Connect with us

LATEST NEWS

ಇದು ಕಳ್ಳನೊಬ್ಬ ಜಡ್ಜ್‌ ಆದ ರೋಚಕ ಕಥೆ..! ಜಡ್ಜ್‌ ಆಗಿ ಆತ ಮಾಡಿದ್ದೇನು ಗೊತ್ತಾ..?

Published

on

ನವದೆಹಲಿ : ಆತ ಖತರ್ನಾಕ್ ಕಳ್ಳ. ಭಾರತದ ಚಾರ್ಲ್ಸ್ ಎಂದೇ ಕುಖ್ಯಾತನಾಗಿದ್ದ. ಅವನ ಮಾಸ್ಟರ್ ಮೈಂಡ್ ಗೆ ಇಡೀ ದೇಶವೇ ಬೆರಗಾಗಿತ್ತು. ಆತನೇ ಧನಿ ರಾಮ್ ಮಿತ್ತಲ್. ನ್ಯಾಯಾಧೀಶರಂತೆ ನಟಿಸಿ, ಜೈಲಿನಲ್ಲಿದ್ದ 2 ಸಾವಿರಕ್ಕೂ ಅಧಿಕ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಿದ್ದ ಧನಿ ರಾಮ್ ಇಹಲೋಕ ತ್ಯಜಿಸಿದ್ದಾನೆ. ಆತನಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಏಪ್ರಿಲ್ 18ರಂದು ಆತ ನಿಧ*ನನಾಗಿದ್ದಾನೆ.

150 ಕ್ಕೂ ಹೆಚ್ಚು ಪ್ರಕರಣ:

ಮಿತ್ತಲ್ ವೈಯಕ್ತಿಕ ಖುಷಿಗಾಗಿ 1968 ರಿಂದ ಕಳ್ಳತನ ಮಾಡಲು ಪ್ರಾರಂಭಿಸಿದ್ದ. ಬೇರೆ ಬೇರೆ ಫ್ಯಾನ್ಸಿ ನಂಬರ್ ನ ಕಾರುಗಳನ್ನು ಕದಿಯುತ್ತಿದ್ದ. ಹರಿಯಾಣ, ಚಂಡೀಗಢ, ಪಂಜಾಬ್, ರಾಜಸ್ಥಾನಗಳಲ್ಲಿ 150ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಅಲ್ಲದೇ, ಆತ, 90ಕ್ಕೂ ಹೆಚ್ಚು ಬಾರಿ ಕಂಬಿ ಎಣಿಸಿದ್ದ. 1000ಕ್ಕೂ ಅಧಿಕ ವಂಚನೆ ಕೇಸ್ ಇವನ ಮೇಲಿತ್ತು. ತನ್ನ ವೈಯಕ್ತಿಕ ಬಳಕೆಗಾಗಿ ಹರಿಯಾಣದ ಝಜ್ಜರ್‌ ನ್ಯಾಯಾಲಯದ ಪಾರ್ಕಿಂಗ್ ಏರಿಯಾದಲ್ಲಿ ಕಾರೊಂದನ್ನು ಕಳವುಗೈದು ಸುದ್ದಿಯಾಗಿದ್ದ. ಕೊನೆಯದಾಗಿ 2017 ರಲ್ಲಿ ತನ್ನ 77 ನೇ ವಯಸ್ಸಿನಲ್ಲಿ ಕಾರು ಕಳ್ಳತನ ಮಾಡಿದ್ದಕ್ಕೆ 95ನೇ ಸಲ ಅರೆಸ್ಟ್ ಮಾಡಿದ್ದು ದಾಖಲೆಯಾಗಿತ್ತು.

ವೆಲ್ ಎಜ್ಯುಕೇಟೆಡ್ ಕಳ್ಳ :

ಅಂದಹಾಗೆ ಈತ ಕಾಂಜಿಪೀಂಜಿ ಕಳ್ಳ ಅಂದುಕೊಳ್ಳಬೇಡಿ. ಈತ ವೆಲ್ ಎಜ್ಯುಕೇಟೆಡ್ ಕಳ್ಳ. ಬಿಎಸ್ಸಿ ಪದವೀಧರ. ತನ್ನ ಓದಿಗೆ ಕೆಲಸ ಸಿಕ್ಕಿಲ್ಲವೆಂದು ಸ್ಟೇಷನ್ ಮಾಸ್ಟರ್ ಆಗಿ ಕೆಲಸಕ್ಕೆ ಸೇರಿದ್ದ. ತಾನಾಯ್ತು ತನ್ನ ಕೆಲಸವಾಯ್ತು ಅಂತ ಇದ್ದಿದ್ರೆ ಆಗ್ತಿತ್ತು. ಆದ್ರೆ, ಆತ ಕಳ್ಳತನಕ್ಕೆ ಕೈ ಹಾಕಿ ಕೆಲಸ ಕಳೆದುಕೊಂಡ. ಕೋರ್ಟ್ ಆವರಣದಲ್ಲಿ ಕಾರು ಕದ್ದು ಕೆಲಸ ಕಳೆದುಕೊಂಡ. ಬಳಿಕ, ಕಳ್ಳತನವೇ ಕಸುಬಾಯಿತು.

ಅಂದಹಾಗೆ, ಈತ ಕಾನೂನು ಪದವಿಯೂ ಮುಗಿಸಿದ್ದ. ಓದಿ ಜನರಿಗೆ ನ್ಯಾಯ ಕೊಡಿಸಬೇಕೆಂದು ಕಾನೂನು ಪದವಿ ಮಾಡುತ್ತಾರೆ. ಆದರೆ ಈತ ಜೈಲ್‌ಗೆ ಹೋಗುತ್ತಿದ್ದಾಗ ವಕೀಲರಿಗೆ ಫೀಸ್‌ ಕೊಡಬೇಕಾಗಿತ್ತು, ಅದೇ ನಾನೇ ಕಾನೂನು ಓದಿದರೆ ನಮ್ಮ ಕೇಸ್‌ ನಾನೇ ವಾದಿಸಬಹುದಲ್ವಾ ಎಂಬ ಉದ್ದೇಶದಿಂದ ಕಾನೂನು ಪದವಿ ಪೂರ್ಣಗೊಳಿಸುತ್ತಾನೆ. ಅಲ್ಲದೆ, ಕೋರ್ಟ್‌ನಲ್ಲಿ ತನ್ನ ಮೇಲಿದ್ದ ಕೇಸ್‌ಗಳನ್ನು ತಾನೇ ವಾದಿಸಿ ಗೆಲ್ಲುತ್ತಿದ್ದ.

ಜಡ್ಜ್ ಕೂಡ ಆದ ಖದೀಮ:

ಮಿತ್ತಲ್ ಜಡ್ಜ್ ಸೀಟ್ ನಲ್ಲೂ ಕೂತು ನ್ಯಾಯತೀರ್ಮಾನವನ್ನೂ ಮಾಡಿದ್ದ. ಆತ ಕಾನೂನು ಪದವಿಯನ್ನೂ ಮಾಡಿದ್ದ. ಹ್ಯಾಂಡ್ ರೈಟಿಂಗ್ ಅನಾಲಿಸಿಸ್ ಕೂಡ ಮಾಡಿದ್ದ. ಹೀಗಾಗಿ ಜಡ್ಜ್‌ ಪಕ್ಕದಲ್ಲೇ ಕುಳಿತುಕೊಳ್ಳವ ಕ್ಲರ್ಕ್ ಕೂಡ ಆಗಿ ಬಳಿಕ ಅಲ್ಲಿ ಖತರ್ನಾಕ್ ಕೆಲಸ ಮಾಡಿ ಜಡ್ಜ್ ಆಗಿದ್ದ. ಹರಿಯಾಣದ ಜಿಲ್ಲಾ ನ್ಯಾಯಾದೀಶರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಈತ ನಕಲಿ ಲೆಟರ್ ತಯಾರಿಸಿ ಜಡ್ಜನ್ನೇ 2 ತಿಂಗಳು ಮನೆಗೆ ಕಳುಹಿಸಿದ್ದ. ಬಳಿಕ ಮತ್ತೊಂದು ಲೆಟರ್ ತಯಾರಿಸಿ ಆ ನ್ಯಾಯಾಲಯಕ್ಕೆ ತನ್ನನ್ನೇ ಜಡ್ಜ್‌ ಆಗಿ ನೇಮಕ ಮಾಡಿಕೊಂಡಿದ್ದ.  ತಾನೇ ಬರೆದಿರುವ ಲೆಟರ್ ಇದಾಗಿದ್ರೂ, ಯಾರಿಗೂ ಅನುಮಾನ ಬಾರದಂತೆ ನಕಲಿ ಸೀಲ್‌ಗಳನ್ನು ಉಪಯೋಗಿಸಿ ಬರೆದಿದ್ದ. ಹೀಗೇ ಹೊಸ ಜಡ್ಜ್‌ ಆಗಿ ಕೋರ್ಟ್‌ಗೆ ಎಂಟ್ರಿ ಕೊಟ್ಟ ಈತ ಕೇವಲ 40 ದಿನದಲ್ಲಿ 2 ಸಾವಿರ ಖೈದಿಗಳನ್ನು ರಿಲೀಸ್ ಮಾಡಿದ್ದ. ಯಾವಾಗ ಈತನ ಮೇಲೆ ಅಧಿಕಾರಿಗಳಿಗೆ ಅನುಮಾನ ಬರಲು ಆರಂಭವಾಗಿತ್ತೋ ಆವಾಗ ಅಲ್ಲಿಂದ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ : WATCH VIDEO : ಮದುವೆಯಲ್ಲಿ ಪುರೋಹಿತರಿಗೆ ಯುವಕರ ಕೀಟಲೆ; ಛೇ! ಹೀಗೂ ಮಾಡ್ಬೋದಾ? ಎಂದ ನೆಟ್ಟಿಗರು

ಈತ ಬುದ್ದಿವಂತ ಅಪರಾಧಿ! 

ಕಳ್ಳತನ ಪ್ರಕರಣ ಸಾಮಾನ್ಯ. ಚಾಣಾಕ್ಷತನದಿಂದ ಕಳವುಗೈಯುವಲ್ಲಿ ಖದೀಮರು ನಿಸ್ಸೀಮರಾಗಿರುತ್ತಾರೆ. ಆದ್ರೆ, ಧನಿ ರಾಮ್ ಮಿತ್ತಲ್ ಮಾತ್ರ ಎಲ್ಲರಿಗಿಂತ ಒಂದು ಕೈ ಮೇಲು. ಭಾರತದ ಅತೀ ಹೆಚ್ಚು ಕಲಿತಿರುವ ಬುದ್ಧಿವಂತ ಅಪರಾಧಿ ಎಂಬ ಕುಖ್ಯಾತಿ ಈತನಿಗಿತ್ತು. ವಯಸ್ಸಾಗುತ್ತಿದ್ದಂತೆ ಕಳ್ಳತನ ಕೆಲಸ ಕಡಿಮೆ ಮಾಡುತ್ತಿದ್ದ. ಇಂತಹ ಭಯಂಕರ ಕಳ್ಳ ಇದೀಗ ಇಹಲೋಕ ತ್ಯಜಿಸಿದ್ದಾನೆ. ಆತನ ಮಗ ಈ ಬಗ್ಗೆ ಖಚಿತ ಪಡಿಸಿದ್ದಾರೆ.

FILM

ರಶ್ಮಿಕಾ ಮಂದಣ್ಣ ಮದ್ವೆ ಬೆನ್ನಲ್ಲೇ ಈ ಫೋಟೋ ಪೋಸ್ಟ್ ಮಾಡಿದ ನಟ ರಕ್ಷಿತ್ ಶೆಟ್ಟಿ..!

Published

on

ಕರಾವಳಿ ಮೂಲದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ಅವರ ಅಭಿಮಾನಿಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. ರಿಚರ್ಡ್ ಆ್ಯಂಟನಿ’ ಸಿನಿಮಾ ಘೋಷಣೆ ಮಾಡಿ ಹಲವು ಸಮಯ ಕಳೆದರೂ ಆ ಚಿತ್ರದ ಬಗ್ಗೆ ಯಾವುದೇ ಅಪ್​​ಡೇಟ್ ಇಲ್ಲ. ಈ ಎಲ್ಲ ವಿಷಯದಲ್ಲಿ ಫ್ಯಾನ್ಸ್​ಗೆ ಬೇಸರ ಇದೆ. ಹೀಗಿರುವಾಗಲೇ ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಬೇಸರದ ಮುಖ ಭಾವವಿರುವ ಫೋಟೋನ ಪೋಸ್ಟ್ ಮಾಡಿದ್ದಾರೆ. ಈ ಫೋಟೋನ ರಕ್ಷಿತ್ ಹಂಚಿಕೊಂಡಿದ್ದೇಕೆ ಎಂಬ ಪ್ರಶ್ನೆ ಮತ್ತು ಕುತೂಹಲ ಅಭಿಮಾನಿಗಳದ್ದು.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ ನಟ ವಿಜಯ ದೇವರಕೊಂಡ ಅವರ ಕೈ ಹಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೆಲ್ಲ ಅವರ ವಿವಾಹದ ಫೋಟೋಗಳು ಸಖತ್ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಬೇಸರದಲ್ಲಿರೋ ಫೋಟೋನೇ ಪೋಸ್ಟ್ ಮಾಡಿದ್ದು ಅಚ್ಚರಿ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಇವರ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಗಳನ್ನು ಹಾಕಿದ್ದಾರೆ. ‘ಹಳೆಯದನ್ನು ಮರೆತು ಮುಂದೆ ಸಾಗಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ಕಂಬ್ಯಾಕ್ ಬೇರೆಯವರಿಗೆ ಸ್ಲಿಪ್ಪರ್ ಶಾಟ್ ಆಗಬೇಕು’ ಎಂದು ಬರೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇದ್ದಿದ್ದು ಕಡಿಮೆ. ಆದರೆ ಏಕಾಏಕಿ ಚಾರ್ಲಿ ಸಿನಿಮಾದ ಈ ಫೋಟೋ ಪೋಸ್ಟ್ ಮಾಡಿದ್ದು ಯಾಕೆ ಎಂಬ ಕ್ಯೂರಾಸಿಟಿ ಮಾತ್ರ ಜಾಸ್ತಿಯಾಗಿದೆ.

Continue Reading

LATEST NEWS

ರಾಜ್ಯ ಸರ್ಕಾರ ಮಂಡಿಸಿದ್ದು ನಿರಾಶಾದಾಯಕ ಬಜೆಟ್: ಉದಯ್ ಕುಮಾರ್ ಶೆಟ್ಟಿ

Published

on

ಉಡುಪಿ: ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದೆ. ಯಾವುದೇ ದೂರದೃಷ್ಟಿ ಇಲ್ಲದ ಕಾಟಾಚಾರದ ಬಜೆಟ್ ಇದಾಗಿದೆ. ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ರು. ಆದರೆ ಬಹುಪಾಲು ಯೋಜನೆಗಳು ಹಳ್ಳ ಹಿಡಿದಿದೆ ಎಂದು ಬಿಜೆಪಿ ಮುಖಂಡ ಉದಯ್ ಕುಮಾರ್ ಶೆಟ್ಟಿ ವ್ಯಂಗ್ಯವಾಡಿದರು.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಕರಾವಳಿ ಜಿಲ್ಲೆಗಳಿಗೆ ವಿಶೇಷ ಸವಲತ್ತುಗಳು ನೀಡಬೇಕು ಅನ್ನೊ‌ ನಿರೀಕ್ಷೆ ಇತ್ತು ಅದ್ರೆ ಯಾವುದೇ ಸೌಲಭ್ಯ ನೀಡಿಲ್ಲ. ಯುವ ನಿಧಿ ಯೋಜನೆಯನ್ನು ಆರಂಭಿಸಿದ್ರು ಯುವಜನತೆಗೆ ಪ್ರಯೋಜನ ಅಗಿಲ್ಲ.

ಇದನ್ನೂ ಓದಿ: ಸಿದ್ಧರಾಮಯ್ಯ ದಾಖಲೆ ಬಜೆಟ್ ಬಿಟ್ಟರೆ ನ್ಯಾಯ ಸಿಕ್ಕಿಲ್ಲ: ಸಂಸದ ಕೋಟ

ಆಶಾದಾಯಕ ಬಜೆಟ್ ಅನ್ನೋ ನಿರೀಕ್ಷೆ ಸುಳ್ಳಾಗಿದೆ. ಗೋವು ಸಾಗಾಟ ಬಗ್ಗೆ ಕಟ್ಟುನಿಟ್ಟಾದ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ. ಇನ್ನು ಗೋ ರಕ್ಷಣೆ ಶಿಬಿರ ನಡೆಸಲು ಕಾಂಗ್ರೆಸ್ ಮುಂದಾಗಿರೋದು ಅಭಾಸ ಸಂಗತಿ ಎಂದು ಹೇಳಿದರು.

Continue Reading

DAKSHINA KANNADA

ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ: ಸಚಿವ ದಿನೇಶ್ ಗುಂಡೂ ರಾವ್ ವಿರುದ್ಧ ಶಾಸಕ ಕಾಮತ್ ಗರಂ

Published

on

ಮಂಗಳೂರು: ನಗರದ ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ. ರಾಜ್ಯ ಸರಕಾರ ಈ ಯೋಜನೆಗೆ ಚಿಕ್ಕಾಸು ನೀಡದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ದಿನೇಶ್ ಗುಂಡೂ ರಾವ್ ಅವರು ಶಿಲಾನ್ಯಾಸ ನೆರವೇರಿಸಿದ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಗರಂ ಆಗಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಪಚ್ಚನಾಡಿ ಎಸ್.ಟಿ.ಪಿ ಆವರಣದಲ್ಲಿ ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಮತ್ತು ಉನ್ನತೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಗುದ್ದಲಿ ಪೂಜೆ ನಡೆಸಿ, ಮಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ವಾಸ್ತವದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವು ಕ್ಷೇತ್ರದ ಅಭಿವೃದ್ಧಿಗೆ ಕಳೆದ ಎರಡೂ ವರ್ಷಗಳಿಂದ ನಯಾ ಪೈಸೆ ನೀಡಿಲ್ಲ. ಮೊದಲು ಆ ಅನುದಾನ ಬಿಡುಗಡೆಗೊಳಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಲಿ. ಸ್ವಚ್ಛ ಭಾರತ ಮಿಷನ್ 2.0 ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಡಿ, ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಸ್.ಟಿ.ಪಿ. ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಇದು ಸಂಪೂರ್ಣ ಕೇಂದ್ರ ಸರಕಾರದ ಅನುದಾನವಾಗಿದೆ.

ಇದನ್ನೂ ಓದಿ: ಸಿದ್ಧರಾಮಯ್ಯ ದಾಖಲೆ ಬಜೆಟ್ ಬಿಟ್ಟರೆ ನ್ಯಾಯ ಸಿಕ್ಕಿಲ್ಲ: ಸಂಸದ ಕೋಟ

ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾದ ಮಂಗಳೂರು ಉತ್ತರ ಹಾಗೂ ದಕ್ಷಿಣದ ಶಾಸಕರ ಸಹಿತ ಇಲ್ಲಿನ ಸಂಸದರಿಗೆ ಸರಿಯಾಗಿ ಮಾಹಿತಿ ನೀಡದಿರುವುದು ಮಂಗಳೂರಿಗೆ ಹಾಗೂ ಇಲ್ಲಿನ ಜನತೆಗೆ ಮಾಡುವ ಅವಮಾನವಾಗಿದೆ ಎಂದರು.

Continue Reading
Advertisement

Trending

Copyright © 2025 Namma Kudla News

You cannot copy content of this page