Connect with us

BIG BOSS

ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ

Published

on

ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಕನ್ನಡ ಫಿನಾಲೆಗೆ ದಿನಗಣನೆ ಶುರುವಾಗಿದೆ. ಮುಂದಿನ ವಾರ ಅದ್ದೂರಿ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್ ಅವರು 11 ಸೀಸನ್‌ಗಳ ಕಾಲ ಬಿಗ್ ಬಾಸ್ ಕನ್ನಡವನ್ನು ನಿರೂಪಿಸಿದ ನಂತರ ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

ಬಿಗ್ ಬಾಸ್ ಕನ್ನಡ-11 ಆರಂಭವಾದ ಕೆಲ ವಾರಗಳ ಬಳಿಕ ಸುದೀಪ್ ಅವರು ಇದು ಬಿಗ್ ಬಾಸ್ ನಿರೂಪಕನಾಗಿ ನನ್ನ ಕೊನೆಯ ಸೀಸನ್ ಎಂದು ಟ್ವೀಟ್ ಮಾಡಿದ್ದರು. ವೀಕ್ಷಕರು ಕನ್ನಡ ಬಿಗ್ ಬಾಸ್ ನೋಡುವುದಕ್ಕೆ ಒಂದು ಪ್ರಮುಖ ಕಾರಣವೇ ಕಿಚ್ಚವೆಂದರೆ ತಪ್ಪಾಗದು. ಆದರೆ ಅವರು ನಿರೂಪಣೆಗೆ ಗುಡ್ ಬೈ ಹೇಳುತ್ತಿರುವುದು ದೊಡ್ಡ ಶಾಕಿಂಗ್ ಸಂಗತಿ ಆಗಿದೆ.

ಸುದೀಪ್ ಅವರ ಬಳಿ ‘ಮ್ಯಾಕ್ಸ್’ ಸಿನಿಮಾದ ಪ್ರಚಾರದ ವೇಳೆ ಹಲವು ಬಾರಿ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದರ ಬಗ್ಗೆಯೇ ಕೇಳಲಾಗಿತ್ತು. ಎಲ್ಲದಕ್ಕೂ ಹೊಸಬರು ಬರಲಿ ಎಂದು ಹೇಳಿ, ತಾವು ನಿರೂಪಣೆಗೆ ಮತ್ತೆ ಬರುವುದಿಲ್ಲವೆನ್ನುವ ರೀತಿಯಲ್ಲೇ ಕಿಚ್ಚ ಉತ್ತರಿಸಿದ್ದರು.

ಇದನ್ನೂ ಓದಿ: ಗೌತಮಿ ಬಳಿಕ ಮನೆಯಿಂದ ಹೊರಬಂದ ಸ್ಪರ್ಧಿ ಇವರೇನಾ?

ಇದೀಗ ಬಿಗ್ ಬಾಸ್ ಕೊನೆಯ ವೀಕೆಂಡ್ ಶೋ ಮುಗಿದ ಬಳಿಕ ಸುದೀಪ್ ಅವರು ಮತ್ತೊಮ್ಮೆ ಬಿಗ್ ಬಾಸ್ ಗೆ ಗುಡ್ ಬೈ ಹೇಳುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕಿಚ್ಚನ ಟ್ವೀಟ್
ಬಿಗ್ ಬಾಸ್‌ನ ಕಳೆದ 11 ಸೀಸನ್‌ಗಳಿಂದ ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ಮುಂದೆ ಬರುವ ಫಿನಾಲೆಯಲ್ಲಿ ನಾನು ಬಿಗ್ ಬಾಸ್ ನಿರೂಪಕನಾಗಿ ಕೊನೆಯ ಬಾರಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ನಿಮ್ಮೆಲ್ಲರನ್ನು ರಂಜಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿ ಇದೆ. ಈ ಅವಕಾಶಕ್ಕಾಗಿ ಕಲರ್ಸ್ ಕನ್ನಡಕ್ಕೆ ಧನ್ಯವಾದ ಎಂದಿದ್ದಾರೆ.

BIG BOSS

ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

Published

on

ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಅವರ ಹೆಸರು ಇನ್ನಷ್ಟು ಪ್ರಸಿದ್ಧಿಯಾಗುತ್ತದೆ. ದಿನಕ್ಕೊಂದು ಹೊಸ ಹೊಸ ಆಫರ್‌ಗಳು ಬರುತ್ತಲೇ ಇರುತ್ತದೆ. ಹೀಗಾಗಿ ಅದೆಷ್ಟೋ ಜನರು ಬಿಗ್‌ಬಾಸ್ ಮನೆಗೆ ನನಗೂ ಹೋಗಲು ಅವಕಾಶ ಸಿಗುತ್ತಿದ್ದರೆ ಒಳ್ಳೆಯದಿತ್ತು ಎಂದು ಬಯಸುತ್ತಾರೆ.

ಇನ್ನು ಬಿಗ್‌ಬಾಸ್ ಮನೆಗೆ ಹೋದವರಿಗೆ ಮೊದಲೇ ಪೇಮೆಂಟ್ ವಿಷಯವನ್ನು ಹೇಳುತ್ತಾರೆ. ಈ ಮೊದಲೇ ಹೆಸರು ಗಳಿಸಿದವರಿಗೆ ಸ್ವಲ್ಪ ಜಾಸ್ತಿ ಹಣವಿರುತ್ತದೆ. ಪ್ರತಿವಾರಕ್ಕೆ ಇಂತಿಷ್ಟು ಸಂಭಾವನೆ ಎಂದು ಅವರಿಗೆ ಸಿಗುತ್ತದೆ. ಅಲ್ಲದೇ ಬಿಗ್‌ಬಾಸ್ ಗೆದ್ದರೆ 50 ಲಕ್ಷ ಹಣವಿರುತ್ತದೆ. ಇದೀಗ ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಯಾರು ಗೊತ್ತಾ..?

 

ಹೌದು, ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆದವರು ಪುತ್ತೂರಿನ ಧನ್‌ರಾಜ್ ಆಚಾರ್ಯ. ಒಂದು ವಾರಕ್ಕೆ 30 ಸಾವಿರ ಸಂಭಾವನೆ ಸಿಗುತ್ತಿತ್ತು. ಬಿಗ್‌ಬಾಸ್ ಮನೆಯಲ್ಲಿ ಧನರಾಜ್ ಅವರು ಕೊನೆಯವರೆಗೂ ಇದ್ದರು. ಗ್ರ್ಯಾಂಡ್ ಫಿನಾಲೆಗೆ ಹೋಗುವ ಮೊದಲು ಎಲಿಮಿನೇಟ್ ಆದರು.

ಅಲ್ಲದೇ ಬಿಗ್‌ಬಾಸ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿದ್ದು ಸತ್ಯ ಧಾರಾವಾಹಿಯ ಗೌತಮಿ ಜಾದವ್ ಎಂದು ತಿಳಿದುಬಂದಿದೆ. ಬಿಗ್ ಬಾಸ್‌ ಮನೆಯಲ್ಲಿ ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಅವರ ಸ್ನೇಹ ಎಂಥದ್ದು ಎಲ್ಲರಿಗೂ ತಿಳಿದಿದೆ. ಇಬ್ಬರು ಕೂಡ ಜೀವಕ್ಕೆ ಜೀವದಂತೆ ಇದ್ದರು. ಹಾಗೆಯೇ ತನ್ನ ಕಾಮಿಡಿ ಮಾತುಗಳ ಮೂಲಕ ಧನ್‌ರಾಜ್ ವೀಕ್ಷಕರನ್ನು ಮನೋರಂಜಿಸುತ್ತಿದ್ದರು.

Continue Reading

BIG BOSS

ಹನುಮಂತನಿಗೆ SSLC ಅಲ್ಲಿ ಸಿಕ್ಕಿರೋ ಅಂಕ ಎಷ್ಟು ಗೊತ್ತಾ..?

Published

on

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಟೈಟಲ್ ಗೆದ್ದ ಹನುಮಂತ ಇದೀಗ ಕನ್ನಡಿಗರ ಮನೆಮಾತಾಗಿದ್ದಾನೆ. ಈ ಮೊದಲು ಹಲವು ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದರು. ಬಳಿಕ ಅವರಿಗೆ ‘ಬಿಗ್ ಬಾಸ್’ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಅವರ ಸರಳತೆ, ನೇರ ನಡೆ-ನುಡಿಗೆ, ಮತ್ತೆ ಮನಸ್ಸಿಗೆ ನಾಡಿನ ಜನ ಫಿದಾ ಆಗಿದ್ದಾರೆ. ಈ ರಿಯಾಲಿಟಿ ಶೋ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.

ಬಿಗ್‌ಬಾಸ್ ಬಳಿಕ ಹನುಮಂತ ಅವರಿಗೆ ಸಾಕಷ್ಟು ರಿಯಾಲಿಟಿ ಶೋಗಳ ಆಫರ್ ಬಂದಿದೆ. ಅಲ್ಲದೇ ಸಿನಿಮಾದಲ್ಲೂ ಆಫರ್ ಬಂದಿರುವುದು ವಿಶೇಷವೇ ಸರಿ. ಆದರೆ ಸಿನಿಮಾಗಳಿಗೆ ಮಾತ್ರ ಹನುಮಂತ ಡೊಂಟ್ ಕೇರ್ ಎಂದಿದ್ದಾನೆ. ಎಲ್ಲ ಬೆಳವಣಿಗೆಗಳ ನಡುವೆಯೂ ಹನುಮಂತು ಅವರ ವಿದ್ಯಾಭ್ಯಾಸ ಏನು ಎಂಬುದು ಚರ್ಚೆಯಾಗುತ್ತಿದೆ.

ಇವರ ಸಾಧನೆ ಅಂತಿಂತದ್ದಲ್ಲ. ಸಾಧನೆ ಹಿಂದೆ ಪರಿಶ್ರಮವೂ ಇದೆ. ಅಲ್ಲದೇ ಅವರ ಕಲಿಕೆಯ ಬಗ್ಗೆಯೂ ಸಾಕಷ್ಟು ಜನರು ಕೇಳಿಕೊಂಡಿದ್ದಾರೆ. ಹನುಮಂತ ಏನು ಓದಿದ್ದಾರೆ ಎಂದು ನೋಡುವುದಾದರೆ ಅವರು ಎಸ್ ಎಸ್ ಎಲ್ ಸಿ ಮಾಡಿದ್ದಾರೆ. ಹಾಗಿದ್ರೆ ಹನುಮಂತ ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕ ಎಷ್ಟು? ಇಲ್ಲಿದೆ ನೋಡಿ.

ಹಾವೇರಿಯ ಚಿಲ್ಲೂರು ಬಡ್ನಿ ಶಾಲೆಯಲ್ಲಿ ಹನುಮಂತು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. 2020-21ನೇ ಸಾಲಿನಲ್ಲಿ ನಡೆದ SSLC ಪರೀಕ್ಷೆಯಲ್ಲಿ 625 ಅಂಕಕ್ಕೆ 532 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರಂತೆ.

ಈತನ ಓದು, ಕಲಿಕೆ ಹಾಗೂ ಗುಣದ ಬಗ್ಗೆ ಶಾಲಾ ಶಿಕ್ಷಕರು ಹೊಗಳುತ್ತಿದ್ದಾರೆ. ಹನುಮಂತನ ಬಗ್ಗೆ ಶಿಕ್ಷಕರಿಗೂ ಹೆಮ್ಮೆ ಇದೆ. ಇದೀಗ ಹನುಮಂತ ಎಸ್‌ಎಸ್‌ಎಲ್‌ಸಿಯಲ್ಲಿ ತೆಗೆದುಕೊಂಡ ಮಾರ್ಕ್ಸ್‌ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

Continue Reading

BIG BOSS

ಬಿಗ್‌ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರ ಆರೋಗ್ಯ ವಿಚಾರಿಸಲು ಬಂದ ಚೈತ್ರಾ ಕುಂದಾಪುರ

Published

on

ಬೆಂಗಳೂರು: ಬಿಗ್‌ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ್ದಾರೆ. ಇವರನ್ನು ನೋಡಲು ಅನೇಕರು ಧಾವಿಸುತ್ತಿದ್ದಾರೆ. ಹಾಗೆಯೇ ನಿನ್ನೆಯ ದಿ ಬಿಗ್‌ಬಾಸ್ ಚೈತ್ರಾ ಕುಂದಾಪುರ ಆಸ್ಪತ್ರೆಯಲ್ಲಿ ಗೋಲ್ಡ್ ಸುರೇಶ್ ಅವರನ್ನು ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿ ಅವರ ತಲೆ ಸವರಿ ಸಮಾಧಾನದ ಮಾತನ್ನು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ಆಸ್ಪತ್ರೆ ಬೆಡ್ ನಲ್ಲಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು. ಈಗ ಚೈತ್ರ ಜೊತೆ ಮಾತನಾಡ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್, ಬೇಗ ಹುಷಾರಾಗಿ ಬನ್ನಿ ಅಂತ ಕಮೆಂಟ್ ಹಾಕಿದ್ದಾರೆ. ಅಲ್ಲದೆ ಚೈತ್ರ, ತಾಯಿಯ ಹೃದಯ ಹೊಂದಿದ್ದಾರೆಂದು ಬರೆದಿದ್ದಾರೆ.

ಸದ್ಯ ಗೋಲ್ಡ್ ಸುರೇಶ್ ಅವರು ಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಅವರ ಕಾಲಿಗೆ ಪೆಟ್ಟಾಗಿತ್ತು. ಹಾಗಾಗಿ ಅವರಿಗೆ ಕೆಲವು ಬಿಗ್‌ಬಾಸ್ ಟಾಸ್ಕ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಕಾಲು ನೋವು ಹೆಚ್ಚಾಗಿದ್ದರಿಂದ ಸುರೇಶ್ ಅವರಿಗೆ ಸರ್ಜರಿ ಅಗತ್ಯ ಇದೆ ಎಂದು ವೈದ್ಯರು ಸೂಚಿಸಿದ್ದಾರೆ.

ಡಾಕ್ಟರ್ ಸಲಹೆ ಮೇರೆಗೆ ಗೋಲ್ಡ್ ಸುರೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿದೆ. ಎರಡು ದಿನಗಳ ಬಳಿಕ ಅವರು ಡಿಸ್ಚಾರ್ಜ್​ ಆಗಿ ಮನೆಗೆ ಮರಳುವ ನಿರೀಕ್ಷೆ ಇದೆ.

Continue Reading
Advertisement

Trending

Copyright © 2025 Namma Kudla News

You cannot copy content of this page