Connect with us

LATEST NEWS

ಜಮ್ಮು- ಕಾಶ್ಮೀರ ಉದ್ವಿಗ್ನ : ಶಾಲಾ – ಕಾಲೇಜುಗಳಿಗೆ ರಜೆ, ಜಮ್ಮುವಿನತ್ತ ದೌಡಾಯಿಸಿದ ಒಮರ್ ಅಬ್ದುಲ್ಲಾ

Published

on

ಮಂಗಳೂರು/ಜಮ್ಮು : ಪಾಕಿಸ್ತಾನದ ಕುತಂತ್ರಕ್ಕೆ ಭಾರತ ದಿಟ್ಟ ಉತ್ತರ ನೀಡುತ್ತಿದೆ. ಸದ್ಯ  ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿದೆ.

ಪಾಕಿಸ್ತಾನಿ ಪಡೆಗಳು ಪೂಂಛ್, ರಜೌರಿ ಮತ್ತು ಜಮ್ಮು ಜಿಲ್ಲೆಗಳಲ್ಲಿ ರಾತ್ರಿ ಇಡೀ ಗುಂಡು ಹಾರಿಸಿ ಮತ್ತು ಶೆಲ್ ದಾಳಿ ನಡೆಸಿದ್ದರಿಂದ ಹಲವು ಬಾರಿ ಕದನ ವಿರಾಮ ಉಲ್ಲಂಘನೆ ವರದಿಯಾಗಿವೆ. ಭಾರತೀಯ ಪಡೆಗಳು ಪ್ರತಿದಾಳಿ ನಡೆಸಿವೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೇನೆ, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿನ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ.

ಒಮರ್ ಅಬ್ದುಲ್ಲಾ ಭೇಟಿ :

ಜಮ್ಮುವಿಗೆ ಒಮರ್ ಅಬ್ದುಲ್ಲಾ ಆಗಮಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಗುರುವಾರ ರಾತ್ರಿ ಪಾಕಿಸ್ತಾನ ಜಮ್ಮು, ಪಠಾಣ್ ಕೋಟ್, ಉಧಂಪುರ ಸೇರಿದಂತೆ ಇತರ ಸ್ಥಳಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಪ್ರಯತ್ನ ನಡೆಸಿತ್ತು. ಅಲ್ಲಿನ ಪರಿಸ್ಥಿತಿ ಅವಲೋಕಿಸಲು ಘಟನಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು : ದೇಶ ವಿರೋಧಿ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ವಿರುದ್ಧ ಭಾರೀ ಆಕ್ರೋಶ

ಕಾಶ್ಮೀರದ ಎಲ್ಲಾ ಶಾಲೆಗಳಿಗೆ ಸೋಮವಾರದ ವರೆಗೆ ರಜೆ ಘೋಷಿಸಲಾಗಿದ್ದು, ಪರಿಸ್ಥಿತಿ ಅವಲೋಕಿಸಿ ರಜಾ ಅವಧಿಯನ್ನು ವಿಸ್ತರಿಸಬೇಕೇ? ಎಂಬ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

LATEST NEWS

ಬದಲಾಯ್ತು ಗೂಗಲ್ ಲೋಗೋ; 10 ವರ್ಷಗಳ ಬಳಿಕ ಆಧುನಿಕ ಟಚ್

Published

on

ನವದೆಹಲಿ: ಸುಮಾರು 10 ವರ್ಷಗಳ ನಂತರ ಗೂಗಲ್ ಮತ್ತೊಮ್ಮೆ ತನ್ನ ಐಕಾನಿಕ್ ‘G’ ಲೋಗೋವನ್ನು ಬದಲಾಯಿಸಿದೆ.

2015 ರಲ್ಲಿ, ಗೂಗಲ್ ತನ್ನ ಕ್ಲಾಸಿಕ್ ಲೋಗೋವನ್ನು ಆಧುನಿಕ ಟೈಪ್‌ಫೇಸ್ ಪ್ರಾಡಕ್ಟ್ ಸ್ಯಾನ್ಸ್ ಗೆ ಬದಲಾಯಿಸಿತು. ಈಗ 2025 ರಲ್ಲಿ, ಕಂಪನಿಯು ಇದಕ್ಕೆ ಹೊಸ ದೃಶ್ಯ ತಿರುವನ್ನು ಸೇರಿಸಿದೆ.

ಹೊಸ ಲೋಗೋದಲ್ಲಿ ಗೂಗಲ್ ತನ್ನ ಬ್ರ್ಯಾಂಡ್‌ನ ಗುರುತಾಗಿರುವ ನೀಲಿ, ಕೆಂಪು, ಹಸಿರು ಮತ್ತು ಹಳದಿ ಎಂಬ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಉಳಿಸಿಕೊಂಡಿದೆ. ಆದರೆ ಈ ಬಾರಿ ವಿನ್ಯಾಸದಲ್ಲಿ ಹೊಸ ತಿರುವು ಇದೆ.

ಇದನ್ನೂ ಓದಿ: ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗೆ ನೀರು ಹಾಕಲು ಹೋಗಿ ಬಾಲಕಿ ಸಾವು

ಮೊದಲು ಈ ಬಣ್ಣಗಳನ್ನು G ಲೋಗೋದಲ್ಲಿ ಬ್ಲಾಕ್ ಶೈಲಿಯಲ್ಲಿ ಕಾಣಲಾಗುತ್ತಿತ್ತು. ಈಗ ಅದೇ ಬಣ್ಣಗಳನ್ನು ಗ್ರೇಡಿಯಂಟ್‌ನಲ್ಲಿ ಅಂದರೆ ಬೆಳಕಿನಿಂದ ಗಾಢ ಛಾಯೆಗಳವರೆಗೆ ಕಾಣಬಹುದು. ಇದು ಜನರಿಗೆ ಕ್ರಿಯಾತ್ಮಕ ಮತ್ತು ಆಧುನಿಕ ಅನುಭವವನ್ನು ನೀಡುತ್ತದೆ. ಗೂಗಲ್‌ನ ಈ ಹೊಸ ಲೋಗೋ ಕಂಪನಿಯು ಈಗ ತನ್ನ ಹಳೆಯ ನೋಟವನ್ನು ಮೀರಿ ಹೆಚ್ಚು ಸ್ಮಾರ್ಟ್, ಫ್ಯೂಚರಿಸ್ಟಿಕ್ ಮತ್ತು ಎಐ-ಪವರ್ಡ್​ ಬ್ರ್ಯಾಂಡಿಂಗ್‌ನತ್ತ ಸಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

Continue Reading

LATEST NEWS

ಆರ್‌ಸಿಬಿ ತಂಡಕ್ಕೆ ಮೊದಲ ಮ್ಯಾಚ್; ಇಲ್ಲಿದೆ ನೋಡಿ IPL 2025ರ ಪರಿಷ್ಕೃತ ವೇಳಾಪಟ್ಟಿ

Published

on

ಮಂಗಳೂರು/ಮುಂಬೈ: ಭಾರತ-ಪಾಕಿಸ್ತಾನ ಉದ್ವಿಗ್ನತೆ ಕಡಿಮೆಯಾಗಿದ್ದು, ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಶನಿವಾರದಿಂದ ಶುರುವಾಗುವುದು ಬಹುತೇಕ ಖಚಿತವಾಗಿದೆ.


ಹೌದು, ಈಗಾಗಲೇ ಗುಜರಾತ್ ಟೈಟನ್ಸ್ ಸೇರಿದಂತೆ ಕೆಲ ತಂಡಗಳು ಐಪಿಎಲ್‌ನ ಉಳಿದ ಪಂದ್ಯಗಳಿಗಾಗಿ ಸಿದ್ದತೆಗಳನ್ನು ಆರಂಭಿಸಿವೆ. ಈ ಸಿದ್ದತೆಗಳ ನಡುವೆ ಮತ್ತೊಂದು ಮಾಹಿತಿ ಕೂಡ ಹೊರಬಿದ್ದಿದೆ. ಅದೇನೆಂದರೆ.. ಐಪಿಎಲ್ ಪುನರಾಂಭಗೊಳ್ಳುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದೊಂದಿಗೆ ಎಂಬುದು. ಹೀಗಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಈ ಸುದ್ದಿ ಮತ್ತಷ್ಟು ಖುಷಿ ಕೊಟ್ಟಿದೆ. ಇನ್ನು ಈ ಬಾರಿಯ ಫೈನಲ್ ಪಂದ್ಯವನ್ನು ಜೂನ್ 3ರಂದು ಆಯೋಜಿಸಲು ನಿರ್ಧರಿಸಲಾಗಿದೆ.

ಐಪಿಎಲ್ 2025ರ ಪರಿಷ್ಕೃತ ವೇಳಾಪಟ್ಟಿ

Continue Reading

LATEST NEWS

ಜಿಮ್ಸ್ ಆಸ್ಪತ್ರೆಯಲ್ಲಿ ಕೈ ಕೊಟ್ಟ ಲಿಫ್ಟ್; ಗೋಡೆ ಒಡೆದು 9 ಮಂದಿ ಸಿಬ್ಬಂದಿಯ ರಕ್ಷಣೆ

Published

on

ಕಲಬುರಗಿ: ಆಸ್ಪತ್ರೆಯಲ್ಲಿ ಲಿಫ್ಟ್ ಕೈ ಕೊಟ್ಟಿದ್ದು, ಇದರ ಪರಿಣಾಮ ಲಿಫ್ಟ್ ಒಳಗಡೆ ಇದ್ದ 9 ಮಂದಿ ಸಿಬ್ಬಂದಿಯನ್ನು ಗೋಡೆ ಒಡೆದು ರಕ್ಷಣೆ ಮಾಡಿದ ಘಟನೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಏಕಾ ಏಕಿ ಲಿಫ್ಟ್ ಕೈ ಕೊಟ್ಟಿದೆ. ಇದರ ಪರಿಣಾಮ ಲಿಫ್ಟ್ ಒಳಗಡೆ ಇದ್ದ ಒಂಭತ್ತು ಜನ ಸಿಬ್ಬಂದಿ ಉಸಿರಾಡಲು ಪರದಾಡುವಂತಾಯಿತು. ಹೊರಗಡೆ ಬರಲಾಗದೆ ಕಂಗಾಲಾಗಿದ್ದರು. ತಕ್ಷಣವೇ ಲಿಫ್ಟ್​ನಲ್ಲಿದ್ದ ಒರ್ವ ಸಿಬ್ಬಂದಿ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ‌‌. ತಕ್ಷಣವೇ ಲಿಫ್ಟ್​​ನಲ್ಲಿ ಸಿಲುಕಿದ 9 ಮಂದಿಯ ರಕ್ಷಣೆಗಾಗಿ ಸಿಬ್ಬಂದಿ ಮುಂದಾಗಿದ್ದಾರೆ.

ಬಳಿಕ ತಡೆ ಗೋಡೆ ಇರುವ ಕಡೆ ಲಿಫ್ಟ್ ಸಿಲುಕಿದ ಪರಿಣಾಮ ಒಳಗಿನವರನ್ನು ರಕ್ಷಣೆ ಮಾಡಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಲಿಫ್ಟ್ ದುರಸ್ತಿ ಆಗದ ಕಾರಣ ಡ್ರಿಲ್ಲಿಂಗ್ ಮಷಿನ್ ಬಳಸಿ ತಡೆಗೋಡೆಯನ್ನು ಒಡೆದು ಲಿಫ್ಟ್ ಒಳಗಿದ್ದವರನ್ನು ರಕ್ಷಿಸಲಾಯಿತು.

Continue Reading
Advertisement

Trending

Copyright © 2025 Namma Kudla News

You cannot copy content of this page