Connect with us

bangalore

ಸದ್ದು ಮಾಡ್ತಾ ಇದೆ ‘ಕಾಂತಾರ ಚಾಪ್ಟರ್‌ 1’…! ಚಿತ್ರೀಕರಣಕ್ಕೂ ಮೊದಲೇ ಫುಲ್ ಡಿಮ್ಯಾಂಡ್‌..!

Published

on

ಮುಂಬೈ : ರಿಷಬ್ ಶೆಟ್ಟಿ ( Rishab Shetty ) ನಿರ್ದೇಶನ ಮಾಡಿ ಅಭಿನಯಿಸಿರುವ ‘ಕಾಂತಾರ ಚಾಪ್ಟರ್‌ 1’ ( Kanthara Chapter 1 ) ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ.  ಆದ್ರೆ ಈ  ಸಿನೆಮಾ ಚಿತ್ರೀಕರಣ ಆರಂಭಕ್ಕೂ ಮೊದಲೇ ಭಾರಿ ಸದ್ದು ಮಾಡಿದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು ಭಾರೀ ನಿರೀಕ್ಷೆ ಹೊಂದಿದೆ. ವಿಶೇಷ ಅಂದ್ರೆ ಈ ಚಿತ್ರದ ಒಟಿಟಿ ಹಕ್ಕು ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವಾಗಿದೆ.

ಕಾಂತಾರ ಸೀನ್

 

 

 

 

 

 

2022 ರಲ್ಲಿ ಕನ್ನಡ ಫಿಲ್ಮ ಇಂಡಸ್ಟ್ರೀ ಮಾತ್ರವಲ್ಲದೆ ಇಡೀ ದೇಶದಲ್ಲಿ ‘ಕಾಂತಾರ’ (Kanthara ) ಸದ್ದು ಮಾಡಿತ್ತು.  ಬಾಕ್ಸ್‌ ಆಫೀಸ್ ದಾಖಲೆಯನ್ನು ಚಿಂದಿ ಉಡಾಯಿಸಿ ‘ಕಾಂತಾರ’ ಯಶಸ್ಸು ಗಳಿಸಿತ್ತು.  ಈ ಯಶಸ್ಸಿನ ಬಳಿಕ ಪಾರ್ಟ್‌ 2 ತೆರೆಗೆ ಬರಲಿದೆ ಅನ್ನೋ ಸುದ್ದಿ ಅಭಿಮಾನಿಗಳು ಹಾಗೂ ಸಿನಿರಂಗದಲ್ಲೂ ಹರಿದಾಡಿತ್ತು. ನಿರೀಕ್ಷೆ ಹುಸಿಯಾಗದಂತೆ ರಿಶಬ್‌ ಶೆಟ್ಟಿ ‘ಕಾಂತಾರ ಚಾಪ್ಟರ್‌ 1’ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಕರಾವಳಿಯ ಪೌರಾಣಿಕ ಹಿನ್ನಲೆಯನ್ನು ಇಟ್ಟುಕೊಂಡು ‘ಕಾಂತಾರ ಚಾಪ್ಟರ್‌ 1’ ತೆರೆಗೆ ಬರಲಿದೆ ಅನ್ನೋದು ಪೋಸ್ಟರ್‌ ( poster )ನೋಡಿದ ಹಲವು ಫ್ಯಾನ್ಸ್‌ ಚರ್ಚೆ ಮಾಡಿದ್ದರು. ‘ಕಾಂತಾರ’ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.  ‘ಕಾಂತಾರ’ ಸಿನೆಮಾದ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್‌ ಪಡೆದುಕೊಂಡಿತ್ತು.  ಇದೀಗ ‘ಕಾಂತಾರ ಚಾಪ್ಟರ್‌ 1’ ಶೂಟಿಂಗ್ ಆರಂಭಕ್ಕೂ ಮೊದಲೇ ಅಮೇಜಾನ್ ಪ್ರೈಮ್ ಕೋಟ್ಯಾಂತರ ರೂಪಾಯಿಗಳಿಗೆ ಒಟಿಟಿ ಹಕ್ಕು ಪಡೆದುಕೊಂಡಿದೆ.

ಮುಂಬೈಯಲ್ಲಿ ಮಂಗಳವಾರ (ಮಾರ್ಚ್‌ 19) ನಡೆದ ಅಮೇಜಾನ್‌ ಪ್ರೈಂನ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಬಹಿರಂಗವಾಗಿದೆ. ಐಷಾರಾಮಿ ಆಸೆಗಳಿಗಿಂತ ದೊಡ್ಡ ವಿಪತ್ತು ಇನ್ನೊಂದಿಲ್ಲ. ಒಬ್ಬ ಕ್ಷುಲ್ಲಕ ರಾಜನಿಂದ ಉಂಟಾಗುವ ಇಂತಹ ವಿಪತ್ತು, ದೇವರು ಆಯ್ಕೆ ಮಾಡಿದ ಬುಡಕಟ್ಟು ನಾಯಕನ ಹೃದಯದಲ್ಲಿ ಕ್ರೋಧವನ್ನು ಪ್ರಚೋದಿಸುತ್ತದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಇಲ್ಲಿ ಪ್ರಸಾರವಾಗಲಿದೆʼʼ ಎಂದು ಪ್ರೈಂ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.
‘ಕಾಂತಾರ ಚಾಪ್ಟರ್‌ 1’ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನೆಮಾ ಅಲ್ಲದೇ ಇದ್ರೂ ‘ಕಾಂತಾರʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಕನ್ನಡ ಜೊತೆಗೆ ವಿವಿಧ ಭಾಷೆಯಲ್ಲಿ ತೆರೆಗೆ ಬರಲಿದ್ದು, ಅಂದಾಜು 125 ಕೋಟಿ ಬಜೆಟ್‌ನಲ್ಲಿ ಸಿನೆಮಾ ತಯಾರಾಗುತ್ತಿದೆ.

‘ಕಾಂತಾರ ಚಾಪ್ಟರ್ 1’  ರಿಷಬ್ ಶೆಟ್ಟಿ ಹೇಳಿದ್ದೇನು?

ಅಮೇಜಾನ್‌ ಪ್ರೈಂನ (amazon prime ) ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್‌ ಶೆಟ್ಟಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂತಹ ಒಂದು ಸಿನೆಮಾ ನೀಡಬೇಕು ಅನ್ನೋದು ನನ್ನ ಕಾಲೇಜು ದಿನಗಳ ಕನಸಾಗಿತ್ತು. ‘ಕಾಂತಾರ’ ಸಿನೆಮಾಗೆ ಜನರು ಅಭೂತಪೂರ್ವ ಬೆಂಬಲ ನೀಡಿದ ಕಾರಣ ಈಗ ‘ಕಾಂತಾರ ಚಾಪ್ಟರ್‌ 1’ ಮಾಡಲು ಹೊರಟಿದ್ದೇವೆ. ನಮ್ಮ ಊರಿನಲ್ಲಿ ( ಕುಂದಾಪುರ ) ದೊಡ್ಡ ಸೆಟ್ಟ ಹಾಕುತ್ತಿದ್ದು, ಅಲ್ಲಿ ಶೀಘೃ ಚಿತ್ರೀಕರಣ ( shooting ) ಆರಂಭವಾಗಲಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ‘ಕಾಂತಾರ’ದಲ್ಲಿ ನಟಿ ಸಪ್ತಮಿ ಗೌಡ (Sapthami Gowda ) ನಟಿಸಿದ್ದು ಇದರಲ್ಲೂ ಇರ್ತಾರಾ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Advertisement
1 Comment

Leave a Reply

Your email address will not be published. Required fields are marked *

bangalore

ಶಕ್ತಿ ಯೋಜನೆಯಡಿಯೇ ಮಹಿಳೆಯರಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ಸರ್ಕಾರ ..! ಅದೇನು ಗೊತ್ತಾ ?

Published

on

ಮಂಗಳೂರು/ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಕೊಟ್ಟ ಮಾತನ್ನು ಉಳಿಸಿಕೊಳ್ಲುವ ನಿಟ್ಟಿನಲ್ಲಿ ಅವುಗಳನ್ನು ಅಧಿಕಾರಕ್ಕೆ ಬಂದ ಅವಧಿಯಲ್ಲಿಯೇ ಯೋಜನೆಗಳೆಲ್ಲವನ್ನೂ ಜಾರಿಗೊಳಿಸಿತ್ತು. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವಾದ ‘ಶಕ್ತಿ ಯೋಜನೆ’ ಕೂಡ ಒಂದು. ಇದೀಗ ಸರ್ಕಾರವು ಈ ಯೋಜನೆಯಡಿಯೇ ಮತ್ತೊಂದು ಮಹತ್ತರ ಬದಲಾವಣೆ ತಂದಿದ್ದು, ಏನದು ಎಂಬ ಮಾಹಿತಿ ಇಲ್ಲಿದೆ…

ಶಕ್ತಿ ಯೋಜನೆಯಡಿ ಇಂದು ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಬಸ್‌ಗಳಲ್ಲಿ ನೂಕು ನುಗ್ಗಲು ಉಂಟಾಗುತ್ತಿದ್ದು ಇದನ್ನು ತಡೆಯಲು ಸರ್ಕಾರ ಮಹತ್ವದ ಕ್ರಮವನ್ನು ಕೈಗೊಂಡಿದೆ. ಅದೇನೆಂದರೆ ಬಸ್ ಸಂಖ್ಯೆಯಲ್ಲಿ ಇನ್ನೂ ಹೆಚ್ಚು ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಶಕ್ತಿ ಯೋಜನೆಯ ಕುರಿತು ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿದ್ಧರಾಮಯ್ಯ “ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಬಜೆಟ್‌ನಲ್ಲಿ ಸಾರಿಗೆ ನಿಗಮಗಳಿಗೆ 1,000 ಬಸ್‌ಗಳನ್ನು ಜಿಸಿಸಿ ಮೂಲಕ ಒದಗಿಸುವ ಬಗ್ಗೆ ಘೋಷಿಸಲಾಗಿತ್ತು. ಇದನ್ನು ಪರಿಷ್ಕರಿಸಿ 2,000 ಹೊಸ ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾಗಿರುವ ಅನುದಾನವನ್ನು ಒದಗಿಸಲಾಗುವುದು. ಈ ಮೂಲಕ ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಖಕರ ಮತ್ತು ಆರಾಮದಾಯಕವಾಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದಿದ್ದಾರೆ.

Continue Reading

bangalore

ಆ ರೀಲ್ಸ್ ಮಾಡಿದ್ದೇ ತಪ್ಪಾಯ್ತು ..! ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಬ್ಬರ ಮೇಲೆ ಎಫ್.ಐ.ಆರ್. ..!

Published

on

ಮಂಗಳೂರು / ಬೆಂಗಳೂರು : ಕನ್ನಡ ಬಿಗ್ ಬಾಸ್‌ನ ಮಾಜಿ ಸ್ಪರ್ಧಿಗಳಾಗಿರುವ ರಜತ್ ಕಿಶನ್, ವಿನಯ್‌ಗೆ ಸದ್ಯ ಬಹುದೊಡ್ಡ ಸಂಕಷ್ಟ ಎದುರಾಗಿದ್ದು, ಅವರಿಬ್ಬರ ಮೇಲೆ ಎಫ್‌ಐ‌ರ್ ದಾಖಲಾಗಿದೆ. ಬಿಗ್ ಬಾಸ್ ಹಾಗೂ ಕಿರುತೆರೆಯ ಇತರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ರಜತ್ ಕಿಶನ್ ಹಾಗೂ ವಿನಯ್ ಗೌಡ ವಿರುದ್ಧ ಪೊಲೀಸರು ಎಫ್‌.ಐ.ಆ‌ರ್ ದಾಖಲಿಸಿಕೊಂಡಿದ್ದಾರೆ. ಹಾಗಾದರೆ ಅವರೇನುಅಂತಹ ತಪ್ಪು ಮಾಡಿದ್ದರು ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಿಸಿದ್ದ ವಿನಯ್ ಹಾಗೂ ಬಾಸ್ ಸೀಸನ್ 11ರಲ್ಲಿ ಕಾಣಿಸಿಕೊಂಡಿದ್ದ ರಜತ್ ಕಿಶನ್ ಇಬ್ಬರೂ ಕಿರುತೆರೆಯಲ್ಲಿ ಹೆಸರು ಮಾಡಿದವರೇ ಆಗಿದ್ದಾರೆ. ಸದ್ಯ ರಿಯಾಟಲಿ ಶೋವೊಂದರಲ್ಲಿ ಇಬ್ಬರು ಕಾಣಿಸಿಕೊಳ್ಳುತ್ತಿದ್ದು, ಇದೀಗ ಅವರಿಬ್ಬರ ಮೇಲೆ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ.

ಎಫ್.ಐ.ಆರ್ ದಾಖಲಾಗಲು ಕಾರಣವೇನು ?

ವಿನಯ್, ರಜತ್ ಇಬ್ಬರು ಬೆಸ್ಟ್‌ಫ್ರೆಂಡ್ಸ್. ಇತ್ತೀಚೆಗೆ ಇಬ್ಬರು ಜತೆಯಾಗಿ ರೀಲ್ಸ್ ಮಾಡಿದ್ರುದಾರೆ. ಬರೀ ರೀಲ್ಸ್ ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ರೀಲ್ಸ್ ಮಾಡುವಾಗ ಲಾಂಗ್ ಉಪಯೋಗಿದಿದ್ದಾರೆ. ಇದೇ ಅವರಿಗೆ ಸಂಕಷ್ಟ ತಂದೊಡ್ಡಿದೆ. ವಿನಯ್, ರಜತ್ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲಾಂಗ್, ಮಚ್ಚು, ಗನ್ ಅಸಲಿ ಇರಲಿ ಅಥವಾ ನಕಲಿ ಇರಲಿ ಇಂತಹ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರೀಲ್ಸ್ ಮಾಡುವಂತಿಲ್ಲ. ಈ ರೀತಿ ರೀಲ್ಸ್ ಮಾಡುವವರ ವಿರುದ್ದ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.ಹಾಗಾಗಿ ಲಾಂಗ್ ಹಿಡಿದು ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ರಜತ್ ಹಾಗೂ ವಿನಯ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

Continue Reading

bangalore

ಜನರ ಜೇಬಿಗೆ ಬೀಳುತ್ತಾ ಕತ್ತರಿ ..? ಏ.1 ರಿಂದ ಮತ್ತೆ ಏರುತ್ತಾ ವಿದ್ಯುತ್ ದರ ..?

Published

on

ಬೆಂಗಳೂರು : ಬಸ್, ಮೆಟ್ರೊ ಪಯಾಣ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರಕಾರ ವಿದ್ಯುತ್ ದರ ಹೆಚ್ಚಿಸಿ ಜನಜೀವನದ ಮೇಲೆ ಗದಾಪ್ರಹಾರ ನಡೆಸಿದೆ. ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಕೆಎಆರ್‌ಸಿ, ಜನಸಾಮಾನ್ಯರ ಸಂಕಷ್ಟ ಹೆಚ್ಚಿಸಿದ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಗೂ ಮೊದಲೇ ಪ್ರತಿ ಯೂನಿಟ್‌ ಗೆ 36 ಪೈಸೆ ಹೆಚ್ಚಿಸಿದ್ದು, ಪರಿಷ್ಕೃತ ದರ ಏ.1ರಿಂದ ಜಾರಿಗೆ ಬರಲಿದೆ.

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರಕಾರವು ಅಗತ್ಯ ಸೇವೆಗಳ ಬೆಲೆ ಒಂದೊಂದರಂತೆ ಏರಿಕೆ ಮಾಡುತ್ತಿದೆ. ಇತ್ತೀಚೆಗಷ್ಟೇ ಸ್ಟಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಮದ್ಯದ ದರ ಏರಿಕೆಯಾಗಿತ್ತು, ಈ ಬೆನ್ನಲ್ಲೇ ಇದೀಗ ಸರಕಾರವು ವಿದ್ಯುತ್ ದರ ಹೆಚ್ಚಳದ ಶಾಕ್ ಕೊಟ್ಟಿದೆ. ಅಷ್ಟು ಮಾತ್ರವಲ್ಲದೇ ಸದ್ಯದಲ್ಲೇ ನೀರು, ಹಾಲಿನ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಎಸ್ಕಾಂಗಳು ಮುಂದಿನ ಮೂರು ವರ್ಷಗಳಿಗೆ ವಿದ್ಯುತ್ ದರ ಪರಿಷ್ಕರಣೆ ಕೋರಿ ಪ್ರಸ್ತಾವ ಸಲ್ಲಿಸಿದ್ದು, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮಾರ್ಚ್ ಅಂತ್ಯಕ್ಕೆ ಮತ್ತೊಮ್ಮೆ ವಿದ್ಯುತ್ ದರ ಪರಿಷ್ಕರಿಸಲಿದೆ. ಈ ವೇಳೆ ಯೂನಿಟ್‌ಗೆ 10ರಿಂದ 15 ಪೈಸೆ ಹೆಚ್ಚಳವಾಗುವ ನಿರೀಕ್ಷೆಯಿದ್ದು ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.

ಈ ಹಿಂದೆ ಅಸ್ತಿತ್ವದಲ್ಲಿದ್ದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ (ಕೆಇಬಿ) ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಮೊತ್ತವನ್ನು 2002ರವರೆಗೆ ಇಂಧನ ಇಲಾಖೆಯೇ ಭರಿಸುತ್ತಿತ್ತು. ಆದರೆ, ಕೆಂಜಿ ರದ್ದುಗೊಳಿಸಿ ಕೆಪಿಟಿಸಿಎಲ್ ಹಾಗೂ 5 ವಿದ್ಯುತ್ ವಿತರಣಾ ಕಂಪನಿ (ಎಸ್ಕಾಂ)ಗಳನ್ನು ರಚಿಸಿದ ಸರಕಾರ, ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಾನೇ ಭರಿಸುವುದಾಗಿ ಹೇಳಿತ್ತು. ಬಳಿಕ ಭರವರಸೆ ಬದಲಿಸಿ, ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸರಕಾರದ ಪಾಲನ್ನು ಗ್ರಾಹಕರಿಂದಲೇ ಪಡೆಯುವಂತೆ ಕೆಇಆರ್ ಸಿಗೆ ಪ್ರಸ್ತಾವ ಸಲ್ಲಿಸಿತ್ತು. ಬಳಿಕ ಪ್ರಸ್ತಾವದ ಸಂಬಂಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆದು, ಹೈಕೋರ್ಟ್, ಸರಕಾರದ ಕೋರಿಕೆಯನ್ನು 2024ರ ಮಾರ್ಚ್‌ನಲ್ಲಿ ಎತ್ತಿ ಹಿಡಿದಿತ್ತು.

ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಹೈಕೋರ್ಟ್ ಆದೇಶ ಮುಂದಿಟ್ಟುಕೊಂಡು 2024ರ ನವರಂದು ಕೆಇಆರ್‌ಗೆ ಮತ್ತೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ಪುರಸ್ಕರಿಸಿರುವ ಕೆಇಆರ್.ಸಿ, ಸರಕಾರದ ಬದಲು ಗ್ರಾಹಕರಿಂದಲೇ ಹೆಚ್ಚುವರಿಯಾಗಿ ವಿದ್ಯುತ್ ಶುಲ್ಕದ ರೂಪದಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಹಣ ಹೊಂದಿಸಲು ವಿದ್ಯುತ್ ದರ ಏರಿಸಿದೆ. ಸರಕಾರ ಜನರ ಕಲ್ಯಾಣಕ್ಕಾಗಿ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿ 200 ಯೂನಿಟ್ ಈಗ ಉಚಿತವಾಗಿ ವಿದ್ಯುತ್ ಕೊಡುತ್ತಿದೆ. ಮತ್ತೊಂದೆಡೆ ನೌಕರರ ಪಿಂಚಣಿ, ಕೆಪಿಎಲ್ ಮತ್ತು ಎಸ್ಕಾಂಗಳ ನೌಕರರು ಸರಕಾರಿ ನೌಕರರೇ ಆಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page