Connect with us

DAKSHINA KANNADA

‘ಕಾಂತಾರ 2’ ಮಾಡಲು ದೈವದಿಂದಲೇ ಸಿಕ್ತಾ ಗ್ರೀನ್ ಸಿಗ್ನಲ್…?

Published

on

ಮಂಗಳೂರು: ದೇಶದೆಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡಿದ ಕನ್ನಡ ಸಿನಿಮಾ ‘ಕಾಂತಾರ’. ಆದರೆ ಈ ಸಿನಿಮಾದ ಬಿಡುಗಡೆಯ ನಂತರ ಆದ ಬೆಳವಣಿಗೆ ಮಾತ್ರ ದೈವಾರಾಧನೆ ಬಗೆಗಿನ ವಾದ ವಿವಾದಗಳು. ದೈವಗಳ ಕುರಿತು ಸಿನಿಮಾ ಮಾಡಲು ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರಿಂದ ‘ಕಾಂತಾರ 2’ ಬಗ್ಗೆ ಸಹಜವಾಗಿಯೇ ಕುತೂಹಲ ಕೂಡ ಮೂಡಿತ್ತು. ಹಾಗಾಗಿ ಸಿನಿಮಾ ತಂಡ ದೈವದ ಮೊರೆ ಹೋಗಿದ್ದು ಚಿತ್ರ ಮಾಡಲು ಅನುಮತಿ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಸಿನಿಮಾ ತಂಡ ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಕಾಂತಾರ ಸಿನಿಮಾ ಯಶಸ್ವಿಯಾದ ಬಳಿಕ ಕೋಲ ಕೊಡುವುದಾಗಿ ಹರಕೆ ಹೇಳಿಕೊಂಡಿದ್ದು ನಟ ನಿರ್ದೇಶಕ ರಿಷಬ್‌ಶೆಟ್ಟಿ ತಂಡದೊಂದಿಗೆ ಬಂದು ಮಂಗಳೂರು ಭಾಗದಲ್ಲಿ ಡಿ. 8ರಂದು ಕೋಲ ಸಂದಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತಾರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು.
ಮಧ್ಯರಾತ್ರಿ ನಡೆದ ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ.

ಹಾಗಾಗಿ ಸಿನಿಮಾದ ಕಥೆ ಮಾಡಲು ರಿಷಬ್ ಶೆಟ್ಟಿ ಅಂಡ್ ಟೀಮ್ ಹುರುಪಿನಿಂದಲೇ ತಯಾರಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಕೋಲದಲ್ಲಿ ಭಾಗವಹಿಸಿದ್ದ ಹಲವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಭಾಗಿಯಾಗಿದ್ದ ಕೋಲದಲ್ಲಿ ದೈವವು ‘ಸಂಪ್ರದಾಯಬದ್ಧವಾಗಿ ನೀವು ಸಿನಿಮಾ ಮಾಡಿದ್ದೀರಿ. ಎಲ್ಲೂ ಕೂಡಾ ದೈವಗಳ ಆಚರಣೆಗೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೀರಿ.

ಮುಂದೆಯೂ ನಿಮ್ಮ ತಂಡದೊಂದಿಗೆ ನಾನು ಇರುತ್ತೇನೆ’ ಎಂದು ಅಭಯ ನೀಡಿದೆ’ ಎಂದು ಕೋಲದಲ್ಲಿ ಭಾಗಿಯಾದವರು ಹೇಳುತ್ತಿದ್ದಾರೆ.

ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನು ಬಂದಿಲ್ಲ.
ಇನ್ನು ಕಾಂತಾರ ಸಿನಿಮಾ ತಂಡದ ಜೊತೆ ರಿಷಬ್ ಕುಟುಂಬ ಕೂಡ ಕೋಲ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

DAKSHINA KANNADA

ಡಿ.6ರಂದು ಸಹಕಾರ ರತ್ನ ಭಾಸ್ಕರ್ ಎಸ್. ಕೋಟ್ಯಾನ್‌ ಅವರಿಗೆ ನಾಗರಿಕ ಪೌರ ಸನ್ಮಾನ

Published

on

ಮಂಗಳೂರು: ಕರ್ನಾಟಕ ಸರಕಾರದ 2025 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್‌ ಅವರಿಗೆ ನಾಗರಿಕ ಪೌರ ಸನ್ಮಾನ ಡಿಸೆಂಬರ್ 6 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಭಾಸ್ಕರಾಭಿನಂದನಾ ಸಮಿತಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಭಾಸ್ಕರ್ ಎಸ್. ಕೋಟ್ಯಾನ್‌ ಅವರು ಸಹಕಾರ, ಕಂಬಳ, ಕೃಷಿ, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಈ ವರ್ಷ ರಾಜ್ಯ ಸರಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳೆಲ್ಲ ಸೇರಿ ಸಾರ್ವಜನಿಕವಾಗಿ ಅವರನ್ನು ಅಭಿನಂದಿಸಲು ತೀರ್ಮಾನಿಸಿದ್ದಾರೆ ಎಂದು ಭಾಸ್ಕರಾಭಿನಂದನಾ ಸಮಿತಿಯ ಸಂಚಾಲಕ ಚಿತ್ತರಂಜನ್ ಬೋಳಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುರಭವನದಲ್ಲಿ ಡಿಸೆಂಬರ್ 6 ರಂದು ಅಪರಾಹ್ನ 3 ಗಂಟೆಗೆ ಚಿತ್ರನಟ ಮಂಜು ರೈ ಮೂಳೂರು ಅವರ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾರಂಭಕ್ಕೆ ಚಾಲನೆ ಸಿಗಲಿದೆ. 3.45 ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ.

 

ಸೋಲೂರು ಮಠದ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ  ಸಂಸದ ಬ್ರಿಜೇಶ್ ಚೌಟ ದೀಪ ಬೆಳಗಿಸುವರು. ಸ್ಪೀಕರ್ ಯು.ಟಿ. ಖಾದರ್ ಭಾಸ್ಕರಾಭಿನಂದನೆಯನ್ನು ನೆರವೇರಿಸಲಿದ್ದಾರೆ. ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಭಾಸ್ಕರಾಭಿನಂದನಾ ಸಮಿತಿಯ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಸಂಚಾಲಕ ಕೆ.ಟಿ. ಸುವರ್ಣ ಮತ್ತಿತರರು ಇದ್ದರು.

 

Continue Reading

DAKSHINA KANNADA

ಡಿ.7ರಂದು ಶಾರದಾ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ, ಸಾಂಸ್ಕೃತಿಕ ವೈಭವ

Published

on

ಮಂಗಳೂರು: ಮಕ್ಕಳಲ್ಲಿ ಶಿಸ್ತು, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಸ ಕ್ರೀಡೆ, ನೃತ್ಯ, ಸಂಗೀತ ಇವೆಲ್ಲವುಗಳನ್ನೊಳಗೊಂಡ ಹೊನಲು ಬೆಳಕಿನ ಕ್ರೀಡೋತ್ಸವ ಡಿ7ರ ಭಾನುವಾರದದಂದು ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಈ ಬಾರಿಯ ಕ್ರೀಡೋತ್ಸವ ಸಮಾರಂಭವನ್ನು ಮೈಸೂರಿನ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಆಗಮಿಸಲಿದ್ದಾರೆ. ಸಾಹಸ ಕ್ರೀಡೆ, ಸಾಂಸ್ಕೃತಿಕ ಪ್ರದರ್ಶನದಲ್ಲಿ ಸುಮಾರು 2000 ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಸಮೀರ್ ಪುರಾಣಿಕ್ ಮಾತನಾಡಿ 4ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಲಕಂಬ, ಫೈರ್ ಜಂಪ್, ಯೋಗಾಸನ ಸೇರಿದಂತೆ ಪಿರಮಿಡ್ ರಚನೆಯ ಕ್ರೀಡಾ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: WATCH : ಉಡುಪಿ: ಶಾಲೆಯ ರೋಡ್ ಸರಿ ಇಲ್ಲ…ನಗರಸಭೆ ಆಯುಕ್ತರಿಗೆ ದೂರು ಕೊಟ್ಟ ಪುಟ್ಟ ವಿದ್ಯಾರ್ಥಿ

ಸಂಸ್ಥೆಯ ಪ್ರಾಂಶುಪಾಲ ದಯಾನಂದ ಕಟೀಲ್ ಶೋಭಾಯಾತ್ರೆಯಲ್ಲಿ ಒಡೆಯರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಈ ಕ್ರೀಡೋತ್ಸವಕ್ಕೆ ಮಕ್ಕಳನ್ನು ತಯಾರು ಮಾಡಲು ಯಾವುದೇ ತರಬೇತುದಾರರಿಲ್ಲ. ಶಾರದಾ ಕುಟುಂಬ ಜೊತೆಯಾಗಿ ಸೇರಿಕೊಂಡೇ ಮಕ್ಕಳನ್ನು ಸಿದ್ಧಪಡಿಸಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಸುಧಾಕರ್ ಪೇಜಾವರ, ಶಾರದಾ ಪಿಯು ಕಾಲೇಜು ಪ್ರಾಂಶುಪಾಲ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.

Continue Reading

DAKSHINA KANNADA

ಕುದ್ರೋಳಿ ಭಗವತಿ ಕ್ಷೇತ್ರಕ್ಕೆ ವರ್ಕಳ ಶಿವಗಿರಿ ಮಠದ ಶ್ರೀಗಳ ಭೇಟಿ

Published

on

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿಯವರ ನಡುವಿನ ಐತಿಹಾಸಿಕ ವರ್ಕಳ ಶಿವಗಿರಿ ಸಂವಾದವು ಮಂಗಳೂರು ವಿವಿಯಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ಆಶೀರ್ವಚನವನ್ನು ನೀಡಲು ಆಗಮಿಸಿದ್ದ ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿ ಇಂದು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಯತಿವರೇಣ್ಯರನ್ನು ಸ್ವಾಗತಿಸಿದರು. ಮಹಿಳಾ ಸಮಿತಿ ಸದಸ್ಯರು ಅವರ ಆಗಮನದುದ್ದಕ್ಕೂ ಪೂರ್ಣಕುಂಭ ಸ್ವಾಗತಿಸಿದರು.

ಇದೇ ವೇಳೆ ಶ್ರೀಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಆರತಿ ಬೆಳಗಿದರು. ಅಲ್ಲದೆ ಮಂತ್ರಪಠಣ ಮಾಡಿದರು. ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಬಳಿಕ ಭಗವತಿ ಕ್ಷೇತ್ರದಲ್ಲಿ ಶ್ರೀಗಳಿಗೆ ವಿಶೇಷ ಗೌರವಾರ್ಪಾಣೆ ಕ್ಷೇತ್ರದ ವತಿಯಿಂದ ನೀಡಲಾಯಿತು. ಪ್ರಾರ್ಥನೆ ನೆರವೇರಿಸಿದ ಪ್ರಸಾದ ವಿತರಿಸಲಾಯಿತು.

ಇದೇ ವೇಳೆ ಶ್ರೀ ಭಗವತಿ ಕ್ಷೇತ್ರಕ್ಕೆ ವರ್ಕಳ ಶಿವಗಿರಿ ಮಠದ ಶ್ರೀ ಜ್ಞಾನಾನಂದ ತೀರ್ಥ ಸ್ವಾಮೀಜಿ ಅವರೂ ಭೇಟಿ ನೀಡಿದ್ದು, ಅವರನ್ನೂ ಕ್ಷೇತ್ರಾಡಳಿತ ಮಂಡಳಿ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿ, ಗೌರವಿಸಿದರು.

ಮೊಕ್ತೇಸರರಾದ ರವೀಂದ್ರ, ರಾಜ್ ಗೋಪಾಲ್, ವೈಬಿ ಸುಂದರ್, ಉಷಾ ಪ್ರಭಾಕರ್, ಕಾರ್ಯದರ್ಶಿ ಸುಧೀರ್ ಬಿ, ಆಶಾ ಚಂದ್ರಮೋಹನ್, ದಿನೇಶ್ ಕುಂಪಲ, ರಾಕೇಶ್, ಶಿವ ಪ್ರಸಾದ್, ಆಚಾರಪಟ್ಟವರು, ಗುರಿಕಾರರು, ಮಹಿಳಾ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page