Connect with us

UDUPI

ಕಾಪು: ಬಿಜೆಪಿ ಬೆಂಬಲಿಸಿದ ಕರಾವಳಿ ಜನತೆಗೆ ಕೃತಜ್ಞತೆ !!

Published

on

ಕಾಪು: ಕರಾವಳಿಯ ಜನರು ದುಡಿಮೆಗಾಗಿ ಮಹಾರಾಷ್ಟ್ರ ಸೇರಿಕೊಂಡಿದ್ದಾರೆ. ಈ ಬಾರಿ ಬಿಜೆಪಿಯನ್ನು ಬೆಂಬಲಿಸಿದ ಕರಾವಳಿಯ ಜನತೆಗೆ ಕೃತಜ್ಞತೆ ಎಂದು ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದ್ದಾರೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಚುನಾವಣೆ ಪ್ರಚಾರಕ್ಕೆ ಹೋಗಿದ್ದೆ. ಕೆಲವೊಂದು ಭಾಗಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರವನ್ನು ಮಾಡಿದ್ದೆ. ಆದರೆ ಭರ್ಜರಿ ಗೆಲುವು ಈ ಬಾರಿ ಬಿಜೆಪಿಗೆ ಸಿಕ್ಕಿದೆ.

ಮುಂದಿನ ದಿನ ಒಳ್ಳೆಯ ಅಭಿವೃದ್ಧಿ ಕಾರ್ಯ ಆಗಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ನಮ್ಮ ಕುಡ್ಲ ವಾಹಿನಿಗೆ ತಿಳಿಸಿದ್ದಾರೆ.

LATEST NEWS

ಅಪ*ಘಾತದಲ್ಲಿ ಮಗನ ದುರ್ಮ*ರಣ; ಕೋಮಾಕ್ಕೆ ಜಾರಿದ್ದ ತಾಯಿಯೂ ಸಾ*ವು

Published

on

ಮಂಗಳೂರು/ಶಿರ್ವ: ಪುತ್ರ ಶೋಕಂ ನಿರಂತರಂ ಎನ್ನುವ ಹಾಗೆ, ಅಪ*ಘಾತದಲ್ಲಿ ಮೃ*ತಪಟ್ಟ ಮಗನ ಸಾವಿನ ಸುದ್ದಿ ತಿಳಿದು ಆಘಾತಗೊಂಡು ಕೋಮಾಕ್ಕೆ ತೆರಳಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟ ಘಟನೆ ಶಿರ್ವ ಕೊಲ್ಲಬೆಟ್ಟು ಬಳಿ ನಡೆದಿದೆ.


ಮೃ*ತ ಬೈಕ್‌ ಸವಾರನನ್ನು ಶಿರ್ವ ಕೊಲ್ಲಬೆಟ್ಟು ಬಳಿಯ ನಿವಾಸಿ ರಮೇಶ್ ಮೂಲ್ಯ (51). ಪುತ್ರನ ಸಾವಿನ ಶೋಕದಿಂದ ಸಾವನ್ನಪ್ಪಿದ ಇಂದಿರಾ ಮೂಲ್ಯ (74) ಮೃತ ತಾಯಿ. ಮೃತ ರಮೇಶ್ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಷ್ಟಕ್ಕೂ ಮಾ.23 ರಂದು ಬಂಟಕಲ್ಲಿನಿಂದ ಬಿ ಸಿ ರೋಡ್-ಪಾಂಬೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್‌ಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಪಾಂಬೂರು ಬಳಿ ಡಿ*ಕ್ಕಿ ಹೊಡೆದು ಬೈಕ್ ಸವಾರ ರಮೇಶ್ ಮೂಲ್ಯ ತೀವ್ರ ಗಾಯಗೊಂಡು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾ. 24ರಂದು ರಾತ್ರಿ ಅವರು ಮೃ*ತಪಟ್ಟಿದ್ದರು.

ಇದನ್ನೂ ಓದಿ: ಆಟವಾಡುತ್ತಿದ್ದಾಗ ಟ್ರ್ಯಾಕ್ಟರ್‌ ಹರಿದು 5 ವರ್ಷದ ಮಗು ಸಾವು

ಪುತ್ರನ ಸಾವಿನ ಸುದ್ದಿ ಕೇಳಿ ಆಘಾತಗೊಂಡ ತಾಯಿ
ಬೈಕ್ ಅಪ*ಘಾತದಲ್ಲಿ ಮೃ*ತಪಟ್ಟ ರಮೇಶ್ ಅವರ ಮೃತ ದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಮಂಗಳವಾರ ಶಿರ್ವ ಕೊಲ್ಲಬೆಟ್ಟುವಿನ ಮನೆಗೆ ತರಲಾಗಿತ್ತು. ಪುತ್ರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಗೊಂಡ ತಾಯಿ ಇಂದಿರಾ ಮೂಲ್ಯ (74) ತೀವ್ರ ಅಸ್ವಸ್ಥರಾಗಿ ಕೋಮಾಕ್ಕೆ ತೆರಳಿದ್ದು, ಮಂಗಳವಾರ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಇಂದಿರಾ ಮೂಲ್ಯ ಅವರು ಮೃ*ತಪಟ್ಟಿದ್ದಾರೆ. ದಿನದ ಅಂತರದಲ್ಲಿ ತಾಯಿ-ಮಗ ಇಬ್ಬರೂ ಮೃ*ತಪಟ್ಟಿದ್ದು, ಮೃ*ತರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

Continue Reading

LATEST NEWS

“ಎಂಚಿ ಸೆಕೆ ಮಾರ್ರೆ..” ಎನ್ನತ್ತಿದ್ದ ಉಡುಪಿಗೆ ವರುಣನಾಗಮನ; ಕಾರ್ಕಳದಲ್ಲಿ ಗಾಳಿಗೆ ಉರುಳಿ ಮರಗಳು ಧರೆಗೆ

Published

on

ಉಡುಪಿ : “ಎಂಚಿ ಸೆಕೆ ಮಾರ್ರೆ..” ಎನ್ನತ್ತಿದ್ದ ಉಡುಪಿ ಜಿಲ್ಲೆಯಾದ್ಯಂತ ನಿನ್ನೆ (ಮಾ.25) ಸಂಜೆ ವೇಳೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಆ ಮೂಲಕ ಎಲ್ಲೆಡೆ ತಂಪಿನ ವಾತಾವರಣ ಸೃಷ್ಠಿಯಾಗಿ ಜನರ ಮೊಗದಿ ಮುಂಗುರುಳು ಮೂಡಿದೆ.

ಉಡುಪಿಯ ಕೆಲವು ಕಡೆ ನಿನ್ನೆ ಬೆಳಗ್ಗೆ ಮಂಜು, ಮೋಡದಿಂದ ಕೂಡಿತ್ತು. ಉಳಿದಂತೆ ಜಿಲ್ಲೆಯಲ್ಲಿ ದಿನವಿಡೀ ಉರಿ ಬಿಸಿಲು ಸೆಕೆಯ ವಾತಾವರಣ ಇತ್ತು. ಈ ರೀತಿ ತಾಪಮಾನದಲ್ಲಿ ಏರಿಳಿತವಾಗುತ್ತಿತ್ತು. ಕೊನೆಗೂ ಉಡುಪಿ ಜಿಲ್ಲೆಯ ಕಾರ್ಕಳದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಗಾಳಿಯ ರಭಸಕ್ಕೆ ಹಲವು ಕಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕಾರ್ಕಳದ ಕೆಲವು ಅಂಗಡಿ ಹಾಗೂ ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಕಾರ್ಕಳ ಪೇಟೆ ಭಾಗ, ಕುಕ್ಕುಂದೂರು, ಮಿಯ್ಯಾರು, ರೆಂಜಾಲ, ಬಜಗೋಳಿ, ದಿಡಿಂಬಿರಿ, ಮಾಳ, ನೆಲ್ಲಿಕಾರು, ಕೆರ್ವಾಶೆಯಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ.

ಅಂತೆಯೇ ಉಡುಪಿಯ ಮಣಿಪಾಲ, ಉಡುಪಿ ನಗರ, ಬ್ರಹ್ಮಾವರ, ಕುಂದಾಪುರದಲ್ಲಿ ಮಳೆಯಾಗಿದ್ದು ಜಿಲ್ಲೆಯಾದ್ಯಂತ ತಂಪಿನ ವಾತವರಣ ನಿರ್ಮಾಣವಾಗಿದೆ. ಕುಂದಾಪುರ ತಾಲೂಕಿನ ಹಲವೆಡೆ ನಿನ್ನೆ ಸಂಜೆ ತುಂತುರು ಮಳೆಯಾಗಿದ್ದು, ಸಂಜೆಯಿಂದ ಮೋಡ ಕವಿದ ವಾತಾವರಣವಿತ್ತು. ಬಳಿಕ ಅಲ್ಲಲ್ಲಿ ಕೊಂಚ ಮಳೆಯಾಗಿದೆ. ಬೈಂದೂರು ತಾಲೂಕಿನಲ್ಲೂ ಮೋಡ ಕವಿದ ವಾತಾವರಣವಿತ್ತು.

ಹವಮಾನ ಇಲಾಖೆಯಿಂದ ಮುನ್ಸೂಚನೆ :

ರಾಜ್ಯ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು-ಸಿಡಿಲು ಸಹಿತ ಭಾರೀ ಮಳೆಯ ಮುನ್ಸೂಚನೆಯನ್ನು ರಾಜ್ಯ ಹವಮಾನ ಇಲಾಖೆ ನೀಡಿದೆ.

Continue Reading

DAKSHINA KANNADA

ಜಸ್ಟ್ ಪಾಸ್ ಮಾಡಲು ದೈವಕ್ಕೆ ಮನವಿ ಸಲ್ಲಿಸಿದ ವಿದ್ಯಾರ್ಥಿ..! ಹುಂಡಿಯಲ್ಲಿ ಪತ್ತೆಯಾದ ಚೀಟಿ..!

Published

on

ಉಡುಪಿ :  ವಿದ್ಯಾರ್ಥಿಯೊಬ್ಬ ದೈವಕ್ಕೆ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್ ಮಾಡಿಸು ಅಂತ ಕೋರಿಕೊಂಡ ಪತ್ರವೊಂದು ವೈರಲ್ ಆಗಿದೆ.

ಪರೀಕ್ಷೆ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಅದೊಂದು ರೀತಿಯ ಟೆನ್ಷನ್ ಇದ್ದೇ ಇರುತ್ತದೆ. ಟಾಪರ್ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಗಿಂತ ಅಂಕ ಕಡಿಮೆ ಬಾರದಿರಲಿ ಅನ್ನೋ ಟೆನ್ಷನ್ ಇದ್ರೆ, ಸಾಮಾನ್ಯ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಹೇಗಾದ್ರೂ ಹೆಚ್ಚಿನ ಅಂಕ ಗಳಿಸಬೇಕು ಅನ್ನೋ ಚ್ಯಾಲೆಂಜ್ ಇರುತ್ತದೆ. ಆದ್ರೆ ಕಲಿಕೆಯಲ್ಲಿ ತೀರಾ ಹಿಂದೆ ಉಳಿದ ವಿದ್ಯಾರ್ಥಿಗಳು ಜಸ್ಟ್ ಪಾಸ್ ಆದ್ರೆ ಸಾಕು ಅಂತಿರ್ತಾರೆ. ಅಂತಹ ಒಬ್ಬ ವಿದ್ಯಾರ್ಥಿ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳ ಆಪ್ಷನ್ ಕೊಟ್ಟು ಇಷ್ಟಾದ್ರೂ ಕೊಡಿಸು ದೇವರೆ ಅಂತ ಬೇಡಿಕೊಂಡಿದ್ದಾನೆ.

ಕುಂದಾಪುರ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಸ್ಥಾನದ ಕಾಣಿಕೆ ಹುಂಡಿಯ ಲೆಕ್ಕಚಾರ ನಡೆಯುವಾಗ ಈ ಪತ್ರ ಲಭ್ಯವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಬದ್ಧತೆಯ ಬಗ್ಗೆ ಚರ್ಚೆ ನಡೆದಿದೆ. ಜಸ್ಟ್ ಪಾಸ್ ಮಾಡುವ ಅಂಕ ನೀಡು ಅಂತ ದೈವದ ಬಳಿ ಕೋರಿಕೆ ಇಟ್ಟಿರುವ ವಿದ್ಯಾರ್ಥಿ ಅಂಕಗಳ ಅಪ್ಷನ್ ನೀಡಿದ್ದಾನೆ. ಪ್ರತಿಯೊಂದು ಸಬ್ಜೆಕ್ಟ್‌ ಗೆ ಎಷ್ಟು ಎಷ್ಟು ಸಿಗಬೇಕು ಎಂದು ದೈವದ ಬಳಿ ಕೋರಿಕೆ ಇಟ್ಟಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ದೇವರೆ ಅಂತ ಹೊರ ಬೊಬ್ಬರ್ಯ ದೈವಕ್ಕೆ ಮನವಿ ಮಾಡಿಕೊಂಡಿದ್ದಾನೆ.

Continue Reading
Advertisement

Trending

Copyright © 2025 Namma Kudla News

You cannot copy content of this page