Connect with us

LATEST NEWS

ಚಿಕನ್ ಗ್ರಿಲ್ ತಿಂದು 10 ಮಂದಿ ಅಸ್ವಸ್ಥಗೊಂಡ ಆರೋಪ.. ವಾಂತಿ, ಭೇದಿಯಾಗಿ ಆಸ್ಪತ್ರೆ ಸೇರಿದ ಜನರು

Published

on

ಚಿಕನ್ ಗ್ರಿಲ್ ತಿಂದು 10 ಮಂದಿ ಅಸ್ವಸ್ಥಗೊಂಡ ಆರೋಪವೊಂದು ಜೆ.ಪಿ ನಗರದ ಕಬಾಬ್ ಮ್ಯಾಜಿಕ್ ವಿರುದ್ಧ ಕೇಳಿಬಂದಿದೆ. ವಾಂತಿ, ಭೇದಿಯಾಗಿ ಆಸ್ಪತ್ರೆ ಸೇರಿದ ಜನರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಜೆ.ಪಿ ನಗರದ 3ನೇ ಹಂತಲ್ಲಿರು ಈಸ್ಟ್ ಎಂಡ್ ಸಿಗ್ನಲ್ ನಲ್ಲಿರುವ ಕಬಾಬ್ ಮ್ಯಾಜಿಕ್ ನಲ್ಲಿ ಚಿಕನ್ ಗ್ರಿಲ್ ಚಿಕನ್, ಪಾಪ್ ಕಾನ್ ಚಿಕನ್, 9 ನಾನ್ ವೆಜ್ ತಳಿ ಸೇವಿಸಿ 10 ಜನರು ಅಸ್ವಸ್ಥಗೊಂಡಿದ್ದಾರೆ. ಆರೋಗ್ಯ ಸಮಸ್ಯೆ ಎದುರಾದಂತೆ 10 ಜನರು ಜೆಪಿ ನಗರ ಠಾಣೆಯಲ್ಲಿ ಕಬಾಬ್ ಮ್ಯಾಜಿಕ್ ವಿರುದ್ಧ ದೂರು ನೀಡಿದ್ದಾರೆ.

ದೂರಿನಲ್ಲಿ ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಬಚ್ಚಿಡುವ ಮುಖಾಂತರ ಹಾನಿಕಾರಕ ಆಹಾರವನ್ನು ನೀಡಿರುತ್ತಾರೆ. ಇಲ್ಲಿ ಆಹಾರ ತಿಂದ ಮೇಲೆ ಅಸ್ವಸ್ಥಗೊಂಡು ಮನೆಯ ಸಮೀಪದ ಕ್ಲೀನಿಕ್​ನಲ್ಲಿ, ಚಿಕಿತ್ಸೆ ಪಡೆದು ಮನೆಗೆ ತೆರಳಿದ್ವಿ. ಹೊಟ್ಟೆನೋವು ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ. ಪರೀಕ್ಷೆ ನಡೆಸಿದ ಬಳಿಕ ತಿಳಿದು ಬಂದ ಬಹಳ ಅಘಾತಕಾರಿ ಅಂಶವೇನೆಂದರೆ, ನಾವು ತಿಂದ ಆಹಾರ ಕರುಳಿಗೆ ಹಾನಿಯನ್ನುಂಟು ಮಾಡಿದೆ. ನಮಗೆ ಹೊಟ್ಟೆ ನೋವು ಮತ್ತು ವಾಂತಿಯಾಗಿದೆ ಎಂದು ವೈದ್ಯರಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

10 ಜನಕ್ಕೆ ಹಾನಿಕಾರಕ ಆಹಾರವನ್ನು ನೀಡಿರುವ ಮೂಲಕ ವೈಯಕ್ತಿಕ ಸುರಕ್ಷತೆಗೆ ಘಾಸಿ ಮಾಡಲಾಗಿದೆ. ಸಂಬಂಧ ಪಟ್ಟವರನ್ನ ಠಾಣೆಗೆ ಕರೆದು ಸೂಕ್ತ ತಿಳಿವಳಿಕೆ ನೀಡಿ ಎಂದು ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೂ ದೂರು ನೀಡಿದ್ದಾರೆ.

LATEST NEWS

ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಯುವಕ ಸಾ*ವು

Published

on

ಮಂಗಳೂರು/ಬೀದರ್ : ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿಂದ ಬಿ*ದ್ದು ಯುವಕ ಮೃ*ತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ.

19 ವರ್ಷದ ಶಶಿಕುಮಾ‌ರ್ ಶಿವಾನಂದ ಮೃ*ತ ಯುವಕ. ಶಶಿ ಕುಮಾರ್ ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ. ಗಾಳಿಪಟ ಹಾರಿಸುವಾಗ ದಾರ ತುಂ*ಡಾಗಿದ್ದು. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿ*ದ್ದಿದ್ದಾನೆ.

ಇದನ್ನೂ ಓದಿ : ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಪರಿಣಾಮ ಸ್ಥಳದಲ್ಲೇ ಕೊನೆ*ಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

LATEST NEWS

ವಾಷಿಂಗ್ ಮಷಿನ್ ದಿಢೀರ್ ಸ್ಫೋಟ; ತಪ್ಪಿದ ಭಾರಿ ಅನಾಹುತ

Published

on

ಹೈದರಾಬಾದ್: ಮನೆಯೊಂದರಲ್ಲಿ ವಾಷಿಂಗ್‌ ಮಷಿನ್‌ ಸ್ಫೋಟಗೋಡಿರುವ ಘಟನೆ ಹೈದಾರಾಬಾದಿನ ಕೃಷ್ಣ ನಗರ ಪ್ರದೇಶದಲ್ಲಿರುವ ಜೈನ ದೇವಾಲಯದ ಬಳಿ ಶನಿವಾರ(ಜ.17) ನಡೆದಿದೆ.


ಸ್ಯಾಮ್‌ಸಂಗ್ ವಾಷಿಂಗ್ ಮೆಷಿನ್ ಸ್ಫೋಟಗೊಂಡಿದ್ದು, ಘಟನೆಯ ಸಮಯದಲ್ಲಿ ಅದರ ಹತ್ತಿರ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ ಮತ್ತು ಗೋಡೆಗಳಿಗೆ ಹಾನಿಯಾಗಿದೆ. ಆದರೆ ಶಬ್ದ ಕೇಳಿ ಎಲ್ಲರೂ ಬಾಂಬ್ ಸ್ಫೋಟವಾದಂತೆ ಭಯಪಟ್ಟು ಮನೆಯಿಂದ ಓಡಿ ಬಂದಿದ್ದರು.

ಇದನ್ನೂ ಓದಿ: ಮೂಡುಬಿದಿರೆ : ಸ್ವಂತ ಉದ್ಯಮದ ಸಿದ್ಧತೆಯಲ್ಲಿದ್ದ ಯುವಕ ಆ*ತ್ಮಹ*ತ್ಯೆ

ಈ ಕುರಿತು ಮಾಹಿತಿ ತಿಳಿದ ಬಳಿಕ ಮಧುರಾನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Continue Reading

DAKSHINA KANNADA

ಮೂಡುಬಿದಿರೆ : ಸ್ವಂತ ಉದ್ಯಮದ ಸಿದ್ಧತೆಯಲ್ಲಿದ್ದ ಯುವಕ ಆ*ತ್ಮಹ*ತ್ಯೆ

Published

on

ಮೂಡುಬಿದಿರೆ : ಸ್ವಂತ ಉದ್ಯಮ ಸ್ಥಾಪಿಸುವ ಕನಸು ಹೊತ್ತು ಸಿದ್ಧತೆ ನಡೆಸುತ್ತಿದ್ದ ಯುವಕನೋರ್ವ ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೂಡುಬಿದಿರೆಯ ರಿಂಗ್‌ರೋಡ್ ಬಳಿ ನಡೆದಿದೆ.  ಮೂಡುಬಿದಿರೆ ರಿಂಗ್ ರೋಡ್‌ನ ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ಬಳಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡುತ್ತಿರುವ ಶ್ರೀನಿವಾಸ್ ಎಂಬುವವರ ಪುತ್ರ ದೀಕ್ಷಿತ್ (35) ಮೃ*ತಪಟ್ಟ ಯುವಕ.

ಹಲವು ವರ್ಷಗಳ ಕಾಲ ದುಬೈನಲ್ಲಿ ಉದ್ಯೋಗದಲ್ಲಿದ್ದ ದೀಕ್ಷಿತ್, ಒಂದೂವರೆ ವರ್ಷದ ಹಿಂದೆ ತವರಿಗೆ ಮರಳಿದ್ದರು. ಮೂಡುಬಿದಿರೆಯ ರಿಂಗ್‌ರೋಡ್ ಬಳಿ ಹೋಟೆಲ್ ಉದ್ಯಮ ಪ್ರಾರಂಭಿಸಬೇಕೆಂಬ ಹಂಬಲ ಹೊಂದಿದ್ದ ಅವರು, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಶನಿವಾರ(ಜ.17) ಮಧ್ಯಾಹ್ನ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಲಗಿದ್ದ ಸಮಯದಲ್ಲಿ, ಮನೆಯ ಕೋಣೆಯ ಕಿಟಕಿಗೆ ನೇ*ಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ರಸ್ತೆ ವಿಭಜಕಕ್ಕೆ ಎಸ್ ಯುವಿ ಡಿ*ಕ್ಕಿ; 5 ಮಂದಿ ಸಾ*ವು

ದೀಕ್ಷಿತ್ ಅವರ ಈ ತೀವ್ರ ನಿರ್ಧಾರಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಉತ್ತಮ ಭವಿಷ್ಯದ ಕನಸು ಕಂಡಿದ್ದ ಯುವಕನ ಆ*ತ್ಮಹ*ತ್ಯೆಯು ಕುಟುಂಬಸ್ಥರಲ್ಲಿ ಮತ್ತು ಸ್ನೇಹಿತರಲ್ಲಿ ಭಾರೀ ಶೋಕವನ್ನುಂಟು ಮಾಡಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page