Connect with us

FILM

ಮಲತಂದೆಯಿಂದ ಹತ್ಯೆಯಾದ ಜಗ್ಗೇಶ್ ಸಿನೆಮಾ ನಟಿ..! 13 ವರ್ಷದ ಬಳಿಕ ಮಹತ್ವದ ತೀರ್ಪು

Published

on

ಮಂಗಳೂರು: ಜಗ್ಗೇಶ್ ಸಿನೆಮಾದ ನಾಯಕಿ ಲೈಲಾ ಖಾನ್ ಹತ್ಯೆ ಪ್ರಕರಣ್ಕಕೆ 13 ವರ್ಷಗಳ ಬಳಿಕ ಮಹತ್ವದ ತೀರ್ಪು ಹೊರಬಂದಿದೆ.  ಲೈಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಸೆಷನ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೈಲಾ ಮಲತಂದೆ ಪರ್ವೀನ್ ಪ್ರಕರಣದ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ.

laila khan

2011ರ ಫೆಬ್ರವರಿಯಲ್ಲಿ ಮುಂಬೈಯ ಇಗ್ತಪುರಿಯಲ್ಲಿರುವ ಬಂಗಲೆಯಲ್ಲಿ ನಟಿ ಲೈಲಾ ಖಾನ್ ಹಾಗೂ ಆಕೆಯ ತಾಯಿ ಸೆಲೀನಾ ಹಾಗೂ ನಾಲ್ವರು ಒಡಹುಟ್ಟಿದವರು ಸೇರಿ ಒಟ್ಟು 6 ಮಂದಿಯನ್ನು ಪರ್ವೀನ್ ತಾಕ್ ಬರ್ಬರವಾಗಿ ಹತ್ಯೆ ಮಾಡಿದ್ದ. ಅಚ್ಚರಿ ಎಂದರೆ ಪರ್ವೀನ್ ತಾಕ್ ಲೈಲಾ ಖಾನ್‌ ತಾಯಿ ಸೆಲೀನಾ ಅವರ ಮೂರನೇ ಪತಿ. ಲೈಲಾ ತಾಯಿ ಸೆಲೀನಾರವರ ಜಮೀನಿಗೆ ಸಂಬಂಧಪಟ್ಟು ಈ ಕೃತ್ಯ ನಡೆದಿದೆ. ತಾಯಿ, ಲೈಲಾ ಸೇರಿದಂತೆ ನಾಲ್ವರು ಒಡಹುಟ್ಟಿದವರನ್ನು ಪೆರವಿನ್ ಬರ್ಬರ ಹತ್ಯೆಗೈದು ಪರಾರಿಯಾಗಿದ್ದ. 20212ರಲ್ಲಿ ಈತನನ್ನು ಬಂಧಿಸಲಾಗಿತ್ತು. ಇದೀಗ ಕೋರ್ಟ್ ಪೆರ್ವಿನನ್ನು ದೋಷಿ ಎಂದು ತೀರ್ಮಾನಿಸಿದ್ದು, ಮೇ.14ರಂದು ಶಿಕ್ಷೆ ಪ್ರಕಟವಾಗಲಿದೆ.

ಮುಂದೆ ಓದಿ..;  ಇಂಡೊನೇಷಿಯಾದಲ್ಲಿ ತುಳು ಮಾತನಾಡಿದ ಡಾ ಬ್ರೋ..! ಸಖತ್ ವೈರಲ್ ಆಯ್ತು ವೀಡಿಯೋ

ಘಟನೆ ವಿವರ:

ಲೈಲಾ ಖಾನ್, ಆಕೆಯ ತಾಯಿ ಸೆಲೀನಾ ಮತ್ತು ಒಡಹುಟ್ಟಿದವರಾದ ಆಮಿನಾ ಅವಳಿಗಳಾದ ಝಾರ, ಇಮ್ರಾನ್, ಕಸಿನ್ ರೇಷ್ಮಾ ನಾಪತ್ತೆಯಾಗಿದ್ದರೆಂದು 2011ರಲ್ಲಿ ಲೈಲಾ ಖಾನ್ ತಂದೆ ನಾದಿರ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು ತನಿಖೆ ಆರಂಭ ಮಾಡ್ತಾರೆ. ನಾಸಿಕ್ ಬಳಿಯ ಇಗ್ತಪುರಿಯಲ್ಲಿರುವ ಕುಟುಂಬದ ತೋಟದ ಮನೆಯನ್ನು ಅಧಿಕಾರಿಗಳು ಪರಿಶೀಲಿಸಿದಾಗ ಆ ಬಂಗಲೆ ಬೆಂಕಿಯಲ್ಲಿ ಭಾಗಶಃ ಆಹುತಿಯಾಗಿತ್ತು. ಅಲ್ಲದೆ ಲೈಲಾ ಖಾನ್‌ ಅವರ ಮೊಬೈಲ್‌ ನಾಪತ್ತೆಯಾಗುವ ವೇಳೆ ನಾಸಿಕ್‌ನಲ್ಲೇ ಇತ್ತು ಎನ್ನುವುದು ಕಂಡು ಬಂದಿತ್ತು. ಇದೇ ವೇಳೆ ಲೈಲಾ ಖಾನ್‌ಗೆ ಸೇರಿದ ವಾಹನ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿತ್ತು. ಇನ್ನು ಲೈಲಾ ಖಾನ್ ಮಲತಂದೆ ಪರ್ವೀನ್ ತಾಕ್ ಮೂಲತಃ ಕಾಶ್ಮೀರದವನು. ಹೀಗಾಗಿ ಪೊಲೀಸರಿಗೆ ಆತನ ಮೇಲೆ ಸಂಶಯ ಇನ್ನೂ ಬಲವಾಗಿತ್ತು. ಬಳಿಕ ಆತನನ್ನು ಬಂಧಿಸಲಾಯಿತು. ಈ ವೇಳೆ ಆತ ಆಸ್ತಿ ವಿಚಾರದಲ್ಲಿ ಕೊಲೆ ಮಾಡಿರುವ ಸಂಗತಿ ಹೊರ ಬಿದ್ದಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಸೆಲೀನಾ ಅವರ ಇಬ್ಬರು ಮಾಜಿ ಪತಿಯರು ಸೇರಿದಂತೆ ಸುಮಾರು 40 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.

ಜಗ್ಗೇಶ್ ನಟನೆಯ ಕನ್ನಡ ಸಿನೆಮಾ 2002ರಲ್ಲಿ ಬಿಡುಗಡೆಯಾದ ‘ಮೇಕಪ್’ ಚಿತ್ರದಲ್ಲಿ ಲೈಲಾ ಖಾನ್ ನಾಯಕಿಯಾಗಿ ನಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಇದು ಅವರ ಮೊದಲ ಹಾಗೂ ಕೊನೆಯ ಚಿತ್ರವಾಗಿದೆ. ಲೈಲಾ 2008ರಲ್ಲಿ ರಾಜೇಶ್‌ ಖನ್ನಾ ನಟನೆಯ ʼವಫಾ: ಎ ಡೆಡ್ಲಿ ಲವ್‌ ಸ್ಟೋರಿʼ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಲೈಲಾ ಬಾಂಗ್ಲಾ ದೇಶ ಮೂಲದ ಮುನೀರ್‌ ಖಾನ್‌ ಎನ್ನುವವರನ್ನು ಮದುವೆಯಾಗಿದ್ದರು ಎನ್ನಲಾಗಿದೆ.

Advertisement
1 Comment

Leave a Reply

Your email address will not be published. Required fields are marked *

FILM

ಪ್ರಿಯಕರನೊಂದಿಗಿನ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ ಎರಡನೇ ಮಗಳು; ನಾನು ಮೊದಲೇ ಊಹಿಸಿದ್ದೆ ಎಂದ ಅಪ್ಪ!

Published

on

ಮಂಗಳೂರು/ಬೆಂಗಳೂರು : ಖ್ಯಾತ ನಟ ಅರ್ಜುನ್ ಸರ್ಜಾ ಕಳೆದ ವರ್ಷವಷ್ಟೇ ಹಿರಿಯ ಪುತ್ರಿ, ನಟಿ ಐಶ್ವರ್ಯ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದರು. ಇದೀಗ ಎರಡನೇ ಮಗಳು ಹಸೆಮಣೆ ಏರಲು ಸಜ್ಜಾಗಿದ್ದು, ಸದ್ದಿಲ್ಲದೆ ನಿಶ್ಚಿತಾರ್ಥ ನಡೆದಿದೆ. ಸದ್ಯ ಈ ಜೋಡಿಯ ಫೋಟೋಗಳು ವೈರಲ್ ಆಗುತ್ತಿವೆ.

ಅರ್ಜುನ್ ಸರ್ಜಾ ಮತ್ತು ಪತ್ನಿ ನಿವೇದಿತಾ ದಂಪತಿ ಮಗಳ ಸಂಭ್ರಮದಲ್ಲಿ ಜೊತೆಯಾಗಿದ್ದರು. ಐಶ್ವರ್ಯಾ ಸರ್ಜಾ ಪತಿ ಉಮಾಪತಿ ಜೊತೆಗೆ ಈ ಶುಭ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಅಂಜನಾ ತನ್ನ ಭಾವಿ ಪತಿಯೊಂದಿಗಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಫ್ ಕೋರ್ಸ್ ಎಸ್ ಎಂದು ಹಾರ್ಟ್ ಎಮೋಜಿ ಹಾಕಿರುವ ಅವರು, #13yearslater ಎಂದು ಬರೆದುಕೊಂಡಿದ್ದಾರೆ.

ಅಂಜನಾ ಪೋಸ್ಟ್ ಸದ್ಯ ಎಲ್ಲರ ಗಮನಸೆಳೆಯುತ್ತಿದೆ. ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ವಿಶೇಷ ಅಂದ್ರೆ ಅರ್ಜುನ್ ಸರ್ಜಾ ಕೂಡ ಕಮೆಂಟ್ ಮಾಡಿರೋದು. ನಾನು ಮೊದಲೇ ಊಹಿಸಿದ್ದೆ, ಅವನು ನಿನ್ನ ಪಾರ್ಟ್ನರ್ ಆಗುತ್ತಾನೆಂದು ಎಂದು ಬರೆದಿದ್ದಾರೆ. ಐಶ್ವರ್ಯಾ ಸರ್ಜಾ ‘ಫೈನಲಿ’ ಎಂದು ಕಮೆಂಟ್ ಮಾಡಿದ್ದಾರೆ.

ಅಂದ್ಹಾಗೆ, ನಿವೇದಿತಾ ವರಿಸುತ್ತಿರುವ ಹುಡುಗ ಚಿತ್ರರಂಗದವರಲ್ಲ. ಈ ದೇಶದವರೂ ಅಲ್ಲ. ಅವರು ವಿದೇಶದವರು. ಇಟಲಿ ಮೂಲದವರು ಎಂದು ಹೇಳಲಾಗುತ್ತಿದೆ. ಎಂಗೇಜ್ಮೆಂಟ್‌ ಕೂಡ ಇಟಲಿಯಲ್ಲೇ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಋತುಚಕ್ರದ ಬಗ್ಗೆ ಮಾತನಾಡುವಾಗ ಈಗಲೂ ಮುಜುಗರವಾಗುತ್ತದೆ – ಸಮಂತಾ ಬೇಸರ

ಹುಡುಗ ಯಾರು? ಮದುವೆ ಯಾವಾಗ? ಇತ್ಯಾದಿ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ. ಅಂದ್ಹಾಗೆ ಕಳೆದ ವರ್ಷ ಜೂ.10 ರಂದು ಹಿರಿಯ ಮಗಳು ಐಶ್ವರ್ಯಾ ಸರ್ಜಾಳ ವಿವಾಹವನ್ನು ತಮಿಳು ನಟ ಉಮಾಪತಿಯೊಂದಿಗೆ ನೆರವೇರಿಸಿದ್ದ ಅರ್ಜುನ್ ಸರ್ಜಾ ಇದೀಗ ಎರಡನೇ ಮಗಳ ಮದುವೆ ತಯಾರಿಯಲ್ಲಿದ್ದಾರೆ.

Continue Reading

FILM

ಋತುಚಕ್ರದ ಬಗ್ಗೆ ಮಾತನಾಡುವಾಗ ಈಗಲೂ ಮುಜುಗರವಾಗುತ್ತದೆ – ಸಮಂತಾ ಬೇಸರ

Published

on

‘ಮಹಿಳೆಯರಾಗಿ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಆದರೂ ಋತುಚಕ್ರದ ವಿಚಾರಗಳ ಬಗ್ಗೆ ಮಾತನಾಡುವಾಗ ಇನ್ನೂ ಮೌನ ವಹಿಸುತ್ತೇವೆ. ​​ಪಿಸುಮಾತುಗಳಿಂದ ಹೇಳುತ್ತೇವೆ. ಅವಮಾನ ಎಂದು ಭಾವಿಸುತ್ತೇವೆ. ಈ ಮನಸ್ಥಿತಿ ಬದಲಾಗಬೇಕು ಎಂದು ನಮ್ಮ ಋತುಚಕ್ರ ಶಕ್ತಿಯುತವಾಗಿವೆ. ಇದು ಜೀವನವನ್ನು ದೃಢಪಡಿಸುತ್ತವೆ. ಇದು ಖಂಡಿತವಾಗಿಯೂ ಮುಜುಗರ ಅಥವಾ ಹಗುರವಾಗಿ ಪರಿಗಣಿಸುವ ವಿಷಯವಲ್ಲ. ಋತುಚಕ್ರ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪ್ರತಿ ತಿಂಗಳೂ ನಿರಂತರವಾಗಿ ಕಲಿಯುತ್ತಲೇ ಇರಬೇಕು’ ಎಂದು ನಟಿ ಸಮಂತಾ ಅಭಿಪ್ರಾಯಪಟ್ಟಿದ್ದಾರೆ.

 

ನಟಿ ಸಮಂತಾ ರುತು ಪ್ರಭು ಡಿವೋರ್ಸ್‌ ಬಳಿಕ ಪರದೆ ಮೇಲೆ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ‘ಖುಷಿ’ ಬಳಿಕ ಅನಾರೋಗ್ಯದ ಕಾರಣದಿಂದ ಸಮಂತಾ ಸಿನಿಮಾ ಕೆಲಸ ಕಡಿಮೆ ಮಾಡಿ ವೆಬ್ ಸೀರಿಸ್​​ಗಳತ್ತ ಅವರ ಗಮನ ಕೊಡಲು ಆರಂಭಿಸಿದ್ದಾರೆ. ಇದರ ಜೊತೆಗೆ ಸಮಂತಾ ಸಾಮಾಜಿಕ ಕಳಕಳಿ ತೋರಿಸುವ ಕೆಲಸ ಮಾಡುವುದರ ಜೊತೆಜೊತೆಗೆ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾರೆ. ಈಗ ನಟಿ ಋತುಚಕ್ರದ ಬಗ್ಗೆ ಮಾತನಾಡಿದ್ದು, ಈ ವಿಚಾರವನ್ನು ಓಪನ್ ಆಗಿ ಮಾತನಾಡಲು ಮುಜುಗರಪಟ್ಟುಕೊಳ್ಳುವ ಸ್ಥಿತಿ ಇದೆ ಎಂದು ಬೇಸರ ಹೊರಹಾಕಿದ್ದಾರೆ.

ಸಮಂತಾ ಅವರು ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಅವರ ನಟನೆಯ ‘ಶುಭಂ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರ ಜೊತೆಗೆ ಸಮಂತಾ ಅವರು ವೆಬ್ ಸೀರಿಸ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ‘ಮಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವರ್ಷ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಇನ್ನು, ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿರುವ ‘ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್​ಡಮ್’ ಹೆಸರಿನ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಇನ್ನು, ರಾಜ್ ಜೊತೆ ಸಮಂತಾ ಡೇಟಿಂಗ್ ಮಾಡತ್ತಿರುವ ಬಗ್ಗೆ ವರದಿಗಳೂ ಇವೆ. ಆದರೆ, ಇದನ್ನು ಸಮಂತಾ ಅವರು ಖಚಿತಪಡಿಸಿಲ್ಲ. ರಾಜ್ ಅವರಿಗೆ ಈಗಾಗಲೇ ವಿವಾಹ ಆಗಿದೆ. ಅವರ ಜೊತೆ ಸಮಂತಾ ಕಾಣಿಸಿಕೊಂಡಿರುವುದು ಆಶ್ಚರ್ಯಕರ ಸಂಗಾತಿಯಾಗಿದೆ.

Continue Reading

FILM

‘ನನ್ನ ಮನಸ್ಸು ಸರಿ ಇಲ್ಲ …’ ; ಅಭಿಮಾನಿಗಳಿಗೆ ನಟಿ ನಜ್ರಿಯಾ ಬರೆದ ಆ ಪತ್ರದಲ್ಲಿ ಏನಿತ್ತು ?

Published

on

ಕೇರಳ : ಮಲಯಾಳಂನ ಖ್ಯಾತ ನಟಿ.. ಕ್ಯೂಟಿ ಪೈ.. ಎಕ್ಸ್‌ಪ್ರೆಶನ್ ಕ್ವೀನ್.. ನಜ್ರಿಯಾ ನಜೀಮ್ ಸದ್ಯ ಸಿನಿ ಜರ್ನಿಯಿಂದ, ಅಭಿಮಾನಿಗಳಿಂದ ದೂರವಿದ್ದಾರೆ. ಆದರೆ ಯಾಕೆ ? ಏನು ? ಎಂಬುವುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಸ್ಪಷ್ಟತೆ ನೀಡುವ ನಿಟ್ಟಿನಲ್ಲಿ ನಜ್ರಿಯಾ ನಜೀಮ್ ಪತ್ರವೊಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಾನು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಆ ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಬ್ಲಾಕ್ ಬಸ್ಟರ್ ಸಿನೆಮಾ ನೀಡಿದ್ದರೂ , ಜನರಿಂದ ದೂರ ಇದ್ದಿದ್ದಕ್ಕೆ ಕಾರಣ ತಿಳಿಸಿದ್ದಾರೆ.

ನಜ್ರಿಯಾ ಬರೆದ ಪತ್ರದಲ್ಲಿ ಏನಿತ್ತು ಗೊತ್ತಾ ?

‘ಎಲ್ಲರೂ ಚೆನ್ನಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಸ್ವಲ್ಪ ಸಮಯ ನಾನು ಎಲ್ಲರಿಂದ, ಎಲ್ಲದರಿಂದ ದೂರವಿದ್ದೆ. ಸುಧಾರಿಕೆಗಾಗಿ ನನಗೆ ತುಸು ಸಮಯ ಬೇಕಿತ್ತು. ಎಲ್ಲರಿಗೂ ಗೊತ್ತು…ನಾನು ತುಂಬಾ ಆ್ಯಕ್ಟಿವ್ ಹುಡುಗಿ. ಕಳೆದ ಕೆಲವು ತಿಂಗಳುಗಳಿಂದ ನನ್ನ ವೈಯಕ್ತಿಕ ಜೀವನದಲ್ಲಿ ಉಂಟಾಗುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದೇನೆ. ನನ್ನ ಮನಸ್ಸು ಸರಿ ಇಲ್ಲ. ಕಳೆದ ಕೆಲ ತಿಂಗಳುಗಳಿಂದ ಅದೆಷ್ಟೋ ಮುಖ್ಯ ಘಟನೆಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ನನ್ನ 30 ನೇ ಹುಟ್ಟುಹಬ್ಬ, ಹೊಸ ವರ್ಷದ ಆಚರಣೆ, ನನ್ನ ಸೂಕ್ಷ್ಮದರ್ಶಿನಿ ಚಿತ್ರದ ಯಶಸ್ಸು ಮತ್ತು ಇತರ ಹಲವು ಪ್ರಮುಖ ಕ್ಷಣಗಳು ಮಿಸ್ ಆದವು, ಕ್ಷಮಿಸಿ’ ಎಂದಿದ್ದಾರೆ ನಜ್ರಿಯಾ.

‘ಯಾಕೆ ನಾನು ಮೌನವಾಗಿದ್ದೆನೆಂದು ಹೇಳದೆ ಇದ್ದ ಕಾರಣಕ್ಕೆ, ಫೋನ್ ಕರೆಗಳನ್ನು ಸ್ವೀಕರಿಸದಿದ್ದಕ್ಕಾಗಿ ಅಥವಾ ಸಂದೇಶಗಳಿಗೆ ಉತ್ತರಿಸದಿದ್ದಕ್ಕಾಗಿ ನನ್ನ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ. ನನ್ನಿಂದ ಉಂಟಾದ ಬೇಸರಕ್ಕೆ ಕ್ಷಮೆಯಾಚಿಸುತ್ತೇನೆ. ಕೆಲಸಕ್ಕಾಗಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ನನ್ನ ಎಲ್ಲಾ ಸಹನಟರು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನಾನು ಕ್ಷಮೆಯಾಚಿಸುತ್ತಿದ್ದೇನೆ. ಕೆಲ ತಿಂಗಳ ಜರ್ನಿ ನನ್ನ ಜೀವನದಲ್ಲಿ ಕಠಿಣ ಪ್ರಯಾಣವಾಗಿತ್ತು. ಆದರೆ ನಾನು ಪ್ರತಿದಿನ ಚೇತರಿಸಿಕೊಳ್ಳಲು ಮತ್ತು ಸುಧಾರಿಸಲು ಶ್ರಮಿಸುತ್ತಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನನಗೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು, ಆದರೆ ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ಇದ್ದಕ್ಕಿದ್ದಂತೆ ಏಕೆ ಕಣ್ಮರೆಯಾದೆ ಎಂಬುದನ್ನು ನನ್ನ ಎಲ್ಲಾ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ವಿವರಿಸಬೇಕೆಂದು ಅನಿಸಿದ್ದರಿಂದ ಇಂದು ಇದನ್ನು ಬರೆದಿದ್ದೇನೆ’ ಎಂದು ನಜ್ರಿಯಾ ನಜೀಮ್ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page