Connect with us

DAKSHINA KANNADA

ಐಫೋನ್ ದೋಷಪೂರಿತ: ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

Published

on

ಮಂಗಳೂರು: ಆ್ಯಪಲ್ ಕಂಪೆನಿಯ ಐಫೋನ್ ಖರೀದಿ ಮಾಡಿದ ಒಂದೆರಡು ವರ್ಷಗಳಲ್ಲೇ ಬಳಕೆ ಮಾಡಲು ಸಾಧ್ಯವಿಲ್ಲದಂತೆ ದೋಷ ಕಾಣಿಸಿಕೊಂಡ ಪ್ರಕರಣವೊಂದರಲ್ಲಿ ಪರಿಹಾರ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆ ಮಹತ್ವದ ತೀರ್ಪು ನೀಡಿದೆ.

ಮಂಗಳೂರಿನ ಬಿಜೈ ನಿವಾಸಿ ಸಂಪತ್ ಕುಮಾರ್ ಎಂಬವರು ರಿಲಯನ್ಸ್ ಡಿಜಿಟಲ್ಸ್ ಮಳಿಗೆಯಿಂದ ದುಬಾರಿ ಐಫೋನ್ ಖರೀದಿಸಿದ್ದು, ಕೆಲವೇ ಸಮಯದಲ್ಲಿ ಅದರಲ್ಲಿ ದೋಷ ಕಂಡು ಬಂದು ಡಿಸ್ಪ್‌ಪ್ಲೇ ಹಾಳಾಗಿತ್ತು. ಮಳಿಗೆಯವರ ಬಳಿ ಹೋದಾಗ ಸರ್ವಿಸ್ ಸೆಂಟರ್‌ಗೆ ಕೊಡುವಂತೆ ಸೂಚಿಸಿದ್ದರು. ಅದರಂತೆ ಬಲ್ಮಠದ ಮಾಪಲ್ ಎಕ್ಸ್ ಸರ್ವಿಸ್ ಸೆಂಟರ್‌ಗೆ ರಿಪೇರಿಗೆ ನೀಡಿದ್ದರು.

ಆದರೆ ರಿಪೇರಿಗೆ ದೊಡ್ಡ ಮೊತ್ತವನ್ನು ಹೇಳಿದ್ದು, ಮೊಬೈಲ್ ಫೋನ್ ವಾರಂಟಿ ಕಾಲಮಿತಿಯೊಳಗೆ ಇಲ್ಲ ಎಂಬ ಕಾರಣಕ್ಕಾಗಿ ಉಚಿತ ರಿಪೇರಿಗೆ ಅವಕಾಶ ಇಲ್ಲ ಎಂದು ತಿಳಿಸಲಾಯಿತು. ಅದರೂ ಕೆಲವು ದಿನ ಅದನ್ನು ಇಟ್ಟುಕೊಂಡು, ಬಳಿಕ ಇದು ಸರಿಪಡಿಸಲಾಗದ ದೋಷ ಎಂದು ಮೊಬೈಲ್ ಹಿಂದಿರುಗಿಸಲಾಗಿತ್ತು. ಬಳಿಕ ನೇರವಾಗಿ ಆ್ಯಪಲ್ ಕಂಪೆನಿಗೆ ದೋಷಪೂರಿತ ಐಫೋನ್ ಬಗ್ಗೆ ಮೇಲಿಂದ ಮೇಲೆ ಈಮೇಲ್ ಗಳನ್ನು ಕಳಿಸಿದ್ದರೂ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಇರಲಿಲ್ಲ. ಹಾಗಾಗಿ ಸಂಪತ್ ಕುಮಾರ್ ಅವರು ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಬಂಟ್ವಾಳ ತಾಲೂಕು ಖಜಾನೆಯ ಇಬ್ಬರು ಅಧಿಕಾರಿಗಳು

ಆ್ಯಪಲ್ ಕಂಪೆನಿಯವರು ಹಾಜರಾಗಿ ಐಫೋನ್ ಖರೀದಿ ಮಾಡಿ ಒಂದು ವರ್ಷ ಕಳೆದುದರಿಂದ ಫೋನ್ ರಿಪೇರಿ ಸಾಧ್ಯವಿಲ್ಲ ಎಂದು ವಾದಿಸಿದ್ದರು.ದೂರುದಾರರ ಅಹವಾಲು ಮತ್ತು ಪ್ರತಿವಾದಿಗಳ ಪ್ರತಿರಕ್ಷೆಯನ್ನು ಪರಿಶೀಲಿಸಿ ಗ್ರಾಹಕ ನ್ಯಾಯಾಲಯವು ದೂರನ್ನು ಮಾನ್ಯ ಮಾಡಿದೆ.

ಮೂವರೂ ಎದುರುದಾರರು ಒಟ್ಟಾಗಿ ಆ್ಯಪಲ್ ಐಫೋನ್‌ನ ಬಾಬ್ತು 81,800 ರೂ. ಬಡ್ಡಿ ಸಮೇತ ದೂರುದಾರರಿಗೆ ಪಾವತಿಸುವಂತೆ ಮತ್ತು ದಾವೆ ಖರ್ಚು ಹಾಗೂ ಹತ್ತು ಸಾವಿರ ರೂ. ಪರಿಹಾರ ನೀಡ ಬೇಕೆಂದೂ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರವಾಗಿ ವಕೀಲ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.

DAKSHINA KANNADA

ಎಎನ್ಎಫ್‌ ವಿಸರ್ಜನೆ ಮಾಡಲಾಗಿಲ್ಲ : ಗೃಹ ಸಚಿವ ಪರಮೇಶ್ವರ್

Published

on

ಮಂಗಳೂರು : ಎಎನ್ಎಫ್‌ ವಿಸರ್ಜನೆ ಮಾಡಲಾಗಿಲ್ಲ. ಅದರಲ್ಲಿರುವ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ, ಜಿ. ಪರಮೇಶ್ವರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಲವು ಕೊ*ಲೆ ಪ್ರಕರಣಗಳಿದಾಗಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು  ಸರಿದಾರಿಗೆ ತಂದು ಶಾಂತಿ ಕಾಪಾಡುವ ಉದ್ದೇಶದಿಂದ ರಚಿಸಲಾಗಿರುವ ವಿಶೇಷ ಕಾರ್ಯಪಡೆಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಇದನ್ನೂ ಓದಿ : ಬಾಂ*ಬ್ ಬೆದರಿಕೆ; ದೆಹಲಿಗೆ ಬರುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್

ಸದ್ಯದ ಮಟ್ಟಿಗೆ ನಕ್ಸಲ್‌ ನಿಗ್ರಹ ದಳದ ಅಗತ್ಯತೆ ಇಲ್ಲದಿದ್ದರೂ ಯಾವುದಾದರೂ ಸಂದರ್ಭದಲ್ಲಿ ಅಗತ್ಯ ಬಂದರೆ ಬೇಕಾಗುತ್ತದೆ. ಈಗ  ನಮ್ಮ ರಾಜ್ಯದಲ್ಲಿ ನಕ್ಸಲರು ಇಲ್ಲದಿದ್ದರೂ ಒರಿಸ್ಸಾ, ಅಸ್ಸಾಂ ಮೊದಲಾದ ಕಡೆ ನಕ್ಸಲ್‌ ಚಟುವಟಿಕೆ ಇದೆ. ಅಲ್ಲಿಂದ ಇಲ್ಲಿಗೆ ಬರಲಾರರು ಎನ್ನಲಾಗದು. ಅವರು ಬಂದರೆ ತಯಾರಿರಬೇಕೆಂದು ನಕ್ಸಲ್‌ ನಿಗ್ರಹ ಪಡೆಯ ಸ್ವಲ್ಪ ಭಾಗವನ್ನು ಉಳಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Continue Reading

DAKSHINA KANNADA

ಕಾಸರಗೋಡು: ಗೆಳೆಯನಿಂದಲೇ ನಡೆಯಿತು ವ್ಯಕ್ತಿಯ ಕೊಲೆ

Published

on

ಕಾಸರಗೋಡಿನ ಅಡೂರು ಚಂದನಕ್ಕಾಡ್ ನಲ್ಲಿರುವ ದೈವ ಕಲಾವಿದ, ಸತೀಶ್ (48) ಎಂಬವರ ನಿಗೂಢ ಸಾವು ಕೊಲೆ ಎಂದು ಸಾಬೀತಾಗಿದೆ. ಗೆಳೆಯನೇ ಈತನನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಚಿದಾನಂದ ಪೊಲೀಸ್ ವಶದಲ್ಲಿರುವ ಆರೋಪಿ. ಸತೀಶ್ ಮಂಗಳವಾರ ಸಂಜೆ ನೆರೆಮನೆಯ ಬಳಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಆಂತರಿಕ ಗಾಯಗಳು ಪತ್ತೆಯಾಗಿತ್ತು. ಕುತ್ತಿಗೆಯ ಎಲುಬು ಮುರಿದಿರುವುದು ಕಂಡುಬಂದಿತ್ತು. ತನಿಖೆ ನಡೆಸಿ ಚಿದಾನಂದ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂದಿಸಲಾಗಿದೆ.

ಏನಿದು ಘಟನೆ ?

ಸೋಮವಾರ ಮಧ್ಯಾಹ್ನ ಸತೀಶ್ ಹಾಗೂ ಚಿದಾನಂದ ಸಮೀಪದ ಚೋಮಣ್ಣ ನಾಯ್ಕ್ ಮನೆಯೊಂದರಲ್ಲಿ ಒಟ್ಟಿಗೆ ಸೇರಿದ್ದು, ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಈ ಸಂದರ್ಭದಲ್ಲಿ ತಳ್ಳಾಟ ನಡೆದಿದ್ದು, ನೆಲಕ್ಕೆ ಬಿದ್ದ ಸತೀಶ್ ರನ್ನು ಚೋಮಣ್ಣ ನಾಯ್ಕ್ ರ ಮನೆಯ ವರಾಂಡದಲ್ಲಿ ಮಲಗಿಸಿ ಪರಾರಿಯಾಗಿದ್ದನು ಎನ್ನಲಾಗಿದೆ.

READ IN ENGLISH : https://www.nammakudlaenglish.com/kasargod-man-murdered-by-his-own-friend/

ಇದನ್ನೂ ಓದಿ: ವಿಮಾನ ಅಪಘಾತದ ಸ್ಥಳಕ್ಕೆ ಪ್ರಧಾನಿ ಭೇಟಿ; ಗಾಯಾಳುಗಳನ್ನು ಸಂತೈಸಿದ ಮೋದಿ

ಸತೀಶ್ ಮನೆಗೆ ಬಾರದೆ ಇದ್ದುದರಿಂದ ಸಹೋದರಿ ಮೊಬೈಲ್ ಗೆ ಕರೆ ಮಾಡಿದರೂ ರಿಸೀವ್ ಮಾಡದೆ ಇದ್ದುದರಿಂದ ಶೋಧ ನಡೆಸಿದಾಗ ಸಮೀಪದ ಮನೆಯೊಂದರ ವರಾಂಡದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಸತೀಶ್ ನ ಅಂತ್ಯಕ್ರಿಯೆ ಯಲ್ಲಿ ಚಿದಾನಂದ ಪಾಲ್ಗೊಳ್ಳದಿರುವುದು ಈತನ ಮೇಲೆ ಸಂಶಯ ಬರಲು ಕಾರಣವಾಗಿತ್ತು.

Continue Reading

DAKSHINA KANNADA

ಮಂಗಳೂರು : ವಿಶೇಷ ಕಾರ್ಯಪಡೆ ಘಟಕ ಉದ್ಘಾಟನೆ

Published

on

ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಕೋ*ಮು ಸಂ*ಘರ್ಷ ನಿಗ್ರಹಕ್ಕಾಗಿ ರಾಜ್ಯ ಸರಕಾರ ರಚಿಸಿರುವ ವಿಶೇಷ ಕಾರ್ಯಪಡೆ ಘಟಕವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಬಳಿಯ ಗೆಸ್ಟ್ ಹೌಸ್ ಕಟ್ಟಡದಲ್ಲಿ ವಿಶೇಷ ಕಾರ್ಯಪಡೆ  ಕಚೇರಿ ಕಾರ್ಯಾಚರಣೆ ನಡೆಸಲಿದೆ.

READ IN ENGLISH : https://www.nammakudlaenglish.com/mangaluru-special-task-force-unit-inaugurated/

ಇದನ್ನೂ ಓದಿ : ಉಳ್ಳಾಲ: 12ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವು

ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ್ ಭಂಡಾರಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಎ.ಸಲೀಂ, ಅಪರ ಪೊಲೀಸ್ ಮಹಾ ನಿರ್ದೇಶಕ ಎಸ್.ಮುರುಗನ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿಶೇಷ ಕಾರ್ಯಪಡೆ  ಘಟಕದ ಡಿಐಜಿಪಿ ಆಗಿರುವ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page