Connect with us

ಕನ್ನಡಿಗ ಅಧಿಕಾರಿಯೇ ಮಹಾಕುಂಭ ಮೇಳದ ಸಾರಥಿ !

Published

on

ಮಂಗಳೂರು/ಪ್ರಯಾಗ್ ರಾಜ್ : ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ಆರಂಭಗೊಂಡಿದ್ದು, ಭಕ್ತ ಸಾಗರವೇ ಹರಿದು ಬರುತ್ತಿದೆ.

ಈ ಬಾರಿಯ ಪ್ರಯಾಗರಾಜ್ ಮಹಾಕುಂಭ ಮೇಳ ಕನ್ನಡಿಗನ ಸಾರಥ್ಯದಲ್ಲಿ ನಡೆಯುತ್ತಿದೆ. ಮಹಾಕುಂಭ ಮೇಳದ ಮೇಲಾಧಿಕಾರಿಯಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕನ್ನಡಿಗ ಐಎಎಸ್ ಅಧಿಕಾರಿಯನ್ನೇ ನೇಮಕ ಮಾಡಿದ್ದಾರೆ. ಬೆಂಗಳೂರು ಮೂಲದ ವಿಜಯ್ ಕಿರಣ್ ಆನಂದ್ ಅವರು ಮಹಾಕುಂಭಮೇಳದ ಸಾರಥ್ಯವಹಿಸಿದ್ದಾರೆ.

ಇದನ್ನೂ ಓದಿ: ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು ?

ವಿಜಯ್ ಕಿರಣ್ ಆನಂದ್ ಈ ಹಿಂದೆ ಗೋರಖ್ ಪುರ ಜಿಲ್ಲಾಧಿಕಾರಿಯಾಗಿದ್ದರು. ಈ ವೇಳೆ ವಿಜಯ್ ಕಿರಣ್ ದಕ್ಷತೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ತಿರದಿಂದ ನೋಡಿದ್ದರು. ಹೀಗಾಗಿ ಈಗ ಪ್ರಯಾಗರಾಜ್ ಜಿಲ್ಲಾಧಿಕಾರಿಯಾಗಿ ಅವರನ್ನೇ ನೇಮಿಸಿ ಮಹಾಕುಂಭ ಮೇಳದ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ. ವಿಜಯ್ ಕಿರಣ್ ಆನಂದ್ ಅವರನ್ನು ಮಹಾಕುಂಭಮೇಳದ ಮೇಲಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.

ಈ ಹಿಂದೆ 2021ರ ಹರಿದ್ವಾರದ ಕುಂಭ ಮೇಳಕ್ಕೆ ಮೇಲಾಧಿಕಾರಿಯಾಗಿ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಅವರನ್ನು ನೇಮಿಸಲಾಗಿತ್ತು. ಇದೀಗ ಮತ್ತೊಬ್ಬ ಕನ್ನಡಿಗರ ನೇತೃತ್ವದಲ್ಲಿ ಪ್ರಯಾಗರಾಜ್ ನ ಮಹಾ ಕುಂಭಮೇಳ ನಡೆಯುತ್ತಿದೆ.

 

Advertisement
Click to comment

Leave a Reply

Your email address will not be published. Required fields are marked *

BIG BOSS

ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

Published

on

ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಅವರ ಹೆಸರು ಇನ್ನಷ್ಟು ಪ್ರಸಿದ್ಧಿಯಾಗುತ್ತದೆ. ದಿನಕ್ಕೊಂದು ಹೊಸ ಹೊಸ ಆಫರ್‌ಗಳು ಬರುತ್ತಲೇ ಇರುತ್ತದೆ. ಹೀಗಾಗಿ ಅದೆಷ್ಟೋ ಜನರು ಬಿಗ್‌ಬಾಸ್ ಮನೆಗೆ ನನಗೂ ಹೋಗಲು ಅವಕಾಶ ಸಿಗುತ್ತಿದ್ದರೆ ಒಳ್ಳೆಯದಿತ್ತು ಎಂದು ಬಯಸುತ್ತಾರೆ.

ಇನ್ನು ಬಿಗ್‌ಬಾಸ್ ಮನೆಗೆ ಹೋದವರಿಗೆ ಮೊದಲೇ ಪೇಮೆಂಟ್ ವಿಷಯವನ್ನು ಹೇಳುತ್ತಾರೆ. ಈ ಮೊದಲೇ ಹೆಸರು ಗಳಿಸಿದವರಿಗೆ ಸ್ವಲ್ಪ ಜಾಸ್ತಿ ಹಣವಿರುತ್ತದೆ. ಪ್ರತಿವಾರಕ್ಕೆ ಇಂತಿಷ್ಟು ಸಂಭಾವನೆ ಎಂದು ಅವರಿಗೆ ಸಿಗುತ್ತದೆ. ಅಲ್ಲದೇ ಬಿಗ್‌ಬಾಸ್ ಗೆದ್ದರೆ 50 ಲಕ್ಷ ಹಣವಿರುತ್ತದೆ. ಇದೀಗ ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಯಾರು ಗೊತ್ತಾ..?

 

ಹೌದು, ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆದವರು ಪುತ್ತೂರಿನ ಧನ್‌ರಾಜ್ ಆಚಾರ್ಯ. ಒಂದು ವಾರಕ್ಕೆ 30 ಸಾವಿರ ಸಂಭಾವನೆ ಸಿಗುತ್ತಿತ್ತು. ಬಿಗ್‌ಬಾಸ್ ಮನೆಯಲ್ಲಿ ಧನರಾಜ್ ಅವರು ಕೊನೆಯವರೆಗೂ ಇದ್ದರು. ಗ್ರ್ಯಾಂಡ್ ಫಿನಾಲೆಗೆ ಹೋಗುವ ಮೊದಲು ಎಲಿಮಿನೇಟ್ ಆದರು.

ಅಲ್ಲದೇ ಬಿಗ್‌ಬಾಸ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿದ್ದು ಸತ್ಯ ಧಾರಾವಾಹಿಯ ಗೌತಮಿ ಜಾದವ್ ಎಂದು ತಿಳಿದುಬಂದಿದೆ. ಬಿಗ್ ಬಾಸ್‌ ಮನೆಯಲ್ಲಿ ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಅವರ ಸ್ನೇಹ ಎಂಥದ್ದು ಎಲ್ಲರಿಗೂ ತಿಳಿದಿದೆ. ಇಬ್ಬರು ಕೂಡ ಜೀವಕ್ಕೆ ಜೀವದಂತೆ ಇದ್ದರು. ಹಾಗೆಯೇ ತನ್ನ ಕಾಮಿಡಿ ಮಾತುಗಳ ಮೂಲಕ ಧನ್‌ರಾಜ್ ವೀಕ್ಷಕರನ್ನು ಮನೋರಂಜಿಸುತ್ತಿದ್ದರು.

Continue Reading

LATEST NEWS

ಗೆಳತಿಗಾಗಿ ಕಳ್ಳನಾದ ಎಂಎಲ್ಎ ಮಗ !

Published

on

ಮಂಗಳೂರು/ಗುಜರಾತ್ : ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಇಲ್ಲೊಬ್ಬ ರಾಜಕೀಯ ಮುಖಂಡನ ಮಗನೇ ಕಳ್ಳನಾಗಿದ್ದಾನೆ. ಅಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

ಗುಜರಾತ್‌ನ ಮಾಜಿ ಶಾಸಕರೊಬ್ಬರ ಮಗನ ಇತ್ತೀಚಿನ ಕೃತ್ಯಗಳ ಬಗ್ಗೆ ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಗೆಳತಿಗಾಗಿ ಎಂಎಲ್‌ಎ ಮಗ ಕಳ್ಳನಾಗಿ ಬದಲಾಗಿದ್ದಾನೆ. ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಒಂದು ಕಳ್ಳತನ ನಡೆದಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಳ್ಳನನ್ನು ಗುರುತಿಸಿ ಬಂಧಿಸಲಾಗಿದೆ. ತನಿಖೆಯಲ್ಲಿ ಆತ ಮಾಜಿ ಶಾಸಕ ವಿಜೇಂದ್ರ ಸಿಂಗ್ ಚಂದ್ರಾವತ್ ಅವರ ಪುತ್ರ ಪ್ರದ್ಯುಮ್ನ ಸಿಂಗ್ ಚಂದ್ರಾವತ್ ಎಂದು ತಿಳಿದುಬಂದಿದೆ.

ಕಳೆದ ತಿಂಗಳು 25 ರಂದು ಪ್ರದ್ಯುಮ್ನ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡಿದ್ದ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಶಂಕಿತನನ್ನು ಗುರುತಿಸಿ ಬಂಧಿಸಿದಾಗ ಸತ್ಯ ಹೊರಬಂದಿತು.

ಗೆಳತಿಯ ಆಸೆ ಪೂರೈಸಲು ಕಳ್ಳತನ

ಪೊಲೀಸರ ವಿಚಾರಣೆಯ ಬಳಿಕ ಆರೋಪಿ, ತನ್ನ ಗೆಳತಿಯ ಅಗತ್ಯಗಳನ್ನು ಪೂರೈಸಲು ನಾನು ಈ ಕೆಲಸ ಮಾಡಬೇಕಾಗಿ ಬಂತು ಎಂದು ಆರೋಪಿ ಹೇಳಿಕೊಂಡಿದ್ದಾನೆ. ತನಗೆ ಮಾಸಿಕ 15,000 ರೂ. ಸಂಬಳ ಬರುತ್ತಿದ್ದು, ಆ ಹಣದಿಂದ ತನ್ನ ಗೆಳತಿಯ ಐಷಾರಾಮಿ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ತಾನು ಶಾಸಕರ ಮಗನಾಗಿದ್ದರೂ ಮನೆಯಿಂದ ಓಡಿಹೋಗಿದ್ದಾಗಿ ಪ್ರದ್ಯುಮ್ನ ಪೊಲೀಸರಿಗೆ ಹೇಳಿದ್ದಾನೆ.

ಸದ್ಯ ಆರೋಪಿ ವಿರುದ್ದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಸ್ತುತ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಇದನ್ನೂ ಓದಿ: ಆ ಒಂದು ಸೆಲ್ಫಿ ಸಾವಿಗೆ ಆಹ್ವಾನ; ಕುಟುಂಬ ಹಾಗೂ ಸ್ನೇಹಿತರ ಎದುರೇ ಹಾರಿ ಹೋದ ಪ್ರಾಣಪಕ್ಷಿ

ವಿಜೇಂದ್ರ ಸಿಂಗ್ ಚಂದ್ರಾವತ್ 2008ರಲ್ಲಿ ಮಾನಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದರು. ಆ ಸಮಯದಲ್ಲಿ ಅವರು ಕಾಂಗ್ರೆಸ್‌ನಲ್ಲಿದ್ದರು. ನಂತರ, ಅವರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಬಿಜೆಪಿ ಸೇರಿದರು. ಮಗನ ಕಳ್ಳತನದ ಕೃತ್ಯದಿಂದ ತಂದೆ ತಲೆ ತಗ್ಗಿಸುವಂತಾಗಿದೆ.

 

 

Continue Reading

LATEST NEWS

ಬ್ರಹ್ಮಾವರ: ಮರಕ್ಕೆ ಕಾರು ಡಿ*ಕ್ಕಿ; ಮಹಿಳೆ ಸಾ*ವು, ಇಬ್ಬರಿಗೆ ಗಂ*ಭೀರ ಗಾ*ಯ

Published

on

ಬ್ರಹ್ಮಾವರ :  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸಾ*ವನ್ನಪ್ಪಿ, ಇಬ್ಬರು ಗಂಭೀ*ರ ಗಾ*ಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಸಮೀಪ ಕಾಡೂರಿನಲ್ಲಿ ನಡೆದಿದೆ.

ಬೀಜಾಡಿಯ ಜಯಲಕ್ಷ್ಮೀ(68) ಮೃ*ತಪಟ್ಟ ಮಹಿಳೆ. ರಾಮಚಂದ್ರ ಭಟ್, ಸುಜಾತಾ, ಮಂಗಳ, ಪ್ರೇಮಾ ಎಂಬವರು ಗಂ*ಭೀರವಾಗಿ ಗಾ*ಯಗೊಂಡಿದ್ದು, ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಬ್ಬಿನಾಲೆ ಜಾತ್ರೆ ಮುಗಿಸಿ ಈ ಐವರು ಕಾರಿನಲ್ಲಿ ಬೆಳಿಗ್ಗೆ ಮಂದಾರ್ತಿ, ಸಾಲಿಗ್ರಾಮ, ಹಾಗೂ ಕೋಟ ಅಮೃತೇಶ್ವರಿ  ದೇವಸ್ಥಾನಕ್ಕೆಂದು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಅಪ*ಘಾತ ಸಂಭವಿಸಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page