹಿಸಿತಾ ಅನ್ನೋ ಅನುಮಾನವೂ ಇದೆ.

ಸದ್ಯ ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾ*ವಿಗೆ ನಿಖರ ಕಾರಣ ಗೊತ್ತಾಗಲಿದೆ.

 

Continue Reading

LATEST NEWS

ಕೋಟ : ಅಜ್ಜಿಯ ಚಿನ್ನದ ಸರ ಕದ್ದಿದ್ದ ಆರೋಪಿ ಅರೆಸ್ಟ್

Published

on

ಕೋಟ : ಮನೆ ಮಂದಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಬಾಗಿಲು ಮುರಿದು ಮನೆಗೆ ನುಗ್ಗಿ ವೃದ್ಧೆಯ ಚಿನ್ನ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಂದಾಪುರದ ಮಣೂರು ನಿವಾಸಿ ಪ್ರವೀಣ್‌  ಕುಮಾರ್‌ ಶೆಟ್ಟಿ (38) ಬಂಧಿತ ಆರೋಪಿ. ಕೋಟ ಪೊಲೀಸರು ತೆಕ್ಕಟ್ಟೆ ಬಳಿ ಆತನನ್ನು  ಬಂಧಿಸಿ ಆತನಿಂದ 25 ಗ್ರಾಂ ತೂಕದ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ?

ಮಾರ್ಚ್‌ 20 ರಂದು ರಾತ್ರಿ ಮಣೂರು ಕೊಯ್ಯೂರು ಎಂಬಲ್ಲಿ ಈ ಕಳವು ಪ್ರಕರಣ ನಡೆದಿತ್ತು. ಧಾರವಾಡದಲ್ಲಿ ಉದ್ಯಮಿಯಾಗಿರುವ ಶ್ರೀಧರ್‌ ಅವರು ಕುಟುಂಬದವರ  ಜತೆ ಸಮೀಪದ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ 92 ವರ್ಷ ಪ್ರಾಯದ ವೃದ್ಧೆಯ ಸರವನ್ನು ಆರೋಪಿ ಕಳವು ಮಾಡಿದ್ದ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ತನಿಖೆ  ಆರಂಭಿಸಿದ ಪೊಲೀಸರಿಗೆ ಕ್ರಿಮಿನಲ್‌ ಹಿನ್ನೆಲೆ ಇರುವ ಪ್ರವೀಣ್‌ ಕುಮಾರ್‌ ಶೆಟ್ಟಿ ಜಾತ್ರೆಗೆ ತೆರಳಿರುವ ವಿಷಯ ಗೊತ್ತಾಗಿತ್ತು. ಆತನನ್ನು ಕರೆಸಿ ವಿಚಾರಣೆ ನಡೆಸಿ ಮೊಬೈಲ್‌ ನೆಟ್‌ ವರ್ಕ್‌ ಮತ್ತಿತರ  ಸಾಕ್ಷ್ಯಗಳ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಆತನೇ ಕಳವು ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿತ್ತು.

ಆರೋಪಿ ಪ್ರವೀಣ್‌ 10 ವರ್ಷಗಳ ಹಿಂದೆ ಹೈದರಾಬಾದ್‌ ನಲ್ಲಿ ವಾಸವಾಗಿದ್ದು, ಅಲ್ಲಿಯೂ ಆತನ ಮೇಲೆ ಅನೇಕ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಆತ ತನ್ನ ಹುಟ್ಟಿದ ಊರು ಮಣೂರಿಗೆ ವಾಪಾಸಾಗಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಮಂಗಳೂರು : ಸೋಶಿಯಲ್ ಮೀಡಿಯಾ ನಂಬಿ ಮೋಸ ಹೋದ ವ್ಯಕ್ತಿ ಕಳೆದುಕೊಂಡ ಹಣ ಎಷ್ಟು ಗೊತ್ತಾ ?

ಕೋಟ ಪೊಲೀಸ್ ಠಾಣೆಯ ಸಬ್ ಇನ್ಸ್‌ ಪೆಕ್ಟರ್‌ಗಳಾದ ರಾಘವೇಂದ್ರ ಸಿ ಮತ್ತು ಸುಧಾ ಪ್ರಭು, ಜಯಪ್ರಕಾಶ್, ಎ.ಎಸ್.ಐ. ಮತ್ತು ಹೆಡ್ ಕಾನ್ಸ್ ಟೆಬಲ್ ರೇವತಿ, ಕೃಷ್ಣ, ಶ್ರೀಧರ್ ಹಾಗೂ ಕಾನ್ಸ್‌ ಟೇಬಲ್ ರಾಘವೇಂದ್ರ ಮತ್ತು ವಿಜಯೇಂದ್ರ ಅವರ ತಂಡ ಈ ಕಾರ್ಯಾಚರಣೆ ನಡೆಸಿತು.

Continue Reading

LATEST NEWS

ಬಾಲಿವುಡ್ ನಟಿ ಐಶ್ವರ್ಯಾ ರೈ ಕಾರಿಗೆ ಡಿಕ್ಕಿ ಹೊಡೆದ ಬಸ್

Published

on

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಕಾರಿಗೆ ಹಿಂಬದಿಯಿಂದ ಬಸ್ ಒಂದು ಡಿಕ್ಕಿ ಹೊಡೆದ ಘಟನೆ ಮುಂಬೈನಲ್ಲಿ ನಡೆದಿದೆ.

ಅದೃಷ್ಟವಶಾತ್‌ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಪಘಾತದ ಸಂದರ್ಭದಲ್ಲಿ ಐಶ್ವರ್ಯ ರೈ ಕಾರಿನಲ್ಲಿ ಇರಲಿಲ್ಲ. ಆದರೆ ನಂಬರ್‌ ಪ್ಲೇಟ್‌ ಪರಿಶೀಲಿಸಿದಾಗ ಅದು ಐಶ್ವರ್ಯ ರೈ ಅವರದ್ದೇ ಕಾರು ಎಂಬುದು ತಿಳಿದಿದೆ.

ಅಪಘಾತ ದೃಶ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಕಾರು ಅಪಘಾತದ ಬಳಿಕ ಅಮಿತಾಬ್ ಬಚ್ಚನ್ ಅವರ ನಿವಾಸದ ಬೌನ್ಸರ್ ಬಸ್ ಚಾಲಕನಿಗೆ ಕಪಾಳಕ್ಕೆ ಬಾರಿಸಿದ್ದಾನೆ ಎಂದು ಬೆಸ್ಟ್‌ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.

ಒಂದಿಷ್ಟು ಹೈಡ್ರಾಮಾ ಬಳಿಕ ಬೌನ್ಸರ್‌ ಪೊಲೀಸರ ಎದುರು ಚಾಲಕನಿಗೆ ಕ್ಷಮೆ ಕೋರಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page