Connect with us

DAKSHINA KANNADA

ತುಳುನಾಡಿನ ಧ್ವಜ ಚಪ್ಪಲಿಗೆ ಹೋಲಿಕೆ : ಫೇಸ್ ಬುಕ್ ನಲ್ಲಿ ಕಮೆಂಟ್ ಹಾಕಿ ತುಳುವರ ಭಾವನೆಗೆ ಧಕ್ಕೆ..

Published

on

ಮಂಗಳೂರು : ಆನ್ ಲೈನ್ ಖರೀದಿಯ ಜಾಲತಾಣಗಳಾದ ಗೂಗಲ್ ಮತ್ತು ಅಮೆಜಾನ್ ವಿರುದ್ಧ ಸದ್ಯ ಆಕ್ರೋಷದ ಕಟ್ಟೆ ಒಡೆದಿದೆ.  ಇತ್ತೀಚಿಗೆ ಈ ಎರಡು ಆನ್ ಲೈನ್ ಸೈಟ್ ಗಳು ಕನ್ನಡ ಭಾಷೆಗೆ  ಅವಮಾನಿಸಿ ಕನ್ನಡಿಗರ ಕೋಪಕ್ಕೆ ಗುರಿಯಾಗಿತ್ತು.

ಇದೀಗ ಫೇಸ್ ಬುಕ್ ನಲ್ಲಿ ಸೂರ್ಯ ಎಂಬಾತ ತುಳು ನಾಡಿನ ಧ್ವಜವನ್ನ ಚಪ್ಪಲಿಗೆ ಹೋಲಿಕೆ ಮಾಡಿ ಅಖಂಡ ತುಳುನಾಡಿನ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಇವತ್ತು ತುಳುನಾಡು ಚಪ್ಪಲಿ ಬಂದಿದೆ ತೆಗೆದುಕೊಳ್ಳಿ, ನಾಳೆ ತುಳುನಾಡ ಬಿಕಿನಿಯ ಫೋಟೋ ಕೂಡ ಬರಬಹುದು ಎಂದು ಅಸಹ್ಯಕಾರಿಯಾಗಿ ಕಮೆಂಟನ್ನ ಹಾಕಿದ್ದಾನೆ. ನೆಲ,ಜಲ, ಭಾಷೆಯ ವಿಚಾರದಲ್ಲಿ ತುಳುವರು ಎಂದಿಗೂ ರಾಜಿಯನ್ನ ಮಾಡಿಕೊಂಡವರಲ್ಲ,

ಬೇರೆ ರಾಜ್ಯದವರು ತುಳುನಾಡಿಗೆ ಬಂದು ವಿದ್ಯಾಭ್ಯಾಸ, ಉದ್ಯೋಗ ಎಂಬೆಲ್ಲಾ ಕಾರಣ ಕೊಟ್ಟು ಇಲ್ಲೇ ಬದುಕನ್ನ ಕಟ್ಟಿಕೊಂಡಾಗಲೂ ತುಳುವರು  ವಿರೋಧವನ್ನು ಮಾಡಿದವರಲ್ಲ.

ಎಲ್ಲರ ಆಚಾರ ವಿಚಾರಗಳಿಗೂ ಗೌರವ ಕೊಟ್ಟು, ಎಲ್ಲರನ್ನ ಆದರದಿಂದ ನೋಡುವಂತ,ಸಾಮರಸ್ಯಕ್ಕೆ ಹೆಚ್ಚು ಒತ್ತು ಕೊಡುವಂತಹ , ತುಳುವರ ಸಂಸ್ಕೃತಿಗೆ ಇಂದು ಪೆಟ್ಟು ಬಿದ್ದಿದೆ.

ತುಳು ನಾಡ ಧ್ವಜಕ್ಕೆ ಅತ್ಯಂತ ಕೀಲಾಗಿ ಅವಮಾನವನ್ನು ಮಾಡಲಾಗಿದೆ. ಈ ಒಂದು ಬೆಳವಣಿಗೆ ಶಾಂತಿಪ್ರಿಯರಾದ ಕರಾವಳಿಗರ ನೆತ್ತರು ಕುದಿವಂತೆ ಮಾಡಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯನ್ನ ಉಂಟು ಮಾಡಿದೆ.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡ್ಬೇಕು ಎಂಬ ಕೂಗು ಕೇಳಿ ಬರ್ತಾ ಇದ್ದು, ತುಳು ಟ್ರೋಲ್ ಪೇಜ್ ಗಳಲ್ಲೂ ಈ ಬಗ್ಗೆ ವ್ಯಾಪಕ ಆಕ್ರೋಶ ಹೆಚ್ಚಾಗಿದೆ.

BELTHANGADY

ಇಂದಿನಿಂದ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

 

ಜಮಲಾಬಾದ್ ಗಡ (ಗಡಾಯಿಕಲ್ಲು), ಬಂಡಾಜೆ, ಬೊಳ್ಳೆ, ದಿಡುಪೆ ಜಲಪಾತ ಪ್ರವಾಸಿ ತಾಣಗಳಿಗೆ ಜೂ.16ರಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

READ IN ENGLISH : https://www.nammakudlaenglish.com/entry-to-tourist-spots-in-belthangady-banned-from-today/

ಇದನ್ನೂ ಓದಿ: ಉಡುಪಿ: ಮಲಗಿದ್ದಾತನ ಮೇಲೆ ಕತ್ತಿಯಿಂದ ಹ*ಲ್ಲೆ ನಡೆಸಿದ ದುಷ್ಕರ್ಮಿ

Continue Reading

DAKSHINA KANNADA

ಸುರತ್ಕಲ್-ನಂತೂರು ಜಂಕ್ಷನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ನಿಗದಿ

Published

on

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಸುರತ್ಕಲ್-ನಂತೂರು ಜಂಕ್ಷನ್‌ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿಯನ್ನು ಗಂಟೆಗೆ 50 ಕಿಲೋ ಮೀಟರ್‌ ಗೆ ನಿಗದಿಪಡಿಸಲಾಗಿದೆ. ಈ ಮಿತಿ ಸಪ್ಟೆಂಬರ್‌ ಅಂತ್ಯದ ವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಅತಿವೃಷ್ಟಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಕೆಟ್ಟು ಹೋಗಿವೆ. ಹಾಗಾಗಿ ಅಂತಹ ಭಾಗಗಳು ಅತಿ ವೇಗದ ಚಾಲನೆಗೆ ಸುರಕ್ಷಿತವಾಗಿಲ್ಲ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸಾಧ್ಯವಾದಷ್ಟು ಎಲ್ಲೆಲ್ಲಿ ಸರ್ವೀಸ್‌ ರಸ್ತೆಗಳಿವೆಯೋ ಅಲ್ಲಿ ಅದನ್ನೇ ಬಳಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.

READ IN ENGLISH : https://www.nammakudlaenglish.com/speed-limit-imposed-on-surathkal-nanthur-junction-national-highway/

ಇದನ್ನೂ ಓದಿ: ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

ಸುರತ್ಕಲ್‌- ನಂತೂರು ನಡುವಣ ಹೆದ್ದಾರಿ ಕೆಟ್ಟು ಹೋಗಿದ್ದು, ಘನ ವಾಹನ, ಲಘುವಾಹನ, ದ್ವಿಚಕ್ರ, ತ್ರಿಚಕ್ರ ಸೇರಿದಂತೆ ಎಲ್ಲಾ ವಾಹನಗಳು ಈ ಹೆದ್ದಾರಿಯನ್ನೇ ಬಳಸುತ್ತಿವೆ. ಕೆಲವೊಮ್ಮೆ ಹೊಂಡ ತಪ್ಪಿಸಲು ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಅಪಘಾತಕ್ಕೆ ಕಾರಣವಾಗುತ್ತಿವೆ.

ಈ ಕಾರಣಕ್ಕಾಗಿ ಸರ್ವೀಸ್‌ ರಸ್ತೆ ಇರುವ ಪಣಂಬೂರು, ಸುರತ್ಕಲ್‌, ಬೈಕಂಪಾಡಿ, ಕೂಳೂರು ಭಾಗಗಳಲ್ಲಿ ಈ ಸರ್ವೀಸ್‌ ರಸ್ತೆಯನ್ನೇ ಬಳಸಿ ದ್ವಿಚಕ್ರ ವಾಹನಗಳು ಸಂಚರಿಸುವುದು ಸೂಕ್ತ ಎಂದು ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

DAKSHINA KANNADA

ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

Published

on

ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಅಪಾರ ಹಾನಿಗೂ ಕಾರಣವಾಗಿದೆ. ನಗರದ ಕದ್ರಿ ಕೈಬಟ್ಟಲ್ ಎಂಬಲ್ಲಿ ಮನೆಯ ಒಂದು ಭಾಗ ಕುಸಿತಕ್ಕೊಳಗಾಗಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ: ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

ಉಷಾ ಅಶೋಕ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತಕ್ಕೊಳಗಾಗಿದೆ. ಮನೆಯ ಹಲವು ಸಾಮಾಗ್ರಿಗೆ ಹಾನಿ ಉಂಟಾಗಿದೆ.

ಮನೆಯಲ್ಲಿ ಜನರಿದ್ದ ವೇಳೆ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತವಾಗಿದ್ದರೂ ಮನೆ ಮಂದಿ ಪ್ರಾಣಾಪಾಯದಿಂದ ಪಾರು ಆಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page