Connect with us

LATEST NEWS

ಕಾಂತಾರದ ಭೂತಕೋಲ ದೃಶ್ಯ ಇದೀಗ ಚುನಾವಣೆ ಪ್ರಚಾರದಲ್ಲಿ….!!

Published

on

ಬೆಂಗಳೂರು ಫೆಬ್ರವರಿ 19: ಕಾಂತಾರ ಸಿನೆಮಾ ಬಂದ ಮೇಲೆ ಇದಿಗೂ ಭೂತಕೋಲ ದೃಶ್ಯಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರಕ್ಕೂ ಕಾಂತಾರದ ಸನ್ನಿವೇಶಗಳನ್ನು ಬಳಸಲಾರಂಭಿಸಿದ್ದು, ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕರ್ನಾಟಕದಲ್ಲಿ ಚುನಾವಣೆಯ ಕಾವು ಹೆಚ್ಚಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರಕಾರ್ಯ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ವಿವಿಧ ರೀತಿಯಲ್ಲಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಉಪೇಂದ್ರ ಅವರ ಪ್ರಜಾಕೀಯ ಪಕ್ಷ ಕೂಡ ಹಣಾಹಣಿಗೆ ಸಜ್ಜಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ‘ಕಾಂತಾರ’ ಸಿನಿಮಾದ ದೃಶ್ಯವನ್ನು ಇಟ್ಟುಕೊಂಡು ಚುನಾವಣೆ ಕುರಿತು ಜಾಗೃತಿ ಮೂಡಿಸುವಂತಹ ಒಂದು ಪ್ರಯತ್ನ ನಡೆದಿದೆ. ಅದರಲ್ಲಿ ಪ್ರಜಾಕೀಯದ ಪ್ರಚಾರ ಕೂಡ ಆಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಜನರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.


ಕಾಂತಾರ’ ಸಿನಿಮಾದಲ್ಲಿನ ಮುಖ್ಯ ಆಕರ್ಷಣೆಯೇ ಭೂತಕೋಲದ ದೃಶ್ಯ. ಇದರಲ್ಲಿ ರಿಷಬ್​ ಶೆಟ್ಟಿ ಅವರು ದೈವ ನರ್ತಕನ ಪಾತ್ರ ಮಾಡಿದ್ದಾರೆ. ತನ್ನ ಭೂಮಿಯನ್ನು ಊರಿನ ಜನರಿಂದ ಹಿಂದಿರುಗಿಸಿಕೊಡಿ ಎಂದು ದೈವದ ಬಳಿ ಸಾಹುಕಾರನ ಮಗ ಬೇಡಿಕೆ ಇಡುವ ದೃಶ್ಯ ಈ ಸಿನಿಮಾದಲ್ಲಿದೆ. ಆ ಬೇಡಿಕೆಗೆ ದೈವ ಒಪ್ಪದೇ ಇದ್ದಾಗ ತಾನು ಕೋರ್ಟಿಗೆ ಹೋಗುವುದಾಗಿ ಆತ ತಿಳಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ದೈವವು, ‘ಕೋರ್ಟಿಗೆ ಹೋಗ್ತಿ.. ಆದರೆ ನಿನ್ನ ತೀರ್ಮಾನ ಮೆಟ್ಟಿಲ ಮೇಲೆ ನಾನು ಮಾಡ್ತೀನಿ’ ಎಂದು ಹೇಳುತ್ತದೆ. ಇದೇ ದೃಶ್ಯವನ್ನು ಈಗ ಎಡಿಟ್​ ಮಾಡಲಾಗಿದೆ.


ಹಣ, ಸೀರೆ, ಸಾರಾಯಿ ಹಂಚಿ ಮತ ಕೇಳುವುದು ಸರಿಯಲ್ಲ ಎಂಬ ಸಂದೇಶವನ್ನು ಈ ವಿಡಿಯೋ ಮೂಲಕ ಹೇಳಲಾಗಿದೆ. ‘ಸೀರೆ, ಸಾರಾಯಿ, ಹಣವನ್ನು ಈ ಜನರಿಗೆ ಹಂಚುತ್ತೇನೆ. ಅವರ ಮತವನ್ನು ನನಗೆ ಹಾಕಿಸಿಕೊಡಬೇಕು’ ಎಂದು ದೈವದ ಬಳಿ ರಾಜಕೀಯ ನಾಯಕನು ಬೇಡಿಕೆ ಇಡುತ್ತಾನೆ. ಅದಕ್ಕೆ ಪ್ರತಿಕ್ರಿಯೆಯಾಗಿ, ‘ಬಹಳ ಒಳ್ಳೆಯ ಪ್ರಾರ್ಥನೆ.. ಈ ಊರಿನವರ ಮತವನ್ನು ನಿಮಗೆ ಹಾಕಿಸಿಕೊಡುತ್ತೇನೆ. ಆದರೆ ಇಲ್ಲಿಯವರೆಗೆ ಇವರು ಕಟ್ಟಿದ ತೆರಿಗೆ ಹಣವನ್ನು ಹಿಂದಿರುಗಿಸಿಕೊಡಬಹುದಾ ರಾಜಕೀಯ ನಾಯಕರೇ?’ ಎಂದು ದೈವ ಮರುಪ್ರಶ್ನೆ ಕೇಳುತ್ತದೆ.

ದೈವ ಹೇಳಿದ್ದಕ್ಕೆ ಆತ ಒಪ್ಪುವುದಿಲ್ಲ. ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತೇನೆ ಎಂದು ಅವನು ಹೇಳುತ್ತಾನೆ. ಅದಕ್ಕೆ ಉತ್ತರಿಸುವ ದೈವ, ‘ಸೀರೆ, ಸಾರಾಯಿ ಹಂಚ್ತಿ.. ಆದ್ರೆ ಇದರ ತೀರ್ಮಾನವನ್ನು ಮತಗಟ್ಟಲೆಯಲ್ಲಿ ನಾನು ಮಾಡುತ್ತೇನೆ. ಈ ತೆರಿಗೆ ಹಣ ಊರಿನವರದ್ದು. ಅದರ ತೀರ್ಮಾನ ಇವತ್ತಲ್ಲ. ಮುಂದೊಂದು ದಿನ ಪ್ರಜಾಕೀಯ ಬರಬೇಕಾಗುತ್ತದೆ’ ಎಂದು ಹೇಳುವ ರೀತಿಯಲ್ಲಿ ವಿಡಿಯೋ ಎಡಿಟ್​ ಮಾಡಲಾಗಿದೆ.

 

 

LATEST NEWS

ಇವನೆಂಥಾ ಸೈಕೋ ಕಾಮಿ..! ಪಬ್ಲಿಕ್ ಟಾಯ್ಲೆಟ್ ನಲ್ಲಿ ನಾಯಿ ಮರಿಯ ಮೇಲೆ ಅತ್ಯಾಚಾರ..!

Published

on

ಮುಂಬೈ: ಇವನೆಂಥಾ ಕಾಮ ಪಿಶಾಚಿ. ಎರಡೂವರೆ ತಿಂಗಳ ನಾಯಿ ಮರಿ ಮೇಲೆ ಈ ಕಾಮುಕನೊಬ್ಬ ಸಾರ್ವಜನಿಕ ಶೌಚಾಲಯದಲ್ಲಿ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ. ಅರೆಬೆತ್ತಲೆಯಾಗಿ ಮತ್ತು ಶಾರ್ಟ್ಸ್ ಧರಿಸಿ ಕಾಣಿಸಿಕೊಂಡ ಆರೋಪಿಯನ್ನು  ವಶಕ್ಕೆ ತೆಗೆದುಕೊಳ್ಳಲಾಗಿದೆ.

ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ವೀಡಿಯೋದಲ್ಲಿ ಆ ವ್ಯಕ್ತಿ ಆರಂಭದಲ್ಲಿ ಬಾಗಿಲು ತೆರೆಯಲು ನಿರಾಕರಿಸುವುದನ್ನು ಕಾಣಬಹುದು. ನಂತರ ಪೊಲೀಸರು ಬಲವಂತವಾಗಿ ಒಳಗೆ ಪ್ರವೇಶಿಸಿ ಆತನನ್ನು ವಶಕ್ಕೆ ಪಡೆದರು.

ನಾಯಿಮರಿಯನ್ನು ತಕ್ಷಣವೇ ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು. ನಾಯಿಮರಿ ಈಗ ವೈದ್ಯಕೀಯ ಆರೈಕೆಯಲ್ಲಿದೆ ಮತ್ತು ಗಂಭೀರ ಸ್ಥಿತಿಯಲ್ಲಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

Continue Reading

LATEST NEWS

ವೃದ್ಧ ದಂಪತಿ ದುರಂತ ಅಂತ್ಯಕ್ಕೆ ಬಿಗ್ ಟ್ವಿಸ್ಟ್, ಮುಹೂರ್ತ ಇಟ್ಟಿದ್ದ ತಮ್ಮನ ವೈದ್ಯ ಮಗ ಅರೆಸ್ಟ್..!

Published

on

ಶಿವಮೊಗ್ಗ: ಇಲ್ಲಿನ ಭದ್ರಾವತಿ ನಗರದ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ದ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಣ ಮತ್ತು ಚಿನ್ನಾಭರಣಕ್ಕಾಗಿ ಕಿರಾತಕ ವೈದ್ಯನೊಬ್ಬ ತನ್ನ ದೊಡ್ಡಪ್ಪ, ದೊಡ್ಡಮ್ಮನನ್ನೇ  ಕೊಲೆಗೈದ ವಿಚಾರ ಬೆಳಕಿಗೆ ಬಂದಿದೆ.

ವಿಐಎಸ್‌ಎಲ್ ನಿವೃತ್ತ ನೌಕರ ಚಂದ್ರಪ್ಪ (78) ಮತ್ತು ಅವರ ಪತ್ನಿ ಜಯಮ್ಮ  (75) ಹತ್ಯೆಗೀಡಾದ ಮೃತ ದುರ್ದೈವಿಗಳು. ಮೃತ ಚಂದ್ರಪ್ಪ ಅವರ ಸಹೋದರ ಫಾಲಾಕ್ಷಪ್ಪ ಅವರ ಪುತ್ರ ಡಾ.ಮಲ್ಲೇಶ್ ಬಂಧಿತ ಆರೋಪಿ.

ವಿಶೇಷವೆಂದರೆ ವೃದ್ಧ ದಂಪತಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಈತನ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದರು. ದಂಪತಿಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ವೈದ್ಯ, ಅವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಯಾವುದೇ ಗಾಯ ಮಾಡದೆ ಅತ್ಯಂತ ಚಾಣಾಕ್ಷತನದಿಂದ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ವೃದ್ಧ ದಂಪತಿ ಕೊಲೆಯಾದ ಬಳಿಕ ನಾಪತ್ತೆಯಾಗಿದ್ದ ಚಿನ್ನಾಭರಣಗಳ ಜಾಡು ಹಿಡಿದ ಭದ್ರಾವತಿ ಓಲ್ಡ್ ಟೌನ್ ಪೊಲೀಸರು, ತನಿಖೆಯ ಸಂದರ್ಭದಲ್ಲಿ ಡಾ. ಮಲ್ಲೇಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಆರೋಪಿ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಹಣ ಮತ್ತು ಚಿನ್ನದ ಆಸೆಗಾಗಿ ಸ್ವಂತ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಲ್ಲಲು ಈತ ಮುಂದಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Continue Reading

LATEST NEWS

ಪಡುಬಿದ್ರೆಗೆ ಆಗಮಿಸಿದ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ, ಕೈಯಲ್ಲಿ ಬಂಗುಡೆ ಹಿಡಿದು ಭರ್ಜರಿ ಡ್ಯಾನ್ಸ್

Published

on

ಪಡುಬಿದ್ರೆ: ತಮ್ಮ ವಿಶಿಷ್ಟ ಮಾತುಗಳಿಂದ ಮನೆ ಮಾತಾಗಿರುವ , ಈ ಬಾರಿಯ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಇದೇ ಮೊದಲ ಬಾರಿಗೆ ತವರೂರಿಗೆ ಆಗಮಿಸಿದ್ದು, ರಕ್ಷಿತಾ ಶೆಟ್ಟಿಗೆ ಅಭಿಮಾನಿಗಳು ಮುತ್ತಿಗೆ ಹಾಕಿ ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಚೆಂಡೆ ನಾದದೊಂದಿಗೆ ರಕ್ಷಿತಾಳನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.

ತುಳುನಾಡಿನ ಬಾಲೆಗೆ ತುಳುನಾಡ ಶಾಲು ಹಾಕಿ ಗೌರವಿಸಲಾಯಿತು. ಉಡುಪಿ ಜಿಲ್ಲೆಯ ಗಡಿಭಾಗವಾದ ಹೆಜಮಾಡಿ ಟೋಲ್ ಪ್ರವೇಶಿಸಿದ ರಕ್ಷಿತಾಳಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನೇ ನೀಡಿದರು. ರಕ್ಷಿತಾ ಅಭಿಮಾನಿಗಳು, ಕುಟುಂಬಿಕರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಇನ್ನು ರಕ್ಷಿತಾಳ ಜೊತೆ ತಮ್ಮ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು. ರಕ್ಷಿತಾ ಕುಡಾ ಅಭಿಮಾನಿಗಳನ್ನು ನಿರಾಶೆ ಮಾಡಲಿಲ್ಲ.

ಅವರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡರು. ಸಾಲದಕ್ಕೆ ಚೆಂಡೆ ಧ್ವನಿಗೆ ನೃತ್ಯ ಮಾಡಿ ಮನರಂಜಿಸಿದರು. ಹೆಜಮಾಡಿ ಟೋಲ್‌ನಿಂದ ಪಡುಬಿದ್ರಿ ಪೇಟೆ ತನಕ ಮೆರವಣಿಗೆ ಮಾಡಲಾಯಿತು. ಜಾತಿ, ಧರ್ಮವೆನ್ನದೇ ಎಲ್ಲರೂ ಬಂದು ರಕ್ಷಿತಾಳಿಗೆ ಶುಭ ಹಾರೈಸಿದರು. ಬಿಗ್ ಬಾಸ್ ರಕ್ಷಿತಾಳಿಗೆ ಜೈ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವೀಡಿಯೊ ನೋಡಿ:

 

Continue Reading
Advertisement

Trending

Copyright © 2025 Namma Kudla News

You cannot copy content of this page