Connect with us

LATEST NEWS

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ..!

Published

on

ಕಾಸರಗೋಡಿನಲ್ಲಿ ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಾಸರಗೋಡಿನ ಬಂದಡ್ಕದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಕಾಸರಗೋಡು : ಕಾಸರಗೋಡಿನಲ್ಲಿ ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಾಸರಗೋಡಿನ ಬಂದಡ್ಕದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಬಂದಡ್ಕ ಮಾಲಕುಂಡ ಇಲ್ಲತಿಂಗಲ್ ನ ಕೆ. ವಿ ಶರಣ್ಯ (17) ಮೃತಪಟ್ಟ ಯುತಿಯಾಗಿದ್ದಾಳೆ.

ಬಂದಡ್ಕ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದಳು.

ಕೆಲಸ ಮುಗಿಸಿ ತಾಯಿ ಸುಜಾತಾ ಸಂಜೆ ಮನೆಗೆ ಬಂದಾಗ ಶರಣ್ಯ ನಾಪತ್ತೆಯಾಗಿದ್ದು, ಕಿಟಿಕಿ ಮೂಲಕ ಗಮನಿಸಿದಾಗ ಮೃತಪಟ್ಟ ಸ್ಥಿತಿಯಲ್ಲಿ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದಾಳೆ.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಂಚದಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿದ್ದಳು ಮತ್ತು ಕೋಣೆಯ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು.

ಅಕ್ಕಪಕ್ಕದವರಿಗೆ ಮಾಹಿತಿ ನೀಡಲಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

DAKSHINA KANNADA

ಬಸ್‌ನಲ್ಲಿ ಯುವತಿಯ ಮೈಮುಟ್ಟಿ ಅಸಭ್ಯ ವರ್ತನೆ; ಬಸ್ ನಿರ್ವಾಹಕನನ್ನು ಬಂಧಿಸಿದ ಕೊಣಾಜೆ ಪೊಲೀಸರು

Published

on

ಉಳ್ಳಾಲ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿದ ಸರ್ಕಾರಿ ಬಸ್ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.

 

ಮುಡಿಪು ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ ನಲ್ಲಿ ಯುವತಿಗೆ ಬಸ್ ನಿರ್ವಾಹಕ ಕಿರುಕುಳ ನೀಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಆಧಾರದಲ್ಲಿ ಕೊಣಾಜೆ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ಆರೋಪಿ ನಿರ್ವಾಹಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Watch Video: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಸ್ ನಿರ್ವಾಹಕನ ಅಸಭ್ಯ ವರ್ತನೆ

ಆರೋಪಿ ಪ್ರದೀಪ್ ಕಶಪ್ಪ ನಾಯ್ಕರ್ ಎಂದು ಗುರುತಿಸಲಾಗಿದ್ದು, ಆರೋಪಿಯ ವಿರುದ್ಧ ಬಿಎನ್ ಎಸ್ 75 ಮತ್ತು 76 ರಂತೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

LATEST NEWS

ಜಮ್ಮು:  ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ; ಓರ್ವ ಯೋಧ ಹು*ತಾತ್ಮ

Published

on

ಮಂಗಳೂರು/ಜಮ್ಮು : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾ*ಳಿ ದೇಶವನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲದೇ ಭಯೋತ್ಪಾದಕರ ಕ್ರೌ*ರ್ಯಕ್ಕೆ ಭಾರತೀಯರು ಆಕ್ರೋಶಗೊಂಡಿದ್ದಾರೆ. ಭಾರತೀಯ ಸೇನೆ ಉ*ಗ್ರರನ್ನು ಮಟ್ಟ ಹಾಕಲು ಕಾರ್ಯಾಚರಣೆಗಿಳಿದಿವೆ. ಜಮ್ಮುವಿನ ಉಧಂಪುರ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ತಡರಾತ್ರಿ ಸೇನಾ ಕಾರ್ಯಾಚರಣೆ ನಡೆದಿದ್ದು, ಯೋಧರೊಬ್ಬರು ಹು*ತಾತ್ಮರಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸೇನಾ ತುಕಡಿಗಳು ಡುಡು ಬಸಂತ್‌ಗರ್ ಬಳಿಯ ಕಾಡಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉ*ಗ್ರರು ಹಾಗೂ ಯೋಧರ ನಡುವೆ ಗುಂ*ಡಿನ ಕಾ*ಳಗ ನಡೆದಿದೆ. ಈ ವೇಳೆ ಯೋಧರೊಬ್ಬರು ತೀವ್ರವಾಗಿ ಗಾ*ಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃ*ತರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.

ಸ್ಥಳದಲ್ಲಿ ಉಗ್ರರ ಪತ್ತೆ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಉಗ್ರರ ಸುಳಿವು ನೀಡಿದವರಿಗೆ 20ಲಕ್ಷ ರೂ. ಬಹುಮಾನ ಘೋಷಣೆ

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭ*ಯೋತ್ಪಾದಕರು ಮಂಗಳವಾರ(ಎ.22) ಗುಂ*ಡಿನ ದಾ*ಳಿ ನಡೆಸಿದ್ದರು. ಇಬ್ಬರು ಕನ್ನಡಿಗರು ಸೇರಿ 28 ಮಂದಿ ಜೀ*ವ ಕಳೆದುಕೊಂಡಿದ್ದು, 20 ಜನರು ಗಾ*ಯಗೊಂಡಿದ್ದರು.

Continue Reading

LATEST NEWS

Watch video: ಇಶಾನ್ ವಿರುದ್ದ ಕೇಳಿಬಂತು ಮ್ಯಾಚ್ ಫಿಕ್ಸಿಂಗ್ ಆರೋಪ

Published

on

ಮಂಗಳೂರು/ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ನ 41ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಮುಂಬೈ ಇಂಡಿಯನ್ಸ್ ಜಯ ಗಳಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 35 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆದರೆ ಈ ಪಂದ್ಯದಲ್ಲಿ ಇಶಾನ್ ಕಿಶನ್ ವಿಕೆಟ್ ವಿಚಾರದಲ್ಲಿ ವಿವಾದ ಭುಗಿಲೆದ್ದಿದೆ.

ನಿನ್ನೆ (ಏಪ್ರಿಲ್ 23) ಹೈದರಾಬಾದ್‌ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಇಶಾನ್ ಕಿಶನ್ ಸಂಪೂರ್ಣವಾಗಿ ವಿಫಲಗೊಂಡು ನಾಲ್ಕು ಎಸೆತಗಳನ್ನು ಆಡಿ ಪೆವಿಲಿಯನ್ ತಲುಪಿದರು. ಆದಾಗ್ಯೂ, ಈ ಪಂದ್ಯದಲ್ಲಿ ಇಶಾನ್ ಔಟಾದದ್ದು ಮಾತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.

ವಾಸ್ತವವಾಗಿ, ದೀಪಕ್ ಚಾಹರ್ ಎಸೆದ ಪಂದ್ಯದ ಮೂರನೇ ಓವರ್‌ನ ಮೊದಲ ಚೆಂಡು ಲೆಗ್ ಸೈಡ್‌ಗೆ ಹೋಯಿತು. ಈ ವೇಳೆ ಇಶಾನ್ ಚೆಂಡನ್ನು ಫೈನ್ ಲೆಗ್ ಕಡೆಗೆ ಆಡಲು ಪ್ರಯತ್ನಿಸಿದಾಗ ಚೆಂಡು ಕೀಪರ್ ರಿಕಲ್ಟನ್ ಅವರ ಕೈಗೆ ಸೇರಿತು. ಮುಂಬೈ ಆಟಗಾರರು ಸೇರಿದಂತೆ ಬೌಲರ್ ಅಥವಾ ಕೀಪರ್ ಔಟ್‌ಗಾಗಿ ಮನವಿ ಮಾಡಲೇ ಇಲ್ಲ. ಆದರೆ, ಇಶಾನ್ ಮಾತ್ರ ತಾನು ಔಟ್ ಎಂದು ಭಾವಿಸಿ ಕ್ರೀಸ್‌ನಿಂದ ಹೊರನಡೆದರು. ಇದನ್ನು ಗಮನಿಸಿದ ಬೌಲರ್ ಮೇಲ್ಮನವಿ ಸಲ್ಲಿಸಿದಾಗ ವೈಡ್ ನೀಡಬೇಕೋ ಅಥವಾ ಔಟ್ ನೀಡಬೇಕೋ ಎಂದು ಗೊಂದಲಕ್ಕೀಡಾದ ಅಂಪೈರ್ ಕೊನೆಗೆ ಬೆರಳು ಎತ್ತಿ ಔಟ್ ಎಂದು ನಿರ್ಣಯಿಸಿದರು.

ಇದನ್ನೂ ಓದಿ: ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಕೊಲೆ ಬೆದರಿಕೆ..!

ಆದರೆ, ಥರ್ಡ್ ಅಂಪೈರ್ ಆ ಬಾಲ್‌ಅನ್ನು ಚೆಕ್ ಮಾಡಿದಾಗ, ಚೆಂಡು ಗ್ಲೌಸ್ ಅಥವಾ ಬ್ಯಾಟ್‌ಗೆ ತಾಗಿಲ್ಲ ಎಂಬುದು ಸ್ಪಷ್ಟವಾಯಿತು. ಆದರೆ ಅಷ್ಟರಲ್ಲೇ ಇಶಾನ್ ಕಿಶನ್ ತಮ್ಮಷ್ಟಕ್ಕೆ ತಾವೇ ಮೈದಾನದಿಂದ ಹೊರ ನಡೆದಿದ್ದರು.

ಇದನ್ನೆಲ್ಲಾ ಗಮನಿಸಿದ ಅಭಿಮಾನಿಗಳು ಇದೀಗ ಇಶಾನ್ ಕಿಶನ್ ವಿರುದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page