Connect with us

DAKSHINA KANNADA

ಕಂಬಳ ಪರಿಷ್ಕೃತ ಪಟ್ಟಿ ಬಿಡುಗಡೆ: ಕೊರೋನಾದಿಂದ ಮುಂದೂಡಲ್ಪಟ್ಟಿದ್ದ ಜಾನಪದ ಕ್ರೀಡೆ

Published

on

ಮಂಗಳೂರು: ಕೋವಿಡ್ ಕಾರಣದಿಂದ ತಾತ್ಕಾಲಿಕ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಚಾಲನೆ ಸಿಕ್ಕಿದೆ.

ನಿನ್ನೆ ನಡೆದ ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಸದಸ್ಯರು, ಕಂಬಳ ವ್ಯವಸ್ಥಾಪಕರು ಸೇರಿ ಹೊಸ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಅದರ ಪರಿಷ್ಕೃತ ಪಟ್ಟಿ ಹೀಗಿದೆ.

05-02-2022 ಶನಿವಾರ – ಬಾರಾಡಿ ಬೀಡು ಕಂಬುಲ

13-02-2022 ರವಿವಾರ – ಅಡ್ವೆ ನಂದಿಕೂರ್

19-02-2022 ಶನಿವಾರ – ವಾಮಂಜೂರು ಕಂಬುಲ

26-02-2022 ಶನಿವಾರ – ಐಕಳ ಬಾವ ಕಂಬುಲ

05-03-2022 ಶನಿವಾರ – ಪೈವಳಿಕೆ ಕಂಬುಲ

12-03-2022 ಶನಿವಾರ – ಕಟಪಾಡಿ ಕಂಬುಲ

19-03-2022 ಶನಿವಾರ – ಪುತ್ತೂರು ಕಂಬುಲ

26-03-2022 ಶನಿವಾರ – ಬಂಗ್ರಕೂಳೂರು, ಮಂಗಳೂರು ಕಂಬುಲ

2-04-2022- ಉಪ್ಪಿನಂಗಡಿ

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಪುತ್ತೂರು: 33ನೇ ವರ್ಷದ ಕೋಟಿ-ಚೆನ್ನಯ ಜೋಡುಕೆರೆ ಕಂಬಳ

Published

on

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 33ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಜನವರಿ 24 ಮತ್ತು 25ರಂದು ನಡೆಯಲಿದೆ.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಕೂಟಗಳ ಪೈಕಿ ಹಲವು ಪ್ರಥಮಗಳನ್ನು ಸ್ಥಾಪಿಸಿದ ಕೂಟವೆಂಬ ಹೆಗ್ಗಳಿಕೆ ಪುತ್ತೂರು ಕಂಬಳಕ್ಕಿದ್ದು, ಈ ಬಾರಿ 200ಕ್ಕಿಂತಲೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಲಿವೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.32ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯ ಜೋಡುಕರೆಯಲ್ಲಿ ಕಂಬಳವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಲಿದ್ದಾರೆ ಎಂದರು.

ಇದನ್ನೂ ಓದಿ: ಪಡುಬಿದ್ರೆಗೆ ಆಗಮಿಸಿದ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ, ಕೈಯಲ್ಲಿ ಬಂಗುಡೆ ಹಿಡಿದು ಭರ್ಜರಿ ಡ್ಯಾನ್ಸ್

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ರೈ ವಹಿಸಲಿದ್ದಾರೆ ಹಲವು ಮಂದಿ ಗಣ್ಯರು ಭಾಗವಹಿಸಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಕೋಶಾಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು ಮೊದಲಾದವರಿದ್ದರು.

Continue Reading

DAKSHINA KANNADA

ದ್ವೇಷ ಭಾಷಣ ಆರೋಪ; ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ದ ಎಫ್‌ಐಆರ್‌

Published

on

ಪುತ್ತೂರು: ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಹಾಗೂ ಆ ಭಾಷಣವನ್ನು ಪ್ರಸಾರ ಮಾಡಿದ ವಾಹಿನಿಯೊಂದರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೋಮು ದ್ವೇಷ ಹಾಗೂ ಹಿಂಸೆಗೆ ಪ್ರಚೋದನೆಯಾಗುವ ರೀತಿಯಲ್ಲಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮತ್ತು ಭಾಷಣವನ್ನು ಪ್ರಸಾರ ಮಾಡಿದ ವಾಹಿನಿ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ್ದ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಂದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

DAKSHINA KANNADA

ನಾಳೆ(ಜ.21) ಕದ್ರಿ ಮ್ಯೂಸಿಕಲ್ ನೈಟ್ಸ್ 2026 : ರಿಷಬ್ ಶೆಟ್ಟಿ ಭಾಗಿ

Published

on

ಮಂಗಳೂರು : ಕದ್ರಿ ಶ್ರೀಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ  ಪ್ರಯುಕ್ತ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಕದ್ರಿ ಈವೆಂಟ್ಸ್ ಅರ್ಪಿಸುವ  ‘ಕದ್ರಿ ಮ್ಯೂಸಿಕಲ್ ನೈಟ್ಸ್ 2026’ ನಾಳೆ(ಜ.21) ಸಂಜೆ 7 ಗಂಟೆಯಿಂದ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ಜರುಗಲಿದೆ.

ಎಂದಿನಂತೆ ಈ ಬಾರಿಯೂ ತಾರಾ ಮೆರುಗು ಇರಲಿದ್ದು, ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಆಗಮಿಸಲಿದ್ದಾರೆ.

ಆಯೋಜಕ ಜಗದೀಶ್ ಕದ್ರಿ ಈ ಬಗ್ಗೆ ಮಾತನಾಡಿ, ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಕದ್ರಿ ಮ್ಯೂಸಿಕಲ್ ನೈಟ್ ಆಯೋಜನೆ ಮಾಡಿದ್ದೇವೆ. ಸಿನಿಮಾ ಸೆಲೆಬ್ರಿಟಿಗಳು, ಗಣ್ಯರು ಸೇರಿದಂತೆ ಹೆಸರಾಂತ ಗಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಇದನ್ನೂ ಓದಿ : BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

ಕನ್ನಡ, ತುಳು ಚಿತ್ರರಂಗದ ಕಲಾವಿದರಾದ ರೂಪೇಶ್ ಶೆಟ್ಟಿ, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಅರ್ಜುನ್ ಕಾಪಿಕಾಡ್, ಶನಿಲ್ ಗುರು, ಪ್ರಕಾಶ್ ತೂಮಿನಾಡು, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ವಿಜೆ ವಿನೀತ್, ಸಮತಾ ಅಮೀನ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page