Connect with us

LATEST NEWS

ಇಂದಿನಿಂದ ಮಂಗಳೂರು-ಕಾಸರಗೋಡು ಬಸ್‌ ಸಂಚಾರ ಬಂದ್‌: ಜಿಲ್ಲಾಧಿಕಾರಿ

Published

on

ಮಂಗಳೂರು: ಸಾರ್ವಜನಿಕ ಹಿತದೃಷ್ಟಿಯಿಂದ ಕಾಸರಗೋಡು ಹಾಗೂ ಮಂಗಳೂರು ನಡುವಿನ ಕೆಎಸ್ಸಾರ್ಟಿಸಿ ಮತ್ತು ಎಲ್ಲ ಖಾಸಗಿ ಬಸ್‌ಗಳ ಸಂಚಾರವನ್ನು ಒಂದು ವಾರದವರೆಗೆ ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನಿನ್ನೆ ಆದೇಶ ಹೊರಡಿಸಿದ್ದಾರೆ.


ಆ. 1ರಿಂದ 7ರವರೆಗೆ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾಸರಗೋಡಿನಿಂದ ದ.ಕ. ಜಿಲ್ಲೆಗೆ ದಿನಂಪ್ರತಿ ಪ್ರಯಾಣಿಸುವವರು, ಕಾಲೇಜು ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿದ್ದರೂ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯ ಆಧಾರದಲ್ಲಿ ಏಳು ದಿನಗಳ ಅವಧಿಗೆ ಅನುಮತಿಸಲಾಗುವುದು ಎಂದು ತಿಳಿಸಿದ್ದಾರೆ.
ವೈದ್ಯಕೀಯ ತುರ್ತು ಸೇವೆ, ಆ್ಯಂಬುಲೆನ್ಸ್ ಹಾಗೂ ಅಂತರ್ ರಾಜ್ಯ ಸರಕು ಸಾಮಗ್ರಿಗಳ ಸಾಗಾಟಕ್ಕೆ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

DAKSHINA KANNADA

ತಲಪಾಡಿ: ಟ್ಯಾಂಕರ್ ಗೆ ಗುದ್ದಿದ ಕಾರು, ತಪಾಸಣೆ ವೇಳೆ ಕಾರಿನಲ್ಲಿ ಸಿಕ್ತು ಲಕ್ಷಾಂತರ ಮೌಲ್ಯದ ಡ್ರಗ್ಸ್..!

Published

on

ಉಳ್ಳಾಲ: ಕಾರೊಂದು ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದು ಕಾರಿನೊಳಗೆ ಲಕ್ಷಾಂತರ ರೂ. ಮೌಲ್ಯದ ನಿಷೇಧಿತ ಎಂಡಿಎಂಎ ಪತ್ತೆಯಾದ ಘಟನೆ ಮಂಗಳೂರು ಹೊರ ವಲಯದ ತಲಪಾಡಿಯಲ್ಲಿ ಇಂದು ನಡೆದಿದೆ.

ಮಂಗಳೂರಿನಿಂದ‌ ಉಪ್ಪಳದ ಕಡೆಗೆ ಬರುತ್ತಿದ್ದ ಕಾರು ತಲಪಾಡಿಯ ಆರ್ ಟಿಓ ಚೆಕ್ ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ  ಆದಮ್‌ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಪೊಲೀಸರು ತನಿಖೆಗೆ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಸುಮಾರು 78 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಕಾರು ಚಾಲಕ ಸಿದ್ಧೀಕ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಸಿದ್ಧೀಕ್ ಮತ್ತು ಆದಮ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳೆಂದು ತಿಳಿದುಬಂದಿದೆ. ಅಪಘಾತದ ಕುರಿತಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

 

Continue Reading

LATEST NEWS

3 ತಿಂಗಳ ಬಳಿಕ ಮತ್ತೆ ಕೈ ಸೇರಿದ ಮೊಬೈಲ್, ಉಡುಪಿ ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ 60 ಮಂದಿ

Published

on

ಉಡುಪಿ: ಜಿಲ್ಲಾ ನಗರ ಠಾಣೆ ಪೊಲೀಸರಿಂದ ಮೊಬೈಲ್ ಕಳೆದುಕೊಂಡಿದ್ದ 60 ಮಂದಿಗೆ ಮೊಬೈಲ್ ಹಸ್ತಾಂತರ ಮಾಡಲಾಗಿದೆ. 8 ಲಕ್ಷದ 83 ಸಾವಿರದ 400 ರೂ. ಮೌಲ್ಯದ 60 ಮೊಬೈಲ್ ಹಸ್ತಾಂತರ ಮಾಡಲಾಗಿದ್ದು ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಮಂದಹಾಸ ಮೂಡಿದೆ.

ಮೊಬೈಲ್ ಕಳೆದುಕೊಂಡಿದ್ದವರಿಂದ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಾಗಿತ್ತು. ಸಿಎಐಆರ್ ನಲ್ಲಿ ದಾಖಲಾಗಿದ್ದ ದೂರನ್ನು ಆಧರಿಸಿ ಮೂರು ತಿಂಗಳಲ್ಲಿ 60 ಮಂದಿಯ ಮೊಬೈಲ್ ಟ್ರೇಸ್ ಮಾಡಲಾಗಿದೆ. ಮೊಬೈಲ್ ವಶಕ್ಕೆ ಪಡೆದು ಸೂಕ್ತ ದಾಖಲೆ ಮೇಲೆ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ.

ಮೂರು ತಿಂಗಳ ಬಳಿಕ ಮೊಬೈಲ್ ಕಂಡು ವಾರೀಸುದಾರರು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಸಲಹೆ ನೀಡಿದ  ಡಿವೈಎಸ್ಪಿ ಡಿ.ಟಿ ಪ್ರಭು ಮೊಬೈಲ್ ಕಳೆದುಕೊಂಡರೆ ಗಾಬರಿಯಾಗದೆ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಿಸಿ. ಈ ವರ್ಷ ಸಿಎಐಆರ್ ಪೋರ್ಟಲ್ ನಲ್ಲಿ ಮೊಬೈಲ್ ಕಳವು ದೂರು ಹೆಚ್ಚಾಗಿದೆ ಎಂದು ಹೇಳಿದರು.

Continue Reading

LATEST NEWS

ಸೈಕಲ್ ಆಟವಾಡುತ್ತಾ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದ ಬಾಲಕ ಸಾವು

Published

on

ಹಾಸನ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಚಿಕ್ಕ ಮಕ್ಕಳ ಮೇಲೆ ಅದೆಷ್ಟೇ ನಿಗಾ ವಹಿಸಿದರೂ ಕೂಡಾ ದುರ್ಘಟನೆಗಳು ನಡೆಯುತ್ತಿರುತ್ತದೆ. ಇದಕ್ಕೆ ಮತ್ತೊಂದು ರೀತಿಯಾಗಿ ಪೋಷಕರ ಬೇಜವಾಬ್ದಾರಿತನವೂ ಕೂಡಾ ಕಾರಣವಾಗಿರುತ್ತದೆ.

ಸೈಕಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ನೀರಿನ ಸಂಪ್‌ಗೆ ಬಿದ್ದು ಪುಟ್ಟ ಬಾಲಕನೋರ್ವ ಮೃತಪಟ್ಟಿರುವ ಘಟನೆ ಹಾಸನದ ಅಣಚಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಎಡನ್ ಸ್ವೀವ್ (4) ಮೃತ ಬಾಲಕ. ಮನೆಯ ಮುಂದೆ ಎಡನ್ ಸ್ವೀವ್ ಆಟವಾಡುತ್ತಿದ್ದ.

ಈ ವೇಳೆ ಪೋಷಕರು ಮನೆಯೊಳಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮನೆಯಿಂದ ಹೊರ ಬಂದ ಪೋಷಕರು ಮಗುವಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ನೀರಿನ ಸಂಪ್ ಬಳಿ ಮಗುವಿನ ಸೈಕಲ್ ಬಿದ್ದಿದ್ದು ಸಂಪ್ ಪರಿಶೀಲಿಸಿದಾಗ ಶವ ನೀರಿನಲ್ಲಿ ತೇಲುತ್ತಿರುವುದು ಕಾಣಿಸಿದೆ.

ಕೂಡಲೇ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page