Connect with us

DAKSHINA KANNADA

ಸಾರಾ ಅಬೂಬಕ್ಕರ್ ಗೆ ಅಂತಿಮ ಗೌರವ ಸಲ್ಲಿಸದೆ ಅಸಹಿಷ್ಣುತೆ ತೋರಲಾಗಿದೆ : ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳ‌ ನಡೆಗೆ ಗಣ್ಯರ ಖಂಡನೆ..!

Published

on

ಮಂಗಳೂರು :  ಕನ್ನಡದ ಪ್ರಖ್ಯಾತ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರು ನಿಧನ ಹೊಂದಿದ ಸಂದರ್ಭ ಸರಿಯಾದ ಗೌರವ ಸಲ್ಲಿಸದೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕಡೆಗಣಿಸಿರುವುದ ಖೇದಕರ. ಸರಕಾರದ  ನಡೆಯ‌ನ್ನು ಸಾಹಿತಿ, ಬುದ್ದಿ ಜೀವಿಗಳ ಕರಾವಳಿಯ ಸಮಾನ ಮನಸ್ಕರು ತೀವ್ರವಾಗಿ ಖಂಡಿಸಿದ್ದಾರೆ.

ಬಿ.ಎಂ.ರೋಹಿಣಿ, ಪ್ರೊ.ನರೇಂದ್ರ ನಾಯಕ್, ಟಿ.ಆರ್.ಭಟ್, ಚಂದ್ರಕಲಾ ನಂದಾವರ, ಪ್ರೊ. ಚಂದ್ರ ಪೂಜಾರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಎಂ.ದೇವದಾಸ್, ಬಿ.ಎಂ.ಹನೀಫ್, ವಾಸುದೇವ ಉಚ್ಚಿಲ, ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಗುಲಾಬಿ ಬಿಳಿಮಲೆ, ಪ್ರೊ.ಕೆ.ರಾಜೇಂದ್ರ ಉಡುಪ, ಮೋಹನ್ ಪಿ. ವಿ., ಐ.ಕೆ.ಬೊಳುವಾರು, ಯಶವಂತ ಮರೋಳಿ, ಮುನೀರ್ ಕಾಟಿಪಳ್ಳ, ಡಾ.ಕೃಷ್ಣಪ್ಪ ಕೊಂಚಾಡಿ, ಶ್ರೀನಿವಾಸ ಕಾರ್ಕಳ ಮತ್ತಿರರು ಒಳಗೊಂಡ ಜಂಟಿ ಹೇಳಿಕೆಯಲ್ಲಿ

ಸಾರಾ ಅಬೂಬಕ್ಕರ್ ಪ್ರಖ್ಯಾತ ಕತೆಗಾರರು, ಬರಹಗಾರರು ಎಂಬಲ್ಲಿಗೆ ಅವರ ಪ್ರಾಮುಖ್ಯತೆ ಮುಗಿಯುವುದಿಲ್ಲ.

ಕ‌ರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸುವುದೇ ಅಪರೂಪವಾಗಿದ್ದ ಕಾಲಘಟ್ಟದಲ್ಲಿ ಆ ಸಮುದಾಯದ ಹೆಣ್ಣು ಮಗಳು ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದದ್ದು, ಸಮಾಜದ ಕಂದಾಚಾರ, ತನ್ನದೇ ಸಮುದಾಯದ ಹೆಣ್ಣು ಮಕ್ಕಳ ಸಂಕಟಗಳನ್ನು ಕತೆಯಾಗಿಸಿದ್ದು ಸಣ್ಣ ಸಾಧನೆಯೇನೂ ಅಲ್ಲ.

ಅಂತಹ ಬರವಣಿಗೆಗಳ ಕಾರಣಕ್ಕೆ ಅವರು ಎದುರಿಸಿದ ದಾಳಿ, ದಬ್ಬಾಳಿಕೆಗಳೂ ಸಣ್ಣದಲ್ಲ. ಬರವಣಿಗೆಯ ಜೊತೆಗೆ ಮಹಿಳಾಪರ ಹೋರಾಟಗಳಲ್ಲಿಯೂ ತೊಡಗಿಸಿಕೊಂಡ ಹೆಗ್ಗಳಿಕೆ ಸಾರಾ ಅವರದ್ದು.

ಅವರ ಕತೆ, ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದು ಮಾತ್ರವಲ್ಲ, ಕ‌ನ್ನಡದ ಹಿರಿಮೆಯನ್ನು ಹೊರನಾಡಿನಲ್ಲಿಯೂ ಎತ್ತಿ ಹಿಡಿದಿದೆ.

ತನ್ನ ಸಾಧನೆಗಾಗಿ ಅವರು ಅರ್ಹವಾಗಿಯೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಇಂತಹ ಗಣ್ಯ ಬರಹಗಾರ್ತಿ, ಲೇಖಕಿ ಅಗಲಿದ ಸಂದರ್ಭ ಸಹಜವಾಗಿಯೇ ಅವರಿಗೆ ಸರಕಾರಿ ಗೌರವಗಳು ಸಲ್ಲಬೇಕಿತ್ತು.

ಆದರೆ ಸರಕಾರದ ಯಾವುದೇ ಅಂತಿಮ ಗೌರವಗಳು ಅವರಿಗೆ ಸಲ್ಲಲಿಲ್ಲ. ಸರಕಾರದ, ಜಿಲ್ಲಾಡಳಿತದ ಪ್ರತಿನಿಧಿಗಳು ಅಧಿಕೃತ ಗೌರವ ಸಲ್ಲಿಸಲಿಲ್ಲ.

ಉಸ್ತುವಾರಿ ಸಚಿವರು, ಶಾಸಕರುಗಳು ನಗರದಲ್ಲೇ ಇದ್ದರೂ ಸಾರಾ ಅಬೂಬಕ್ಕರ್ ಅವರ ಅಂತಿಮ ದರ್ಶನ ಪಡೆಯಲಿಲ್ಲ.

ಇದು ನಮಗೆಲ್ಲಾ ಅಪಾರ ನೋವು ತಂದಿದೆ. ಈ ಕಡೆಗಣನೆ ಆಕಸ್ಮಿಕ ಆಗಿರಲಾರದು ಎಂಬುದು ನಮ್ಮ ಅಂದಾಜು.

ಇದು ಸರಕಾರ ಪ್ರಗತಿಪರ, ಜಾತ್ಯಾತೀತ ವಿಚಾರಗಳು, ಸಾಹಿತಿ, ಬುದ್ದಿಜೀವಿಗಳ ಕುರಿತು ಇತ್ತೀಚೆಗೆ ಹೊಂದಿರುವ ಅಸಹಿಷ್ಣು ಧೋರಣೆಗಳು, ಕೋಮುವಾದಿ ದೃಷ್ಟಿಕೋನದ ಭಾಗವಾದ ನಿಲುವೇ ಆಗಿದೆ ಎಂಬಂತೆ ತೋರುತ್ತದೆ.

ಸರಕಾರ, ಜಿಲ್ಲಾಡಳಿತ, ಜ‌ನಪ್ರತಿನಿಧಿಗಳ ಈ ಧೋರಣೆ ಆಘಾತಕಾರಿಯಾಗಿದ್ದು, ಕ‌ನ್ನಡನಾಡಿನ ವಿಶಾಲ, ಉದಾರ ಪ್ರಜ್ಞೆಗೆ ವಿರುದ್ದವಾಗಿದೆ, ನಾವಿದ‌‌ನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

DAKSHINA KANNADA

ನಾಳೆಯಿಂದ ಎಸ್.ಎಸ್. ಎಲ್‌.ಸಿ. ಪರೀಕ್ಷೆ ಆರಂಭ; ಬಾಲಕರಿಗೂ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ

Published

on

ಮಂಗಳೂರು : ಈ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯು ನಾಳೆ ಮಾರ್ಚ್ 21 ರಂದು ಆರಂಭವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 92 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 29760 ಮಂದಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಒಟ್ಟು 2057 ಸಿಬಂದಿಯನ್ನು ನಿಯೋಜಿಸಲಾಗಿದೆ. ಶಾಲೆಗಳ ಮೂಲಕ 14,735 ಬಾಲಕರು ಮತ್ತು 13,711 ಬಾಲಕಿಯರು ಸೇರಿದಂತೆ ಒಟ್ಟು 28,446 ವಿದ್ಯಾರ್ಥಿಗಳು ನೊಂದಾಯಿಸಿದ್ದಾರೆ.

ಈ ಪೈಕಿ 8892 ಸರಕಾರಿ ಶಾಲೆಗಳ ವಿದ್ಯಾರ್ಥಿಗಳು, 7864 ಅನುದಾನಿತ ಹಾಗೂ 11690 ಮಂದಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಾಗಿರುತ್ತಾರೆ. ಖಾಸಗಿಯಾಗಿ ಮೊದಲ ಬಾರಿ ಪರೀಕ್ಷೆ ಬರೆಯಲು 579 ಹುಡುಗರು ಮತ್ತು 252 ಹುಡುಗಿಯರ ಸಹಿತ 831 ವಿದ್ಯಾರ್ಥಿಗಳು ನೊಂದಾಯಿಸಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳು 259 ಮಂದಿ ಇದ್ದು,  211 ಬಾಲಕರು ಮತ್ತು 48 ಬಾಲಕಿಯರು ಇದ್ದಾರೆ. ಖಾಸಗಿಯಾಗಿ ಪುನರಾವರ್ತಿತ ವಿದ್ಯಾರ್ಥಿಗಳು 217 ಮಂದಿ ಇದ್ದು, ಇದರಲ್ಲಿ 179 ಹುಡುಗರು ಮತ್ತು 38 ಹುಡುಗಿಯರು ಆಗಿರುತ್ತಾರೆ.

1332 ಪರೀಕ್ಷಾ ಕೊಠಡಿಗಳು, 1678 ಸಿಸಿ ಕ್ಯಾಮರಾ ಆಳವಡಿಸಲಾಗಿದೆ. 184 ಪೊಲೀಸ್‌ ಸಿಬಂದಿ ನಿಯೋಜನೆ ಮಾಡಲಾಗಿದ್ದು, ಪರೀಕ್ಷಾ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಸಾಗಾಟಕ್ಕಾಗಿ 34 ಗಸ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಬಾಲಕರಿಗೂ ಕೆಎಸ್ಆರ್‌ಟಿಸಿ ಬಸ್‌ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಲ್ ಟಿಕೆಟ್‌ ತೋರಿಸಿ ಪ್ರಯಾಣಿಸ ಬಹುದಾಗಿದೆ.

Continue Reading

DAKSHINA KANNADA

ನಿರೂಪಕ ಸಾಯಿಹೀಲ್ ರೈಗೆ ಪಿತೃ ವಿಯೋಗ

Published

on

ಮಂಗಳೂರು : ನಿರೂಪಕ ಸಾಯಿಹೀಲ್ ರೈ ಅವರ ತಂದೆ, ಉದ್ಯಮಿ, ಸಾಯಿ ಭಕ್ತ ಬೋಳಾರ ಮಂಗಳಾದೇವಿ ನಿವಾಸಿ ಬೆಳ್ಳಿಪ್ಪಾಡಿ ಸತೀಶ್ ರೈ ಅಗರಿ (66) ಅವರು ಇಂದು(ಮಾ.20) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಪತ್ನಿ ಶೋಭಾ ರೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಬಿ. ಸಿ. ರೋಡ್, ಸಜೀಪ – ನಾಲ್ ಕೈ ತ್ತಾಯ ದೈವಸ್ಥಾನದ ಸಮೀಪ ಇರುವ “ಅಗರಿ ಮನೆ”  ಯಲ್ಲಿ ಸಂಜೆ 4.30 ರಿಂದ 7 ನಡೆಯಲಿದೆ.

 

Continue Reading

DAKSHINA KANNADA

ಸುಳ್ಯ : ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ; ಕಾರಣ ನಿಗೂಢ

Published

on

ಸುಳ್ಯ : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಾರಣಗಳು ನಿಖರವಾಗಿರುವುದಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ.

ಸುಳ್ಯದ ನಲ್ಲೂರು ಕಮ್ರಾಜೆಯ ಪೊಲ್ಲಾಜೆ ಎಂಬಲ್ಲಿ, ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ಮಹಿಳೆಯನ್ನು ರೇವತಿ (51) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page