Connect with us

FILM

ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ಳುವ ಈ ದಾದಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಸಂಬಳ..!?

Published

on

ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿ ಖಾನ್ ದಂಪತಿಗೆ ಇಬ್ಬರು ಮಕ್ಕಳು. ಆ ಮಕ್ಕಳ ಹೆಸರು ಥೈಮೂರ್ ಹಾಗೂ ಜೆಹ್. ಇವರನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ಈ ಮಕ್ಕಳನ್ನು ಬೆಳೆಸಿದ್ದು ಲಲಿತಾ ಡಿಸಿಲ್ವಾ ಹೆಸರಿನ ದಾದಿ. ಲಲಿತಾ ಡಿಸಿಲ್ವಾ ಈಗ ಈ ದಂಪತಿಯ ಎರಡನೇ ಮಗ ಜೆಹ್​ನ ನೋಡಿಕೊಳ್ಳುತ್ತಿದ್ದಾರೆ. ಇವರು ಯಾವಾಗಲೂ ತೈಮೂರ್ ಮತ್ತು ಜೆಹ್ ಜೊತೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಲಲಿತಾ ಡಿಸಿಲ್ವಾ ಕರೀನಾ ಕುಟುಂಬ ಮತ್ತು ತಾವು ಪಡೆಯುವ ಸಂಬಳದ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಲಲಿತಾ ಡಿಸಿಲ್ವಾ ಮಾತನಾಡಿದ್ದಾರೆ. ಸೈಫ್ ಹಾಗೂ ಕರೀನಾ ತಮ್ಮನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ‘ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತುಂಬಾ ಸರಳ ವ್ಯಕ್ತಿಗಳು. ಕರೀನಾ-ಸೈಫ್ ಉಪಹಾರಕ್ಕಾಗಿ ಏನನ್ನು ತಿನ್ನುತ್ತಾರೋ ಅದನ್ನೇ ಸಿಬ್ಬಂದಿಗೂ ನೀಡುತ್ತಾರೆ. ಆಹಾರದಲ್ಲಿ ಏನೂ ವ್ಯತ್ಯಾಸವಿಲ್ಲ. ಕೆಲವೊಮ್ಮೆ ನಾವು ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ’ ಎಂದಿದ್ದಾರೆ ಅವರು.

ಲಲಿತಾ ಡಿಸಿಲ್ವಾ ತಿಂಗಳಿಗೆ 2.5 ಲಕ್ಷ ಸಂಬಳ ಪಡೆಯುತ್ತಾರಾ?

ಲಲಿತಾ ಡಿಸಿಲ್ವಾ ಅವರಿಗೆ 2.5 ಲಕ್ಷ ಸಂಬಳ ಇದೆಯಾ? ಹೀಗೊಂದು ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಲಲಿತಾ ಡಿಸಿಲ್ವಾ ಅವರು ಸ್ಪಷ್ಟನೆ ನೀಡಿದ್ದಾರೆ. ‘2.5 ಲಕ್ಷ ರೂಪಾಯಿ? ಹಾಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಿಮ್ಮ ಬಾಯಲ್ಲಿ ಸಕ್ಕರೆ ಬೀಳಲಿ. ಇವೆಲ್ಲ ಕೇವಲ ವದಂತಿಗಳು’ ಎಂದಿದ್ದಾರೆ. ಲಲಿತಾ ಡಿಸಿಲ್ವಾ ಅವರು ಕಳೆದ ಹಲವಾರು ವರ್ಷಗಳಿಂದ ತೈಮೂರ್ ಮತ್ತು ಜೆಹ್ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

FILM

ಮದುವೆಯಾಗಿ ತಾಳಿ ಹಾಕೋ ಪದ್ಧತಿ ನಮ್ಮಲ್ಲಿ ಇಲ್ಲ ಎಂದ ನಟಿ ವೈಷ್ಣವಿ ಗೌಡ

Published

on

ಸೀತಾರಾಮ ಧಾರಾವಾಹಿಯ ನಟಿ ವೈಷ್ಣವಿ ಗೌಡ ಅವರು ಮದುವೆಯಾದರೂ ಕೂಡ ತಾಳಿ ಹಾಕ್ತಿಲ್ಲ ಎಂದು ಕೆಲವರು ಆರೋಪ ಮಾಡಿದ್ದರು. ಇದಕ್ಕೆ ವೈಷ್ಣವಿ ಗೌಡ ಉತ್ತರ ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ವೈಷ್ಣವಿ, “ಹುಡುಗನ ಮನೆಯಲ್ಲಿ ಯಾವ ಪದ್ಧತಿ ಇದೆಯೋ ಅದನ್ನೇ ಹುಡುಗಿ ಕೂಡ ಅನುಸರಿಸಬೇಕು. ಹೀಗಾಗಿ ನಾನೂ ಅದನ್ನೇ ಅನುಸರಿಸಿದ್ದೇನೆ. ಹುಡುಗನ ಪದ್ಧತಿಯಂತೆ ನಮ್ಮ ಮದುವೆ ಆಯ್ತು. ಆದರೆ ತಾಳಿ ಹಾಕಿಲ್ಲ ಅಂತ ಕೆಲವರು ಕೇಳಿದ್ದೀರಾ. ನನ್ನ ಅತ್ತೆ ಕೂಡ ಇದುವರೆಗೂ ತಾಳಿ ಹಾಕಿಲ್ಲ. ತಾಳಿ ಹಾಕುವ ಪದ್ಧತಿ ನಮ್ಮಲ್ಲಿ ಇಲ್ಲ” ಎಂದು ವೈಷ್ಣವಿ ಗೌಡ ಹೇಳಿದ್ದಾರೆ.

ತಾಳಿ ಹಾಕುವ ಪದ್ಧತಿ ಹುಡುಗನ ಮನೆಯಲ್ಲಿ ಇಲ್ಲ. ಅದು ನಮಗೆ ಮುಖ್ಯ ಅಲ್ಲ. ಇಲ್ಲಿ ಮೂಗು ಚುಚ್ಚಿಸಿರಬೇಕು, ಕೈಯಲ್ಲಿ ಗಾಜಿನ ಬಳೆ ಇರಬೇಕು, ಕೈಯಲ್ಲಿ ಒಂದು ದಾರ ಇರಬೇಕು, ಕಾಲುಂಗುರ ಹಾಕಿರಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಮನೆಯಲ್ಲಿ ಈ ಪದ್ಧತಿ ಇಲ್ಲ ಹೀಗಾಗಿ ಹಾಕುತ್ತಿಲ್ಲ ಅಷ್ಟೇ ಎಂದು ವೈಷ್ಣವಿ ಗೌಡ ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿ: ಹೃದಯಾಘಾತದಿಂದ 6ನೇ ತರಗತಿಯ ವಿದ್ಯಾರ್ಥಿ ಸಾ*ವು

ಮೆಟ್ರಿಮೋನಿಯಲ್ಲಿ ವೈಷ್ಣವಿಗೌಡ ಹಾಗೂ ಅನುಕೂಲ್ ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್ ಆಗಿತ್ತು. ಈ ವರ್ಷ ಈ ಜೋಡಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು, ಮದುವೆ ಆಗಿದ್ದಾರೆ. ಅನುಕೂಲ್ ಮಿಶ್ರಾ ಅವರು ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್ ಅವರು ಆರ್ಮಿಯಲ್ಲಿದ್ದಾರೆ.

Continue Reading

FILM

ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿ ಕಿಯಾರಾ ಅಡ್ವಾಣಿ – ಸಿದ್ದಾರ್ಥ್ ಮಲ್ಹೋತ್ರಾ

Published

on

ಮಂಗಳೂರು / ಮುಂಬೈ : ಬಾಲಿವುಡ್‌ ತಾರೆಯರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಮನೆಯಲ್ಲಿ ಸಂಭ್ರಮದ ವಾತಾವರಣ. ಹೌದು, ದಂಪತಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮೊದಲ ಮಗುವನ್ನು ದಂಪತಿ ಸ್ವಾಗತಿಸಿದ್ದಾರೆ. ಕಿಯಾರಾ ಅಡ್ವಾಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.

ಹೆರಿಗೆಗಾಗಿ ಮುಂಬೈನ ಗಿರ್ಗಾಂವ್ ಪ್ರದೇಶದ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆಗಸ್ಟ್‌ನಲ್ಲಿ ಕಿಯಾರಾಗೆ ಮಗು ಜನಿಸಬೇಕಿತ್ತು. ಆದರೆ, ಮಗು ಬೇಗನೆ ಹುಟ್ಟಿದೆ.

ಇದನ್ನೂ ಓದಿ : ಪ್ರೇಯಸಿ, ಮಗು ಇಬ್ಬರ ಕತ್ತು ಸೀಳಿ ಕೊಂ*ದ ಯುವಕ; ಇವರಿಬ್ಬರ ಪ್ರೇಮ್ ಕಹಾನಿ ಕೇಳಿ ಬೆಚ್ಚಿ ಬಿದ್ದ ಪೊಲೀಸರು

ಮಗು ಜನಿಸಿರುವ ಬಗ್ಗೆ ದಂಪತಿ  ಇನ್ಸ್ಟಾಗ್ರಾಮ್‌ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿದ್ದಾರೆ. “ನಮ್ಮ ಹೃದಯಗಳು ತುಂಬಿವೆ ಮತ್ತು ನಮ್ಮ ಪ್ರಪಂಚವು ಶಾಶ್ವತವಾಗಿ ಬದಲಾಗಿದೆ. ನಮಗೆ ಹೆಣ್ಣು ಮಗು ಜನಿಸಿದೆ” ಎಂದು ಪೋಸ್ಟ್ ಮಾಡಿದ್ದಾರೆ.

 

2021 ರಲ್ಲಿ ತೆರೆ ಕಂಡಿದ್ದ ಶೇರ್ಷಾ ಸಿನಿಮಾದಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಜೊತೆಯಾಗಿ ನಟಿಸಿದ್ದರು. 2023 ರ ಫೆಬ್ರವರಿಯಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದರು.

Continue Reading

FILM

‘ಕಾಂತಾರ ಚಾಪ್ಟರ್-1’ ಮತ್ತೊಂದು ಬಿಗ್ ಅಪಡೇಟ್ ಕೊಟ್ಟ ಚಿತ್ರತಂಡ?

Published

on

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈಗಗಾಲೇ ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.

ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ರೇಂಜ್‌ನಲ್ಲಿ ‘ಕಾಂತಾರ- ಚಾಪ್ಟರ್- 1’ ಚಿತ್ರ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ 2 ವರ್ಷದ ಹಿಂದೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ‘ಕಾಂತಾರ’ ಸಿನಿಮಾ ಬಳಿಕ ಪರಭಾಷಿಕರು ಬೇಡಿಕೆ ಮೇರೆಗೆ ಡಬ್ ಆಗಿ ಬಿಡುಗಡೆ ಆಗಿತ್ತು. ವಿಶ್ವದ ಮೂಲೆ ಮೂಲೆಯಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದಿತ್ತು. ಇದೀಗ ಪ್ರೀಕ್ವೆಲ್ ಬಿಡುಗಡೆಯಾಗುವ ಸಮಯ.

ಇದನ್ನೂ ಓದಿ: ಡಿವೈನ್ ಸ್ಟಾರ್ ಹುಟ್ಟುಹಬ್ಬಕ್ಕೆ ‘ಕಾಂತರ-1’ ಚಿತ್ರ ತಂಡದಿಂದ ಹೊರಬಿತ್ತು ಬಿಗ್ ಅಪ್‌ಡೇಟ್

‘ಕಾಂತಾರ-1’ಗಾಗಿ ರಿಷಬ್ ‘ಕಳರಿ ಪಯಟ್ಟು’ ಯಂತಹ ಕರಗತ ಮಾಡಿಕೊಂಡಿದ್ದಾರೆ. ಪ್ರೀಕ್ವೆಲ್‌ನಲ್ಲಿ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಸಿನಿಮಾ ತಂಡ ಪ್ರಚಾರಕ್ಕೆ ರೆಡಿಯಾಗಿದ್ದು, ಈ ಬಗ್ಗೆ ಹೊಂಬಾಳೆ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಚೆಲುವೆ ಗೌಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಲೈಟ್.. ಕ್ಯಾಮರಾ.. ಕೌಂಟ್‌ಡೌನ್… ‘ಕಾಂತಾರ’ ಚಾಪ್ಟರ್-1 ಕ್ಯಾಂಪೇನ್ ಶುರು. ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಸಿಗೋಣ” ಎಂದು ಅವರು ಬರೆದುಕೊಂಡಿದ್ದಾರೆ. ಚಿತ್ರ ರಿಲೀಸ್ ಹಾಗೂ ಪ್ರಚಾರದ ಬಗ್ಗೆ ಚರ್ಚೆ ನಡೆಸುತ್ತಿರುವ ಫೋಟೋವನ್ನು ಚೆಲುವೆ ಗೌಡ ಹಂಚಿಕೊಂಡಿದ್ದಾರೆ.

ಇನ್ನೂ ರಿಷಬ್ ಶೆಟ್ಟಿ ಕೊಲ್ಲೂರು ಭೇಟಿ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಫ್ಯಾನ್ಸ್ ಟೀಸರ್ ಯಾವಾಗ ಲಾಂಚ್? ಆಗುತ್ತದೆ. ಟೀಸರ್ ಬೇಗ ಬಿಡಿ ಸರ್ ಎಂದು ಆಗ್ರಹಿಸುತ್ತಿದ್ದಾರೆ. ನೆಚ್ಚಿನ ನಟನ ಬಳಿ ಪ್ರೀತಿಯಿಂದ ಮನವಿ ಮಾಡಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಪ್ರಯುಕ್ತವೇ ರಿಷಬ್ ಶೆಟ್ಟಿ ದಂಪತಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page