Connect with us

LATEST NEWS

ಜುಲೈ 23ಕ್ಕೆ ಕೇಂದ್ರ ಬಜೆಟ್ ಮಂಡನೆ..! ಕೋಲಾಹಲ ಸೃಷ್ಟಿಸಲಿದೆ ಮುಂಗಾರು ಅಧಿವೇಶನ

Published

on

ಮಂಗಳೂರು/ ನವದೆಹಲಿ : ನಾಳೆ ಜುಲೈ 22 ರಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದೆ. ನಾಳೆಯಿಂದ ಆಗಸ್ಟ್‌ 12 ರವೆಗೆ ಅಧಿವೇಶನ ನಡೆಯಲಿದ್ದು, ಜುಲೈ 23 ರ ಮಂಗಳವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ಅಧಿವೇಶನದ ಪೂರ್ವಭಾವಿಯಾಗಿ ಇಂದು(ಜು.21) ಉಭಯ ಸದನಗಳ ರಾಜಕೀಯ ಪಕ್ಷಗಳ ಜೊತೆ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಲವು ಪಕ್ಷಗಳ ನಾಯಕರು ಪಾಲ್ಗೊಂಡಿದ್ದು, ಅಧಿವೇಶನದಲ್ಲಿ ಚರ್ಚಿಸಬೇಕಾದ ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ.


ಕಾಂಗ್ರೆಸ್‌ನಿಂದ ನೀಟ್ ವಿಚಾರ ಹಾಗೂ ಉಪ ಸಭಾಪತಿ ಹುದ್ದೆಯ ಪ್ರಸ್ತಾಪ :
ಸರ್ವ ಪಕ್ಷದ ಸಭೆಯಲ್ಲಿ ಕಾಂಗ್ರೆಸ್‌ ಮತ್ತೆ ನೀಟ್‌ ಹಗರಣ, ಕೇಂದ್ರ ಸರ್ಕಾರದಿಂದ ಇಡಿ, ಸಿಬಿಐ ದುರ್ಬಳಕೆ ವಿಚಾರ ಪ್ರಸ್ತಾಪಿಸಿದೆ. ಅದೇ ರೀತಿ ಲೋಕಸಭೆಯ ಉಪ ಸಭಾಪತಿ ಸ್ಥಾನವನ್ನು ಪ್ರತಿಪಕ್ಷಕ್ಕೆ ನೀಡುವ ವಿಚಾರವನ್ನೂ ಪ್ರಸ್ತಾಪ ಮಾಡಿದೆ.

ಇದೇ ವೇಳೆ ಮಾತನಾಡಿದ ರಾಜ್ಯ ಸಭಾ ಸದಸ್ಯ ಪ್ರಮೋದ್ ತಿವಾರಿ, “ಸರ್ವ ಪಕ್ಷಗಳ ಸಭೆ ಕರೆದ ಬಳಿಕ ಸದನದ ನಡಾವಳಿಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಬಹುದಾಗಿದ್ದು, ನಾವು ಹಣದುಬ್ಬರ, ನಿರುದ್ಯೋಗ, ಪೇಪರ್ ಲೀಕ್‌, ಚೀನಾ ಗಡಿಯಲ್ಲಿ ಭದ್ರತಾ ಸಮಸ್ಯೆ, ರೈತರು, ಕಾರ್ಮಿಕರು, ಮಣಿಪುರ, ರೈಲುಗಳ ಅಪಘಾತದ ಬಗ್ಗೆ ಚರ್ಚೆ ನಡೆಸಲು ಬಯಸಿರುವುದಾಗಿ ಹೇಳಿದ್ದಾರೆ.

ಮೋದಿ 3.0 ಸರ್ಕಾರದ ಮೊದಲ ಬಜೆಟ್
ಸಾರ್ವತ್ರಿಕ ಚುನಾವಣೆ ಮುಗಿದು 18ನೇ ಲೋಕಸಭೆ ರಚನೆಯಾದ ನಂತರ ನಡೆಯುತ್ತಿರುವ ಮೊದಲ ಬಜೆಟ್ ಅಧಿವೇಶನ ಇದಾಗಿದೆ. ಸರ್ಕಾರ ರಚನೆಯಾದ ಬಳಿಕ ನಡೆಯುತ್ತಿರುವ ಎರಡನೇ ಅಧಿವೇಶನವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ 3.o ಸರ್ಕಾರದ ಮೊದಲ ಬಜೆಟ್ ಮಂಡಿಸಲಿದ್ದಾರೆ.

ಇದನ್ನೂ ಓದಿ : ಅಂಕೋಲಾ ಗುಡ್ಡ ಕುಸಿತ ದುರಂ*ತ : ಲಾರಿ ಚಾಲಕನ ಮೊಬೈಲ್ ಸ್ವಿಚ್ ಆನ್; ಯಜಮಾನನಿಗಾಗಿ ಕಾಯುತ್ತಿದೆ ನಾಯಿ!
ಮೊದಲ ಅದಿವೇಶನದಲ್ಲಿ ವಿರೋಧ ಪಕ್ಷಗಳು ನೀಟ್, ಮಣಿಪುರ ಹಾಗೂ ಬೆಲೆ ಏರಿಕೆ ವಿಚಾರವನ್ನು ಪ್ರಸ್ತಾಪಸಿ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದಲ್ಲಿ ಪ್ರಧಾನಿ ಮೋದಿ ಉತ್ತರಿಸುವ ವೇಳೆ ಉಭಯ ಸದನದಲ್ಲೂ ಪ್ರತಿಭಟನೆ ನಡೆದಿತ್ತು. ಲೋಕಸಭೆಯಲ್ಲಿ ಮಣಿಪುರದ ಬಗ್ಗೆ ಮಾತಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರೆ, ರಾಜ್ಯ ಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದವು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಚೀನಾ: ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 20 ಜನ ಸಾವು

Published

on

ಚೀನಾ: ರೆಸ್ಟೋರೆಂಟ್‌ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 20 ಮಂದಿ ಸಾವನ್ನಪ್ಪಿದ್ದು, 3 ಮಂದಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಚೀನಾದ ಉತ್ತರ ನಗರ ಲೀಯಾವೊಯಾಂಗ್‌ನ ಚುನಿಯಾಂಗ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೈರನ್ ವಾನ್ ಎನ್ನುವ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ 43 ಸೆಕೆಂಡುಗಳ ವಿಡಿಯೋದಲ್ಲಿ ಅಗ್ನಿ ಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದನ್ನು ಕಾಣಬಹುದು.

ಅಗ್ನಿ ವ್ಯಾಪಿಸುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಜನರು ಕಾಲ್ಕಿತ್ತಿದ್ದಾರೆ. ಇನ್ನೂ ಕೆಲವರು ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುವಲ್ಲಿ ನಿರತರಾಗಿದ್ದರು.

ಪ್ರಾಥಮಿಕ ಮೂಲಗಳ ಪ್ರಕಾರ ಮೊದಲು ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ರೆಸ್ಟೋರೆಂಟ್‌ಗೆ ವ್ಯಾಪಿಸಿದೆ. ಈ ಕುರಿತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ.

Continue Reading

LATEST NEWS

ಅಮೆರಿಕದ ದೇಗುಲದಲ್ಲಿ ಪ್ರಧಾನಿ ಹೆಸರಿನಲ್ಲಿ ಪೂಜೆ ಸಲ್ಲಿಸಿದ ಅಣ್ಣಾಮಲೈ

Published

on

ಮಂಗಳೂರು : ಅಮೆರಿಕದ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಸೈನಿಕರ ಹೆಸರಿನಲ್ಲಿ ಪೂಜೆ ಸಲ್ಲಿಸಲಾಗಿದೆ. ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಈ ಪೂಜೆ ನೆರವೇರಿಸಿದ್ದು, ಪ್ರಧಾನಿ ಹಾಗೂ ಸೈನ್ಯಕ್ಕೆ ಶಕ್ತಿ ತುಂಬುವಂತೆ ಕೃಷ್ಣನಲ್ಲಿ ಪ್ರಾರ್ಥಿಸಿದ್ದಾರೆ.

ಅಮೆರಿಕದ ಫೀನಿಕ್ಸ್ ಮಹಾನಗರದಲ್ಲಿ ಇರುವ ಕೃಷ್ಣ ಮಂದಿರಲ್ಲಿ ಈ ಪೂಜೆ ಸಲ್ಲಿಸಿದ್ದಾರೆ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ತೆರಳಿದ್ದ ಅಣ್ಣಾಮಲೈ, ಉಡುಪಿ ಪುತ್ತಿಗೆ ಮಠಕ್ಕೆ ಸೇರಿದ ಕೃಷ್ಣ ಮಂದಿರದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಹಿಂದೂಗಳೇ, ನಿಮ್ಮ ಮನೆಯಲ್ಲಿ ತಲ್ವಾರ್, ಮಹಿಳೆಯರು ಬ್ಯಾಗ್‌ನಲ್ಲಿ ಚೂರಿ ಇಟ್ಕೊಳ್ಳಿ : ಕಲ್ಲಡ್ಕ ಪ್ರಭಾಕರ ಭಟ್

 

 

Continue Reading

LATEST NEWS

ಹಿಂದೂಗಳೇ, ನಿಮ್ಮ ಮನೆಯಲ್ಲಿ ತಲ್ವಾರ್, ಮಹಿಳೆಯರು ಬ್ಯಾಗ್‌ನಲ್ಲಿ ಚೂರಿ ಇಟ್ಕೊಳ್ಳಿ : ಕಲ್ಲಡ್ಕ ಪ್ರಭಾಕರ ಭಟ್

Published

on

ಮಂಗಳೂರು/ಮಂಜೇಶ್ವರ : ಹಿಂದೂ ಮುಸ್ಲಿಂ ಗಲಾಟೆ ಆದ್ರೆ ಹಿಂದೂಗಳು ಓಡುವ ಕಾಲ ಒಂದು ಇತ್ತು. ಈಗ ಕೈ ತೋರಿಸಿದ್ರೆ ಮುಸ್ಲಿಮರು ಓಡಿ ಹೋಗ್ತಾರೆ. ಹೀಗಾಗಿ ನಿಮ್ಮ ಮನೆಯಲ್ಲಿ ಒಂದು ತಲ್ವಾರ್ ಯಾವಾಗಲೂ ಇಟ್ಟುಕೊಳ್ಳಿ ಮತ್ತು ಮಹಿಳೆಯರು ಚೂರಿ ಇಟ್ಟುಕೊಳ್ಳಿ ಎಂದು ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಮಂಜೇಶ್ವರದ ವರ್ಕಾಡಿಯಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಪೆಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅಲ್ಲಿ ಉಗ್ರರಿಗೆ ತಲ್ವಾರ್ ತೋರಿಸಿದ್ರೂ ಸಾಕಿತ್ತು ಓಡಿ ಹೋಗ್ತಾ ಇದ್ರು. ಮಹಿಳೆಯರು ತಮ್ಮ ಬ್ಯಾಗಿನಲ್ಲಿ ಸ್ನೋ ಪೌಡರ್ ಬಾಚಣಿಗೆ ಜೊತೆಯಲ್ಲಿ ಆರು ಇಂಚಿನ ಚೂರಿ ಇಟ್ಟುಕೊಳ್ಳಿ, ಅದಕ್ಕೆ ಲೈಸೆನ್ಸ್ ಬೇಡ.

ಇದನ್ನೂ ಓದಿ : ಅಮೆರಿಕದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಮೈಸೂರು ಉದ್ಯಮಿ

ಸಂಜೆ ಆರು, ಏಳು ಗಂಟೆ ಬಳಿಕ ನಿಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ಆವಾಗ ಕೈ ಮುಗಿದು ಬೇಡಿಕೊಳ್ಳದೆ ಚೂರಿ ತೆಗೆದು ತೋರಿಸಿ ಎಂದು ಪ್ರಭಾಕರ್ ಭಟ್ ಕರೆ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page