Connect with us

LATEST NEWS

ಕಲಬುರಗಿ ಸಂಘರ್ಷ: ಸಂಸದ, ಶಾಸಕ, ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಾಟ

Published

on

ಕಲಬುರಗಿ: ಇಲ್ಲಿನ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಸಂಬಂಧಿಸಿದಂತೆ ಆಳಂದ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಭಾರಿ ಗಲಾಟೆಯಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಸಂಸದ, ಶಾಸಕರು, ಪೊಲೀಸ್​, ಮಾಧ್ಯಮದವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಬೀದರ್ ಲೋಕಸಭಾ ಸದಸ್ಯ ಭಗವಂತ ಖೂಬಾ, ಶಾಸಕ ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್ ತೆಲ್ಕೂರ ಮತ್ತು ಸುದ್ದಿ ಮಾಧ್ಯಮದವರ ವಾಹನಗಳು ಸೇರಿದಂತೆ ಕಂಡ ಕಂಡ ವಾಹನಗಳನ್ನು ಕಲ್ಲು ತೂರಿ ಜಖಂ ಮಾಡಲಾಗಿದೆ.

ಆಳಂದ ಪಟ್ಟಣದಲ್ಲಿ ಪರಿಸ್ಥಿತಿ ಕೈಮೀರಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಒಂದು ಗುಂಪಿನ ಉದ್ರಿಕ್ತರು ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿದ್ದಾರೆ.

ಇದರಿಂದ ಹಲವರಿಗೆ ಕಲ್ಲೇಟಿನಿಂದ ಗಾಯವಾಗಿದೆ. ಪಟ್ಟಣದ ಲಾಡ್ಲಮಶಾಕ್​ ಪ್ರಾರ್ಥನಾ ಮಂದಿರದಲ್ಲಿರುವ ಶಿವಲಿಂಗಕ್ಕೆ ಶುದ್ದಿ ಹಾಗೂ ಪೂಜೆ ಮಾಡಲು ಹಿಂದು ಕಾರ್ಯಕರ್ತರು ಆಗಮಿಸಿದ್ದರು.

ಈ ವೇಳೆ ದರ್ಗಾದ ಹೊರಗಡೆ ಭಾರಿ ತಿಕ್ಕಾಟ ಉಂಟಾದಾಗ ಪೊಲೀಸರು, ರಾಜಕೀಯ ನಾಯಕರು ಮಧ್ಯಪ್ರವೇಶಿಸಿ ಒಂದು ಗುಂಪಿನ ಮನವೊಲಿಸಲಾಯಿತು. ಬಳಿಕ 10 ಜನರಿಗೆ ಲಿಂಗ ಶುದ್ಧಿಗೆ ಅವಕಾಶ ನೀಡಲಾಯಿತು.

ನಿಗದಿತ ಜನರು ಪ್ರಾರ್ಥನಾ ಮಂದಿರ ಒಳ ಹೋಗಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟ ಬಳಿಕ ಆಕ್ರೋಶಗೊಂಡ ಒಂದು ಗುಂಪಿನ ಜನರು ಕಲ್ಲು ತೂರಾಟ ಮಾಡಲು ಆರಂಭಿಸಿದ್ದಾರೆ. ಪಟ್ಟಣದಲ್ಲಿ ಸದ್ಯ ಪ್ರಕ್ಷುಬ್ಧ ವಾತಾವರಣವಿದೆ.

LATEST NEWS

ಮೋಸ್ಟ್ ವಾಂಟೆಡ್ ಉ*ಗ್ರ ಅಬು ಖತಲ್ ಹ*ತ್ಯೆ

Published

on

ಮಂಗಳೂರು/ ಇಸ್ಲಾಮಾಬಾದ್ : ಲಷ್ಕರ್ ಎ ತೊಯ್ಬಾದ ಮೋಸ್ಟ್ ವಾಂಟೆಡ್  ಉ*ಗ್ರ ಫೈಸಲ್ ನದೀಮ್ ಅಲಿಯಾಸ್ ಅಬು ಖತ್‌ನನ್ನು  ಶನಿವಾರ(ಮಾ.15) ರಾತ್ರಿ ಪಾಕಿಸ್ತಾನದಲ್ಲಿ ಹ*ತ್ಯೆ ಮಾಡಲಾಗಿದೆ ಎಂಬುದಾಗಿ ವರದಿಗಳು ತಿಳಿಸಿವೆ.

ಅಬು ಖತ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂ*ಡು ಹಾರಿಸಿದ್ದಾರೆ. ಗುಂ*ಡು ತಗುಲಿ ಗಂ*ಭೀರ ಗಾ*ಯಗೊಂಡಿದ್ದ ಅಬು ಖತ್ ಪ್ರಾ*ಣ ಬಿಟ್ಟಿದ್ದಾನೆ. ಪಾಕಿಸ್ತಾನದ ಪಂಜಾಬ್‌ನ ಝೀಲಂ ಜಿಲ್ಲೆಯ ಮಂಗಳಾ ಬೈಪಾಸ್‌ನಲ್ಲಿ ಈ ದಾ*ಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ : ಬಾಹ್ಯಾಕಾಶ ತಲುಪಿದ ಸ್ಪೇಸ್X Crew-10; ಮಾರ್ಚ್ 20ಕ್ಕೆ ಭೂಮಿಗೆ ಬರಲಿರುವ ಸುನಿತಾ ವಿಲಿಯಮ್ಸ್ !

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಸೋದರಳಿಯನಾಗಿದ್ದ ಅಬು ಖತ್ ಲಷ್ಕರ್ ಸಂಘಟನೆಯ ಸೂತ್ರಧಾರನಾಗಿದ್ದ. 2023 ರಲ್ಲಿ  ಭಾರತದ ಜಮ್ಮು ಕಾಶ್ಮೀರದ ರಾಜರಿಯಲ್ಲಿ ನಡೆದ ಶಿವ ಖೋರಿ ದೇವಸ್ಥಾನದ ಯಾತ್ರಿಕರ ಮೇಲೆ ನಡೆದ  ಲಷ್ಕರ್ ಎ ತೋಯ್ಬಾ ಭಯೋತ್ಪಾದಕ ದಾ*ಳಿಯ ಹಿಂದಿನ ಕೈವಾಡ ಇವನದ್ದಾಗಿತ್ತು. ಈ ದಾ*ಳಿಯಲ್ಲಿ 7 ಮಂದಿ ಮೃ*ತಪಟ್ಟಿದ್ದು, ಹಲವರು ಗಾ*ಯಗೊಂಡಿದ್ದರು.

ಕಳೆದ ವರ್ಷ ಎನ್‌ಐಎ ಪಾಕ್‌ನ ಪ್ರಮುಖ ಹ್ಯಾಂಡ್ಲರ್‌ಗಳನ್ನು ಉಲ್ಲೇಖಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದು ಅದರಲ್ಲಿ ಅಬು ಖತಲ್ ಹೆಸರಿತ್ತು.

 

 

Continue Reading

LATEST NEWS

ಬಾಹ್ಯಾಕಾಶ ತಲುಪಿದ ಸ್ಪೇಸ್X Crew-10; ಮಾರ್ಚ್ 20ಕ್ಕೆ ಭೂಮಿಗೆ ಬರಲಿರುವ ಸುನಿತಾ ವಿಲಿಯಮ್ಸ್ !

Published

on

ಮಂಗಳೂರು/ವಾಷಿಂಗ್ಟನ್: ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ಯೋಜನೆಗೆ ಕೊನೆಗೂ ಮೊದಲ ಯಶಸ್ಸು ಸಿಕ್ಕಿದೆ. ಇಂದು ಬೆಳಗ್ಗೆ NASA-SpaceX Crew-10 ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಶಸ್ವಿಯಾಗಿ ತಲುಪಿದೆ.

ಬೋಯಿಂಗ್‌ನ ಸ್ಟಾರ್‌ಲೈನರ್ ಸಮಸ್ಯೆಗಳಿಂದಾಗಿ ಒಂಬತ್ತು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ನಾಸಾ ಮತ್ತು ಸ್ಪೇಸ್‌ಎಕ್ಸ್ ಶುಕ್ರವಾರ ಸಂಜೆ 7:03 ಕ್ಕೆ EDT (ಶನಿವಾರ ಬೆಳಿಗ್ಗೆ 4:30 ಕ್ಕೆ IST) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಕ್ರೂ-10 ಮಿಷನ್ ಅನ್ನು ಪ್ರಾರಂಭಿಸಿತ್ತು.

ಆ ಮಿಷನ್ ಇಂದು ಬೆಳಿಗ್ಗೆ ಭಾರತೀಯ ಕಾಲಮಾನ 9.40ಕ್ಕೆ NASA-SpaceXನಲ್ಲಿ ಪ್ರಯಾಣಿಸಿದ ಕ್ರ್ಯೂ 10 ಸದಸ್ಯರು ಅಂತಾರಾಷ್ಟ್ರೀಯ ಬಾಹ್ಯಾಕಾಶವನ್ನು ತಲುಪಿದ್ದಾರೆ. ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಸ್ಪೇಸ್ ಕ್ರ್ಯಾಫ್ಟ್ ISSಗೆ ತಲುಪಿದ್ದು, ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ ಮೋರ್ ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ.

ಇದನ್ನೂ ಓದಿ: ಕೊನೆಗೂ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್

NASA-SpaceX Crew-10 ಮಿಷನ್‌ನಲ್ಲಿ ಒಟ್ಟು 4 ಗಗನಯಾತ್ರಿಗಳು ಭಾಗಿಯಾಗಿದ್ದಾರೆ. ನಾಸಾದಿಂದ ಆ್ಯನೆ ಮೆಕ್ಲೇನ್, ನಿಕೋಲ್ ಆಯರ್ಸ್, ಜಪಾನ್‌ನ ತಕುಯಾ ಓನಿಷಿ ಮತ್ತು ರಷ್ಯಾದ ಕಿರಿಲ್ ಟೆಸ್ಕಾವ್ ISS ನಿಲ್ದಾಣವನ್ನು ತಲುಪಿದ್ದಾರೆ.

ಇನ್ನು ಮಾರ್ಚ್ 20ಕ್ಕೆ ಬಾಹಾಕ್ಯಾಶ ನಿಲ್ದಾಣದಿಂದ ಕ್ರ್ಯೂ 9ನ ನಾಲ್ವರು ಸದಸ್ಯರು ವಾಪಸ್ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ನಾಸಾದ ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್‌ ವಿಲ್ ಮೋರ್ ಮತ್ತು ಗಾರ್ಬನೋ ವಾಪಸ್ ಬರಲಿದ್ದಾರೆ.

Continue Reading

LATEST NEWS

7 ವರ್ಷದ ಬಾಲಕಿಗೆ ಗಿಟಾರ್ ಗಿಫ್ಟ್ ನೀಡಿದ ಅಮಿತ್ ಶಾ; ಅಷ್ಟಕ್ಕೂ ಈ ಹುಡುಗಿ ಯಾರು ಗೊತ್ತಾ?

Published

on

ಮಂಗಳೂರು/ಐಜ್ವಾಲ್(ಮಿಜೋರಾಂ): ಕೇಂದ್ರ ಗೃಹ ಸಚಿವ ಅಮಿತ್ ಶಾ ಮಿಜೋರಾಂನಲ್ಲಿ ನಡೆದ ಕಾರ್ಯಕ್ರಮದಲ್ಲಿ 7 ವರ್ಷದ ಬಾಲಕಿಗೆ ಗಿಟರ್ ಅನ್ನು ಗಿಫ್ಟ್ ನೀಡಿದ್ದಾರೆ.


ಗೃಹ ಸಚಿವ ಅಮಿತ್ ಶಾ 3 ದಿನಗಳ ಭೇಟಿಗಾಗಿ ಮಾರ್ಚ್ 14ರಿಂದ ಅಸ್ಸಾಂಗೆ ತೆರಳಿದ್ದಾರೆ. ಶನಿವಾರದಂದು (ಮಾ.15) ಮಿಜೋರಾಂಗೆ ಭೇಟಿ ನೀಡಿದರು. ಅಲ್ಲಿ ಅಸ್ಸಾಂ ರೈಫಲ್ಸ್‌ನಿಂದ ರಾಜ್ಯ ಸರ್ಕಾರಕ್ಕೆ ಭೂಮಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಿಜೋರಾಂನ 7 ವರ್ಷದ ಬಾಲಕಿ, ಅದ್ಭುತ ಹಾಡುಗಾರ್ತಿ ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರಿಗೆ ಸಂಗೀತ ಸಾಧನ ಗಿಟಾರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಮಿತ್ ಶಾ ಉಪಸ್ಥಿತರಿದ್ದ ವೇದಿಕೆಯಲ್ಲಿ ಬಾಲಕಿ ‘ವಂದೇ ಮಾತರಂ’ ಹಾಡನ್ನು ಅದ್ಬುತವಾಗಿ ಹಾಡಿದರು.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಿರುವ ಅಮಿತ್ ಶಾ “ಭಾರತದ ಮೇಲಿರುವ ಪ್ರೀತಿ ನಮ್ಮೆಲ್ಲರನ್ನೂ ಒಂದು ಮಾಡುತ್ತಿದೆ. ಮಿಜೋರಾಂನ ಐಜ್ವಾಲ್‌ನಲ್ಲಿ ವಂಡರ್‌ ಕಿಡ್ ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರ ಸಿರಿಕಂಠದಲ್ಲಿ ಮೂಡಿಬಂದ ವಂದೇ ಮಾತರಂ ಹಾಡಿಗೆ ಬೆರಗಾದೆ. ಏಳು ವರ್ಷದ ಬಾಲಕಿಗೆ ಭಾರತ ಮಾತೆಯ ಮೇಲಿರುವ ಪ್ರೀತಿ ಹಾಡಿನಲ್ಲಿ ವ್ಯಕ್ತವಾಗುತ್ತಿದೆ. ಆಕೆಯ ಹಾಡು ಕೇಳುವುದೇ ಒಂದು ಅದ್ಭುತ ಅನುಭವ” ಎಂದು ಬರೆದುಕೊಂಡಿದ್ದಾರೆ.

ಯಾರು ಈ ವಂಡರ್‌ ಕಿಡ್ ?
7ವರ್ಷದ ಬಾಲಕಿ ಎಸ್ತರ್ ಲಲ್ದುಹವ್ಮಿ ಹಮ್ಟೆ ಮಿಜೋರಾಂನ ಅದ್ಬುತ ಗಾಯಕಿಯಾಗಿ ಬೆಳೆಯುತ್ತಿರುವ ಪ್ರತಿಭೆ. 2020ರಲ್ಲಿ ‘ಮಾ ತುಜೇ ಸಲಾಂ’ ಹಾಡಿನಿಂದ ದೇಶಾದ್ಯಂತ ಜನಪ್ರಿಯತೆ ಗಳಿಸಿದರು. ಆ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ನಂತರ ಬಾಲಕಿಗೆ ಮಣಿಪುರ ಸರ್ಕಾರ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ಅಲ್ಲದೆ ರಾಜ್ಯಪಾಲರಿಂದಲೂ ವಿಶೇಷ ಮೆಚ್ಚುಗೆ ಗಳಿಸಿದ್ದರು. ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರು ಯೂಟ್ಯೂಬ್ ಚಾನೆಲ್‌ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ ಹೊಂದಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page