Connect with us

BELTHANGADY

ಬೆಳ್ತಂಗಡಿ: ಮನೆಯಲ್ಲಿ ಟೇಬಲ್ ಫ್ಯಾನ್‌ ಪಕ್ಕದಲ್ಲಿ ಬೆಚ್ಚಗೆ ಮಲಗಿದ್ದ 10 ಅಡಿ ಉದ್ದದ ಕಾಳಿಂಗ…!

Published

on

ಬೆಳ್ತಂಗಡಿ: ಮನೆಯೊಳಗಿನ ಟೇಬಲ್ ಫ್ಯಾನ್ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಉರಗ ತಜ್ಞರೊಬ್ಬರು ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಹತ್ಯಡ್ಕ ಎಂಬಲ್ಲಿ ನಡೆದಿದೆ.


ಇಲ್ಲಿನ ಹತ್ಯಡ್ಕ ನಿವಾಸಿಯಾಗಿರುವ ಉಮೇಶ್ ಎಂಬವರ ಮನೆಯ ರೂಂ ನ ಟೇಬಲ್ ಫ್ಯಾನ್ ಪಕ್ಕದಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮಲಗಿರುವುದನ್ನು ಗಮನಿಸಿದ ಮನೆಯ ಸದಸ್ಯರು ಕ್ಷಣ ಕಾಲ ಗಾಬರಿಗೊಂಡು, ಸ್ಥಳೀಯ ಉರಗ ತಜ್ಞರಾದ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಉಮೇಶ್ ಮನೆಗೆ ಆಗಮಿಸಿದ ಸ್ನೇಕ್ ಅಶೋಕ್ ಲಾಯಿಲ ಅವರು ಕಾಳಿಂಗವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

BELTHANGADY

ಬೆಳ್ತಂಗಡಿ: ಮನೆಗೆ ನುಗ್ಗಿ ಚಿನ್ನಾಭರಣ ಸಹಿತ ನಗದನ್ನು ದೋಚಿ ಪರಾರಿಯಾದ ಕಳ್ಳ

Published

on

ಬೆಳ್ತಂಗಡಿ: ರಾತ್ರಿಯ ವೇಳೆ ಮನೆಮಂದಿ ಎಲ್ಲಾ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕಳ್ಳತನ ನಡೆಸಿ ಚಿನ್ನಾಭರಣ ಸಹಿತ ನಗದುಗಳನ್ನು ದೋಚಿಕೊಂಡು ಹೋಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರುವಿನ ಮನೆಯಲ್ಲಿ ಏ.23ರಂದು ರಾತ್ರಿ ನಡೆದಿದೆ.

ಗುತ್ತು ಮನೆ ನಿವಾಸಿ ಮುಸ್ತಫಾ ರವರ ಮನೆಗೆ ಕಳ್ಳರು ಹಿಂಬದಿ ಬಾಗಿಲಿನಿಂದ ಬೀಗ ಮುರಿದು ಮನೆಯೊಳಗೆ ಬಂದದ್ದು ಮಾತ್ರವಲ್ಲದೇ ಸುಮಾರು 5 ಪವನ್ ನಷ್ಟು ಚಿನ್ನ, ಮೂರು ಸಾವಿರ ರೂಪಾಯಿ ನಗದುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.

ನಿನ್ನೆ ಸುಮಾರು ಮೂರರಿಂದ ನಾಲ್ಕುಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಮನೆಯವರು ತಿಳಿಸಿದ್ದಾರೆ. ಅಲ್ಲದೇ ಮನೆಯ ಬ್ಯಾಗ್‌ಗಳನ್ನು ಕದ್ದುಕೊಂಡು ಹೋಗಿದ್ದು, ಬಳಿಕ ಅದರಲ್ಲಿ ಏನೂ ಇಲ್ಲದ್ದನ್ನು ನೋಡಿ ಪಕ್ಕದ ಅಂಗಳದಲ್ಲಿ ಬಿಸಾಕಿ ಹೋಗಿದ್ದಾರೆ.

ಇದೇ ಸಂದರ್ಭದಲ್ಲಿ ತೆಕ್ಕಾರುವಿನ ಕೋಡಿ ನಿವಾಸಿ ಅನ್ವರ್ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು ಮನೆಯೊಳಗಡೆ ಕಪಾಟ್ ನ ಒಳಗಡೆಯಿದ್ದ ನಗದನ್ನು ದೋಚಿಕೊಂಡಿದ್ದು ಆದರೆ ಆಕಸ್ಮಾತ್ ಅವರ ಜೇಬಿಗೆ ಹಾಕುವ ಹಣವು ಕೆಳಗಡೆ ಬಿದ್ದಿದ್ದು ಬೆಳಿಗ್ಗೆ ಹೊತ್ತು ಮನೆಯವರು ನೀರು ಕುಡಿಯಲೆಂದು ಎದ್ದಾಗ ಕಳ್ಳತನ ನಡೆದ ಬಗ್ಗೆ ಅರಿವಾಗಿದೆ.

ಮನೆಯ ಹಿಂಬಾಗಿಲು ತೆರೆದ ಸ್ಥಿತಿಯಲ್ಲಿದ್ದು ದೋಚಿದ ಮೂರು ಸಾವಿರ ಹಣ ಅಂಗಳದಲ್ಲಿ ಬಿದ್ದು ಸಿಕ್ಕಿದೆ ಎಂದು ಅನ್ವರ್ ಮನೆಯವರು ತಿಳಿಸಿದ್ದಾರೆ. ಇದೇ ರೀತಿ ತೆಕ್ಕಾರು ವ್ಯಾಪ್ತಿಯ ಹಲವು ಮನೆಗಳಲ್ಲಿ ಕಳ್ಳತನ ನಡೆದಿದ್ದು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Continue Reading

BELTHANGADY

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; ಮೂವರು ಗಂಭೀರ

Published

on

ಬೆಳ್ತಂಗಡಿ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ಸಮಿಪದ ಗುರುವಾಯನಕೆರೆ-ಕಾರ್ಕಳ ರಸ್ತೆಯ ಅಳದಂಗಡಿಯ ಕೆದ್ದುವಿನಲ್ಲಿ ನಿನ್ನೆ (ಏ.21) ಸಂಜೆ ನಡೆದಿದೆ.

ಅಳದಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳದತ್ತ ಪ್ರಯಾಣ ಮಾಡುತ್ತಿದ್ದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಗೇರುಕಟ್ಟೆಯ ಕುಸುಮಾವತಿ (75), ಭಾಗ್ಯವತಿ (50), ವೈಭವ್‌ (23) ಎಂಬುವವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

BELTHANGADY

ಧರ್ಮಸ್ಥಳ: ನೂತನ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಉದ್ಘಾಟಿಸಿದ ಡಿಕೆಶಿ

Published

on

ಉಜಿರೆ: ಧರ್ಮಸ್ಥಳದಲ್ಲಿ ನಡೆಯುವ ಬಹುಮುಖಿ ಸೇವೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಕಲ್ಯಾಣ ಮಂಟಪ ನಿರ್ಮಾಣದಂತ ಕಾರ್ಯ ಮಹತ್ತರದಾಗಿದೆ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಭಾನುವಾರ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ನೂತನವಾಗಿ ನಿರ್ಮಾಣವಾದ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಉದ್ಘಾಟಿಸಿದ್ದಾರೆ. ಶ್ರೀ ಉಮಾ ಮಹೇಶ್ವರ, ಶಿವ ಪಾರ್ವತಿ ಮತ್ತು ಗೌರಿ ಶಂಕರ ಎಂಬ ಮೂರು ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ನಿರ್ಮಿಸಲಾಗಿದ್ದು, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಹಲವು ಗಣ್ಯರ ಸಮಕ್ಷಮದಲ್ಲಿ ಉದ್ಘಾಟನೆ ಮಾಡಲಾಗಿದೆ.

ಧರ್ಮಸ್ಥಳಕ್ಕೆ ರಾಜ್ಯದ ಮಾತ್ರವಲ್ಲದೆ ಹೊರ ರಾಜ್ಯದ ಜನರು ಕೂಡಾ ಮದುವೆ ಕಾರ್ಯಕ್ಕೆ ಬರುತ್ತಿದ್ದು, ಇಲ್ಲಿ ಮದುವೆಯಾದ್ರೆ ಜೀವನ ಉಜ್ವಲವಾಗುತ್ತದೆ ಎಂಬ ನಂಬಿಕೆ ಇರಿಸಿದ್ದಾರೆ. ಹೀಗಾಗಿ ಭಕ್ತರ ಆಸೆಯನ್ನು ನೆರವೇರಿಸುವ ಸಲುವಾಗಿ ಈ ಸುಸಜ್ಜಿತ ಕಲ್ಯಾಣ ಮಂಟಪದ ಸಮುಚ್ಚಯವನ್ನು ನಿರ್ಮಾಣ ಮಾಡಲಾಗಿದೆ.

ಈ ಸಂದರ್ಭ ಹರ್ಷೇಂದ್ರ ಹೆಗ್ಗಡೆ, ಸುರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜಾ, ರಕ್ಷಿತ್ ಶಿವರಾಂ ಮೊದಲಾದವರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page