Connect with us

LATEST NEWS

ಜನಿವಾರ ಪ್ರಕರಣ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Published

on

ಮಂಗಳೂರು/ಬೆಂಗಳೂರು : ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ ರಾಜ್ಯವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಯುತ್ತಿದೆ. ಜನಿವಾರವನ್ನು ತೆಗಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಇಂದು(ಎ.26) ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಸ್.ಶ್ರೀರಂಗ ಅವರ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿದೆ. ಎಪ್ರಿಲ್ 16 ರಂದು ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆದಿತ್ತು. ಶಿವಮೊಗ್ಗದಲ್ಲಿ ಪರೀಕ್ಷಾ ಕೇಂದ್ರದೊಳಗೆ ಹೋಗುವ ಮೊದಲು ಇಬ್ಬರು ವಿದ್ಯಾರ್ಥಿಗಳ ಜನಿವಾರ ತೆಗೆಯಲಾಗಿತ್ತು.

ಇದನ್ನೂ ಓದಿ : ಭಾರತ-ಪಾಕ್ ಗಡಿ ಬಂದ್; ರಾಜಸ್ಥಾನದ ಯುವಕನ ಮದುವೆ ಕ್ಯಾನ್ಸಲ್..!

ಬೀದರ್‌ನಲ್ಲಿ ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರದೊಳಗೆ ಬಿಟ್ಟಿರಲಿಲ್ಲ. ಧಾರವಾಡದಲ್ಲೂ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿಯ ಜನಿವಾರವನ್ನು ಕತ್ತರಿಸಿದ್ದ ಆರೋಪ ಕೇಳಿ ಬಂದಿತ್ತು. ಈ ಘಟನೆಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

DAKSHINA KANNADA

ಮಂಗಳೂರು: ಬೈಕ್ ಸ್ಕಿಡ್ ಆಗಿ ಸವಾರ ಸಾ*ವು

Published

on

ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಗಂ*ಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾ*ವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮೃತರನ್ನು ಸೋಮೇಶ್ವರ ಗ್ರಾಮದ ಪಿಲಾರು ಅಂಬಿಸಾದಿ ನಿವಾಸಿ ಮನೋಜ್ ಗಟ್ಟಿ ಎಂದು ಗುರುತಿಸಲಾಗಿದೆ. ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ ಮನೋಜ್ ಶುಕ್ರವಾರ ರಾತ್ರಿ ಕೋಟೆಕಾರಿನ ಕೊಂಡಾಣ ಕ್ಷೇತ್ರದ ಕಡೆಯ ಬಂಡಿ ಉತ್ಸವಕ್ಕೆ ತನ್ನ ಬೈಕಲ್ಲಿ ತೆರಳಿದ್ದರು. ರಾತ್ರಿ ವೇಳೆ ವಾಪಸ್ ಆಗುತ್ತಿದ್ದಾಗ ಕೊಲ್ಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ.

ಇದನ್ನೂ ಓದಿ: WATCH : ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾ*ಘಾತ; ಯುವಕ ಸಾ*ವು

ಇದರಿಂದ ರಸ್ತೆಗೆಸೆಯಲ್ಪಟ್ಟ ಮನೋಜ್ ಅವರು ಗಂ*ಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯರು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

Continue Reading

LATEST NEWS

WATCH : ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾ*ಘಾತ; ಯುವಕ ಸಾ*ವು

Published

on

ಮಂಗಳೂರು/ವಿಜಯಪುರ : ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಜಯಪುರದಲ್ಲಿ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.  ಡ್ಯಾನ್ಸ್ ಮಾಡುವಾಗಲೇ ಯುವಕನೊಬ್ಬ ಹೃದಯಾ*ಘಾತದಿಂದ ಸಾ*ವನ್ನಪ್ಪಿದ್ದಾನೆ. ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ಈ ದು*ರಂತ ಸಂಭವಿಸಿದೆ.

28 ವರ್ಷದ ಮಹಮ್ಮದ್ ಪೈಗಂಬರ್ ಗಂಗನಹಳ್ಳಿ ಮೃ*ತ ಯುವಕ. ಮಹಮ್ಮದ್ ಪೈಗಂಬರ್ ಆಲ್ಯೂಮೀನಿಯಂ ಕಿಟಕಿ, ಬಾಗಿಲು ಕೆಲಸ ಮಾಡುತ್ತಿದ್ದ. ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ  ಹೃ*ದಯಾಘಾತಕ್ಕೊಳಗಾಗಿ ಕು*ಸಿದು ಬಿದ್ದಿದ್ದಾನೆ.

ಇದನ್ನೂ ಓದಿ : ಕೋವಿಡ್‌ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

ಕೂಡಲೇ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟುಹೊತ್ತಿಗಾಗಲೇ ಆತ ಮೃತಪಟ್ಟಿದ್ದಾನೆ. ಯುವಕನ ಕೊನೆಯ ಕ್ಷಣದ ವೀಡಿಯೋ ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

 

Continue Reading

LATEST NEWS

ಕೋವಿಡ್‌ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

Published

on

ಮಂಗಳೂರು/ಬೆಳಗಾವಿ: ಮಹಾಮಾರಿ ಕೋವಿಡ್ ಕುರಿತು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮಿಜಿಯವರು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಕೊವಿಡ್ ಕುರಿತು ಸ್ವಾಮೀಜಿ ಅವರು, ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರಿ. ಉಸಿರಾಟಕ್ಕೆ ತೊಂದರೆಯಾಗಿ ಸಾ*ವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿರೋದು ಒಳ್ಳೆಯದು. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ. ಲೋಕಕ್ಕೆ ವಾಯು, ಜಲದಿಂದ ಐದು ವರ್ಷ ಗಂಡಾಂತರವಿದೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘಸ್ಪೋಟ ಆಗುವ ಸಾಧ್ಯತೆಗಳಿವೆ. ಭೂಕಂಪ ಸಂಭವಿಸಲಿದೆ. ಮತೀಯ ಗಲಭೆಗಳು ಹೆಚ್ಚಾಗಲಿವೆ’ ಎಂದರು.

ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ; ಮೋಹಕ ತಾರೆ ಬೇಸರ

‘ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಉತ್ಪತ್ತಿಯಾಗುತ್ತವೆ. ಅನೇಕ ರಾಜಕೀಯ ಮುಖಂಡರಿಗೆ ಸಾವಿದೆ ಹಾಗೂ ಭಯವಿದೆ. ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಎನಾಗುತ್ತೆ ನೋಡಬೇಕು’ ಎಂದು ಸ್ವಾಮೀಜಿ ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page