Connect with us

ವಲಸೆ ಕಾರ್ಮಿಕರು ಬಿಲ್ಡರ್ ಗಳ ಜೀತದಾಳುಗಳಲ್ಲ: ಸಿಎಂ ನಡೆಗೆ ಡಿವೈಎಫ್ಐ ಆಕ್ರೋಶ

Published

on

ವಲಸೆ ಕಾರ್ಮಿಕರು ಬಿಲ್ಡರ್ ಗಳ ಜೀತದಾಳುಗಳಲ್ಲ: ಸಿಎಂ ನಡೆಗೆ ಡಿವೈಎಫ್ಐ ಆಕ್ರೋಶ

ಮಂಗಳೂರು: ಉತ್ತರ ಭಾರತದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ನಿಯೋಜಿಸಲಾಗಿದ್ದ ವಿಶೇಷ ರೈಲುಗಳನ್ನು ಬಿಲ್ಡರ್,

ರಿಯಲ್ ಎಸ್ಟೇಟ್ ಡೆವಲಪರ್ ಗಳ ಪ್ರತಿನಿಧಿಗಳ ಜೊತೆಗಿನ ಸಭೆಯ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ರದ್ದುಗೊಳಿಸಿರುವುದನ್ನು ಡಿವೈಎಫ್ಐ ಬಲವಾಗಿ ಖಂಡಿಸಿದೆ.‌

ತಾವು ಊರಿಗೆ ಹೋಗಬೇಕೊ, ಇಲ್ಲೆ ಉಳಿಯಬೇಕೊ ಎಂದು ನಿರ್ಧರಿಸಬೇಕಾಗಿರುವುದು ವಲಸೆ ಕಾರ್ಮಿಕರೇ ಹೊರತು ಬಿಲ್ಡರ್, ರಿಯಲ್ ಎಸ್ಟೇಟ್ ಲಾಬಿ ಅಲ್ಲ.

ಲಾಬಿಗಳ ಒತ್ತಡಕ್ಕೆ ಮಣಿದು ಪ್ರಯಾಣಿಸದಂತೆ ಬಲವಂತವಾಗಿ ತಡೆಯಲು ವಲಸೆ ಕಾರ್ಮಿಕರು ಬಿಲ್ಡರ್, ಡೆವಲಪರ್ ಮಾಫಿಯಾಗಳ ಜೀತದಾಳುಗಳಲ್ಲ,

ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಯಡಿಯೂರಪ್ಪ ಸರಕಾರದ ನಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ಆರಂಭದ ದಿನಗಳಲ್ಲಿ ವಲಸೆ ಕಾರ್ಮಿಕರು ಹಸಿವಿನಿಂದ ಕಂಗೆಟ್ಟಾಗ ಬಿಲ್ಡರ್, ರಿಯಲ್ ಎಸ್ಟೇಟ್, ಗುತ್ತಿಗೆದಾರರು ನೆರವಿಗೆ ಬರಲಿಲ್ಲ‌.

ಅವರನ್ನು ಹಸಿವಿನಿಂದ ಬೇಯಲು ಬಿಟ್ಟು ಹಾಯಾಗಿದ್ದರು. ಸರಕಾರವೂ ಇಂತಹ ಲಾಬಿಗಳ ಪ್ರತಿನಿಧಿಗಳ ಸಭೆ ಕರೆದು ಕನಿಷ್ಟ ಆಹಾರ, ದಿನಸಿಯ ಜವಾಬ್ದಾರಿ ಹೊರುವಂತೆ ನಿರ್ದೇಶನ ನೀಡಲಿಲ್ಲ‌.

ಬಹುತೇಕ ದಾ‌ನಿಗಳ ನೆರವಿನಿಂದಲೇ ವಲಸೆ ಕಾರ್ಮಿಕರು ಬದುಕುಳಿದರು.‌ ಇದೀಗ ಲಾಕ್ ಡೌನ್ ಸಡಿಲಗೊಂಡು ಉತ್ತರ ಭಾರತದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಸರಕಾರ ಬಿಲ್ಡರ್,

ಗುತ್ತಿಗೆದಾರರ ಲಾಬಿಗಳಿಗೆ ಮಣಿದು ಪ್ರಯಾಣ ರದ್ದುಗೊಳಿಸಿರುವುದು, ಬಲವಂತವಾಗಿ ದುಡಿಸಿಕೊಳ್ಳಲು ಹೊರಟಿರುವುದು ಕಾರ್ಮಿಕ ಕಾಯ್ದೆಗಳ, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ‌.

ಇದನ್ನು ಯಾವ ಕಾರಣಕ್ಕೂ ಒಪ್ಪಲಾಗದು.‌ ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿರುವ,

ವಲಸೆ ಕಾರ್ಮಿಕರಿಗೆ ದುಡಿಮೆಯ ಸಂದರ್ಭದಲ್ಲೂ ಯಾವ ನಿಯಮ ಬದ್ದ ಸವಲತ್ತುಗಳನ್ನೂ ಅವರ ಶ್ರಮವನ್ನು ಬಳಸುವ ಮಾಲಕರು ನೀಡುತ್ತಿರಲಿಲ್ಲ.‌

ಕಾರ್ಮಿಕ ಇಲಾಖೆಯೂ ಅವರನ್ನು ಆಧುನಿಕ ಜೀತಗಾರರಂತೆಯೆ ಭಾವಿಸಿತ್ತು. ಪಿಎಫ್, ಇ ಎಸ್ ಐ ಸಹಿತ ನಿಯಮ ಬದ್ದ ಸವಲತ್ತುಗಳನ್ನು ವ್ಯವಸ್ಥಿತವಾಗಿ ಧ್ವನಿ ಇಲ್ಲದ ಅವರಿಂದ ವಂಚಿಸಲಾಗಿತ್ತು.

ಅವರ ಶ್ರಮವನ್ನು ಅಗ್ಗಕ್ಕೆ ಖರೀದಿಸಿ ಕೋಟ್ಯಾಂತರ ರೂಪಾಯಿ ಲಾಭ ಗಳಿಸಲಾಯಿತು. ಆ ರೀತಿ ಲಾಭಗಳಿಸಿದ ಶಕ್ತಿಗಳೇ ಲಾಕ್ ಡೌನ್ ಸಂದರ್ಭ ಅವರನ್ನು ಹಸಿವಿಗೆ ದೂಡಿ ಬೀದಿ ಪಾಲು ಮಾಡಿದ್ದರು.

ಇಂತಹ ಬಹಿರಂಗ ಗುಲಾಮಗಿರಿಗೆ ಕಾರ್ಮಿಕ ಇಲಾಖೆ, ಸರಕಾರದ ಆಯಕಟ್ಟಿನ ಸ್ಥಾನಗಳಲ್ಲಿ ಇರುವ ಕೆಲವು ಜನಗಳ ಬೆಂಬಲ ಇತ್ತು.

ಈಗ ಕೊರೊನಾ ಭೀತಿ ಕಣ್ಣೆದುರಿಗಿರುವಾಗ ಅಪಾರ ಸಂಕಷ್ಟಕ್ಕೊಳಗಾಗಿರುವ, ನಿರ್ಲಕ್ಷ್ಯ, ತಾರತಮ್ಯ, ಶೋಷಣೆಯಿಂದ ಕಂಗೆಟ್ಟಿರುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿ, ಕುಟುಂಬವನ್ನು ಸೇರಲು ಬಯಸುವುದು ಸಹಜ.

ಇಂತಹ ಸಂದರ್ಭ ಕೇವಲ ಲಾಭವನ್ನೇ ಗುರಿಯಾಗಿಟ್ಟುಕೊಂಡಿರುವ ಬಿಲ್ಡರ್, ರಿಯಲ್ ಎಸ್ಟೇಟ್, ಗುತ್ತಿಗೆದಾರರ ಲಾಬಿಗಳು ಅವರನ್ನು ಬಲವಂತವಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿವೆ.

ಅಂತಹ ಲಾಬಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಲೆಬಾಗಿರುವುದು ಅಕ್ಷಮ್ಯ.  ಪ್ರಜಾಪ್ರಭುತ್ವದ ಆಶಯಗಳ ನಿರ್ಲಜ್ಜ ಉಲ್ಲಂಘನೆ, ಇದು ಆಧುನಿಕ ಜೀತಗಾರಿಕೆಗೆ ಸರಕಾರವೇ ಬೆಂಬಲ ನೀಡಿದಂತೆ.

ಕರ್ನಾಟಕದ ಮತದಾರರಲ್ಲ ಎಂಬ ಕಾರಣಕ್ಕೆ ಈ ಮಟ್ಟಿಗಿನ ಕ್ರೌರ್ಯ ಮೆರೆಯುತ್ತಿರುವಾಗಲೂ ಇಲ್ಲಿನ ರಾಜಕೀಯ, ಸಾಮಾಜಿಕ ವಲಯ ನಿರ್ಲಿಪ್ತವಾಗಿರುವುದು ವಿಷಾದದ ಸಂಗತಿ.

ಈಗಾಗಲೆ ಬೆಂಗಳೂರು, ಮಂಗಳೂರಿನ ಬೀದಿಗಳಲ್ಲಿ ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಹತಾಶೆಯಿಂದ ಅಡ್ಡಾಡುತ್ತಿದ್ದು, ಅಕ್ರೋಶದ ಕಟ್ಟೆಯೊಡೆದರೆ ಅನಾಹುತಗಳಿಗೆ ಕಾರಣವಾಗಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣ ತಮ್ಮ ನಿಲುವು ಬದಲಾಯಿಸಿ ಊರುಗಳಿಗೆ ತೆರಳ ಬಯಸುವ ಕಾರ್ಮಿಕರಿಗೆ ಗೌರವಯುತ ಏರ್ಪಾಡುಗಳನ್ನು ಮಾಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

STATE

ಬೆಳಗಾವಿ ಅಧಿವೇಶನದಲ್ಲಿ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ 50 ಲಕ್ಷ ರೂ. ನೀಡಲು ಶಾಸಕರ ಮನವಿ

Published

on

ಬೆಳಗಾವಿ: ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಗೆದ್ದ ಕಾರ್ಕಳ್ ಮಿಯ್ಯಾರಿನ ಧನಲಕ್ಷ್ಮಿ ಪೂಜಾರಿ ಅವರು ಇಂದು ತನ್ನ ಕೋಚ್‌ ತೇಜಸ್ವಿನಿ ಪೈ ಅವರ ಜತೆಗೆ ಬೆಳವಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದಅಧಿವೇಶನದ ಕಲಾಪ ವೀಕ್ಷಿಸಿದರು.

 

ಈ ಸಂದರ್ಭದಲ್ಲಿ ಧನ ಲಕ್ಷ್ಮಿ ಅವರನ್ನು ಸರಕಾರದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಧನಲಕ್ಷ್ಮಿ ಅದರ ಸಾಧನೆಯನ್ನು ಗುರುತಿಸಿ ಸರಕಾರದ ವತಿಯಿಂದ ಈಗಾಗಲೇ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.

ಧನಲಕ್ಷ್ಮಿ ಮತ್ತು ಆಕೆಯ ತರಬೇತುದಾರರಾದ ತೇಜಸ್ವಿನಿ ಪೈ ಅವರನ್ನು ಅಭಿನಂದಿಸುತ್ತೇನೆ ಎಂದರು. ಧನಲಕ್ಞ್ಮಿ ಅವರಿಗೆ  ಕನಿಷ್ಟ 50 ಲಕ್ಷ ರೂಪಾಯಿ ಬಹುಮಾನ ನೀಡ ಬೇಕೆಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದರು.ಆಕೆಗೆ ಸರಕಾರಿ ಉದ್ಯೋಗ ಕೊಡಿಸಬೇಕೆಂದು ವಿ ಸುನಿಲ್ ಕುಮಾರ್ ಮನವಿ ಮಾಡಿದರು.

Continue Reading

DAKSHINA KANNADA

ಡಿ. 13, 14 ರಂದು ಮಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ

Published

on

ಮಂಗಳೂರು: ಮಂಗಳೂರಿನ ಮದರ್ ತೆರೆಸಾ ವಿಚಾರ ವೇದಿಕೆ ಮತ್ತು ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್‌ ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವವನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಈ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ ರಾತ್ರಿ 9.30 ರ ತನಕ ನಡೆಯಲಿವೆ ಎಂದು ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್‌ ಖೇಲ್‌ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರಲ್‌ಗಳ ಗಾಯನ ಸ್ಪರ್ಧೆ, ಕೇಕ್ ಸ್ಪರ್ಧೆ, ಸ್ಟಾರ್ ಸ್ಪರ್ಧೆ, ವೈನ್‌ ಮೇಳ, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: ‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕ್ಯಾಥೊಲಿಕದ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading

DAKSHINA KANNADA

‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

Published

on

ಮಂಗಳೂರು: ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್‌ ಪ್ರಯುಕ್ತ “ನಶೆ ಮುಕ್ತ ಮಂಗಳೂರು’  ಅಭಿಯಾನವನ್ನು 102 ಕಾರ್ಯಕ್ರಮಗಳ ಸಹಿತ ಬ್ರಹತ್ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಪೌಂಡೇಶನ್‌ನ ಸುಹೈಲ್ ಕಂದಕ್ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಭಿಯಾನದ ಉದ್ಘಾಟನೆಯನ್ನು ಸ್ಪೀಕರ್ ಯು ಟಿ ಖಾದರ್ ನೆರವೇರಿಸುವರು. ಸಂಸದ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್ ವಿ ದರ್ಶನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿರುತ್ತಾರೆ ಎಂದರು.

ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಭಿಯಾನವನ್ನು ಆಯೋಜಿಸುತ್ತಿದ್ದು ಇದರ ಅಂಗವಾಗಿ ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಎಸಿಪಿ ರವೀಶ್ ನಾಯಕ್, ಕಾಂಗ್ರೆಸ್ ನಾಯಕ ವಿಕಾಸ್ ಶೆಟ್ಟಿ, ಬಾರ್ನ್ ಅಗೇನ್ ರಿಕವರಿ ಸೆಂಟರ್, ಬೀನಾ ಸಲ್ದಾನ ಮೊದಲಾದವರಿದ್ದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page