Connect with us

FILM

‘ಬಿಗ್ ಬಾಸ್ ಕನ್ನಡ ಸೀಸನ್ 11′ ಶುರು ಆಗೋದು ಯಾವಾಗ? ಸ್ಪರ್ಧಿಗಳು ಇವರೇನಾ?

Published

on

‘ಬಿಗ್ ಬಾಸ್ ಕನ್ನಡ ಸೀಸನ್ 10’ ಯಶಸ್ವಿಯಾಗಿ ಮುಗಿದಿದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶುರುವಾಗುವ ಸಮಯ ಹತ್ತಿರ ಬಂದಿದೆ. ಹೌದು, ಅಕ್ಟೋಬರ್ 3ನೇ ವಾರದಿಂದ ಹೊಸ ಸೀಸನ್ ಆರಂಭವಾಗಲಿದೆಯಂತೆ.

ತಯಾರಿ ಶುರು ಆಗಿದೆ!

‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಅಕ್ಟೋಬರ್‌ನಲ್ಲಿ ಆರಂಭವಾಗುವುದು ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಹಾಗೆಯೇ ಒಂದಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬರುತ್ತಿದೆ. ಈಗಾಗಲೇ ವಾಹಿನಿಯು ಇದಕ್ಕೆ ಸಂಬಂಧಪಟ್ಟಂತೆ ತಯಾರಿಯನ್ನು ಶುರು ಮಾಡಿದೆ. ಈ ಮನೆಗೋಸ್ಕರ 300 ಜನರು ಕೆಲಸ ಮಾಡುತ್ತಿರುತ್ತಾರೆ. ದೊಡ್ಡ ಮನೆ, ಅದಕ್ಕೆ ಬೇಕಾದ ಸಾಮಗ್ರಿಗಳು, ಸ್ಪರ್ಧಿಗಳಿಗೋಸ್ಕರ ವ್ಯವಸ್ಥೆ ಹೀಗೆ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಲು ತಿಂಗಳಾನುಗಟ್ಟಲೇ ಸಮಯ ಬೇಕು.

ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ

ಸ್ಪರ್ಧಿಗಳ ಆಯ್ಕೆ ಮಾಡೋದು ಕೂಡ ದೊಡ್ಡ ಟಾಸ್ಕ್. ಇಲ್ಲಿ ವಿಭಿನ್ನ ಕಾರ್ಯಕ್ಷೇತ್ರಗಳಿಂದ ಬರುವ ಸ್ಪರ್ಧಿಗಳ ಹೊರತಾಗಿ, ವಿಭಿನ್ನ ಮನಸ್ಥಿತಿಯುಳ್ಳವರು ಬೇಕು. ಹಾಗಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ದೊಡ್ಡದು ಎನ್ನಬಹುದು.

ಸ್ಪರ್ಧಿಗಳು ಯಾರು ಯಾರು?

‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ಯುಟ್ಯೂಬರ್ ವರ್ಷಾ ಕಾವೇರಿ, ನಟ ತ್ರಿವಿಕ್ರಮ್, ‘ತುಕಾಲಿ ಸ್ಟಾರ್’ ಸಂತು ಪತ್ನಿ ಮಾನಸಾ, ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಹೀಗೆ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ‘ಬಿಗ್ ಬಾಸ್’ ಮನೆಗೆ ಹೋಗುವವರು ಯಾರೂ ಕೂಡ ತಾವು ದೊಡ್ಮನೆಗೆ ಹೋಗ್ತೀವಿ ಅಂತ ಹೇಳೋದಿಲ್ಲ. ‘ಬಿಗ್ ಬಾಸ್’ ಪ್ರಸಾರ ಆದಮೇಲೆ ಯಾರು ಸ್ಪರ್ಧಿಗಳು ಎನ್ನೋದು ಗೊತ್ತಾಗುವುದು.

FILM

ಎಆರ್ ರೆಹಮಾನ್ ಆರೋಗ್ಯದಲ್ಲಿ ಏರು-ಪೇರು; ಆಸ್ಪತ್ರೆಗೆ ದಾಖಲು

Published

on

ಮಂಗಳೂರು/ಚೆನ್ನೈ: ಖ್ಯಾತ ಸಂಗೀತ ಕ್ಷೇತ್ರದ ದಿಗ್ಗಜ ಎಆರ್ ರೆಹಮಾನ್ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಇಂದು (ಮಾ.16) ಬೆಳಗ್ಗೆ 7.30ರ ಸುಮಾರಿಗೆ ರೆಹಮಾನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ರೆಹಮಾನ್ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎದೆನೋವಿನ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರಿಗೆ ECG, ಎಕೋಕಾರ್ಡಿಯೋಗ್ರಾಮ್ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಇನ್ನೂ ಕೆಲ ದಿನ ಅಪೋಲೊ ಆಸ್ಪತ್ರೆಯಲ್ಲಿಯೇ ಕಳೆಯಲಿರುವ ಎಆರ್ ರೆಹಮಾನ್ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಕು!

ಎಆರ್ ರೆಹಮಾನ್ ಅವರಿಗೆ ಈಗ 58 ವರ್ಷ ವಯಸ್ಸಾಗಿದೆ. ಇತ್ತೀಚೆಗಷ್ಟೆ ಅವರು ಪತ್ನಿ ಸಾಯಿರಾ ಬಾನು ಅವರಿಂದ ದೂರಾಗಿದ್ದಾರೆ. ಪತ್ನಿಯಿಂದ ವಿಚ್ಛೇದನ ಪಡೆದಿರುವ ಎಆರ್ ರೆಹಮಾನ್ ಏಕಾಂಗಿಯಾಗಿದ್ದಾರೆ. ಅಂದಹಾಗೆ ರೆಹಮಾನ್ ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ರೆಹಮಾನ್ ಪುತ್ರ ಮತ್ತು ಪುತ್ರಿ ಇಬ್ಬರೂ ಸಹ ಗಾಯಕರೇ ಆಗಿದ್ದಾರೆ.

Continue Reading

FILM

ಕಿಚ್ಚ ಸುದೀಪ್ ಮಗಳು ಸಾನ್ವಿ ಓದಿದ್ದು ಇಷ್ಟೇನಾ..!

Published

on

ಬೆಂಗಳೂರು: ನಟ ಕಿಚ್ಚ ಸುದೀಪ್‌ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಮುಂಚೂಣಿ ನಟರಲ್ಲಿ ಪ್ರಮುಖರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಅವರ ಮ್ಯಾಕ್ಸ್‌ ಸಿನಿಮಾ ಚಿತ್ರರಂಗದಲ್ಲಿ ಸಖತ್‌ ಫೇಮಸ್ ಆಗಿತ್ತು. ತಂದೆಯಂತೆ ಮಗಳು ಎನ್ನುವ ಹಾಗೆ ಕಿಚ್ಚ ಸುದೀಪ್ ಮಗಳು ಸಾನ್ವಿ ಶೀಘ್ರದಲ್ಲೇ ನಟನಾ ಕ್ಷೇತ್ರದಲ್ಲೂ ಮಿಂಚಲಿದ್ದಾರೆ.

 

ಸದ್ಯ ಸಂಗೀತ ಮತ್ತು ನಟನಾ ಕ್ಷೇತ್ರದಲ್ಲಿ ಅತ್ಯಂತ ಒಲವು ಮೂಡಿಸಿಕೊಂಡಿರುವ ಸಾನ್ವಿ ಸುದೀಪ್ ಇತ್ತೀಚೆಗಷ್ಟು ಝೀ ಕನ್ನಡ ಸರಿಗಮಪ ಶೋ ನಲ್ಲಿ ತನ್ನ ತಂದೆಯ ಎದುರೇ ಪದ್ಯವನ್ನು ಹಾಡಿದ್ದರು. ಮಗಳ ಪ್ರಯತ್ನಕ್ಕೆ ಸುದೀಪ್ ಖುಷಿಯಾಗಿದ್ದರು.

ಇನ್ನು 21 ವರ್ಷದ ಸಾನ್ವಿ ಏನು ಓದಿದ್ದಾರೆ ಎಂಬುವುದೇ ಎಲ್ಲಾರಿಗೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಾನ್ವಿ ತನ್ನ ವಿದ್ಯಾರ್ಹತೆಯ ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, “ನನ್ನ ಶಿಕ್ಷಣದ ಬಗ್ಗೆ ಅನೇಕರು ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಯಾಕೆ ಅಂತ ಅರ್ಥ ಆಗುತ್ತಿಲ್ಲ. ನಾನು ಇನ್ನೂ ಏನೂ ಸಾಧನೆ ಮಾಡಿಲ್ಲ. ನಾನು ಬೆಂಗಳೂರಿನಲ್ಲಿ ಪಿಯುಸಿವರೆಗೆ ಓದಿದೆ. ಆಗಲೇ ನನಗೆ ಸಾಕಾಗಿತ್ತು. ಮನರಂಜನೆ ಕ್ಷೇತ್ರದಲ್ಲಿ ಇರುವವರಲ್ಲಿ ಅನೇಕರಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಇರೋದಿಲ್ಲ. ಪಿಯುಸಿ ಮುಗಿಸಿ ನಾನು ನಾಲ್ಕು ತಿಂಗಳುಗಳ ಕಾಲ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಆಕ್ಸಿಂಗ್ ಕೋರ್ಸ್ ಮಾಡಿದೆ” ಎಂದು ಹೇಳಿದ್ದಾರೆ.

ಅಲ್ಲದೇ ಸಾನ್ವಿ ಈಗ ಚಿತ್ರರಂಗದಲ್ಲಿ ಆಕ್ಟಿವ್ ಆಗುತ್ತಿದ್ದಾರೆ. ಅಪ್ಪ ಸುದೀಪ್ ಮುಂದೆ ಖಡಕ್‌ ವಿಲನ್‌ ಆಗಿ ಸಾನ್ವಿಗೆ ನಟಿಸುವ ಆಸೆ ಇದೆ. ಆದರೆ ಹಿರೋಯಿನ್ ಮಾತ್ರ ಆಗೋದಿಲ್ಲ ಎಂದು ಹೇಳಿದ್ದಾರೆ.

Continue Reading

FILM

ರೀಲ್ಸ್ ರಾಣಿ ರೇಷ್ಮಾ ಆಂಟಿ ಕಿಡ್ನಾಪ್

Published

on

ಮಂಗಳೂರು/ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ‘ಹಾಯ್ ಫ್ರೆಂಡ್ಸ್ ಏನ್ ಗೊತ್ತಾ’ ಅಂತ ಹೇಳುತ್ತಲೇ ವಿಡಿಯೋ ಮಾಡಿ ಫೇಮಸ್ ಆಗಿದ್ದ ರೇಷ್ಮಾ ಯಾಸಿನ್ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಗಿಚ್ಚಿ ಗಿಲಿಗಿಲಿ ಸೀಸನ್ 3ರ ಸ್ಪರ್ಧಿಯಾಗಿ ಇಡೀ ಕರ್ನಾಟಕಕ್ಕೆ ಫೇಮಸ್ ಆಗಿರುವ ರೇಷ್ಮಾ ಯಾಸಿನ್ ಅವರು ತಮ್ಮ ವೈರಲ್ ವಿಡಿಯೋಗಳಿಂದಲೇ ಇಂದು ಸೆಲಿಬ್ರಿಟಿಯಾಗಿದ್ದಾರೆ. ಜನರು ಸಹ ರೇಷ್ಮಾ ಅವರ ವಿಡಿಯೋಗಳಿಗೆ ಪ್ರೀತಿಯನ್ನು ನೀಡುತ್ತಿದ್ದು, ಅಧಿಕ ವ್ಯೂವ್ಸ್ ಪಡೆದುಕೊಳ್ಳುತ್ತಿರುತ್ತವೆ. ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದ ರವಿ ಮಂಡ್ಯ
ಸದ್ಯ ವೈರಲ್ ವಿಡಿಯೋದಲ್ಲಿ ಹಾಯ್ ಫ್ರೆಂಡ್ಸ್. ನೀವು ನನ್ನನ್ನು ಎಷ್ಟು ಬೆಳೆಸಿದ್ದೀರಿ ಅಂದ್ರೆ ರವಿ ಮಂಡ್ಯ ಅವರನ್ನು ನಾನು ಪರ್ಸನಲ್ ಮೇಕಪ್ ಮ್ಯಾನ್ ಆಗಿ ಇಟ್ಕೊಂಡಿದ್ದೇನೆ ಎಂದು ರೇಷ್ಮಾ ಆಂಟಿ ಹೇಳುತ್ತಾರೆ. ಇದಕ್ಕೆ ಕೋಪಗೊಳ್ಳುವ ರವಿ ಮಂಡ್ಯ, ಒಮಿನಿ ವ್ಯಾನ್ ಡಿಕ್ಕಿ ಓಪನ್ ಮಾಡುತ್ತಾರೆ. ನಂತರ ರೇಷ್ಮಾ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಡಿಕ್ಕಿಯೊಳಗೆ ಹಾಕುತ್ತಾರೆ. ಬಿದ್ಕೋ ಕಪಿ ಮುಂಡೆದೆ, ಇನ್ನೊಂದ್ ಸಾರಿ ಆ ಕಟ್ಟಪ್ಪನ ಜೊತೆ ನೀನು ವಿಡಿಯೋನೇ ಮಾಡಬಾರದು. ನಿನ್ನನ್ನು ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದು ವ್ಯಾನ್ ಚಾಲನೆ ಮಾಡಿಕೊಂಡು ಹೋಗುತ್ತಾರೆ.

ಇದನ್ನೂ ಓದಿ: ಶ್ರೀಲೀಲಾ ಅಭಿನಯದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್!

ಈ ರೀಲ್ಸ್‌ ನೋಡಿದ ನೆಟ್ಟಿಗರು, ಅಣ್ಣ ತುಂಬಾ ಉಪಕಾರ ಮಾಡಿದ್ರಿ, ಫಸ್ಟ್ ತಗೊಂಡ್ ಹೋಗಿ ಕೆಆರ್‌ಎಸ್ ಡ್ಯಾಮ್‌ಗೆ ಆಕ್ಬಿಡು ದೇವರು ಒಳ್ಳೇದ್ ಮಾಡ್ತಾನೆ ನಿನಗೆ ಎಂದು ತಮ್ಮ ಗೋಳು ತೋಡಿಕೊಂಡಿದ್ದಾರೆ. ಇವ್ಳ ಕರ್ಕೊಂಡು ಹೋಗಿ ಕಾಡಲ್ಲಿ ಬಿಟ್ ಬಂದ್ಬಿಡು ಇಲ್ಲಿ ಇವರ ಕಾಟ ತಡೆಯೋಕೆ ಆಗ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page