Connect with us

LATEST NEWS

ನಿಮ್ಮ ಶ್ವಾಸಕೋಶ ಆರೋಗ್ಯವಾಗಿದೆಯೇ? ಮನೆಯಲ್ಲಿಯೇ ಕುಳಿತು ಚೆಕ್ ಮಾಡಲು ಇಲ್ಲಿದೆ ಸುಲಭೋಪಾಯ..!

Published

on

ನವದೆಹಲಿ: ಕೊರೊನಾ ವೈರಸ್ ನ ಎರಡನೇ ಅಲೆಯಲ್ಲಿ, ಶ್ವಾಸಕೋಶದಲ್ಲಿ ಹರಡುವ ವೈರಸ್ ಸೋಂಕಿನಿಂದ ಭಾರತದಲ್ಲಿ ಅನೇಕ ಜನತೆ ಸಾಯುತ್ತಿದ್ದಾರೆ.

ಕೊರೊನಾ ವೈರಸ್ ಮಾನವ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ನಂತರ ರೋಗಿಗಳಿಗೆ ಉಸಿರಾಡಲು ಕಷ್ಟವಾಗುತ್ತದೆ. ಕೊರೊನಾದ ಹೊಸ ರೂಪಾಂತರಿ ಸಾಕಷ್ಟು ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ, ಅದರ ಸೋಂಕು ಮೊದಲು ಗಂಟಲಿನಲ್ಲಿ ಪ್ರಾರಂಭವಾಗುತ್ತದೆ.

 

ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದಿದ್ದರೆ ಆಗ ವೈರಸ್ ನೇರವಾಗಿ ಶ್ವಾಸಕೋಶವನ್ನು ತಲುಪುತ್ತದೆ.

ಭಾರತದ ಶೇ.98 ರಷ್ಟು ಜನರಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಇದೆ. ಕೊರೊನಾ ಪಾಸಿಟಿವ್ ರೋಗಿಗಳಲ್ಲಿ 5 ರಿಂದ 6 ದಿನಗಳ ನಂತರ ಈ ಸೋಂಕುಗಳು ಶ್ವಾಸಕೋಶದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಶ್ವಾಸಕೋಶಗಳು ಎಷ್ಟು ಆರೋಗ್ಯಕರ ಮತ್ತು ಸದೃಢವಾಗಿವೆ ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮೆಲ್ಲರಿಗೂ ಬಹಳ ಮುಖ್ಯ. ಸಾಮಾನ್ಯವಾಗಿ ಶ್ವಾಸಕೋಶದ ಸ್ಥಿತಿಯನ್ನು ತಿಳಿಯಲು ಎಕ್ಸ್-ರೇಗಳನ್ನು ಮಾಡಬೇಕಾಗುತ್ತದೆ.

ಆದರೆ ಸುಲಭ ವಿಧಾನಗಳ ಮೂಲಕ ಮನೆಯಲ್ಲಿ ಕುಳಿತು ನಿಮ್ಮ ಶ್ವಾಸಕೋಶವನ್ನು ಹೇಗೆ ಪರೀಕ್ಷಿಸಬಹುದು ಎಂದು ನಾವು ನಿಮಗೆ ಹೇಳುತ್ತಿದ್ದೇವೆ.ದೇಶದ ಉನ್ನತ ಆಸ್ಪತ್ರೆಗಳಲ್ಲಿ ಒಂದಾದ ಝೈಡಸ್ ಆಸ್ಪತ್ರೆ ಇತ್ತೀಚೆಗೆ ಪರೀಕ್ಷಾ ವೀಡಿಯೊವನ್ನು ಹಂಚಿಕೊಂಡಿದೆ. ಆಸ್ಪತ್ರೆಯಲ್ಲಿ ಶ್ವಾಸಕೋಶಗಳನ್ನು ಪರೀಕ್ಷಿಸಲು ಅನಿಮೇಟೆಡ್ ವೀಡಿಯೊ ಸುಲಭ ಮಾರ್ಗವನ್ನು ತೋರಿಸಿದೆ.

ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಝೈಡಸ್ ಆಸ್ಪತ್ರೆ ಮಾಹಿತಿಯೊಂದನ್ನ ನೀಡಿದೆ ಇದು ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಲು ವೇಗ ಮತ್ತು ಸುಲಭ ಮಾರ್ಗವಾಗಿದೆ.

ಶ್ವಾಸಕೋಶವನ್ನು ಹೇಗೆ ಪರೀಕ್ಷಿಸುವುದು ಇಲ್ಲಿದೆ ಮಾಹಿತಿ: ಝೈಡಸ್ ಆಸ್ಪತ್ರೆ ಹಂಚಿಕೊಂಡ ವೀಡಿಯೊಗಳು 0 ರಿಂದ 10 ರವರೆಗೆ ಸಂಖ್ಯೆಗಳನ್ನು ನೀಡಿವೆ.

ಇದರಲ್ಲಿ 2ನೇ ಸಂಖ್ಯೆಯನ್ನು ಸಾಮಾನ್ಯ ಶ್ವಾಸಕೋಶ ಎಂದು ಕರೆಯಲಾಗುತ್ತದೆ. ಸಂಖ್ಯೆ 5 ಅನ್ನು ಸ್ಟ್ರಾಂಗ್ ಲುಂಗ್ಸ್ ಎಂದು ಕರೆಯಲಾಗುತ್ತದೆ.

ಅದೇ ಸಮಯದಲ್ಲಿ ಸಂಖ್ಯೆ ೧೦ ಅನ್ನು ಸೂಪರ್ ಲಂಗ್ಸ್ ಎಂದು ಕರೆಯಲಾಗುತ್ತದೆ. ಈಗ ನೀವು ಮಾಡಬೇಕಾಗಿರುವುದು ವೀಡಿಯೊವನ್ನು ಪ್ಲೇ ಮಾಡಿ ಮತ್ತು ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಿ,

ಮತ್ತು ಕೆಂಪು ಚೆಂಡು ತಿರುಗುವುದನ್ನು ನೋಡುವುದು. ಕೆಂಪು ಚೆಂಡು ಎಷ್ಟು ಬಾರಿ ಸುತ್ತುತ್ತದೆ ಎಂಬುದರ ಪ್ರಕಾರ ನಿಮಗೆ ಸಂಖ್ಯೆಯನ್ನು ನೀಡಲಾಗುತ್ತದೆ.

‘ಅಂದರೆ, ನೀವು ಉಸಿರನ್ನು ಹಿಡಿದಾಗ, ವೀಡಿಯೊವನ್ನು ಪ್ಲೇ ಮಾಡಿ ಮತ್ತು ನೀವು ಉಸಿರನ್ನು ಬಿಟ್ಟಾಗ, ನಿಮಗೆ ಎಷ್ಟು ಪಾಯಿಂಟ್ ಗಳನ್ನು ನೀಡಲಾಗಿದೆ ಎಂದು ನೀವು ನೋಡುವಿರಿ.’

ನೀವು ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾದಷ್ಟೂ ನಿಮ್ಮ ಶ್ವಾಸಕೋಶಗಳು ಬಲಗೊಳ್ಳುತ್ತವೆ.ನಿಮ್ಮ ಶ್ವಾಸಕೋಶ ಆರೋಗ್ಯವಾಗಿದೆಯೇ? ಮನೆಯಲ್ಲಿಯೇ ಕುಳಿತು ಹೀಗೆ ಚೆಕ್ ಮಾಡಿ

 

DAKSHINA KANNADA

ಎಎನ್ಎಫ್‌ ವಿಸರ್ಜನೆ ಮಾಡಲಾಗಿಲ್ಲ : ಗೃಹ ಸಚಿವ ಪರಮೇಶ್ವರ್

Published

on

ಮಂಗಳೂರು : ಎಎನ್ಎಫ್‌ ವಿಸರ್ಜನೆ ಮಾಡಲಾಗಿಲ್ಲ. ಅದರಲ್ಲಿರುವ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ, ಜಿ. ಪರಮೇಶ್ವರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಲವು ಕೊ*ಲೆ ಪ್ರಕರಣಗಳಿದಾಗಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು  ಸರಿದಾರಿಗೆ ತಂದು ಶಾಂತಿ ಕಾಪಾಡುವ ಉದ್ದೇಶದಿಂದ ರಚಿಸಲಾಗಿರುವ ವಿಶೇಷ ಕಾರ್ಯಪಡೆಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಇದನ್ನೂ ಓದಿ : ಬಾಂ*ಬ್ ಬೆದರಿಕೆ; ದೆಹಲಿಗೆ ಬರುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್

ಸದ್ಯದ ಮಟ್ಟಿಗೆ ನಕ್ಸಲ್‌ ನಿಗ್ರಹ ದಳದ ಅಗತ್ಯತೆ ಇಲ್ಲದಿದ್ದರೂ ಯಾವುದಾದರೂ ಸಂದರ್ಭದಲ್ಲಿ ಅಗತ್ಯ ಬಂದರೆ ಬೇಕಾಗುತ್ತದೆ. ಈಗ  ನಮ್ಮ ರಾಜ್ಯದಲ್ಲಿ ನಕ್ಸಲರು ಇಲ್ಲದಿದ್ದರೂ ಒರಿಸ್ಸಾ, ಅಸ್ಸಾಂ ಮೊದಲಾದ ಕಡೆ ನಕ್ಸಲ್‌ ಚಟುವಟಿಕೆ ಇದೆ. ಅಲ್ಲಿಂದ ಇಲ್ಲಿಗೆ ಬರಲಾರರು ಎನ್ನಲಾಗದು. ಅವರು ಬಂದರೆ ತಯಾರಿರಬೇಕೆಂದು ನಕ್ಸಲ್‌ ನಿಗ್ರಹ ಪಡೆಯ ಸ್ವಲ್ಪ ಭಾಗವನ್ನು ಉಳಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Continue Reading

LATEST NEWS

ಬಾಂ*ಬ್ ಬೆದರಿಕೆ; ದೆಹಲಿಗೆ ಬರುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್

Published

on

ಮಂಗಳೂರು/ಬ್ಯಾಂಕಾಕ್ : ಥಾಯ್ಲೆಂಡ್‌ನ ಫುಕೆಟ್‌ನಿಂದ ಭಾರತದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂ*ಬ್ ಬೆದರಿಕೆ ಬಂದಿದೆ. ಹೀಗಾಗಿ ತುರ್ತು ಲ್ಯಾಂಡ್ ಮಾಡಲಾಗಿದೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಎಐ 379 ತುರ್ತು  ಭೂ ಸ್ಪರ್ಶ ಮಾಡಿದೆ. ಈ ವಿಮಾನದಲ್ಲಿ 156 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಫುಕೆಟ್ ವಿಮಾನ ನಿಲ್ದಾಣದಿಂದ ಈ ವಿಮಾನ ಟೇಕಾಫ್ ಅಗಿತ್ತು. ಅಂಡಮಾನ್ ಸಮುದ್ರದ ಮೇಲೆ ದೊಡ್ಡದೊಂದು ಸುತ್ತು ಹೊಡೆದು ಬಳಿಕ ದಕ್ಷಿಣ ಥಾಯ್ ದ್ವೀಪಕ್ಕೆ ಮರಳಿದೆ ಎಂದು ತಿಳಿದು ಬಂದಿದೆ. ಈ ವಿಮಾನ ಮಧ್ಯಾಹ್ನ 12.40ಕ್ಕೆ ದೆಹಲಿಗೆ ಬಂದಿಳಿಯಬೇಕಿತ್ತು.

ಇದನ್ನೂ ಓದಿ : ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್‌ ಪಂಜಾಬ್‌ನಲ್ಲಿ ತುರ್ತು ಭೂಸ್ಪರ್ಶ

ವಿಮಾನ ತುರ್ತು ಭೂ ಸ್ಪರ್ಶ ಮಾಡುತ್ತಿದ್ದಂತೆ ಪ್ರಯಾಣಿಕರೆಲ್ಲರನ್ನು ಅವರ ಲಗೇಜ್‌ನೊಂದಿಗೆ ಕೆಳಗಿಳಿಸಲಾಯಿತು. ಭದ್ರತಾ ಸಿಬ್ಬಂದಿ ಪ್ರಯಾಣಿಕರು ಮತ್ತು ಸರಕುಗಳನ್ನು ಸ್ಕ್ಯಾನ್ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Continue Reading

LATEST NEWS

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತೆ ಸಿಬಿಐ ವಶಕ್ಕೆ

Published

on

ಮಂಗಳೂರು/ಬೆಂಗಳೂರು :  ಶಾಸಕ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುಪ್ರೀಂಕೋರ್ಟ್‌ನಿಂದ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶರಣಾಗಿದ್ದರು. ಈ ವೇಳೆ ಸಿಬಿಐ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ ಎದು ತಿಳಿದುಬಂದಿದೆ.


ಬಿಜೆಪಿ ಮುಖಂಡ ಯೋಗೀಶ್ ಗೌಡ ಹ*ತ್ಯೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಮಂಜೂರಾಗಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತ್ತು. ಹಾಗೇ ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶಿಸಿತ್ತು.

ಈ ಹಿನ್ನೆಲೆ ಕೋರ್ಟ್ ಮುಂದೆ ವಿನಯ್ ಕುಲಕರ್ಣಿ ಹಾಜರಾಗಿದ್ದು, ಅವರನ್ನು ಸಿಬಿಐ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಏನಿದು ಪ್ರಕರಣ?

2016 ರಲ್ಲಿ ಧಾರವಾಡದಲ್ಲಿ ಬಿಜೆಪಿ  ನಾಯಕ ಯೋಗೀಶ್ ಗೌಡ ಹ*ತ್ಯೆ ನಡೆದಿತ್ತು. ಈ ಸಂಬಂಧ ಧಾರವಾಡ ಗ್ರಾಮಾಂತರ ಶಾಸಕ ವಿನಯ್ ಕುಲಕರ್ಣಿ 2020 ರಲ್ಲಿ ಬಂಧಿಸಲ್ಪಟ್ಟಿದ್ದರು. 2021 ರಲ್ಲಿ ಜಾಮೀನು ಪಡೆದು ಹೊರಬಂದಿದ್ದರು.

ಅವರು  ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ, ಜಾಮೀನು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ ಜಾಮೀನನ್ನು ರದ್ದುಗೊಳಿಸಿದೆ.

ಇದನ್ನೂ ಓದಿ : ಸುಟ್ಟು ಭಸ್ಮವಾದ ವಿಮಾನ…ಹಾನಿಯಾಗದ ಸ್ಥಿತಿಯಲ್ಲಿ ಸಿಕ್ಕಿತು ಭಗವದ್ಗೀತೆ ಪುಸ್ತಕ!

ಚುನಾವಣೆ ಗೆದ್ದಿದ್ದ ಕುಲಕರ್ಣಿ!

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು, ಕ್ಷೇತ್ರದ ಹೊರಗಿದ್ದರೂ ಗೆದ್ದು ಅಚ್ಚರಿ ಮೂಡಿಸಿದ್ದರು. 2 ವರ್ಷಗಳ ಕಾಲ ಕ್ಷೇತ್ರದ ಹೊರಗಿದ್ದುಕೊಂಡೇ ಆಡಳಿತ ನಡೆಸಿದ್ದರು. ಇದೀಗ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page