Connect with us

LATEST NEWS

ಪ್ರವಾಸೋದ್ಯಮಕ್ಕೆ ಹಿನ್ನಡೆ: ಪ್ರವಾಸಿಗರನ್ನು ಆಕರ್ಷಿಸಲು ಸಾಮಾಜಿಕ ಮಾಧ್ಯಮದ ಅಭಿಯಾನಕ್ಕೆ ಮುಂದಾದ ಕೇರಳ

Published

on

ತಿರುವನಂತಪುರ: ಇತ್ತೀಚೆಗೆ ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಪ್ರವಾಸಿಗರಿಗೆ ಕೇರಳ ಸುರಕ್ಷಿತವಲ್ಲ ಎನ್ನುವ ಕಳವಳವನ್ನು ಹೋಗಲಾಡಿಸಿ ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಕೇರಳ ಸರ್ಕಾರ ಯೋಜಿಸಿದೆ.

ಈ ಕುರಿತು ಕೇರಳ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ. ಎ. ಮೊಹಮ್ಮದ್ ರಿಯಾಸ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ‘ಜುಲೈ 30 ರಂದು ರಾಜ್ಯದ ಉತ್ತರ ಜಿಲ್ಲೆಯಲ್ಲಿ ಸಂಭವಿಸಿದ ದುರಂತವನ್ನು ‘ವಯನಾಡ್ ದುರಂತ’ ಎಂದು ಕರೆಯುತ್ತಿರುವುದು ‘ದುಃಖಕರ‘ ಸಂಗತಿಯಾಗಿದೆ. ಭೂಕುಸಿತ ಸಂಭವಿಸಿದ ಚೂರಲ್ ಮಲ ವಯನಾಡ್ ನ ಒಂದು ಭಾಗ ಮಾತ್ರ. ಆದರೆ ವಯನಾಡ್ ದುರಂತ ಎಂದು ಸುದ್ದಿ ಹರಡಿದ ಪರಿಣಾಮ, ಜನರು ಇದನ್ನು ಇಂಟರ್ ನೆಟ್ ನಲ್ಲಿ ಹುಡುಕುತ್ತಿದ್ದಾರೆ. ಜತೆಗೆ ವಯನಾಡಿನಲ್ಲಿ ಏನೋ ನಡೆಯುತ್ತಿದೆ ಎಂದು ಯೋಚಿಸುತ್ತಿದ್ದಾರೆ. ಇದೇ ಕಾರಣದಿಂದ ರೆಸಾರ್ಟ್ ಗಳ ಬುಕಿಂಗ್ ಗಳನ್ನೂ ರದ್ದು ಮಾಡುತ್ತಿದ್ದಾರೆ’ ಎಂದರು.

‘ಚೂರಲ್ಮಲದಲ್ಲಿ ಸಂಭವಿಸಿದ ದುರಂತವು ವಯನಾಡ್ ಪ್ರವಾಸೋದ್ಯಮಕ್ಕೆ ಮಾತ್ರವಲ್ಲ, ಕೇರಳ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ವಯನಾಡ್ ಪ್ರವಾಸಕ್ಕೆ ಸುರಕ್ಷಿತವಲ್ಲ ಎನ್ನುವ ಜನರ ಮನಸ್ಥಿತಿಯನ್ನು ದೂರಮಾಡಲು ನಿರ್ಧರಿಸಿದ್ದೇವೆ’ ಎಂದು ಸಚಿವರು ತಿಳಿಸಿದರು.

‘ಕಡಲತೀರಗಳು, ಬೆಟ್ಟಗಳು, ಚಹಾ ತೋಟಗಳು ಮತ್ತು ಜಲಪಾತಗಳಿಂದ ತುಂಬಿರುವ ದಕ್ಷಿಣ ಭಾರತದ ರಾಜ್ಯಕ್ಕೆ ಅತಿದೊಡ್ಡ ಆದಾಯವನ್ನು ಗಳಿಸುವ ಮೂಲವಾಗಿದೆ. ಭೂಕುಸಿತದಿಂದ ಹಾನಿಗೊಳಗಾದ ಸ್ಥಳಗಳು ವಯನಾಡ್ ಅತಿ ಆಕರ್ಷಕ ಸ್ಥಳಗಳಲ್ಲ. ಅವು 10 ಅಥವಾ 15 ನೇ ಸ್ಥಾನದಲ್ಲಿವೆ. ಅವುಗಳ ಹೊರತಾಗಿ ವಯನಾಡಿನಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ’ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಓಣಂ ಋತುವಿನ ಪೂರ್ವದಲ್ಲಿ ವಯನಾಡ್ ನಲ್ಲಿ ಬ್ಲಾಗರ್ ಗಳ ಭೇಟಿ ಮಾಡುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲು ಮುಂದಾಗಿದೆ.

LATEST NEWS

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿ ಬಿದ್ದ ಕ್ರೇನ್

Published

on

ಮೂಡಬಿದಿರೆ: ಬೃಹತ್‌ ಕ್ರೇನ್‌ವೊಂದು ಕಾರಿಗೆ ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಪರಿಣಾಮ ಮನೆ ಹಾನಿಗೋಳಗಾದ ಘಟನೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೊರಂತಬೆಟ್ಟು ಬಳಿ ಶುಕ್ರವಾರ(ಡಿ.5) ನಡೆದಿದೆ.


ಮುಲ್ಕಿ-ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಲ್ಲಮುಂಡ್ಕೂರಿನ ಮೊರಂತಬೆಟ್ಟುವಿನ ತಿರುವಿನಲ್ಲಿ ಅತೀವೇಗವಾಗಿ ಸಂಚರಿಸುತ್ತಿದ್ದ ಕ್ರೇನ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆ ಮೇಲೆ ಉರುಳಿ ಬಿದ್ದಿದ್ದೆ. ಇದರಿಂದ ಮನೆ ಜಖಂಗೊಂಡಿದೆ.


ಇದನ್ನೂ ಓದಿ: ಅನೆಕಲ್‌: ಎಲೆಕ್ಟ್ರಾನಿಕ್‌ ಸಿಟಿ ಫ್ಲೈ ಓವರ್‌ ಮೇಲೆ ಸರಣಿ ಅಪಘಾತ; ಬೈಕ್‌ ಸವಾರನಿಗೆ ಗಂಭೀರ ಗಾಯ

ಘಟನೆ ವೇಳೆ ಮನೆಮಂದಿ ಮನೆಯ ಇನ್ನೊಂದು ಪಾರ್ಶ್ವದಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಮೂಡಬಿದಿರೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Continue Reading

LATEST NEWS

ವಧು-ವರ ಇಲ್ಲದೇ ನಡೆಯಿತು ಆರತಕ್ಷತೆ; ಕಾರಣ ವಿಮಾನ!?

Published

on

ಹುಬ್ಬಳ್ಳಿ: ಮದುವೆ ಆರತಕ್ಷತೆ ಕಾರ್ಯಕ್ರಮ ಸಾಮಾನ್ಯವಾಗಿ ಬಹಳ ಅದ್ದೂರಿಯಿಂದ ನಡೆಯುತ್ತದೆ. ಮದುವೆ ಮಂಟಪ ಅಲಂಕಾರ, ವಧು-ವರನ ಶೃಂಗಾರ ಹೀಗೆ ಎಲ್ಲ ವಿಷಯದಲ್ಲೂ ಗಮನ ಸೆಳೆಯುತ್ತದೆ. ಆದರೆ ಹುಬ್ಬಳಿಯಲ್ಲಿ ವಧು-ವರ ಇಲ್ಲದೇ ಆರತಕ್ಷತೆ ನಡೆದಿದೆ.


ಹೌದು, ಹುಬ್ಬಳ್ಳಿಯಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮ ಈಗ ಎಲ್ಲರ ಗಮನ ಸೆಳೆದಿದೆ. ಇಂಡಿಗೋ ವಿಮಾನ ರದ್ದಾಗಿರುವ ಕಾರಣ ವಧು-ವರರು ಇಲ್ಲದೇ ಆರತಕ್ಷತೆ ಕಾರ್ಯಕ್ರಮ ಆನ್‌ಲೈನ್ ಮೂಲಕ ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ನಡೆದಿದೆ.

ಭುವನೇಶ್ವರದಲ್ಲಿ ವಧು ಮೇಧಾ ಕ್ಷೀರಸಾಗರ ಹಾಗೂ ವರ ಸಂಗಮ ದಾಸ್ ಅವರು ನವೆಂಬರ್ 23ರಂದು ಮದುವೆಯಾಗಿದ್ದರು. ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ಬುಧವಾರ(ಡಿ.3) ನವ ಜೋಡಿಯ ಆರತಕ್ಷತೆ ಆಯೋಜಿಸಿದ್ದರು. ಮದುವೆ ಬಳಿಕ ಬೆಂಗಳೂರಿಗೆ ತೆರಳಿದ್ದ ಇವರು ಅಲ್ಲಿಂದ ಹುಬ್ಬಳ್ಳಿಗೆ ಬರಲು ಡಿ.2ಕ್ಕೆ ಭುವನೇಶ್ವರ-ಮುಂಬೈ-ಹುಬ್ಬಳ್ಳಿ ಮಾರ್ಗದಲ್ಲಿ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು.

ಆದರೆ ಏಕಾಏಕಿಯಾಗಿ ಡಿಸೆಂಬರ್‌ 3ರಂದು ಇಂಡಿಗೋ ಏರ್‌ಲೈನ್‌ ರದ್ದುಗೊಂಡಿರುವ ಪರಿಣಾಮ ನೂತನ ವಧು-ವರ ಆರತಕ್ಷತೆ ಕಾರ್ಯಕ್ರಮಕ್ಕೆ ಬರಲು ಆಗದೆ ತೊಂದರೆ ಅನುಭವಿಸಿದ್ದಾರೆ. ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತು, ಶಾಸ್ತ್ರಗಳನ್ನು ನಡೆಸಿದರು. ಅತ್ತ ವಧು-ವರ ಭುವನೇಶ್ವರದಲ್ಲೇ ಸಿದ್ಧರಾಗಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರತಕ್ಷತೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಂಡಿಗೋದಲ್ಲಿ ಉಂಟಾಗಿರುವ ಭಾರೀ ಅಡಚಣೆ; ಮಂಗಳೂರು ವಿಮಾನ ನಿಲ್ದಾಣದಲ್ಲೂ 17 ವಿಮಾನ ವಿಳಂಬ

ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದಿಂದ ಅನೇಕರು ಪರದಾಡುತ್ತಿದ್ದರೆ, ಹುಬ್ಬಳ್ಳಿಯಲ್ಲಿ ನಡೆದ ಈ ಘಟನೆ ಎಲ್ಲರ ಗಮನ ಸೆಳೆದಿದೆ.

Continue Reading

DAKSHINA KANNADA

ಡಿ.28 : ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಮಹಾಸಭೆ, ಸಾಧಕರಿಗೆ ಸನ್ಮಾನ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಇದರ 87ನೇ ವಾರ್ಷಿಕ ಮಹಾಸಭೆ ಬಂಗ್ರ ಕೂಳೂರಿನ ಮಡಿವಾಳ ಸಭಾಭವನದ ಅಮೃತ ಸಭಾಂಗಣದಲ್ಲಿ ಡಿಸೆಂಬರ್ 28ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.


ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ ಎನ್ ಪ್ರಕಾಶ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ, ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಮ್ ಎನ್ ಶಿವಲಿಂಗಪ್ಪ, ಹುಬ್ಬಳ್ಳಿ ಗೋಕುಲ್ ಹೊಟೇಲ್‌ ಮಾಲಕಿ ಡಾ ಸರಳ ರಮೇಶ್ ಕುಂದರ್‌, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಮಡಂತ್ಯಾರಿನ ಬ್ರಾಂಚ್‌ ಮ್ಯಾನೇಜರ್‌ ಓಂ ಪ್ರಸಾದ್ ಕೆ. ಆಗಮಿಸಲಿದ್ದಾರೆ. ಮಂಗಳೂರು ರಜತ ಯೂತ್‌ನ ಅಧ್ಯಕ್ಷ ಸಂಪತ್‌ ಕೊಂಡಾಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾಂಜಲಿ ನಾರಾಯಣ ಬಿಜೈ ಉಪಸ್ಥಿತರಿರುವರು.

ಇದೇ ವೇಳೆ ಹಿರಿಯ ದೈವಾರಾಧಕರಾದ ಹರೀಶ್ ಸೊರಕೆ, ಹಿರಿಯ ಕುಲಕಸಬುದಾರರಾದ ಸೋಮನಾಥ ಮಡಿವಾಳ ಗುರುಪುರ, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಕೀರ್ತನ್‌ ಕಟೀಲು ಇವರಿಗೆ ಸನ್ಮಾನ ನಡೆಯಲಿದೆ. ಅಪರಾಹ್ನ 3 ಗಂಟೆ ಬಳಿಕ ಸಂಘದ ಸದಸ್ಯರು ಹಾಗೂ ಮಹಿಳಾ ಘಟಕದ ಸದಸ್ಯೆಯರಿಂದ ಸಾಂಸ್ಕೃತಿಕ ನೃತ್ಯ ವೈಭವ ನಡೆಯಲಿದೆ.

ಇದನ್ನೂ ಓದಿ: ವೀರಭಾರತಿ ವ್ಯಾಯಾಮ ಶಾಲೆ ಬೆಂಗ್ರೆ ಮಂಗಳೂರು; ನೂತನ ಗರ್ಭಗುಡಿಯ ಹಾಗೂ ಕಟ್ಟಡದ ಶಿಲಾನ್ಯಾಸ ಸಮಾರಂಭ

ಡಿ.14ರಂದು ಕ್ರೀಡಾಕೂಟ: 87ನೇ ವಾರ್ಷಿಕ ಮಹಾಸಭೆಯ ಅಂಗವಾಗಿ ಮಡಿವಾಳ ಸ್ವಜಾತಿ ಬಾಂಧವರಿಗಾಗಿ ಆಟೋಟ, ಕ್ರಿಕೆಟ್‌ ಹಾಗೂ ಇನ್ನಿತರೆ ಸ್ಪರ್ಧೆಗಳನ್ನು ಡಿಸೆಂಬರ್ 14ರಂದು ಬೆಳಿಗ್ಗೆ 9ಕ್ಕೆ ನಂತೂರಿನ ಪಾದುವಾ ಹೈಸ್ಕೂಲ್‌ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಪ್ರಕಟಣೆ ತಿಳಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page