Connect with us

DAKSHINA KANNADA

ಆಳ್ವಾಸ್‌ನಲ್ಲಿ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ಶಿಪ್ ಗೆ ಅದ್ಧೂರಿ ಚಾಲನೆ

Published

on

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಸ್ವರಾಜ್ ಮೈದಾನದಲ್ಲಿ ಆರಂಭಗೊಂಡಿರುವ 81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಗೆ ಚಾಲನೆ ನೀಡಲಾಯಿತು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ, ತಮ್ಮ ಅಧಿಕಾರಾವಧಿಯಲ್ಲಿ ಇಂಥದೊಂದು ದೊಡ್ಡ ಪ್ರಮಾಣದ ಕ್ರೀಡಾ ಕಾರ್ಯಕ್ರಮ ಮೊದಲ ಬಾರಿಗೆ ವೀಕ್ಷಿಸುತ್ತಿರುವುದು ಖುಷಿ ತಂದುಕೊಟ್ಟಿದೆ.

ಕ್ರೀಡಾ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ಸರ್ಕಾರ ಮುಂಚೂಣಿಯಲ್ಲಿದೆ.

ರಾಜ್ಯಾದ್ಯಂತ 75 ಕ್ರೀಡಾರ್ಥಿಗಳನ್ನು ದತ್ತು ಪಡೆದು ತರಬೇತಿ ನೀಡಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಜ್ಜುಗೊಳಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರದಿಂದ 5 ಲಕ್ಷ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಒಲಿಂಪಿಯನ್ ಎಂ. ಆರ್ ಪೂವಮ್ಮ ಅವರನ್ನು ಸನ್ಮಾನಿಸಲಾಯಿತು. ಮೊದಲ ದಿನದ ಕ್ರೀಡಾಕೂಟದ 10,000ಮೀ ಓಟದ ವಿಜೇತರನ್ನು ಅಭಿನಂದಿಸಲಾಯಿತು.

ಮಂಗಳೂರು ವಿವಿ ಉಪಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಜಂಟಿ ಕಾರ್ಯದರ್ಶಿ ಡಾ ಬಲ್ಜೀತ್ ಸಿಂಗ್ ಸೋಖನ್ ಧ್ವಜಾರೋಹಣ ನೆರವೇರಿಸಿದರು.

ಬಿಜೆಪಿ ರಾಜ್ಯಾಧ್ಯಾಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ ಸುನಿಲ್ ಕುಮಾರ್, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಉಮಾನಾಥ್ ಕೋಟ್ಯಾನ್, ಸಮಾಜ ಕಲ್ಯಾಣ ಇಲಾಖಾ ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಮಾಜಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್,

ವಿಶೇಷ ಆಹ್ವಾನಿತರಾಗಿ ಅಸೋಸಿಯೇಷನ್ ಆಫ್ಇಂಡಿಯನ್ ಯೂನಿವರ್ಸಿಟಿಯ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಬಿನು ಜಾರ್ಜ್ ವರ್ಗೀಸ್, ಅದಾನಿ ಗ್ರೂಪ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಉದ್ಯಮಿ ರವೀಂದ್ರ ಆಳ್ವ, ಶಶಿಧರ್ ಶೆಟ್ಟಿ, ಎಂಸಿಸಿ ಬ್ಯಾಂಕ್ ಸಿಇಒ ಚಂದ್ರಶೇಖರ್ ಎಂ., ಕಾರ್ಡೊಲೈಟ್ ಜನರಲ್ ಮ್ಯಾನೇಜರ್ ದಿವಾಕರ್ ಕದ್ರಿ, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿದ್ದರು.

ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ
5ನೇ ಬಾರಿಗೆ ಆಳ್ವಾಸ್ ಅತಿಥ್ಯದಲ್ಲಿ ಜರಗುತ್ತಿರುವ ಕ್ರೀಡಾಕೂಟದ ಉದ್ಘಾಟನೆಯ ಪ್ರಯುಕ್ತ, ಸಂಜೆ ಸ್ವರಾಜ್ ಮೈದಾನದ ಸಿಂಥೆಟಿಕ್ ಟ್ರಾಕ್ ನಲ್ಲಿ ದೇಶದಾದ್ಯಂತ ವಿವಿಧ 248 ವಿಶ್ವವಿದ್ಯಾನಿಲಯಗಳ ಅಥ್ಲೀಟ್ ಗಳು ಆಕರ್ಷಕ ಪಥಸಂಚಲನ ನೆರವೇರಿಸಿದರು.

ಪಥಸಂಚಲನದ ಬಳಿಕ ಅದ್ಧೂರಿಯಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ, ರಾಷ್ಟ್ರದ ವಿವಿಧ ಕಲೆ-ಸಂಸ್ಕೃತಿಗಳನ್ನು  ಬಿಂಬಿಸುವ 150ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದವು. ಮೆರವಣಿಗೆಯ ಮೆರುಗು ಹೆಚ್ಚಿಸಲು ಸುಡುಮದ್ದಿನ ಪ್ರದರ್ಶನವೂ ವಿಶೇಷವಾಗಿತ್ತು.

10,000ಮೀ ಓಟದಲ್ಲಿ ಕೂಟ ದಾಖಲೆ ಬರೆದ ಆಳ್ವಾಸ್‍ನ ಅದೇಶ್
1. ಅದೇಶ್ – ಮಂಗಳೂರು ವಿಶ್ವವಿದ್ಯಾನಿಲಯ (ಕಾಲ: 29ನಿ 15.46ಸೆ) – ನೂತನ ಕೂಟ ದಾಖಲೆ – ( ಆಳ್ವಾಸ್ ಕಾಲೇಜು)
2. ಆರಿಫ್ ಆಲಿ – ಜನನಾಯಕ್ ಚಂದ್ರಶೇಖರ್ ವಿಶ್ವವಿದ್ಯಾನಿಲಯ (ಕಾಲ: 29ನಿ 18.82ಸೆ) – ಬಿಎಮ್‍ಆರ್
3. ರಾಮ್ ವಿನೋದ್ ಯಾದವ್ – ವಿ.ಬಿ.ಎಸ್.ಪಿ.ಯು ಜೌನ್‍ಪುರ್ (ಕಾಲ: 29ನಿ 45ಸೆ) – ಬಿಎಮ್‍ಆರ್

 10,000ಮೀ ಓಟದಲ್ಲಿ ಆಳ್ವಾಸ್‍ನ ಅದೇಶ್ ಯಾದವ್ ಈ ಹಿಂದೆ 2021ರಲ್ಲಿ ನಡೆದ 80ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ವಿದ್ಯಾರ್ಥಿ ನರೇಂದ್ರ ಪ್ರತಾಪ್ ಸಿಂಗ್ (ಕಾಲ: 29ನಿ 42.19ಸೆ) ಅವರ ದಾಖಲೆಯನ್ನು ಮುರಿದು ಅಂತರ್ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.

 

ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಆರಿಫ್ ಹಾಗೂ ರಾಮ್ ವಿನೋದ್ ಕೂಡ ಹಿಂದಿನ ದಾಖಲೆಯನ್ನು ಉತ್ತಮಪಡಿಸಿರುವುದು ವಿಶೇಷವಾಗಿದೆ.

 ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ನೂತನ ಕೂಟ ದಾಖಲೆ ನಿರ್ಮಿಸಿದ ಅದೇಶ್ ಅವರಿಗೆ 25,000 ಹಾಗೂ ಚಿನ್ನದ ಪದಕದ ಸಾಧನೆಗೆ 25,000ರೂ ನೀಡಲಾಗಿದೆ.

DAKSHINA KANNADA

ಪ್ರಿಯಾಂಕ್ ಖರ್ಗೆ ಅವರಿಗೆ ಸರ್ವಜ್ಙ ಸಿಂಡ್ರೋಮ್ ಇದೆ: ಶಾಸಕ ಭರತ್ ಶೆಟ್ಟಿ

Published

on

ಮಂಗಳೂರು: ಗೃಹಸಚಿವರು ಮಂಗಳೂರನ್ನು ಉಡ್ತಾ ಪಂಜಾಬ್ ಆಗ್ಲಿಕ್ಕೆ ಬಿಡೋದಿಲ್ಲ ಎಂಬುವುದಾಗಿ ಹೇಳಿಕೆ ನೀಡಿದ್ದರು. ವಿಧಾನಸಭೆಯಲ್ಲಿ ಪ್ರತೀ ಬಾರಿ ನಮ್ಮ ಕೋರಿಕೆ ಇದ್ದದ್ದು ಕೂಡಾ ಅದೇ. ಜಿಲ್ಲೆಯಲ್ಲಿ ಡ್ರಗ್ಸ್ ಪೂರೈಕೆಗೆ ಕಡಿವಾಣ ಹಾಕಬೇಕು ಅಂತ. ಪೊಲೀಸರು ಡ್ರಗ್ಸ್ ಸೀಜ್ ಮಾಡ್ತಾರೆ. ಆರೋಪಿಗಳನ್ನು ಅರೆಸ್ಟ್ ಮಾಡ್ತೀರಿ. ಆದರೆ 6 ತಿಂಗಳ ಬಳಿಕ ಮತ್ತೆ ಸೀಜ್ ಬಗ್ಗೆ ಸುದ್ದಿ ಇರೋದಿಲ್ಲ. ಡ್ರಗ್ಸ್ ಸಪ್ಲೈ ನಿರಂತರವಾಗಿ ಆಗ್ತಾನೇ ಇದೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ವಾಗ್ದಾಳಿಯನ್ನು ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗೆದ್ದ ಕೂಡಲೇ ಬಿಜೆಪಿಗರಿಗೆ, ಆರೆಸ್ಸೆಸ್ ನವರಿಗೆ ಬೈಯ್ಯೋದನ್ನು ಪ್ರಿಯಾಂಕ್ ಖರ್ಗೆ ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಅವರಿಗೆ ಸ್ವಲ್ಪ ಸರ್ವಜ್ಞ ಸಿಂಡ್ರೋಮ್ ಇದೆ. ಅಂದ್ರೆ ಎಲ್ಲಾ ತಿಳಿದವರು ಅನ್ನೋ ಭಾವನೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಲಿಂಗರಾಜು ಕಣ್ಣಿ ಅವರನ್ನು ಡ್ರಗ್ಸ್ ವ್ಯವಹಾರದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಡ್ರಗ್ಸ್ ಕೇಸನ್ನು ಡೈವರ್ಟ್ ಮಾಡಲು ಕಾಂಗ್ರೆಸ್ ಸರ್ಕಾರದಿಂದ ವಿವಿಧ ರೀತಿಯ ಪ್ರಯತ್ನ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಸಾಧ್ಯವಾದರೆ ತನಿಖೆಗೆ ಸಹಕರಿಸಲಿ ಇಲ್ಲವಾದಲ್ಲಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಪ್ರಕರಣದ ಹಿಂದೆ ಸ್ಥಾಪಿತ ಹಿತಾಸಕ್ತಿಗಳು, ದೊಡ್ಡವರ ಕೈವಾಡವಿದೆ. ಪ್ರಕರಣವನ್ನು ಸರಕಾರ ಲಘುವಾಗಿ ಪರಿಗಣಿಸಿದೆ. ಇಷ್ಟು ದೊಡ್ಡ ಪ್ರಕರಣವನ್ನು ವಿಷಯಾಂತರ ಮಾಡಲು ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಪ್ರಕರಣವೊಂದರಲ್ಲಿ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಿದರು. ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡ ವಿಕಾಸ್ ಪುತ್ತೂರು, ಜಿಲ್ಲಾ ವಕ್ತಾರ ರಾಜಗೋಪಾಲ ರೈ, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಉಪಸ್ಥಿತರಿದ್ದರು.

Continue Reading

DAKSHINA KANNADA

ಉಪ್ಪಿನಂಗಡಿ: ಪತ್ನಿಯನ್ನು ಚೂ*ರಿಯಿಂದ ಇ*ರಿದು ಕೊಂ*ದ ಪತಿ

Published

on

ಉಪ್ಪಿನಂಗಡಿ: ಮಗ ಮತ್ತು ಮಗಳ ಮುಂದೆಯೇ ಪತ್ನಿಯ ಎದೆಗೆ ಚಾಕುವಿನಿಂದ ಇ*ರಿದು ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ನಡೆದಿದೆ. ಝೀನತ್ (40) ಕೊಲೆಗೀಡಾದ ಮಹಿಳೆಯಾಗಿದ್ದು ಪತಿ ರಫೀಕ್ (47) ಹತ್ಯೆಯ ಆರೋಪಿಯಾಗಿದ್ದಾನೆ.


ರಫೀಕ್‌ ಮತ್ತು ಝೀನತ್ ಅವರ ಮದುವೆ 18 ವರ್ಷದ ಹಿಂದೆ ನೆರವೇರಿತ್ತು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ರಫೀಕ್ ಎರಡು ವರ್ಷಗಳ ಹಿಂದೆ ಅಲ್ಲಿನ ಉದ್ಯೋಗ ತ್ಯಜಿಸಿ ಊರಿಗೆ ಬಂದು ತೆಕ್ಕಾರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯ ಮಧ್ಯೆ ಕಳೆದ ಕೆಲವು ತಿಂಗಳಿಂದ ಮನಸ್ತಾಪ ಉಂಟಾಗಿತ್ತು. ಇಂದು ಬೆಳಗ್ಗೆ ಇಬ್ಬರ ಮಧ್ಯೆ ನಡೆದ ಜಗಳ ವಿಕೋಪಕ್ಕೆ ಹೋಗಿ ರಫೀಕ್‌ ಪತ್ನಿ ಝೀನತ್‌ ಳನ್ನು ಚಾಕುವಿನಿಂದ ಇರಿದಿದ್ದಾನೆ.

ಇದನ್ನೂ ಓದಿ: ಮಂಗಳೂರು: ಹೃದಯಾಘಾತದಿಂದ ಯುವಕ ಸಾವು

ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಝೀನತ್‌ ಳನ್ನು ಸ್ಥಳೀಯರು ಮತ್ತು ಸಂಬಂಧಿಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಝೀನತ್‌ ಮೃ*ತ ಪಟ್ಟಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮಂಗಳೂರು: ಹೃದಯಾಘಾತದಿಂದ ಯುವಕ ಸಾವು

Published

on

ಮಂಗಳೂರು: ಟಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಉಳ್ಳಾಲದ ಪಂಡಿತ್ ಹೌಸ್ ನಿವಾಸಿಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರು ಪದವಿನಂಗಡಿ ಅಜ್ಜನಕಟ್ಟೆ ಸಮೀಪದ ಟಯರ್ ಅಂಗಡಿಯಲ್ಲಿ ನಡೆದಿದೆ.

ವಿಜೇತ ನಗರ ಗಂಡಿ ನಿವಾಸಿ ವೇಣುಗೋಪಾಲ ಅವರು ಮೃತಪಟ್ಟ ಅವಿವಾಹಿತರಾಗಿದ್ದಾರೆ.

ಇದನ್ನೂ ಓದಿ: ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಏಕಾಏಕಿ ಬೆಂಕಿ – 50 ಮಂದಿ ಸಾವು

ಇವರು ಹಲವು ವರ್ಷಗಳಿಂದ ಟಯರ್ ಅಂಗಡಿಯಲ್ಲಿ ಟೆಕ್ನಿಷಿಯನ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಇವರು ತಾಯಿ, ಸೋದರಿ ಮತ್ತು ಸಹೋದರನನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page