Connect with us

LIFE STYLE AND FASHION

ಮುತ್ತಿನಂತ ಮುತ್ತಿಗಾಗಿ ಈ ದಿನ; ಚುಂಬನದಿಂದ ಏನೆಲ್ಲಾ ಹೆಲ್ತ್ ಬೆನಿಫಿಟ್ ಇದೆ ಗೊತ್ತಾ ?

Published

on

ಪ್ರೇಮಿಗಳ ದಿನಕ್ಕೆ ಕೇವಲ ಗಂಟೆಗಳಷ್ಟೇ ಬಾಕಿ ಇದೆ. ಪ್ರೇಮಿಗಳ ವಾರದ ಏಳನೇಯ ದಿನವಾದ ಈ ದಿನ (ಫೆ.13) ಮುತ್ತಿನ ದಿನವಾಗಿದೆ. ಈ ದಿನ ಚುಂಬನದ ಮೂಲಕ ಪ್ರೇಮಿಗಳು ತಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಬಹುದು. ಚುಂಬಿಸುವ ಮೂಲಕ ಪ್ರೀತಿಯ ಭಾವನೆ ಜೊತೆಗೆ ಕಾಳಜಿ, ಆರೈಕೆ, ಆಸರೆ ಹಾಗೂ ಭರವಸೆಯನ್ನು ವ್ಯಕ್ತಪಡಿಸಬಹುದಾಗಿದೆ. ಸಿಹಿ ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನದಲ್ಲಿ ಒಂದಾಗಿದ್ದು, ದಾಂಪತ್ಯ ಜೀವನವು ಸುಖಕರವಾಗಿ ಸಾಗಬೇಕಾದರೆ ಬಿಸಿ ಅಪ್ಪುಗೆಯ ಜೊತೆಗೆ ಸಿಹಿ ಮುತ್ತು ಸುರಕ್ಷತೆಯ ಭಾವ ನೀಡುತ್ತದೆ. ಈ ಕಿಸ್ ಡೇ ಆಚರಿಸುವ ಮುನ್ನ ಈ ದಿನದ ಆಚರಣೆ ಹಾಗೂ ಮಹತ್ವ ತಿಳಿದುಕೊಳ್ಳುವುದು ಉತ್ತಮ.

ಇತಿಹಾಸ :

ಕಿಡ್ ಡೇ ಯಾವಾಗ? ಯಾರಿಂದ ? ಹುಟ್ಟಿಕೊಂಡಿತ್ತು ಎನ್ನುವುದಕ್ಕೆ ಎಲ್ಲಿಯೂ ನಿಖರ ದಾಖಲೆಗಳಿಲ್ಲ. ಆದರೆ 20ನೇ ಶತಮಾನದ ಅಂತ್ಯದಲ್ಲಿ ಬಹಳ ಈ ಕಿಸ್ ಡೇ ಜನಪ್ರಿಯವಾಗಿತ್ತು. ತಮ್ಮ ಪ್ರೀತಿ ವ್ಯಕ್ತಪಡಿಸುವ ಒಂದು ಭಾಗವಾಗಿ ಪ್ರಸ್ತುತ ಆಚರಣೆಯಲ್ಲಿದೆ. ಮುತ್ತು ಭಾವನೆಯನ್ನು ವ್ಯಕ್ತಪಡಿಸಲಾಗದೆ ಇರುವ ಸ್ಥಿತಿಯಲ್ಲೂ ನಮ್ಮ ಮೂಲಕ ಸಂಗಾತಿ/ಪ್ರೇಮಿಗೆ ಸಿಗುವಂತಹ ಭಾವನೆಯಾಗಿದೆ. ಚುಂಬನ ಎಂಬುದು ಎಲ್ಲರಲ್ಲೂ ಒಮ್ಮೆಯಾದರು ಕಾಡುವ ಮಧುರವಾದ ಭಾನೆಯಾಗಿರುತ್ತೆ. ಪರಿಸ್ಪರ ಚುಂಬನವು ವ್ಯಕ್ತಿಯ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದಂತೆ.

ಚುಂಬನ ಎಂಬುವುದು ಕೆಲವು ಸೆಕೆಂಡ್‌ನಿಂದ ಗಂಟೆಗಳ ಕಾಲ ನಡೆಯುವ ಸಿಹಿಯಾದ ಅನುಭವ. ಇನ್ನು ಸುದೀರ್ಘವಾಗಿ ಚುಂಬಿಸಿ ದಾಖಲೆಗಳ ಬರೆದವರೂ ಇದ್ದಾರೆ. ಇತಿಹಾಸದಲ್ಲಿ ಅತಿ ದೀರ್ಘವಾಗಿ ಅಂದರೆ ಬರೋಬ್ಬರಿ 58 ಗಂಟೆ 35 ನಿಮಿಷ ಮತ್ತು 58 ಸೆಕೆಂಡ್‌ಗಳ ಕಾಲ ಚುಂಬಿಸಿ ದಾಖಲೆ ಬರೆದಿದ್ದಾರೆ.  ಚುಂಬನವು ಪ್ರೀತಿ, ಗೌರವ, ಬದ್ಧತೆಯು ಸಂಕೇತ ಎಂದು ಪರಿಗಣಿಸಲಾಗಿದೆ. ಚುಂಬನವು ಕ್ಯಾಲೋರಿಗಳನ್ನು ಕರಗಿಸುವಷ್ಟು ಶಕ್ತಿ ಹೊಂದಿದೆ ಎಂಬುದನ್ನು ನಾವು ಈಗಾಗಲೇ ಅರಿತುಕೊಂಡಿದ್ದೇವೆ.

ಮಹತ್ವ ಹಾಗೂ ಆಚರಣೆ :

ಪ್ರೀತಿಯಲ್ಲಿ ಬಿದ್ದವರು ಹಾಗೂ ಸಂಗಾತಿಗಳು ಈ ದಿನದಂದು ಚುಂಬನದ ಮೂಲಕ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ತಮ್ಮ ಪ್ರೀತಿಯನ್ನು ತೋರಿಸುವ ಮಾರ್ಗಗಳಲ್ಲಿ ಇದು ಕೂಡ ಒಂದಾಗಿದ್ದು, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಾಯುತ್ತಿದ್ದರೆ ಈ ದಿನವು ಮಹತ್ವದ್ದಾಗಿದೆ. ಈ ಚುಂಬನದ ದಿನವನ್ನು ದಂಪತಿಗಳು ಜೊತೆಗೆ ಸಮಯವನ್ನು ಕಳೆಯುವುದು ಹಾಗೂ ಖಾಸಗಿ ಕ್ಷಣಗಳನ್ನು ಅನುಭವಿಸುವ ಮೂಲಕ ಆಚರಿಸಬಹುದಾಗಿದೆ. ಅದಲ್ಲದೆ, ಚಾಕೊಲೇಟ್‌ಗಳು, ಹೂವುಗಳು ಮತ್ತು ಪ್ರೇಮ ಪತ್ರ ಸೇರಿದಂತೆ ಇನ್ನಿತ್ತರ ಉಡುಗೊರೆಗಳನ್ನು ನೀಡುವ ಮೂಲಕ ಚುಂಬನದ ದಿನವನ್ನು ವಿಭಿನ್ನವಾಗಿ ಆಚರಿಸುತ್ತಾರೆ.

LATEST NEWS

ಬಾಯಾರಿಕೆ ಎಂದು ಲೀಟರ್‌ಗಟ್ಟಲೆ ಒಂದೇ ಸಮನೆ ನೀರು ಕುಡಿಯುವವರು ಇದನ್ನೊಮ್ಮೆ ಓದಿ…

Published

on

ಮನುಷ್ಯ ಆರೋಗ್ಯಕರವಾಗಿರಲು ದಿನಕ್ಕೆ 3-4 ಲೀಟರ್ ನೀರು ಕುಡಿಯಬೇಕು. ಈ ಸುಡು ಬೇಸಿಗೆಯಲ್ಲಂತೂ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳಲು ದೇಹಕ್ಕೆ ಸರಿಹೊಂದುವಷ್ಟು ನೀರು ಕುಡಿಯಬೇಕು. ವಯಸ್ಸು, ದೇಹದ ತೂಕ, ಮಾಡೋ ಕೆಲಸ, ವಾತಾವರಣದ ಮೇಲೆ ಮನುಷ್ಯ ಎಷ್ಟು ನೀರು ಕುಡಿಯಬೇಕು ಎನ್ನುವುದು ಡಿಪೆಂಡ್ ಆಗಿರುತ್ತೆ.

ಯಾರು ಎಷ್ಟು ನೀರು ಕುಡಿದೆ ಒಳ್ಳೆಯದು ?

ಸಾಮಾನ್ಯ ವ್ಯಕ್ತಿಗಳು ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಬೇಕು. ಆದರೆ ಮನೆಯಲ್ಲಿ ಮನೆಯಲ್ಲಿ ಇರುವ ಹೆಂಗಸರು ಹೆಚ್ಚು ಕೆಲಸ ಮಾಡುವ ಕಾರಣ ಜಾಸ್ತಿ ನೀರು ಕುಡಿಯಬೇಕು. ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗೋರು, ಎಸಿ ರೂಮ್ ಅಲ್ಲಿ ಕೂತು ಕೆಲಸ ಮಾಡೋರು ದಿನಕ್ಕೆ 2.5 ಲೀಟರ್ ಇಂದ 3 ಲೀಟರ್ ನೀರು ಕುಡಿದರೆ ಉತ್ತಮ.

ಹೆಚ್ಚು ಹೊರಗಡೆ ತಿರುಗಾಡುವವರು, ಬಿಸಿಲಲ್ಲಿ ಕೂಲಿ ಕೆಲಸ ಮಾಡುವವರು ದಿನಕ್ಕೆ 4 ಲೀಟರ್ ಇಂದ 5 ಲೀಟರ್ ನೀರು ಕುಡಿಬೇಕು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು..ಅಂದರೆ ಕಿಡ್ನಿ, ಹಾರ್ಟ್, ಶುಗರ್ ಪ್ರಾಬ್ಲಮ್ ಇರೋರು ಡಾಕ್ಟರ್ ಹತ್ರ ಕೇಳಿ ಎಷ್ಟು ಬೇಕೋ ಅಷ್ಟೇ ನೀರು ಕುಡಿಬೇಕು.

ಸರಿಯಾಗಿ ನೀರು ಕುಡಿಯುವ ವಿಧಾನ : 

ಯಾವಾಗಲೂ ಸ್ವಲ್ಪ ಸ್ವಲ್ಪನೇ ನೀರು ಕುಡಿಯಬೇಕು. ಅದೇ ಕಾರಣಕ್ಕೆ ಯಾರದ್ದಾದರು ಮನೆಗೆ ಹೋದಾಗ ಮೊದಲು ಒಂದು ಗ್ಲಾಸ್ ನೀರು ಕೊಡುದು. ಒಂದು ಗ್ಲಾಸ್ ನೀರು ಕುಡಿದರೆ ಒಮ್ಮೆಯ ಸುಸ್ತು ಇಳಿದಂತಾಗುತ್ತದೆ.  ಹಾಗೆಂದು ಒಂದೇ ಸಮನೇ ಜಾಸ್ತಿ ನೀರು ಕುಡಿಯುವುದರಿಂದ ದೇಹಕ್ಕೆ ತೊಂದರೆ ಆಗುತ್ತೆ.

ಸಿಹಿ ಇರೋ ಡ್ರಿಂಕ್ಸ್, ಸೋಡಾಗಳನ್ನು ಯಾವಾಗ ಬೇಕೆಂದರಾವಾಗ ಕುಡಿಯಬಾರದು. ಬಾಯಾರಿಕೆ ಆದ ವೇಳೆಯಂತೂ ಇವುಗಳನ್ನು ಕುಡಿಯಲೇ ಬಾರದು. ಒಂದು ವೇಳೆ ಕುಡಿದರೆ ಹೊಟ್ಟೆಯಲ್ಲಿ ಡೀಹೈಡ್ರೇಶನ್ ಆಗಬಹುದು. ಹಾಗಾಗಿ ಬಾಯಾರಿಕೆಯಾದ ಸಂದರ್ಭ ಉಗುರು ಬೆಚ್ಚಗಿನ ನೀರು ಅಥವಾ ರೂಮ್ ಟೆಂಪರೇಚರ್ ನೀರು ಕುಡಿದರೆ ಒಳ್ಳೆಯದು. ಇದರಿಂದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆದರೆ, ತುಂಬಾ ತಣ್ಣಗಿರೋ ನೀರು ಕುಡಿದರೆ ಜೀರ್ಣ ಸಮಸ್ಯೆಗಳು ಬರಬಹುದು.

ಮಿತವಾಗಿ ಸರಿಯಾದ ಸಮಯದ ಅಂತರ ಕಾಯ್ದುಕೊಂಡು ನೀರು ಕುಡಿಯುವುದು ಒಳ್ಳೆಯದು. ವಾತಾವರಣ ಬಿಸಿ ಇದ್ರೆ ಜಾಸ್ತಿ ನೀರು ಕುಡಿಬೇಕು. ಜಾಸ್ತಿ ಬೆವರು ಬರೋ ಟೈಮ್ ಅಲ್ಲೂ ನೀರು ಜಾಸ್ತಿ ಕುಡಿಯೋದು ಮುಖ್ಯ. ಆದ್ರೆ ಒಂದೇ ಸಮನೆ ಕುಡಿಯಬಾರದು. ಮುಖ್ಯವಾಗಿ ತಲೆ ಸುತ್ತು ಬಂದ ಸಂದರ್ಭ,ಅಸ್ತಮ ಸಮಸ್ಯೆ ಇರುವವರು ಅಥವಾ ಹೆಚ್ಚು ರಕ್ತಸ್ರಾವದಂತಹ ಸಮಸ್ಯೆಗಳು ಉಂಟಾದಾಗ ನೀರು ಕುಡಿಯಬಾರದು. ಒಂದು ವೇಳೆ ನೀರು ಕುಡಿಸಿದ್ದೇ ಆದರೆ ಆ ವ್ಯಕ್ತಿ ಕೋಮಕ್ಕೂ ಹೋಗಬಹುದು ಅಥವಾ ಆತನ ಪ್ರಾಣಪಕ್ಷಿಯೇ ಹಾರಿ ಹೋಗಬಹುದು ಹಾಗಾಗಿ ಈ ಸಮಯ ನೀರಿಗಿಂತ ವಾಯು ಮುಖ್ಯವಾಗಿರುತ್ತದೆ ಎಂಬುವುದನ್ನು ತಿಳಿದಿರಬೇಕು.

Continue Reading

LIFE STYLE AND FASHION

ಮನೆಯಲ್ಲಿ ಬಾತ್‌ರೂಮ್‌ನ ಡ್ರೈನ್ನಲ್ಲಿ ಸಿಕ್ಕಿರುವ ಕೂದಲು ತೆಗೆಯಲು ಈ ಸರಳ ಟಿಪ್ಸ್ ಬಳಸಿ…

Published

on

ನಿತ್ಯವೂ ಸ್ನಾನ ಮಾಡುವ ಕಾರಣ ಬಾತ್‌ರೂಮ್ ಬಳಕೆಯಾಗುತ್ತಿರುತ್ತವೆ. ಇದರಿಂದ ಬಾತ್‌ರೂಮ್‌ನ ಡ್ರೈನ್ನಲ್ಲಿ ಕೂದಲು ಸಿಕ್ಕಿ ಸ್ವಚ್ಛ ಮಾಡಲು ಕಷ್ಟವಾಗುತ್ತದೆ. ಹೆಚ್ಚು ಕೂದಲು ಸಿಕ್ಕಂತೆಯೇ ನೀರು ಹೋಗಲು ತೊಂದರೆಯಾಗಿ ಬ್ಲಾಕ್ ಆಗುತ್ತದೆ ಹಾಗೂ ಮತ್ತೊಂದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಕೊನೆಗೆ ರಾಸಾಯನಿಕ ವಸ್ತುಗಳು ಅಥವಾ ಸ್ವಚ್ಛ ಮಾಡುವವರ ಸಹಾಯವನ್ನು ಪಡೆಯಬೇಕಾಗುತ್ತದೆ .ಆದರೆ, ಅದರ ಬದಲಾಗಿ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಸ್ವಚ್ಛ ಮಾಡಬಹುದು.

ಸೋಡಾ ಮತ್ತು ವಿನೆಗರ್ :

ಮನೆಯಲ್ಲಿ ಬಾತ್‌ರೂಮ್‌ನ ಡ್ರೈನ್ನಲ್ಲಿ ಸಿಕ್ಕಿರುವ ಕೂದಲು ತೆಗೆಯಲು ಹೆಚ್ಚು ಹಣ ಖರ್ಚು ಮಾಡಬೇಕಾದ ಅವಶ್ಯಕತೆ ಇಲ್ಲ. ಕೇವಲ ಬೇಕಿಂಗ್ ಸೋಡಾ ಮತ್ತು ವಿನೆಗರ್ ಉತ್ತಮ ಸಹಾಯ ಮಾಡುತ್ತದೆ. ಮೊದಲು ಬಾತ್ರೂಮ್ ಡ್ರೈನ್ನಲ್ಲಿ ಬೇಕಿಂಗ್ ಸೋಡಾವನ್ನು ಹಾಕಬೇಕು. ನಂತರ ಅದರ ಮೇಲೆ ವಿನೆಗರ್ ಹಾಕಬೇಕು. ಸ್ವಲ್ಪ ಸಮಯ ಹಾಗೆಯೇ ಬಿಡಬೇಕು. ಸ್ವಲ್ಪ ಸಮಯದ ನಂತರ ಬಿಸಿನೀರನ್ನು ಡ್ರೈನ್ನಲ್ಲಿ ಹಾಕಬೇಕು.

ಬೇಕಿಂಗ್ ಸೋಡಾ ಮತ್ತು ವಿನೆಗರ್ ಸೇರಿ ಒಂದು ರಾಸಾಯನಿಕ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ ಇದರಿಂದ ಸಿಕ್ಕಿರುವ ಕೂದಲು ಸುಲಭವಾಗಿ ಹೊರಟುಹೋಗುತ್ತದೆ. ಮೊದಲು ಮುಚ್ಚಿಹೋಗಿರುವ ಡ್ರೈನ್ನಲ್ಲಿ ಉಪ್ಪನ್ನು ಹಾಕಿಬಿಡಿ. ಉಪ್ಪು ಕೂದಲನ್ನು ಸಡಿಲಗೊಳಿಸುತ್ತದೆ. ಇದರಿಂದ ಕೂದಲನ್ನು ಸುಲಭವಾಗಿ ತೆಗೆಯಬಹುದು. ಅಥವಾ ಕೂದಲು ಸಿಲುಕಿರುವ ಜಾಗದಲ್ಲಿ ಕೋಕಾ ಕೋಲಾ ಹಾಕಬೇಕು. ಇದಲ್ಲಿರುವ ರಾಸಾಯನಿಕಗಳು ಕೂದಲನ್ನು ಸಡಿಲಗೊಳಿಸುತ್ತವೆ. ಇದರಿಂದ ಸುಲಭವಾಗಿ ಕೂದಲು ತೆಗೆಯಬಹುದು.

Continue Reading

LATEST NEWS

ಹುಡುಗಿಯರು ಜಡೆ ಯಾಕೆ ಕಟ್ಟಬೇಕು …?? ಫ್ರೀ ಹೇರ್ ಬಿಡುವವರ ಬಗ್ಗೆ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು …??

Published

on

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಗಂಡುಮಕ್ಕಳು ಉದ್ದ ಕೂದಲು ಬಿಟ್ಟು ಜುಟ್ಟು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ, ಬಹುತೇಕ ಹೆಣ್ಣುಮಕ್ಕಳು ಪ್ಯಾಷನ್ ಹೆಸರಿನಲ್ಲಿ ಕೂದಲನ್ನು ಕಟ್ ಮಾಡಿಕೊಂಡು, ಅದನ್ನು ಬಿಟ್ಟುಕೊಂಡು ತಿರುಗಾಡುತ್ತಿದ್ದಾರೆ. ಜಡೆ ಕಟ್ಟುವುದು ಎಂದರೆ ಏನು ಎನ್ನುವುದರ ಅರಿವೇ ಇಲ್ಲದ ಮಟ್ಟಿಗೆ ಮಾಯವಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾಗಿ ಮಹಿಳೆಯರವರೆಗೂ  ಸಂಪೂರ್ಣ ಕೂದಲು ಬಿಟ್ಟು ತಿರುಗುವವರೇ ಹೆಚ್ಚು. ಒಟ್ಟಾರೆಯಾಗಿ, ಅಲಂಕಾರದ  ಮಾತು ಬಂದಾಗ ಸಂಪೂರ್ಣ ಕೂದಲು ಬಿಟ್ಟು ತಿರುಗುವುದಕ್ಕೆ ಮಹತ್ವ ಪಡೆದುಕೊಳ್ಳುತ್ತದೆ. ಸಿನಿಮಾಗಳಲ್ಲಿ, ಕಿರುತೆರೆಗಳಲ್ಲಿ ನಟಿಯರು ಹೀಗೆಯೇ ಮಾಡುವುದರಿಂದ ಇದು ಯುವತಿಯರ ಮೇಲೂ ಪ್ರಭಾವ ಬೀರುತ್ತಿರುವುದೂ ಸುಳ್ಳೇನಲ್ಲ .

ಹೆಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಬಹುದೊಡ್ಡದು. ಹಾಗಾಗಿ ಹಿಂದಿನ ಕಾಲದಲ್ಲಿ  ಹೆಣ್ಣಿನ ಕೂದಲನ್ನು ಬೋಳಿಸುವ ಪದ್ಧತಿ ಇತ್ತು. ಈಗಲೂ ಕೆಲವು ಕಡೆಗಳಲ್ಲಿ ಈ ಅನಿಷ್ಠ ಪದ್ಧತಿ ಚಾಲ್ತಿಯಲ್ಲಿ ಇದೆ. ಗಂಡ ಸತ್ತ ಮೇಲೆ ಹೆಣ್ಣು ಚೆನ್ನಾಗಿ ಕಾಣಿಸಬಾರದು, ಬೇರೆಯವರು ಆಕೆಯ ಬಳಿ ಸೆಳೆಯಬಾರದು ಎನ್ನುವ ಕಾರಣದಿಂದ ಹೀಗೆ ಮಾಡುವುದು. ಇದರ ಅರ್ಥ ತಲೆಗೂದಲು ಸೌಂದರ್ಯದಲ್ಲಿ ಅಷ್ಟು ದೊಡ್ಡ ಕೊಡುಗೆಯನ್ನು ನೀಡುತ್ತದೆ. ಇದೇ ಕಾರಣಕ್ಕೆ ಕೂದಲಿನ ಅಲಂಕಾರಕ್ಕೆಂದೇ ಈಗ ದೊಡ್ಡ ದೊಡ್ಡ ಷೋರೂಮ್​ಗಳೇ ತೆರೆಯಲಾಗುತ್ತಿದೆ.

ಯುವತಿಯರಿಗೆ ಭಾರತಿ ವಿಷ್ಣುವರ್ದನ್ ಕಡೆಯಿಂದ ಕಿವಿಮಾತು :

“ಕೂದಲು ಸಂಪೂರ್ಣ ಬಿಟ್ಟುಕೊಂಡು ತಿರುಗುವುದು ಸರಿಯಲ್ಲ. ಕೂದಲು ಬಿಟ್ಟುಕೊಂಡು ತಿರುಗುವ ನಿಜವಾದ ಅರ್ಥ ಕಷ್ಟದಲ್ಲಿದ್ದೇವೆ ಎಂದು ತೋರಿಸಲು, ಅದೇ ಮತ್ತೊಂದು ಬೇರೆಯವರನ್ನು ಅಟ್ರಾಕ್ಟ್​ ಮಾಡವುದೇ ಆಗಿದೆ. ದ್ರೌಪದಿ ತನ್ನ ಕಷ್ಟಕಾಲದಲ್ಲಿ ಇದ್ದ ಸಮಯದಲ್ಲಿ ಕೂದಲು ಬಿಟ್ಟಿದ್ದಳು. ದುಶ್ಯಾಸನನ ವಧೆ ಆಗುವವರೆಗೆ ಕೂದಲು ಕಟ್ಟಲ್ಲ ಎಂದು ಪ್ರತಿಜ್ಞೆ ಮಾಡಿದ್ದಳು. ಇದರ ಅರ್ಥ ಕಷ್ಟಕಾಲದಲ್ಲಿ ಹೆಣ್ಣುಮಕ್ಕಳು ಇದ್ದಾರೆ ಎನ್ನುವ ಅರ್ಥವನ್ನು ಕೂದಲು ಸಂಪೂರ್ಣ ಬಿಟ್ಟುಕೊಂಡು ತಿರುಗುವುದು ತೋರಿಸುತ್ತದೆ ಬೇರೆಯವರನ್ನು ಕೆಟ್ಟ ರೀತಿಯಲ್ಲಿ ಅಟ್ರಾಕ್ಟ್​ ಮಾಡುವುದು ಏಕೆ? ನಿಮ್ಮನ್ನು ನೀವು ಮೊದಲು ಪ್ರೀತಿಸಿ, ಬೇರೆಯವರನ್ನು ಅಟ್ರಾಕ್ಟ್​  ಮಾಡುವುದನ್ನು ನಿಲ್ಲಿಸಿ. ಇದು ಅಟ್ರಾಕ್ಟ್​ ಮಾತ್ರವಲ್ಲದೇ ನಿಮ್ಮ ಮೇಲೆ ಅಟ್ಯಾಕ್​ ಮಾಡಲೂ ನೀವು ಕಾರಣರಾಗುತ್ತೀರಿ ಎನ್ನುವುದು ನೆನಪಿನಲ್ಲಿ. ಬೇರೆಯವರನ್ನು ಹೀಗೆ ಪ್ರವೋಕ್​  ಮಾಡಿ ಏನು ಪ್ರಯೋಜನ ? ಮೊದಲು ನಿಮ್ಮನ್ನು ನೀವು ಗೌರವಿಸುವುದನ್ನು ಕಲಿತುಕೊಳ್ಳಿ, ಆಮೇಲೆ ಬೇರೆಯವರು ನಿಮ್ಮನ್ನು ಗೌರವಿಸುತ್ತಾರೆ” ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ ಯುವತಿಯರಿಗೆ ಕಿವಿಮಾತು ಹೇಳಿದ್ದಾರೆ.

ಕೇಶದಲ್ಲಿದ್ದಾಳೆ ಸರಸ್ವತಿ :

“ಜಡೆ ಮತ್ತು ಜ್ಞಾನದ ಬಗ್ಗೆ ಮಾತನಾಡಿರುವ ನಟಿ, ಕೂದಲಿನಲ್ಲಿ ಸರಸ್ವತಿ ಇದ್ದಾಳೆ. ಆಕೆಯನ್ನು ಕಟ್ಟಿಹಾಕಿಕೊಂಡರೆ ನಿಮ್ಮ ಜ್ಞಾನ ವರ್ಧಿಯಾಗುತ್ತದೆ. ಆದರೆ ಕೂದಲು ಬಿಟ್ಟು ಆಕೆಯನ್ನು ನೀವೇ ಹೊರಕ್ಕೆ ಕಳಿಸುತ್ತಿದ್ದೀರಿ. ದೇಶದಲ್ಲಿ ಇಂದು ಎಷ್ಟೆಲ್ಲಾ ಸಮಸ್ಯೆ ಬರುತ್ತಿರುವುದಕ್ಕೆ ಕಾರಣ, ಇಂದು ತಾಯಂದಿರು ಕೂಡ ಕೂದಲು ಬಿಟ್ಟುಕೊಂಡು ತಿರುಗಾಡುವುದೇ ಆಗಿದೆ. ಜ್ಞಾನ ಎನ್ನುವುದು ಈಗ ದೂರವಾಗುತ್ತಿದೆ. ಯಾರು ನೋಡಿದರೂ ಕೂದಲು ಬಿಟ್ಟುಕೊಂಡು ಓಡಾಡುವವರೇ ಆಗಿದ್ದಾರೆ. ಕೊನೆಯ ಪಕ್ಷ ಒಂದು ರಬ್ಬರ್​ ಅನ್ನಾದರೂ ಕಟ್ಟಿಕೊಳ್ಳಿ. ಸಂಪೂರ್ಣವಾಗಿ ಕೂದಲು ಬಿಡಬೇಡಿ. ಹೇಳುವುದನ್ನು ಹೇಳಿದ್ದೇನೆ. ಕೊನೆಗೆ ನಿಮ್ಮಿಚ್ಛೆ. ಏಕೆಂದರೆ ಇತ್ತೀಚೆಗೆ ತಾಯಂದಿರು ಕೂಡ ತಮ್ಮ ಮಕ್ಕಳಿಗೆ ಬುದ್ಧಿಹೇಳುವುದನ್ನು ಬಿಟ್ಟು ಫ್ಯಾಷನ್ ಹೆಸರಿನಲ್ಲಿ ಎಲ್ಲದಕ್ಕೂ ಅವಕಾಶ ಕಲ್ಪಿಸುತ್ತಿದ್ದಾರೆ. ವಿದೇಶಿಗರು ಭಾರತೀಯ ಸಂಪ್ರದಾಯವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದರೆ. ನಾವು ಅಲ್ಲಿನ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಿರುವುದು ನೋವಿನ ಸಂಗತಿ” ಎಂದು ಭಾರತಿ ಅಮ್ಮ ಹೇಳಿರುವ ಮಾತುಗಳು ಸುದ್ದಿಮನೆ ಆಫೀಷಿಯಲ್​ ಯೂಟ್ಯೂಬ್​ ಚಾನೆಲ್​ ಶೇರ್​ ಆಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page