Connect with us

ಕಡಬ : ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬಾಣಂತಿ ಸಾ*ವು

Published

on

ಕಡಬ : ಎರಡು ತಿಂಗಳ ಬಾಣಂತಿ ಸಾ*ವನ್ನಪ್ಪಿರುವ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಕಡಬ ತಾಲೂಕಿನ ಆಲಂಕಾರು ಗ್ರಾಮದ ದಯಾನಂದ ಗೌಡ ಎಂಬವರ ಪತ್ನಿ ಪುಷ್ಪಾವತಿ(34) ಮೃ*ತ ಮಹಿಳೆ. ಪುಷ್ಪಾವತಿ ಎರಡು ತಿಂಗಳ ಹಿಂದೆ ನಾಲ್ಕನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ತಾಯಿ ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಕೆಲವು ದಿನಗಳ ಹಿಂದೆ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಅವರ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ.  ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶುಕ್ರವಾರ(ಜ.10)ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

ಇದನ್ನೂ ಓದಿ : ಮನೆಯ ಈ ದಿಕ್ಕಿಗೆ ಮಲಗಿದ್ರೆ ಸಾಕು ಥಟ್ ಅಂತಾ ಗಾಢ ನಿದ್ರೆ ಬರುತ್ತೆ..!

ಪುಷ್ಪಾವತಿ, ಪತಿ, ಎರಡು ತಿಂಗಳ ಹೆಣ್ಣು ಮಗು ಸಹಿತ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Advertisement
1 Comment

Leave a Reply

Your email address will not be published. Required fields are marked *

LATEST NEWS

ಯುವಶಕ್ತಿ ಕಡೇಶಿವಾಲಯ (ರಿ.) ವತಿಯಿಂದ “ಸಂತೃಪ್ತಿ” ಕಾರ್ಯಕ್ರಮ

Published

on

ಬಂಟ್ವಾಳ: ಯುವಶಕ್ತಿ ಕಡೇಶಿವಾಲಯ (ರಿ.) ವತಿಯಿಂದ “ಸಂತೃಪ್ತಿ” ಎನ್ನುವ ಕಾರ್ಯಕ್ರಮವು ಫೆ. 15 ರಂದು ಶನಿವಾರ ಕಡೇಶಿವಾಲಯದ ಪೆರ್ಲಾಪು ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಗಣಹೋಮ, 9 ರಿಂದ ರಕ್ತದಾನ ಶಿಬಿರ, ನೂತನ ಶಾಲಾ ಕೊಠಡಿಗಳ ಉದ್ಘಾಟನೆ, Team YSK ವೆಬ್‌ ಸೈಟ್ ಚಾಲನೆ, ಸೇವಾಲಕ್ಷ್ಯ-ನೂರು ಲಕ್ಷ, ಸಭೆ ಸನ್ಮಾನ ಸಮಾರಂಭ, ಯುವರತ್ನ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಸಂಜೆ 6.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರವಿ ಕಟಪಾಡಿ ಇವರಿಗೆ ಯುವ ಸೇವಾರತ್ನ ಗೌರವ, ಕಾಮಿಡಿ ಕಿಲಾಡಿ ಅನೀಶ್ ಪೂಜಾರಿ ವೇಣೂರು ಇವರಿಗೆ ಯುವ ಕಲಾರತ್ನ ಗೌರವ, ಲೋಕಯ್ಯ ಶೇರಾ ಇವರಿಗೆ ಯುವ ಧರ್ಮರತ್ನ ಗೌರವ, ರೋಹಿತ್ ಮಾರ್ಲ ಇವರಿಗೆ ಯುವ ಕ್ರೀಡಾ ರತ್ನ ಗೌರವವನ್ನು ನೀಡಿ ಸನ್ಮಾನಿಸಲಾಗುವುದು.

ರಾತ್ರಿ 8.30 ರಿಂದ ಸಾಯಿಶಕ್ತಿ ಬಳಗ ಮಂಗಳೂರು ಇವರಿಂದ ಅದ್ಧೂರಿ ರಂಗವಿನ್ಯಾಸದ “ಜೋಡು ಜೀಟಿಗೆ” ಸತ್ಯೋದ ಸಾದಿಗ್ ಧರ್ಮೊದ ಬೊಲ್ಪು ಎಂಬ ತುಳು ಜನಪದ ನಾಟಕ ನಡೆಯಲಿದೆ.

Continue Reading

FILM

ಅತ್ತೆಯನ್ನೇ ಪ್ರೀತಿಸಿ ಮದುವೆಯಾದ ಅಳಿಯ…! ಇದು ರೋಚಕ ಪ್ರೇಮಯಾನ…!

Published

on

ನಿಜವಾದ ಪ್ರೀತಿಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂದು ಅನೇಕರು ಹೇಳುತ್ತಾರೆ. ಈ ಮಾತನ್ನು ತೆಲುಗು ಕಿರುತೆರೆಯ ಜೋಡಿಯೊಂದು ಸಾಬೀತುಪಡಿಸಿದ್ದು, ಧಾರಾವಾಹಿಯಲ್ಲಿ ಅತ್ತೆ ಮತ್ತು ಅಳಿಯನಾಗಿ ನಟಿಸಿದ್ದ ಇಂದ್ರಾನಿಲ್ ಹಾಗೂ ಮೇಘನಾ ನಿಜ ಜೀವನದಲ್ಲಿ ಪತಿ-ಪತ್ನಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

ತೆಲುಗು “ಚಕ್ರವಾಗಂ” ಎಂಬ ಜನಪ್ರಿಯ ಸೀರಿಯಲ್‌ನಲ್ಲಿ ಜೊತೆಯಾಗಿ ಇಂದ್ರಾನಿಲ್ ಹಾಗೂ ಮೇಘನಾ ಅಭಿನಯಿಸಿದ್ದಾರೆ. ಈ ಧಾರವಾಹಿ 2003 ರಲ್ಲಿ ಪ್ರಸಾರವಾಗುತ್ತಿತ್ತು. ಇದರಲ್ಲಿ ಇಂದ್ರಾನಿಲ್‌ನ ಅತ್ತೆಯಾಗಿ ಮೇಘನಾ ಅಭಿನಯಿಸಿದ್ದಾರೆ. ಉತ್ತಮ ಟಿ.ಆರ್‌.ಪಿ ಹೊಂದಿರುವ “ಚಕ್ರವಾಗಂ” ಧಾರವಾಹಿಯನ್ನು ಕೊರೊನಾ ಅವಧಿಯಲ್ಲಿ ಮರು ಪ್ರಸಾರ ಮಾಡಲಾಯಿತು. 1000 ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಈ ಧಾರಾವಾಹಿಯು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಧಾರವಾಹಿಯಲ್ಲಿ ನಟಿಸುವ ಮೂಲಕ ಪ್ರೀತಿಯಲ್ಲಿ ಬಿದ್ದಿದ್ದ ಇಂದ್ರಾನಿಲ್ ಹಾಗೂ ಮೇಘನಾ ನಿಜ ಜೀವನದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಆದರೂ, ತಮ್ಮ ಪ್ರೀತಿಯಲ್ಲಿ ಮಾತ್ರ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ದೃಢವಾಗಿ ಉಳಿದಿದ್ದಾರೆ. ಹಲವು ಅಡೆತಡೆಗಳನ್ನು ನಿವಾರಿಸಿಕೊಂಡು ಮದುವೆಯಾದ ಈ ಜೋಡಿ ಬಹಳ ಸುಖವಾಗಿ ಸಂಸಾರ ಮಾಡುತ್ತಿದೆ. ಮುಖದಲ್ಲಿ ವಯಸ್ಸಿನ ಅಂತರ ಕಾಣಿಸಿದರೂ ಇಂದ್ರಾನಿಲ್ ಹಾಗೂ ಮೇಘನಾ ದಾಂಪತ್ಯ ಬಹಳ ಚೆನ್ನಾಗಿದೆ. ಸದ್ಯ ಸೋಷಿಯಲ್ ಮೀಡಿಯಾದ್ಯಂತ ಇವರ ಪ್ರೇಮ್‌ಕಹಾನಿ ಸುದ್ಧಿ ಮಾಡುತ್ತಿದೆ. ಇಂದ್ರಾನಿಲ್ ಹಾಗೂ ಮೇಘನಾಳ ಪ್ರೀತಿಯ ಕಥೆ ತಿಳಿದ ಜನ “ಅಯ್ಯೋ ಅತ್ತೆ ಅಳಿಯನ ಮದುವೆಯಾ..?” ಎಂದು ಅಚ್ಚರಿ ಪಡುತ್ತಿದ್ದಾರೆ. ಆದರೆ ಇಂದ್ರಾನಿಲ್ ಹಾಗೂ ಮೇಘನಾ ಧಾರವಾಹಿಯಲ್ಲಿ ಮಾತ್ರ ಅಳಿಯ-ಅತ್ತೆ, ನಿಜ ಜೀವನದಲ್ಲಿ ಗಂಡ-ಹೆಂಡತಿ ಎಂಬುವುದು ವಾಸ್ತವ.

Continue Reading

LATEST NEWS

ವಿಶ್ವದ ಸುಂದರ ಹ್ಯಾಂಡ್ರೈಟರ್ ಪ್ರಶಸ್ತಿ ಪಡೆದ ಕೈಬರಹಗಾರ್ತಿ ಇವರೇ ನೋಡಿ

Published

on

17 ವರ್ಷದ ಬಾಲಕಿ ಈಗ ಕೈಬರಹದಿಂದ ಸಖತ್ ಫೇಮಸ್ ಆಗಿದ್ದಾರೆ. ಈ ಮೂಲಕ ಪ್ರಪಂಚದ ಅತಿ ಸುಂದರ ಕೈಬರಹಗಾರ್ತಿ ಎನ್ನುವ ಬಿರುದನ್ನು ಪಡೆದುಕೊಂಡಿದ್ದಾರೆ.

ಇವರ ಹೆಸರು ಪ್ರಕೃತಿ ಮಲ್ಲಾ. ನೇಪಾಳ ಮೂಲದ ಈ ಯುವತಿ ಈಗ ಕೈಬರಹದಿಂದಾಗಿ ಫೇಮಸ್ ಆಗಿದ್ದಾರೆ. ಇವರ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಗತ್ತಿನ ಅತ್ಯಂತ ಸುಂದರ ಹ್ಯಾಂಡ್ರೈಟರ್ ಎನ್ನುವ ಕೀರ್ತಿ ಇವರ ಪಾಲಿಗೆ ಬಂದಿದೆ.

ಅಂದಹಾಗೆ ಪ್ರಕೃತಿ ಅವರು, ಹೈಸ್ಕೂಲ್ ನಲ್ಲಿ ಇದ್ದಾಗಲೇ ಅಂದರೆ, 8ನೇ ತರಗತಿಯಲ್ಲಿದ್ದಾಗ ಅವರ ಕೈಬರಹ ಸದ್ದು ಮಾಡಿತ್ತು. ಅವರು ಬರೆದ ಒಂದು ಲೇಖನ ಕೈಬರಹದಿಂದಾಗಿ ಖ್ಯಾತಿ ಪಡೆದಿತ್ತು. ಆಗಲೇ ಅವರು ದೊಡ್ಡಮಟ್ಟದಲ್ಲಿ ಹೆಸರು ಕೂಡ ಮಾಡಿದ್ದರು.

ಯುನೈಟೆಡ್ ಅರಬ್ ಎಮಿರಟ್ಸ್ 51ನೇ ಸ್ಪಿರಿಟ್ ಆಫ್ ಯುನಿಯನ್ ವಿಶೇಷ ಸಂದರ್ಭಕ್ಕೆ ಶುಭಾಶಯಗಳನ್ನು ತನ್ನ ಕೈ ಬರಹದ ಪುಕೃತಿ ಬರೆದ ಪತ್ರವನ್ನು ಯುಎಇ ರಾಯಭಾರಿ ಕಚೇರಿಗೆ ನೀಡಲಾಗಿತ್ತು. ಆ ಫೋಟೋಗಳು ಈಗ ಪುನಃ ವೈರಲ್ ಆಗುತ್ತಿವೆ. ಪುಕೃತಿ ಅವರಿಗೆ ನೇಪಾಳದ ಸಶಸ್ತ್ರ ಪಡೆಯಿಂದ ಸನ್ಮಾನ ಕೂಡ ಸಿಕ್ಕಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page