Connect with us

Ancient Mangaluru

ವೈದ್ಯ ಲೋಕಕ್ಕೆ ಸವಾಲಾದ ಕಡೆಂಜ ತ್ಯಾಂಪಣ್ಣ ಭಂಡಾರಿ ಅವರ ನೋವಿನ ಎಣ್ಣೆ..!!

Published

on

ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವೈದ್ಯಕೀಯದಲ್ಲಿ ತುಂಬಾ ಮುಂದುವರೆದಿದೆ. ಈ ಎರಡೂ ಜಿಲ್ಲೆಗಳಲ್ಲಿ ಇಂದು ಖಾಸಗಿ ಆಸ್ಪತ್ರೆಗಳು ತಲೆ ಎತ್ತಿವೆ. ಆದರೆ ನೂರು-ಇನ್ನೂರು ವರ್ಷಗಳ ಹಿಂದೆ ಇಲ್ಲಿ ಇಂಗ್ಲೀಷ್‌ ವೈದ್ಯದ ಗಂಧಗಾಳಿಯೂ ಇರಲಿಲ್ಲ.

ಈ ವೇಳೆ ಭಾರತದ ಪ್ರಾಚೀನ ಆರ್ಯುವೇದ ಪ್ರಚಲಿತದಲ್ಲಿತ್ತು. ಜೊತೆಗೆ ಕಸ್ತೂರಿ, ಧನ್ವಂತರಿ, ಚಿನ್ನೆಯ ಮಾತ್ರೆಗಳೇ ಮನೆ ಮನೆಯ ಸಂಜೀವಿನಿಯಾಗಿದ್ದವು.

ಅದರಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಕಡೆಂಜ ತ್ಯಾಂಪಣ್ಣ ಭಂಡಾರಿ ಅವರ ನೋವಿನ ಎಣ್ಣೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಅವರ ಹಿನ್ನೆಲೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ.

 

ಮಂಗಳೂರು ಹೊರವಲಯದ ನೇತ್ರಾವತಿ ನದಿ ದಂಡೆಯಲ್ಲಿರುವ ಆ ಕಾಲದ ಪುಟ್ಟಹಳ್ಳಿ ಅಡ್ಯಾರ್‌. ಇಲ್ಲಿ ಮೂಳೆ ಚಿಕಿತ್ಸಕ ಕಡೆಂಜ ತ್ಯಾಂಪಣ್ಣ ಭಂಡಾರಿಯವರು ಕೈ,ಕಾಲು, ಸೊಂಟ ಮುರಿತ ಹೀಗೆ ಹಲವು ಸಮಸ್ಯೆಗಳಿಗೆ ತಾವೇ ತಯಾರಿಸಿದ ಆಯುರ್ವೇದ ಎಣ್ಣೆಯನ್ನು ಹಚ್ಚುತಿದ್ದರು. ಈ ವೇಳೆ ನದಿಯ ತಟದಲ್ಲಿ ದೂರದಿಂದ ಬಂದ ರೋಗಿಗಳು ವಿಶ್ರಾಂತಿ ಪಡೆಯಲು ‘ನಿತ್ಯಾನಂದ ಚಿಕಿತ್ಸಾಲಯ’ ಕಟ್ಟಿಸಿದರು. ಇದು ಉಚಿತವಾಗಿತ್ತು ಎಂಬುವುದು ವಿಶೇಷ. ಇಲ್ಲಿ ಏಕಕಾಲಕ್ಕೆ 50 ರೋಗಿಗಳು ಉಳಿಯುವ ವ್ಯವಸ್ಥೆ ಅಲ್ಲಿತ್ತು. ಈ ಚಿಕಿತ್ಸಾಲಯದಲ್ಲಿ ಭಂಡಾರಿಯವರು ಕೀಲು ಮುರಿತಕ್ಕೊಳಕ್ಕಾಗಿದವರಿಗೆ ಸ್ವತಃ ತಾವೇ ಎಣ್ಣೆ ತೀಡಿ ಕಟ್ಟು ಕಟ್ಟಿ ಉಪಚರಿಸುತ್ತಿದ್ದರು.

ಮೂಳೆ ಕೂಡಿದ ಅನಂತರವೇ ರೋಗಿಗಳನ್ನು ಅವರ ಊರಿಗೆ ಕಳುಹಿಸುತ್ತಿದ್ದರು. 82 ವರ್ಷ ಬದುಕಿದ ಇವರು ಜೀವನದುದ್ದಕ್ಕೂ ಈ ಸೇವೆಯನ್ನು ನೀಡುತ್ತಿದ್ದರು.

ಇವರ ನಂತರ ಅಳಿಯ ತಿಮ್ಮಪ್ಪ ರೈ ಅವರು ಈ ಕಾಯಕವನ್ನು ಮುಂದುವರೆಸಿಕೊಂಡು ಹೋಗಿದ್ದರು. ಇಂದಿಗೂ ಕಡೆಂಜ ತ್ಯಾಂಪಣ್ಣ ಭಂಡಾರಿಯವರ ನೋವಿನೆಣ್ಣೆ ಜಿಲ್ಲೆಯಾದ್ಯಂತ ಮಾತ್ರ ಅಲ್ಲ ದೇಶ ವಿದೇಶದಲ್ಲಿ ಪ್ರಸಿದ್ದಿ ಪಡೆದಿದೆ.

ಜೊತೆಗೆ ಆನ್‌ಲೈನ್‌ ಮಾರ್ಕೆಟ್‌ನಲ್ಲೂ ಈ ಎಣ್ಣೆ ಸಿಗುತ್ತಿದೆ.

@ರಾಜೇಶ್‌ ಫೆರಾವೋ

Ancient Mangaluru

ಕಪ್ಪು ಪಟ್ಟಿ ಧರಿಸಿ ಸೆಮಿಫೈನಲ್ ಆಡುತ್ತಿರುವ ಟೀಂ ಇಂಡಿಯಾ ಆಟಗಾರರು

Published

on

ಮಂಗಳೂರು/ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಇಂದು ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಆದರೆ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಸೆಮಿಫೈನಲ್ ಪಂದ್ಯಕ್ಕೆ ಭಾರತ ಸಜ್ಜಾಗಿತ್ತು. ಆದರೆ ಅದಕ್ಕೂ ಮುನ್ನ ಭಾರತೀಯ ಕ್ರಿಕೆಟ್‌ಗೆ ಆಘಾತಕಾರಿ ಸುದ್ದಿ ಬಂದಿತ್ತು.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ, ಮುಂಬೈ ತಂಡದ ದಂತಕತೆ ಪದ್ಮಾಕರ್ ಶಿವಾಳ್ಕರ್ (84) ನಿಧನರಾಗಿದ್ದಾರೆ. ಸ್ಪಿನ್ನರ್ ಆಗಿ ಮಿಂಚಿದ್ದ ಪದ್ಮಾಕರ್ ಶಿವಾಳ್ಕರ್ ತಮ್ಮ ಒಟ್ಟಾರೆ ವೃತ್ತಿ ಜೀವನದಲ್ಲಿ 550ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದರು.

ಇದನ್ನೂ ಓದಿ: ಕಬ್ಬಿಣದ ಕಡಲೆಯಾಯಿತಾ ಗಣಿತ…ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳೆಷ್ಟು?

ಹೀಗಾಗಿ ಭಾರತದ ದೇಶಿ ಕ್ರಿಕೆಟಿನಲ್ಲಿ ಅಮೋಘ ಸಾಧನೆ ಮಾಡಿದ್ದ ಸ್ಪಿನ್ ದಂತಕಥೆ ಪದ್ಮಾಕರ್ ಶಿವಾಳ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ್ದಾರೆ.

ಶಿವಾಲ್ಕರ್ ಅವರಿಗೆ ಎಂದೂ ಕೂಡ  ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. 1961-62ರಿಂದ 1987-88ರ ಅವಧಿಯಲ್ಲಿ ಆಡಿದ್ದರು. 124 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 589 ವಿಕೆಟ್‌ಗಳನ್ನು ಕಬಳಿಸಿದ್ದರು.

2017ರಲ್ಲಿ ಶಿವಾಲ್ಕ‌ರ್ ಅವರಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಿಸಿಸಿಐ ಪ್ರದಾನ ಮಾಡಿತ್ತು. ಮುಂಬೈ ತಂಡವು 22 ವರ್ಷಗಳಲ್ಲಿ 20 ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿತ್ತು. ಅಷ್ಟು ಬಾರಿಯೂ ಶಿವಾಲ್ಕ‌ರ್ ತಂಡದಲ್ಲಿ ಆಡಿದ್ದರು.

 

 

Continue Reading

Ancient Mangaluru

ಆಸ್ತಿಗಾಗಿ ವಕೀಲರಿಬ್ಬರ ನಡುವೆ ಜಗಳ; ಅಣ್ಣನಿಗೆ ಚಾಕು ಇರಿದ ತಮ್ಮ

Published

on

ಮಂಗಳುರು/ಬೆಂಗಳೂರು : ಪಿತ್ರಾರ್ಜಿತ ಆಸ್ತಿಗಾಗಿ ವಕೀಲ ಸಹೋದರರಿಬ್ಬರ ನಡೆವೆ ನಡೆದ ಗಲಾಟೆಯು ಅಣ್ನನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಕೋಡಿಚಿಕ್ಕಹಳ್ಳಿಯಲ್ಲಿ ನಿನ್ನೆ (ಫೆ.28) ಮುಂಜಾನೆ ನಡೆದಿದೆ.

ಕೋಡಿಚಿಕ್ಕಹಳ್ಳಿ ನಿವಾಸಿ ಶ್ರೀಕಾಂತಯ್ಯ (36) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಆರೋಪಿಯಾಗಿರುವ ಮೃತನ ಕಿರಿಯ ಸೋದರ ನರೇಂದ್ರನನ್ನು ಬಂಧಿಸಲಾಗಿದೆ.

ಭೂ ವ್ಯಾಜ್ಯ ಸಂಬಂಧ ಸಹೋದರರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಸಮಯ ಮಾತಿನ ಚಕಾಮಕಿ ತರಾಕಕ್ಕೇರಿದ್ದು,  ರೊಚ್ಚಿಗೆದ್ದ ತಮ್ಮ ಅಣ್ಣನಿಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಆತನನ್ನು ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಶ್ರೀಕಾಂತಯ್ಯ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ಕೋಡಿಚಿಕ್ಕಹಳ್ಳಿಯ ಭೂ ಮಾಲಿಕ ತಿಮ್ಮಪ್ಪ ದಂಪತಿಗೆ ಮೂವರು ಮಕ್ಕಳಿದ್ದು, ಅನಾರೋಗ್ಯದಿಂದ ತಂದೆ ಮೃತಪಟ್ಟ ಬಳಿಕ ಅವರ ಮಕ್ಕಳ ಮಧ್ಯೆ ಆಸ್ತಿ ವಿಚಾರವಾಗಿ ಮನಸ್ತಾಪವಾಗಿತ್ತು. ಆರೋಪಿ ನರೇಂದ್ರ ಮೈಸೂರಿನಲ್ಲಿ ವಕೀಲನಾಗಿದ್ದರೆ, ಬೆಂಗಳೂರಿನಲ್ಲಿ ಆತನ ಸೋದರ, ಮೃತ ಶ್ರೀಕಾಂತಯ್ಯ ಕ್ರಿಮಿನಲ್ ಲಾಯರ್ ಆಗಿದ್ದ. ಪದೇ ಪದೇ ಆಸ್ತಿ ಪಾಲು ವಿಷಯವಾಗಿ ಅಣ್ಣ-ತಮ್ಮಂದಿರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶುಕ್ರವಾರ ಬೆಳಗ್ಗೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗಟನೆ ಕುರಿತು ಬೆಂಗಳುರಿನ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Continue Reading

Ancient Mangaluru

ನದಿಗೆ ಬಿದ್ದು ಬಾಲಕ ಸಾ*ವು

Published

on

ಬೆಳ್ತಂಗಡಿ: ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಬಾಲಕನೋರ್ವ ಮೃ*ತಪಟ್ಟ ಘಟನೆ ಆರಂಬೋಡಿ ಗ್ರಾಮದಲ್ಲಿ ರವಿವಾರ ದಂದು ನಡೆದಿದೆ.

ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ವಸಂತ ಮತ್ತು ವಿಜಯ ದಂಪತಿಯ ಪುತ್ರ ಪವನ್ (16) ಮೃತ ಬಾಲಕ. ಪವನ್ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಮನೆಯ ಅಜ್ಜಿಯ ಮನೆಯಲ್ಲಿದ್ದು ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ.

ಇದನ್ನೂ ಓದಿ: ಕಾರು ಪಾರ್ಕ್ ಮಾಡಿದವ ಇಳಿಯಲೇ ಇಲ್ಲ; ಇಣುಕಿ ನೋಡಿದಾಗ ಬಿಗ್ ಶಾಕ್..!

ಅಜ್ಜಿ ಮನೆಗೆಂದು ಬಂದವ ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಮೂಲಕ ದುರಂತ ಅಂತ್ಯ ಕಂಡಿದ್ದಾನೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page