Connect with us

FILM

ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ಕರೀನಾ ಕಪೂರ್; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ, ಏನಂದ್ರು?

Published

on

ಮಂಗಳೂರು / ಬೆಂಗಳೂರು : ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ (Unicef India’s National Ambassador) ನೇಮಕಗೊಂಡಿದ್ದಾರೆ. ಈ ಬಗ್ಗೆ ಕರೀನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಭಾವನಾತ್ಮಕ ಪೋಸ್ಟ್ :

ಕರೀನಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ, ನನಗೆ ಇದು ಭಾವನಾತ್ಮಕ ದಿನ. ನಾನು ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಗೌರವವಿದೆ. ಕಳೆದ 10 ವರ್ಷಗಳಲ್ಲಿ ಯುನಿಸೆಫ್ ಇಂಡಿಯಾ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಆ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ದಣಿವರಿಯಿಲ್ಲದೆ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಟಾಕ್ಸಿಕ್ ನಿಂದ ಔಟ್ :

ಕರೀನಾ ಕಪೂರ್ ಇತ್ತೀಚೆಗೆ ‘ಕ್ರೂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಹಿಳಾ ಪ್ರಧಾನ ಚಿತ್ರವಾದ ಈ ಚಿತ್ರ ಭಾರೀ ಯಶಸ್ಸನ್ನು ಬಾಚಿಕೊಂಡಿತ್ತು. ಸದ್ಯ ರೋಹಿತ್ ಶೆಟ್ಟಿ ಅವರ ‘ಸಿಂಗಮ್ ಅಗೇನ್’ ಚಿತ್ರದಲ್ಲಿ ಅವರು ಬಿಝಿಯಾಗಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತಾದರೂ, ಅವರು ಟಾಕ್ಸಿಕ್‌ ಸಿನಿಮಾದಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಜೊತೆಯಾಗಿ ಕಾಣಿಸಿಕೊಂಡ ಸೂಪರ್ ಸ್ಟಾರ್ – ಬಿಗ್ ಬಿ; ಸ್ಟೈಲಿಶ್ ಫೋಟೋ ವೈರಲ್ 

ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಅದಕ್ಕಾಗಿ ಶೂಟಿಂಗ್‌ ಮಾಡಲು ಹಲವು ದಿನಗಳೇ ಬೇಕಿತ್ತು. ಆದರೆ ಕರೀನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಡೇಟ್‌ ಹೊಂದಾಣಿಕೆ ಸಮಸ್ಯೆ ಬಂದ ಕಾರಣ ಕರೀನಾ ಅವರು ಈ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ.

FILM

ದುಬಾರಿ ಬೆಲೆಯ ಕಾರು ಖರೀದಿಸಿದ ಆಂಕರ್‌ ಅನುಶ್ರೀ.. ಈ ಕಾರಿನ ವಿಶೇಷತೆ ಏನು ಗೊತ್ತಾ..?

Published

on

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಅವರು ದುಬಾರಿ ಬೆಲೆಯ ಕಾರೊಂದನ್ನು ಖರೀದಿ ಮಾಡಿದ್ದಾರೆ. ಈ ಕಾರು ಖರೀದಿ ಮಾಡುವ ಫೋಟೋವನ್ನು ಅವರು ತಮ್ಮ ಇನ್‌ಸ್ಟಾ ಸ್ಟೋರಿಯನ್ನು ಹಾಕಿಕೊಂಡಿದ್ದಾರೆ. ಹಾಗಾದರೆ ಅನುಶ್ರೀ ಖರೀದಿಸಿದ ಹೊಸ ಕಾರು ಯಾವುದು? ಆ ಕಾರಿನ ಬೆಲೆ ಎಷ್ಟು? ಅನ್ನೋದನ್ನು ತಿಳಿಯೋಣ..

ಹೌದು.. ಅನುಶ್ರೀ ಖರೀದಿಸಿದ ಹೊಸ ಕಾರಿನ ಹೆಸರು ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್. ನೀಲಿ ಬಣ್ಣದ ಈ ಕಾರು ನೋಡುವುದಕ್ಕಂತೂ ಸಖತ್ ಆಗಿದೆ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ ರೂಪಾಯಿ. 25 ಲಕ್ಷದಿಂದ ಶುರುವಾದರೆ ಟಾಪ್ ಮಾಡಲ್ ₹40 ಲಕ್ಷದವರೆಗೂ ಹೋಗುತ್ತೆ.

ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ; ಕೊನೆಗೂ ಎರಡನೇ ಬ್ಲ್ಯಾಕ್​ಬಾಕ್ಸ್​ ಪತ್ತೆ

ಈ ಕಾರು ಪೆಟ್ರೋಲ್ ಹಾಗೂ ಬ್ಯಾಟರಿ ಎರಡೂ ತಂತ್ರಜ್ಞಾನವನ್ನು ಹೊಂದಿದೆ. ಕಾರು ಚಲಾಯಿಸುವಾಗ ಬ್ಯಾಟರಿ ಮುಗಿದು ಹೋದರೆ, ಪೆಟ್ರೋಲ್‌ಗೆ ಶಿಫ್ಟ್ ಆಗಬಹುದು. ಇದರಿಂದ ಚಾರ್ಜಿಂಗ್ ಪಾಯಿಂಟ್ ಅನ್ನು ಹುಡುಕುವ ಅಗತ್ಯವಿರುವುದಿಲ್ಲ. ಅಲ್ಲಿದೆ ಕಾರಿನ ಮೈಲೇಜ್ ಕೂಡ ಸುಮಾರು 25 ಕಿ.ಮೀ ಪ್ರತಿ ಲೀಟರ್‌ಗೆ ನೀಡುತ್ತದೆ ಎಂದು ಹೇಳಲಾಗಿದೆ.

ಆದರೆ, ಅವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾರು ಯಾವ ವೇರಿಯೆಂಟ್ ಅನ್ನೋದು ಗೊತ್ತಾಗಿಲ್ಲ. ಸದ್ಯ ಈ ಕಾರಿನ ಬೆಲೆ ಅಂತೂ ದುಬಾರಿ ಅನ್ನೋದಂತೂ ಸದ್ಯ.

Continue Reading

FILM

’ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮತ್ತೊಂದು ಭಾರಿ ಅವಘಡ; ರಿಷಬ್ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

Published

on

ಮಂಗಳೂರು/ತೀರ್ಥಹಳ್ಳಿ: ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ಆರಂಭವಾದಗಿನಿಂದಲೂ ಒಂದಲ್ಲ ಒಂದು ಅವಘಡಗಳು ಎದುರಾಗುತ್ತಲೇ ಇವೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್‌ನಲ್ಲಿ ಸಂಭವಿಸಿದೆ. ಕ್ಯಾಮರಾಮನ್, ನಟ ರಿಷಬ್ ಶೆಟ್ಟಿ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ಚಿತ್ರದ ಕೊನೆಯ ಹಂತದ ಶೂಟಿಂಗ್ ಗಾಗಿ ತೀರ್ಥಹಳ್ಳಿಯ ಮಾಸ್ತಿಕಟ್ಟೆಯ ಮಾಣಿ ಜಲಾಶಯದ ಬಳಿ 15 ದಿನಗಳ ಕಾಲ ಶೂಟಿಂಗ್ ನಡೆಸಲಾಗುತ್ತಿತ್ತು. ಶೂಟಿಂಗ್ ನಡೆಸುತ್ತಿದ್ದ ವೇಳೆ ದೋಣಿ ಮಗುಚಿದೆ ಎಂದು ಹೇಳಲಾಗಿದ್ದು, ನಟ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಸ್ಥಳದಲ್ಲಿದ್ದರು ಎನ್ನಲಾಗಿದೆ.

ಅದೃಷ್ಟವಶಾತ್ ಚಿತ್ರತಂಡದ ಎಲ್ಲರೂ  ಸೇಫ್ ಆಗಿದ್ದು, ಕ್ಯಾಮರಾ ಮತ್ತು ಇತರ ಸಾಮಗ್ರಿಗಳು ನೀರು ಪಾಲಾಗಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಾಂತಾರ ಚಿತ್ರತಂಡಕ್ಕೆ ತಪ್ಪದ ಸಂಕಷ್ಟ; ಮತ್ತೊಬ್ಬ ಕಲಾವಿದ ಸಾ*ವು

‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೆಟ್​ನಲ್ಲಿ ಸರಣಿ ಅವಘಡಗಳು
‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೆಟ್​ನಲ್ಲಿ ಸರಣಿ ಅವಘಡಗಳು ನಡೆಯುತ್ತಲೇ ಇವೆ. ಮೊದಲಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ಈಜಲು ಹೋಗಿ ಮುಳುಗಿ ಪ್ರಾ*ಣಬಿಟ್ಟರು. ಅದಾದ ಮೇಲೆ ಸಿನಿಮಾನಲ್ಲಿ ನಟಿಸಿದ್ದ ಕನ್ನಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃ*ದಯಾಘಾತದಿಂದ ಮೃ*ತಪಟ್ಟರು. ಕೆಲ ದಿನಗಳ ಹಿಂದಷ್ಟೆ ವಿಜು ವಿಕೆ ಎಂಬ ಕೇರಳದ ಕಲಾವಿದ ಮೃ*ತಪಟ್ಟರು. ಅವರು ಸಹ ‘ಕಾಂತಾರ’ ಸಿನಿಮಾನಲ್ಲಿ ನಟಿಸುತ್ತಿದ್ದರು. ಇದೆಲ್ಲದರ ಬಳಿಕ ಈಗ ದೋಣಿಯೇ ಮುಗಿಚಿದೆ.

Continue Reading

FILM

ಜಾರುತ್ತಿದ್ದ ಮೀಸೆಯನ್ನು ಅಂಟಿಸಿಕೊಳ್ಳಲು ಗಮ್ ಕೇಳಿದ ನಟ ನಂದಮೂರಿ ಬಾಲಕೃಷ್ಣ; ವೀಡಿಯೋ ವೈರಲ್!

Published

on

ಮಂಗಳೂರು/ಹೈದರಾಬಾದ್: ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರ ಮೀಸೆಯ ವಿಚಾರ ಸಖತ್ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ.

ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳು, ಸಾಹಸ ದೃಶ್ಯಗಳು ಡಾನ್ಸ್ ಗಳು ಆಗಾಗ ಟ್ರೋಲ್ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಅವರು ತಮ್ಮ ಡಮ್ಮಿ ಮೀಸೆಯಿಂದಾಗಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ದಪ್ಪಗಿನ ಮೀಸೆಯೊಂದಿಗೆ ಗಂಭೀರವಾಗಿ ಕಾಣುವ ನಂದಮೂರಿ ಬಾಲಕೃಷ್ಣ ಅವರು ಡ್ಯುಪ್ಲಿಕೇಟ್ ಮೀಸೆ ಅಂಟಿಸಿಕೊಂಡಿರುತ್ತಾರಾ? ಎನ್ನುವುದು ಈಗಲೇ ಅಭಿಮಾನಿಗಳಿಗೆ ತಿಳಿಯುತ್ತಿದೆ.

ಅಷ್ಟಕ್ಕೂ ಆಗಿದ್ದೇನು?
ಜೂನ್ 10ರಂದು ನಂದಮೂರಿ ಬಾಲಕೃಷ್ಣ ಅವರು 65ನೇ ವರ್ಷಕ್ಕೆ ಕಾಲಿಟ್ಟರು. ಇತ್ತೀಚೆಗೆ ಅವರ ಹುಟ್ಟುಹಬ್ಬವನ್ನು ದೊಡ್ಡ ಕೇಕ್ ಕತ್ತರಿಸಿ ಅದ್ಧೂರಿ ಆಚರಣೆಯೊಂದಿಗೆ ಆಚರಿಸಲಾಯಿತು. ಈ ವೇಳೆ ನಟ ಬಾಲಕೃಷ್ಣ ಮಾತನಾಡುತ್ತಿದ್ದ ವೇಳೆ ಅವರ ಕೃತಕ ಮೀಸೆ ಜಾರಿ ಬೀಳುತ್ತಿತ್ತು.

ಇದನ್ನೂ ಓದಿ: ದಕ್ಷಿಣದ ಯುವ ಸಂಗೀತ ನಿರ್ದೇಶಕನನ್ನು ಮದುವೆಯಾಗಲಿದ್ದಾರೆ ಎಸ್‌ಆರ್‌ಎಚ್ ಒಡತಿ ಕಾವ್ಯಾ ಮಾರನ್?

ಒಂದರೆಡು ಬಾರಿ ಅದನ್ನು ಬಾಲಕೃಷ್ಣ ನಿರ್ಲಕ್ಷಿಸಿದರು. ಆದರೆ ಮೀಸೆ ಬೀಳುತ್ತಿದೆ ಎಂದು ತಿಳಿದ ಕೂಡಲೇ ಬಾಲಕೃಷ್ಣ ತಮ್ಮ ಸಹಾಯಕನನ್ನು ಕರೆದು ‘ಗಮ್ ಕೊಡ್ರೋ.. ಮೀಸೆ ಬೇಳ್ತಿದೆ..’ ಎಂದು ಕೇಳಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

Watch video

 

Continue Reading
Advertisement

Trending

Copyright © 2025 Namma Kudla News

You cannot copy content of this page